Homeಕನ್ನಡ

ಕನ್ನಡ

ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ ಕಡ್ಡಾಯ: ಎಚ್ಚರಿಕೆ

ಬೆಂಗಳೂರು : ಕಳೆದ ನಾಲ್ಕು ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್‌ 19 ಕೊರೊನಾ ರೋಗವೂ ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ಹಲವರ ಸಾವಿಗೆ ಕಾರಣವಾಗಿತ್ತು. ಈಗ ಮತ್ತೆ ಅದೇ ಡಿಸೆಂಬರ ತಿಂಗಳು...

ಚೀನಾದಲ್ಲಿ ನ್ಯುಮೋನಿಯಾ ವೈರಸ್‌ ಉಲ್ಬಣ : ಭಾರತದಲ್ಲಿ ಹೈ ಅಲರ್ಟ್

ದೆಹಲಿ: ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ಮತ್ತೊಂದು ಮಾರಕ ವೈರಸ್ ಪತ್ತೆಯಾಗಿದ್ದು, ಉತ್ತರ ಚೀನಾದಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ತೀವ್ರವಾಗಿದೆ. ಶ್ವಾಸಕೋಶ ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಇದರಿಂದ ನೆರೆಯ...

ಅರಿಹಂತ ಆಸ್ಪತ್ರೆಗೆ ಎನ್‌ಎಬಿಹೆಚ್‌ ಮಾನ್ಯತೆar

ಬೆಳಗಾವಿ :ನಗರದ ಅರಿಹಂತ್ ಆಸ್ಪತ್ರೆಯು ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ಎಬಿಎಚ್)ಯಿಂದ ಸಂಪೂರ್ಣ ಗುಣಮಟ್ಟದ ಮಾನ್ಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಎನ್ಎಬಿಎಚ್ ಭಾರತದಲ್ಲಿನ ಆರೋಗ್ಯ ಸೌಲಭ್ಯಗಳ ಗುಣಮಟ್ಟಕ್ಕೆ ಮಾನ್ಯತೆ ನೀಡುವ ಅಥವಾ ನಿರ್ಧರಿಸುವ ಸಂಸ್ಥೆಯಾಗಿದ್ದು, ಒಂದು...
spot_img

ಶ್ರೀಮತಿ ಉಷಾ ಯಾಲಕ್ಕಿಶೆಟ್ಟರ ಅವರಿಂದ ದೇಹ ಹಾಗೂ ಚರ್ಮದಾನ

ಬೆಳಗಾವಿಯ ಶಾಹು ನಗರದ ನಿವಾಸಿ, ನ್ಯಾಯಾಂಗ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀಮತಿ ಉಷಾ ವಿ. ಯಾಲಕ್ಕಿಶೆಟ್ಟರ(63) ಅವರು ಇತ್ತೀಚೆಗೆ ಶ್ವಾಸಕೋಶ ತೊಂದರೆಯಿಂದ ಮೃತಪಟ್ಟಿದ್ದು, ಮರಣಾನಂತರ ಅವರ ಕುಟುಂಬ ಸದಸ್ಯರು ಜೆಎನ ವೈದ್ಯಕೀಯ ಮಹಾವಿದ್ಯಾಲಯಕ್ಕೆ...

ಅತ್ಯಾಧುನಿಕ ಕ್ಯಾನ್ಸರ ಆಸ್ಪತೆ ಫೆಬ್ರುವರಿಯಲ್ಲಿ ಜನಸೇವೆಗೆ ಅರ್ಪಣೆ: ಡಾ. ಕೋರೆ

ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ ರೋಗಿಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಚಿಕಿತ್ಸೆಗಾಗಿ ಅಲೆದಾಡುತ್ತ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಸಾವಿನಂಚಿಗೆ ತೆರಳುತ್ತಿದ್ದಾರೆ. ಆದ್ದರಿಂದ ಕ್ಯಾನ್ಸರ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಮುಂಬರುವ 2021ರ ಫೆಬ್ರುವರಿಯಲ್ಲಿ ಕರ್ನಾಟಕದಲ್ಲಿಯೇ ಪ್ರಥಮವಾಗಿ ಸುಸಜ್ಜಿತ ಹಾಗೂ ಅತ್ಯಾಧುನಿಕ ವೈದ್ಯಕೀಯ ಸಲಕರಣೆಯುಳ್ಳ ಕ್ಯಾನ್ಸರ ಆಸ್ಪತ್ರೆಯನ್ನು ಜನಸೇವೆಗೆ ಅರ್ಪಿಸಲಾಗುವದು ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು. ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹಿಂಬದಿಯಲ್ಲಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಯ ಕಟ್ಟಡದ ಕಾಮಗಾರಿ ಪ್ರಗತಿ ಹಾಗೂ ಗುಣಮಟ್ಟವನ್ನು ಪರಿಶೀಲಿಸಿ ಮಾತನಾಡಿದರು, 200 ಕೋ ರೂ.ಗಳ ವೆಚ್ಚದಲ್ಲಿ 200 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು,ಕಟ್ಟಡದ ಕಾಮಗಾರಿ ಇದೇ ಡಿಸೆಂಬರ ವೇಳೆಗೆ ಪೂರ್ಣಗೊಳ್ಳಲಿದ್ದು, ಮುಂದಿನ ಫೆಬ್ರುವರಿ ವೇಳೆ ಸಂಪುರ್ಣ ಕಾಮಗಾರಿ ಮುಗಿಸಿ, ವೈದ್ಯಕೀಯ ಸಲಕರಣೆಗಳನ್ನು ಜೋಡಿಸಿ ಜನಸೇವೆಗೆ ಅರ್ಪಿಸಲಾಗುವದು ಎಂದು ತಿಳಿಸಿದರು. ಈಗಾಗಲೇ ಪ್ರತಿದಿನ 40ಕ್ಕೂ ಅಧಿಕ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಕ್ಯಾನ್ಸರ ಸಂಬಂಧಿತ ಎಲ್ಲ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತದೆ. 100ಕ್ಕೂ ಅಧಿಕ ರೋಗಿಗಳಿಗೆ ಕಿಮೋಥೆರಪಿ ನೀಡಬಹುದು. ಕ್ಯಾನ್ಸರ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವದರೊಂದಿಗೆ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯೂ ಆಗಲಿದೆ. ಅದಕ್ಕಾಗಿ ಉಕ ಗೋವಾ ಹಾಗೂ ದ. ಮಹಾರಾಷ್ಟ್ರ ಭಾಗದಲ್ಲಿಯೇ ಪ್ರಥಮವಾಗಿ ಬೆಳಗಾವಿಯಲ್ಲಿ ಅತ್ಯಾಧುನಿಕವಾದ ವೈದ್ಯಕೀಯ ಯಂತ್ರೋಪಕರಣಗಳನ್ನು ಅಳವಡಿಸಿ ರೋಗಿಗಳ ಆರೈಕೆಗೆ ಅರ್ಪಿಸಲಾಗುತ್ತದೆ ಎಂದು ವಿವರಿಸಿದರು. ಸದ್ಯಕ್ಕೆ ರೆಡಿಯೋಥೆರಪಿ ನೀಡಲು 3 ಯಂತ್ರೋಪಕರಣ ಹಾಗೂ ಶಸ್ತ್ರಚಿಕಿತ್ಸೆಗೆ ಅಗ್ಯತವಿರುವ ಅತ್ಯಾಧುನಿಕ ಕೊಠಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಪ್ರಸಕ್ತ ಪ್ರತಿ ತಿಂಗಳು ಸುಮಾರು 130ಕ್ಕೂ ಅಧಿಕ ರೋಗಿಗಳು ಹೊಸದಾಗಿ ಕಂಡು ಬರುತ್ತಿದ್ದಾರೆ. ಅವರಿಗೆ ಒಂದೇ ಸೂರಿನಡಿ ಕ್ಯಾನ್ಸರ ಸಂಬಂಧಿತ ಎಲ್ಲ ವಿಧವಾದ ಚಿಕಿತ್ಸೆ ನೀಡಲು ಈ ಆಸ್ಪತ್ರೆಯು ಸಹಕಾರಿಯಾಗಲಿದೆ ಎಂದ ಅವರು, ಕ್ಯಾನ್ಸರ ರೋಗಕ್ಕೆ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ ಎನ್ನುವ ಕೊರಗು ಉಳಿಯಬಾರದು. ಅದಕ್ಕಾಗಿ ಈ ಭಾಗದಲ್ಲಿ ಕ್ಯಾನ್ಸರ ಚಿಕಿತ್ಸಾ ಬೃಹತ ಆಸ್ಪತ್ರೆ ನಿರ್ಮಿಸಲಾಗುತ್ತದೆ. ಈಗಾಗಲೇ ಶೇ. 50ರಷ್ಟು ಕಾಮಗಾರಿ ಮುಗಿದಿದ್ದು, ಇನ್ನುಳಿದ ಕಾಮಗಾರಿಯನ್ನು ಬೇಗ ಮುಗಿಸಬೇಕೆಂದು ಗುತ್ತಿದಾರರಿಗೆ ಸೂಚಿಸಿದರು. ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ವಿ ಎಸ್ ಸಾಧುನವರ, ಶಂಕರಣ್ಣ ಮುನವಳ್ಳಿ, ಎಸ್ ಸಿ ಮೆಟಗುಡ್, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಕಾಹೆರ ಕುಲಪತಿ ಡಾ. ವಿವೇಕ ಸಾವೋಜಿ, ವೈಜಾಗನ ಟಾಟಾ ಮೆಮೋರಿಯಲ್ ಕ್ಯಾನ್ಸರ ಆಸ್ಪತ್ರೆಯ ನಿರ್ದೇಶಕರಾದ ಡಾ. ಉಮೇಶ ಮಹಾಂತಶೆಟ್ಟಿ, ಡಾ. ಕುಮಾರ ವಿಂಚುರಕರ, ಡಾ. ಇಮ್ತಿಯಾಜ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ನಾವು ಪಾಶ್ರ್ವವಾಯು (ಸ್ಟ್ರೋಕ್) ಹೇಗೆ ತಡೆಗಟ್ಟಬಹುದು?

ಮೆದುಳಿನ ಭಾಗಕ್ಕೆ ಯಾವಾಗ ರಕ್ತದ ಹರಿವು ನಿಂತು ಹೋಗುತ್ತದೆಯೋ ಆಗ ಪಾಶ್ರ್ವವಾಯು (ಸ್ಟ್ರೋಕ್) ಆಗುತ್ತದೆ. ಅದು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತದ ಹರಿವು ಯಾವುದೋ ಕಾರಣಕ್ಕೆ ಸ್ಥಗಿಗೊಳ್ಳುವದನ್ನು ಇಸ್ಕೆಮಿಕ್ ಸ್ಟ್ರೋಕ್ ಎಂದು...

ಕೋವಿಡ್ 3ನೇ ಅಲೆ: ಕೈಜೋಡಿಸಿದರೆ ಸೋಲಿಸಲು ಸಾಧ್ಯ

ಸ್ಪ್ಯಾನಿಷ್ ಜ್ವರ ಇತಿಹಾಸ: ಶತಮಾನದ ಹಿಂದೆ ವಿಶ್ವಕ್ಕೆ ಬಂದೆರಗಿದ ಸ್ಪ್ಯಾನಿಷ್ ಜ್ವರವು ಸುಮಾರು 50 ಮಿಲಿಯನ್ ಜನರನ್ನು ಮರಣಕ್ಕೆ ತಳ್ಳಲ್ಪಟ್ಟಿತು. 1918 ರಿಂದ 1920ರವರೆಗೆ ವಿಶ್ವದ ಜನರ ಜೀವಕ್ಕೆ ತೊಂದರೆಯನ್ನುAಟು ಮಾಡಿತು. ಇತ್ತೀಚೆಗೆ...

10 ರೂ. ಖ್ಯಾತಿಯ ಹೃದಯವಂತ ಬಡವರ ವೈದ್ಯ

ವೈದ್ಯಕೀಯ ಸೇವೆಯನ್ನು ಪ್ರಾರಂಭಿಸುವ ಮುಂಚೆ ವೈದ್ಯರು ಐತಿಹಾಸಿಕವಾದ ಪ್ರಮಾಣವನ್ನು ಮಾಡುತ್ತಾರೆ. ನಾನು ಯಾವುದೇ ರೀತಿಯ ಲಿಂಗ, ವರ್ಣ, ಧರ್ಮ, ಜಾತಿ, ಜೀವನಶೈಲಿ, ಆರ್ಥಿಕ ಅಂತಸ್ತು, ನಿರ್ಗತಿಕರು ಬಡವ ಬಲ್ಲಿದ ಎಂದು ಬೇಧಭಾವ ಮಾಡದೇ...

ತ್ಯಾಂಕ್ಯೂ ಡಾಕ್ಟರ್…

ಒಂದು ಕ್ಷಣ ನಿಂತರೂ ಸಾಕು ಜೀವವೇ ಹೋಗಿಬಿಡುತ್ತೆ ಅಂತಿರುವ ಹೃದಯದ ಅಷ್ಟೂ ಅಭಿದಮನಿ, ಅಪಧಮನಿ, ಕವಾಟ, ರಕ್ತನಾಳಗಳನ್ನು ನಿಯಂತ್ರಣಕ್ಕೆ ತಂದಿಟ್ಟುಕೊಂಡು ಹೊಸ ಹೃದಯವನ್ನೇ ಕಸಿ ಮಾಡುವ ಡಾಕ್ಟರ್.. ನೀವುಮತ್ತೊಬ್ಬ ದೇವರಾ?ಮೆದುಳೆಂಬ ಮಾಯೆಯ ಸಾವಿರ...

120ಕ್ಕೂ ಅಧಿಕ ಬ್ಲಾಕ್ ಫಂಗಸ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ, ಸುರಕ್ಷಿತ ಹೆರಿಗೆ

ಕೋವಿಡ್ ಮಹಾಮಾರಿಯ ಎರಡನೇ ಅಲೆಯು ಅನೇಕ ಜನರನ್ನು ಬಾಧಿಸಿ ಪ್ರಾಣಾಪಾಯಕ್ಕೆ ತಂದೊಡ್ಡಿತು. ಅಲ್ಲದೇ ಕೋವಿಡನಿಂದ ಗುಣಮುಖರಾದರೂ ಕೂಡ ಬ್ಲ್ಯಾಕ್ ಫಂಗಸ್ ಪೀಡಿತರು ಅಧಿಕ ಸಂಖ್ಯೆಯಲ್ಲಿ ಕಂಡುಬಂದು ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ...

Popular Doctors