ಕೋವಿಡ್ 3ನೇ ಅಲೆ: ಕೈಜೋಡಿಸಿದರೆ ಸೋಲಿಸಲು ಸಾಧ್ಯ

ಸ್ಪ್ಯಾನಿಷ್ ಜ್ವರ ಇತಿಹಾಸ: ಶತಮಾನದ ಹಿಂದೆ ವಿಶ್ವಕ್ಕೆ ಬಂದೆರಗಿದ ಸ್ಪ್ಯಾನಿಷ್ ಜ್ವರವು ಸುಮಾರು 50 ಮಿಲಿಯನ್ ಜನರನ್ನು ಮರಣಕ್ಕೆ ತಳ್ಳಲ್ಪಟ್ಟಿತು. 1918 ರಿಂದ 1920ರವರೆಗೆ ವಿಶ್ವದ ಜನರ ಜೀವಕ್ಕೆ ತೊಂದರೆಯನ್ನುAಟು ಮಾಡಿತು. ಇತ್ತೀಚೆಗೆ ಹೆಚ್1ಎನ್1 ವೈರಸ್ (ಸೋಂಕು) ವಿಶ್ವದ ಅಂದಾಜು 500 ಮಿಲಿಯನ್ ಜನರನ್ನು ಬಾಧಿಸಿ ಆಘಾತವನ್ನುಂಟು ಮಾಡಿತು. ಸಾಂಕ್ರಾಮಿಕವಾಗಿ ಹರಡಿದ ಈ ಸೋಂಕು ಸೌಮ್ಯ, ಮಧ್ಯಮ ಹಾಗೂ ತೀವ್ರÀವಾದ ಪರಿಣಾಮವನ್ನುಂಟು ಮಾಡಿತು. ಅಮೇರಿಕಾದಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದರು.

ಕೋವಿಡ್-19: ಕೋವಿಡ್ ಸಾಂಕ್ರಾಮಿಕ ರೋಗವು ಇಡೀ ವಿಶ್ವವನ್ನೇ ಆಕ್ರಮಿಸಿಕೊಂಡು ಸಂಪೂರ್ಣ ಚಲನೆಯನ್ನೇ ನಿಲ್ಲಿಸಿಬಿಟ್ಟಿತು. 2ನೇ ಅಲೆಯು ಭಾರತದಲ್ಲಿ ತೀವ್ರತರವಾದ ಪರಿಣಾಮವನ್ನುಂಟು ಮಾಡಿ, ಸೋಂಕಿತರು ಆಸ್ಪತ್ರೆಯಿಂದ ಆಸ್ಪತ್ರೆಗೆ ಬೆಡ ಹುಡುಕುವದಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಬೆಡ ಪಡೆಯುವುದಕ್ಕೆ ಉಳ್ಳವರ ಪ್ರಭಾವ ಬಳಸಬೇಕಾದ ಅನಿವಾರ್ಯತೆ ಒದಗಿಬಂದಿತು. ಆಸ್ಪತ್ರೆಗಳಲ್ಲಿ ಆಮ್ಲಜನಕ, ಜೀವ ಉಳಿಸುವ ವೈದ್ಯಕೀಯ ಸಾಧನ(ವೆಂಟಿಲೇಟರ), ವೈದ್ಯರು, ನರ್ಸಿಂಗ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಗಳ ಕೊರತೆ ತೀವ್ರವಾಗಿ ಕಾಡಿತು. ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಚಿಕಿತ್ಸೆ ನೀಡಲು ವೈದ್ಯಕೀಯ ಕ್ಷೇತ್ರವು ತೀವ್ರ ಒತ್ತಡಕ್ಕೆ ಸಿಲುಕಿತು. ಸೋಂಕು ಮೇಲಿಂದ ಮೇಲೆ ರೂಪಾಂತರಗೊAಡು ಮತ್ತಷ್ಟು ಕಠಿಣ ಪರಿಸ್ಥಿಗೆ ನೂಕಿ, ಸದಾ ಸವಾಲನ್ನು ಒಡ್ಡುತ್ತಲೆ ಸಾಗಿತು. ಇದರಿಂದ ಅದಕ್ಕೆ ಮದ್ದನ್ನು ಕಂಡು ಹಿಡಿಯಲು ಸಾಕಷ್ಟು ಪ್ರಯಾಸ ಪಡಬೇಕಾಯಿತು.

ಲಾಕಡೌನ, ಕೆಲಸ ಕಳೆದುಕೊಳ್ಳುವಿಕೆ, ಆರ್ಥಿಕ ಬಿಕ್ಕಟ್ಟಿನಿಂದ ಜನರು ಜರ್ಝರಿಗಂಡರು. ಸೋಂಕು ತುರ್ತು ಪರಿಸ್ಥಿಗೆ ನೂಕಲ್ಪಟ್ಟಿತು. ಸರಕಾರದ ಸಂಸ್ಥೆಗಳು, ವೈದ್ಯಕೀಯ ಕ್ಷೇತ್ರ ಸಾಂಕ್ರಾಮಿಕ ರೋಗವನ್ನು ತಡೆಯಲು ಎಲ್ಲ ರೀತಿಯ ಸಂಪನ್ಮೂಲಗಳನ್ನು ಉಪಯೋಗಿಸಿದರೂ ಕೂಡ ಹತೋಠಿಗೆ ಬರಲಿಲ್ಲ. ಆರ್ಥಿಕ ಬೆಳವಣಿಗೆಗೆ ಪೆಟ್ಟು ಕೊಟ್ಟಿತು. ಸಂತೋಷದ ಜೀವನಕ್ಕೆ ತಡೆಯೊಡ್ಡಿ, ಮಾನವೀಯತೆ ಮರೆತುಹೋಯಿತು, ಭಾರತದಲ್ಲಿ ಪ್ರತಿದಿನ ಸುಮಾರು 4 ಸಾವಿರಕ್ಕೂ ಅಧಿಕ ಸಾವುಗಳು ವರದಿಯಾದವು. ಸೋಂಕಿತರು ಅಂಕಿಸAಖ್ಯೆಗೆ ಸಿಗಲಿಲ್ಲ. ಕ್ವಾರಂಟೈನ್, ಮನೆಯಲ್ಲಿ ಪ್ರತ್ಯೇಕವಾಗಿರುವರು, ಗುಣಮುಖರಾದವರು, ಗುಣಲಕ್ಷಣಗಳಿಲ್ಲದವರು, ಸಾವು, ವಯಸ್ಸು, ಲಿಂಗ ಸೇರಿದಂತೆ ಯಾವುದೇ ಸಂಖ್ಯೆಗಳಿಗೆ ನಿಖರತೆ ಮತ್ತು ಸ್ಪಷ್ಟತೆ ಸಿಗಲಿಲ್ಲ. ಇದರಿಂದ ಎಪಿಡೆಮೊಯೊಲಾಜಿಸ್ಟಗಳು ಅಂಕಿಸAಖ್ಯೆ ಸಿಗದಿದ್ದಾಗ ಮುಂದಾಗುವ ಅಪಾಯ, ಸೋಂಕು ಸಾಗುವ ದಾರಿಯ ಕುರಿತು ಯೋಜನೆ ರೂಪಿಸುವಲ್ಲಿ ಸವಾಲನ್ನು ಎದುರಿಸಬೇಕಾಯಿತು.

photo of doctor holding x ray result
Photo by Anna Shvets on Pexels.com

ದೇಶವು 2ನೇ ಅಲೆಯನ್ನು ಎದುರಿಸಿದ್ದಾಯಿತು, 3ನೇ ಅಲೆಯ ಸಾಧ್ಯತೆ ಕುರಿತು ವೈದ್ಯ ವಿಜ್ಞಾನಿಗಳು ಸರಕಾರಕ್ಕೆ ಎಚ್ಚರಿಕೆ ನೀಡಿದ್ದು, ಸಪ್ಟಂಬರ-2021ರ ನಂತರ ಬಂದೆರಗಲಿದೆ. ಕೇಂದ್ರ ಸರಕಾರದ ವೈಜ್ಞಾನಿಕ ಸಲಹೆಗಾರ ಪ್ರೊ. ವಿಜಯ ರಾಘವನ್ ಅವರು, ಸೋಂಕಿನ ರೂಪಾಂತರ ಹಾಗೂ 3ನೇ ಅಲೆಯನ್ನು ಎದುರಿಸಲು ನಾವು ಸಿದ್ದವಾಗಬೇಕು ಎಂದರೆ, ನಾರಾಯಣ ಹೃದಯಾಲಯದ ಚೇರಮನ್ ಅವರು, ಸಮಯವನ್ನು ನಿರ್ಧರಿಸಲಾಗದು, ಆದರೆ ಇದು ಅತ್ಯವಶ್ಯ. ಮುಖ್ಯವಾಗಿ ಮಕ್ಕಳ ಮೇಲೆ ಬಂದೆರಗಲಿದೆ. ಅದಕ್ಕಾಗಿ ನಾವು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಯುವ ಸಮುದಾಯ ಈ ಬಾರಿ ಸೋಂಕಿಗೆ ಒಳಗಾಗಿ ಸಾಕಷ್ಟು ಸಾವು ನೋವು ಅನುಭವಿಸಿದೆ. ಅವರೆಲ್ಲರಿಗೂ ಲಸಿಕೆ (ವ್ಯಾಕ್ಸಿನ್) ಹಾಕಿಸಬೇಕು. ಇಲ್ಲದಿದ್ದರೆ ಗಂಭಿರ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಆದರೆ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞವೈದ್ಯರು, ಕೊವಿಡ್ ಸೋಂಕು ಬಹಳ ಮಕ್ಕಳಿಗೆ ಬಂದೆರಗಬಹುದು, ಆದರೆ ಮನೆಯಲ್ಲಿಯೇ ಪ್ರತ್ಯೇಕವಾಗಿರಿಸುವ ಮೂಲಕ ಅವರನ್ನು ಗುಣಮುಖಪಡಿಸಬಹುದು. ಕೆಲ ಮಕ್ಕಳಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವದು ಅತ್ಯವಶ್ಯವಾಗುತ್ತದೆ. ರೂಪಾಂತರಿ ಸೋಂಕಿನೊAದಿಗೆ ಮಕ್ಕಳಲ್ಲಿ ಬಹುಅಂಗಾAಗ ವೈಫಲ್ಯಕ್ಕೆ ಕಾರಣವಾಗಬಹುದು. ಆದರೆ ಚಿಕ್ಕಮಕ್ಕಳ ವೈದ್ಯರು ನುರಿತವರಾಗಿದ್ದು, ಮಕ್ಕಳ ಆರೋಗ್ಯದ ಕಾಳಜಿವಹಿಸಲಿದ್ದಾರೆ. ಆದರೂ ಕೂಡ ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳು ಅವಶ್ಯಕತೆಗೆ ಅನುಗುಣವಾಗಿ ತುರ್ತುನಿಗಾ ಘಟಕ, ವೈದ್ಯಕೀಯ ವ್ಯವಸ್ಥೆ, ಮಕ್ಕಳನ್ನು ನಿರ್ವಹಿಸುವ ನುರಿತ ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಿಟ್ಟುಕೊಳ್ಳಬೇಕು. ಸರಕಾರದ ಕೊವಿಡ್ ಸಲಹಾ ಸಮಿತಿಯ ಸದಸ್ಯರಾದ ವೈರಾಲಾಜಿಸ್ಟ ಡಾ. ವಿ ರವಿ ಅವರು, 3ನೇ ಅಲೆಯ ಕುರಿತು ರಾಜ್ಯ ಸರಕಾರ ಸಮಗ್ರವಾದ ಯೋಜನೆ ರೂಪಿಸಬೇಕು. ಇದು ದೇಶದ ಕೆಲವು ರಾಜ್ಯಗಳಿಗೆ 5 ತಿಂಗಳ ನಂತರ ಅಪ್ಪಳಿಸಲಿದೆ.

ತಯಾರಿಹೇಗಿರಬೇಕು: 2011ರ ಜಸಂಖ್ಯೆ ಅನುಸಾರ ಭಾರತದ ಜನಸಂಖ್ಯೆಯಲ್ಲಿ ಶೇ. 39ರಷ್ಟು ಮಕ್ಕಳಿದ್ದರೆ, ಶೇ. 61ರಷ್ಟು ಯುವಕರಿದ್ದಾರೆ. ದೇಶದಲ್ಲಿ 0-18 ವರ್ಷದೊಳಗಿನ 472 ಮಿಲಿಯನ್ ಮಕ್ಕಳಿದ್ದಾರೆ. ತಜ್ಞರ ವರದಿಯಂತೆ ಕೋವಿಡ್ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈಗಾಗಲೇ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ಕೆಲವರು ಎರಡೂ ಡೋಸ್‌ಗಳನ್ನು ಮುಗಿಸಿದ್ದಾರೆ. ಆದರೆ ಕೆಲವರು ಇನ್ನೂ ತೆಗೆದುಕೊಂಡಿಲ್ಲ. ಆದಷ್ಟು ಶೀಘ್ರವಾಗಿ ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕು. ಆದರೆ ಮಕ್ಕಳಿಗೆ ಲಸಿಕೆ ನೀಡುವವಲ್ಲಿ ತಯಾರಿ ನಡೆದಿದೆ. ಕೆಲವು ಲಸಿಕೆಗಳು ಪರೀಕ್ಷಾ ಹಂತದಲ್ಲಿವೆ, ಅವು ಶೀಘ್ರವೇ ಅಂದರೆ 3ನೇ ಅಲೆಗೆ ಮುಂಚೆ ಮಕ್ಕಳಿಗೆ ಲಭ್ಯವಾಗಲಿದೆ ಎಂಬ ಆಶಾಭಾವನೆ ಇದೆ.

ಪ್ರಥಮ ಅಲೆ ಮೂಡಿಸಿದ ಆತಂಕ ಹಾಗೂ 2ನೇ ಅಲೆಗೆ ಮಹಾರಾಷ್ಟç, ಮಧ್ಯಪ್ರದೇಶ, ದೆಹಲಿ, ತಮಿಳನಾಡು ಮತ್ತು ಕರ್ನಾಟಕದಲ್ಲಿ ತಂದೊಡ್ಡಿದ ಸಾವು ನೋವುಗಳಿಂದ ಪಾಠ ಕಲಿತು 3ನೇ ಅಲೆಗೆ ಸಕಲ ಸಿದ್ದತೆಯನ್ನು ಮಾಡಿಕೊಳ್ಳಬೇಕಾಗಿದೆ. ಚಿಕ್ಕಮಕ್ಕಳ ಚಿಕಿತ್ಸೆಗೆ ಅವಶ್ಯವಿರುವ ಮೂಲಭೂತ ಸೌಲಭ್ಯಗಳಾದ ತುರ್ತು ನಿಗಾ ಘಟಕ, ವೈದ್ಯಕೀಯ ಸಲಕರಣೆ, ಜೀವರಕ್ಷಕ ಔಷಧಿ, ಗುಣಮಟ್ಟದ ಕರ‍್ಯವಿಧಾನದ ವ್ಯವಸ್ಥೆ, ಸಲಹೆ ಸೂಚನೆ, ಆಮ್ಲಜನಕದೊಂದಿಗೆ ಪ್ರಾಥಮಿಕ ಹಾಗೂ ತಾಲುಕಾ ಆಸ್ಪತ್ರೆಳನ್ನು ಮೇಲ್ದರ್ಜೆಗೇರಿಸಿ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಿ, ಶಾಲೆ, ವಸತಿ ನಿಲಯ, ಸಮುದಾಯ ಭವನಗಳನ್ನು ಐಸೊಲೇಶನ ಕೇಂದ್ರಗಳನ್ನಾಗಿ ಪರಿವರ್ತಿಸಬೇಕಾಗಿದೆ.

ಏನುಮಾಡಬೇಕಾಗಿದೆ? :

1. ಮಕ್ಕಳನ್ನು ಆರೈಕೆ ಮಾಡುವ ಪಾಲಕರಿಗೆ ಹಾಗೂ ಯುವಕರಿಗೆ ಶೀಘ್ರವೇ ಲಸಿಕೆ ಹಾಕಬೇಕು. 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾಸ್ಕ ಹಾಕಬೇಕು.

3. ಶಾಲೆಗಳಲ್ಲಿ ಪಾಠ ನಿಂತಿರುವದರಿAದ ಮಕ್ಕಳು ಮನೆಯಲ್ಲಿಯೇ ಇವೆ. ಅವರನ್ನು ಆಟವಾಡಲು ಹೊರಗಡೆ ಬಿಡಬೇಡಿ.

4. ಮಕ್ಕಳಿಗೆ ಯೋಗ, ವ್ಯಾಯಾಮ ಹಾಗೂ ರಚನಾತ್ಮಕ ಕಾರ‍್ಯ, ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಬೇಕು.

5. ಪ್ರತಿಯೊಂದು ಮಕ್ಕಳು ಹೊರರೋಗಿ ವಿಭಾಗಕ್ಕೆ ಬಂದು ಪರೀಕ್ಷಿಸಿಕೊಳ್ಳಬೇಕು. ಕೊವಿಡ್ ಕಂಡು ಬಂದರೆ ಅವರನ್ನು ಪ್ರತ್ಯೇಕವಾಗಿಸಿ ಚಿಕಿತ್ಸೆ ನೀಡಬೇಕು.

6. ಚಿಕ್ಕಮಕ್ಕಳಿಗೆ ಚಿಕಿತ್ಸೆ ನೀಡುವದು ಅತ್ಯಂತ ಕಠಿಣ, ಆಯುಷ್ಯ ವೈದ್ಯರಿಗೆ ತರಬೇತಿ ತುರ್ತು ಸಂದರ್ಭದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡುವಂತಾಗಬೇಕು.

7. ನರ್ಸಿಸ್ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಗಳು ಆಧುನಿಕ ವೈದ್ಯಕೀಯ ವ್ಯವಸ್ಥೆಯ ಬೆನ್ನೆಲುಬಾಗಿ ಕರ‍್ಯನಿರ್ವಹಿಸುತ್ತಿದ್ದು, ಸೋಂಕಿತ ಮಕ್ಕಳ ಆರೈಕೆ, ವಾಸ್ತವ ಪರಿಸ್ಥಿತಿಯ ಕುರಿತು ಮೇಲಿಂದ ಮೇಲೆ ತರಬೇತಿ ನೀಡಬೇಕು.

8. ನವಜಾತ ಶಿಶು ಮತ್ತು ಚಿಕ್ಕಮಕ್ಕಳ ತುರ್ತು ನಿಗಾ ಘಟಕಗಳನ್ನು ಖಾಸಗಿ ಆಸ್ಪತ್ರೆಗಳು ಹೊಂದಿದ್ದು, ಅಲ್ಲಿ ತರಬೇತಿ ಹೊಂದಿದ ಮಾನವ ಸಂಪನ್ಮೂಲವಿರುತ್ತದೆ. ಆದ್ದರಿಂದ ಚಿಕ್ಕಮಕ್ಕಳ ಇಂಟೆನ್ಸವಿಸ್ಟ, ನರ್ಸಿಸ್ ಸಿಬ್ಬಂದಿ ಕೊರತೆ ಆಗಬಹುದು.

9. ಸಾಕಷ್ಟು ಮಕ್ಕಳು ಅಪೌಷ್ಟಿಕಾಂಶತೆ, ಜನ್ಮತಃ ಆರೋಗ್ಯ ಸಮಸ್ಯೆ, ಮಾನಸಿಕ ಹಾಗೂ ದೈಹಿಕ ತೊಂದರೆಯಿAದ ಬಳಲುತ್ತಿದ್ದು, ಅವರಿಗೆ ವಿಶೇಷ ಕಾಳಜಿ ಅತ್ಯವಶ್ಯ.

10. ಅನೇಕ ಹಳ್ಳಿಗಳು ಅತ್ಯಂತ ಹಿಂದುಳಿದ ಪ್ದೇಶಗಳಾಗಿದ್ದು, ಯಾವುದೇ ರೀತಿಯ ಸಂಪರ್ಕ, ವೈದ್ಯಕೀಯ ಸೌಲಭ್ಯವಿಲ್ಲದ ಹಳ್ಳಿಗಳನ್ನು ಗುರುತಿಸಿ, ಅವಶ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಕೊಳ್ಳಬೇಕು.

11. ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರಗಳಲ್ಲಿರುವ ಎಎನಎಂ, ಆಶಾ, ಅಂಗನವಾಡಿ ಕರ‍್ಯಕರ್ತರು, ಸರಕಾರೇತರ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಇದರಿಂದ ಶೀಘ್ರವೇ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿಸಲು ಸಹಕಾರಿಯಾಗಲಿದೆ.

ಕೋವಿಡ್‌ನ 3ನೇ ಅಲೆಯನ್ನು ಎದುರಿಸಲು ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಸಕಲರಿಗೇ ಲಸಿಕೆ ಹಾಕಬೇಕು. ಲಸಿಕೆ ಹಾಕಿಸಲು ಬಲಿಷ್ಟ ಸೂಕ್ಷö್ಮಯೋಜನೆ, ಪರಿಣಾಮಕಾರಿಯಾದ ಸಂವಹನದAತ ಕರ‍್ಯಯೋಜನೆಯನ್ನು ರೂಪಿಸಬೇಕು. ನಾವೆಲ್ಲರೂ ಸರಕಾರದ ಮಾರ್ಗಸೂಚಿಗೆ ಅನುಗುಣವಾಗಿ ಜವಾಬ್ದಾರಿಯುತವಾಗಿ ವರ್ತಿಸುತ್ತ ಒಬ್ಬರಿಗೊಬ್ಬರ ಕೈಜೋಡಿಸಿ 3ನೇ ಅಲೆಯ ವಿರುದ್ದ ಹೋರಾಡಿದರೆ ನಿಜವಾಗಿಯು ಕೊರೊನಾವನ್ನು ಸೋಲಿಸುತ್ತೇವೆ. ಭಾರತ ವಿಜಯಿಯಾಗುತ್ತದೆ.

ಬಸವರಾಜ ಸೊಂಟನವರ

ಜನಸಂಪರ್ಕಾಧಿಕಾರಿಗಳು

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ,

ಬೆಳಗಾವಿ

Popular Doctors

Related Articles