120ಕ್ಕೂ ಅಧಿಕ ಬ್ಲಾಕ್ ಫಂಗಸ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ, ಸುರಕ್ಷಿತ ಹೆರಿಗೆ

ಕೋವಿಡ್ ಮಹಾಮಾರಿಯ ಎರಡನೇ ಅಲೆಯು ಅನೇಕ ಜನರನ್ನು ಬಾಧಿಸಿ ಪ್ರಾಣಾಪಾಯಕ್ಕೆ ತಂದೊಡ್ಡಿತು. ಅಲ್ಲದೇ ಕೋವಿಡನಿಂದ ಗುಣಮುಖರಾದರೂ ಕೂಡ ಬ್ಲ್ಯಾಕ್ ಫಂಗಸ್ ಪೀಡಿತರು ಅಧಿಕ ಸಂಖ್ಯೆಯಲ್ಲಿ ಕಂಡುಬಂದು ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ಮೇ 2021ರಂದು ಬ್ಲ್ಯಾಕ್ ಫಂಗಸ್ ರೋಗಿಯು ಕಂಡು ಬಂದಿದ್ದು, ಇಲ್ಲಿಯವರೆಗೆ ಸುಮಾರು 120ಕ್ಕೂ ಅಧಿಕ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಹಾಗೂ ಕೋವಿಡ ಸೋಂಕಿಗೆ ಒಳಗಾಗಿದ್ದ 115ಕ್ಕೂ ಅಧಿಕ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡುವಲ್ಲಿ ಆಸ್ಪತ್ರೆಯ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.

ಕಿವಿ, ಮೂಗು ಹಾಗೂ ಗಂಟಲು ತಜ್ಞವೈದ್ಯರಾದ ಡಾ. ಅನಿಲ ಹಾರುಗೊಪ್ಪ ಹಾಗೂ ನೇತ್ರ ತಜ್ಞವೈದ್ಯರಾದ ಡಾ. ಅರವಿಂದ ತೆನಗಿ ಅವರ ಮುಂದಾಳತ್ವದಲ್ಲಿ 76 ಜನರು ಸೈನೊ ನಸಲ, 35 ರೋಗಿಗಳು ಕಣ್ಣು, 8 ರೋಗಿಗಳು ಮೆದುಳಿಗೆ ಕಪ್ಪು ಶಿಲೀಂದ್ರ ತಗಲಿತ್ತು. ಅದರಲ್ಲಿ ಮೂವರ ಕಣ್ಣುಗಳನ್ನು ತೆಗೆದರೆ ನಾಲ್ಕು ರೋಗಿಗಳ ಅಂಗಳವನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲಾಯಿತು. 95ಕ್ಕೂ ಅಧಿಕ ಜನ ಗುಣಮುಖಗೊಂಡು ಮರಳಿ ಮನೆಗೆ ತೆರಳಿದ್ದಾರೆ. ಪ್ರತಿಯೊಂದು ರೋಗಿಗೆ ಎರಡು ಮೈಕ್ರೊ ಡಿಬ್ರೈಡರ ಮೂಲಕ ಮೂರು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.

50 ವರ್ಷದ ವ್ಯಕ್ತಿಗೆ ಕಪ್ಪು ಸಿಲೀಂದ್ರ ಸೋಂಕು ಮೆದುಳಿಗೆ ತಗುಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಗೆ ನರಶಸ್ತ್ರಚಿಕಿತ್ಸಕರಾದ ಡಾ. ಪ್ರಕಾಶ ಮಹಾಂತಶೆಟ್ಟಿ ಅವರ ತಂಡವು ಸಿಟಿ ಸ್ಕ್ಯಾನ ಮೂಲಕ ಪರೀಕ್ಷಿಸಿದಾಗ, ಸುಮಾರು 4 x 4 ಛಿms ಅಳತೆಯ ಕಪ್ಪು ಶಿಲೀಂದ್ರವು ಸೈನಸ್ ಹಾಗೂ ಮೆದುಳಿಗೆ ಹರಡಿರುವದು ಕಂಡು ಬಂದಿತು. ತಡಮಾಡದ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಕಪ್ಪು ಶಿಲೀಂದ್ರ ಸೋಂಕಿಗೆಗೆ ಒಳಗಾಗಿದ್ದ ಭಾಗವನ್ನು ಹೊರತೆಗೆದು ವ್ಯಕ್ತಿಯ ಜೀವ ಉಳಿಸುವಲ್ಲಿ ಯಶಸ್ವಿಯಾದರು.

ಉಚಿತ ಸುರಕ್ಷಿತ ಹೆರಿಗೆ: 115ಕ್ಕೂ ಅಧಿಕ ಗರ್ಭಿಣಿ ಸ್ತ್ರೀಯರು ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸುರಕ್ಷಿತ ಹೆರಿಗೆ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯ ಅತ್ಯಂತ ಸವಾಲಿನ ಕೆಲಸವಾಗಿತ್ತು. ಅದರಲ್ಲಿ 72 ಮಹಿಳೆಯರು ಆರ್ಥಿಕವಾಗಿ ಹಿಂದುಳಿದಿದ್ದ ಗರ್ಭಣಿಯರಿಗೆ ಉಚಿತವಾಗಿ ಹೆರಿಗೆ ಮಾಡಿಸಲಾಗಿದೆ. ದಾಖಲಾದ ಕೋವಿಡ್ ಸೋಂಕಿತ ಮಹಿಳೆಯರು ಆರೋಗ್ಯಯುತವಾಗಿ ಮರಳಿ ಮಗುವಿನ ಮೂಲಕ ಮನೆಗೆ ತೆರಳಿದ್ದಾರೆ.

ಕೋವಿಡ್ ಸೋಂಕಿಗೆ ಒಳಗಾಗಿ ಬೇರೆ ಖಾಯಿಲೆಯಿಂದ ಜೀವನ್ಮರಣ ನಡುವೆ ಹೋರಾಡುತ್ತಿರುವ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಕಿವಿ, ಮೂಗು, ಗಂಟಲು ತಜ್ಞವೈದ್ಯರಾದ ಡಾ. ಅನಿಲ ಹಾರುಗೊಪ್ಪ, ಡಾ. ಶಮಾ ಬೆಲ್ಲದ, ಡಾ. ಪುನೀತ ನಾಯಕ, ಡಾ. ಪ್ರೀತಿ ಹಜಾರೆ, ಡಾ. ಪ್ರೀತಿ ಶೆಟ್ಟಿ, ನೇತ್ರ ತಜ್ಞವೈದ್ಯರಾದ ಡಾ. ಅರವಿಂದ ತೆನಗಿ, ನರ ಶಸ್ತ್ರಚಿಕಿತ್ಸಕರಾದ ಡಾ. ಪ್ರಕಾಶ ಮಹಾಂತಶೆಟ್ಟಿ, ಡಾ. ಅಭಿಷೇಕ ಪಾಟೀಲ, ಡಾ. ವಿಕ್ರಮ, ಡಾ. ಪ್ರಕಾಶ ರಾತೋಡ, ಅರವಳಿಕೆ ತಜ್ಞವೈದ್ಯರು ಸೇರಿದಂತೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ತಂಡವನ್ನು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಕಾಹೆರನ ಕುಲಪತಿ, ಕುಲಸಚಿವರಾದ ಡಾ. ವಿ ಎ ಕೋಠಿವಾಲೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ಆರಿಫ್ ಮಾಲ್ದಾರ ಅವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here