Homeಕನ್ನಡ
ಕನ್ನಡ
ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ ಕಡ್ಡಾಯ: ಎಚ್ಚರಿಕೆ
                                                        
                                                            
                                                                        editor -                                                                                                                                             
                                                    
                    
                    
ಬೆಂಗಳೂರು : ಕಳೆದ ನಾಲ್ಕು ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್ 19 ಕೊರೊನಾ ರೋಗವೂ ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ಹಲವರ ಸಾವಿಗೆ ಕಾರಣವಾಗಿತ್ತು. ಈಗ ಮತ್ತೆ ಅದೇ ಡಿಸೆಂಬರ ತಿಂಗಳು...
                    
                                        
                                    ಚೀನಾದಲ್ಲಿ ನ್ಯುಮೋನಿಯಾ ವೈರಸ್ ಉಲ್ಬಣ : ಭಾರತದಲ್ಲಿ ಹೈ ಅಲರ್ಟ್
                                                        
                                                            
                                                                        editor -                                                                                                                                             
                                                    
                    
                    
ದೆಹಲಿ: ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ಮತ್ತೊಂದು ಮಾರಕ ವೈರಸ್ ಪತ್ತೆಯಾಗಿದ್ದು, ಉತ್ತರ ಚೀನಾದಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ತೀವ್ರವಾಗಿದೆ. ಶ್ವಾಸಕೋಶ ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಇದರಿಂದ ನೆರೆಯ...
                    
                                        
                                    ಅರಿಹಂತ ಆಸ್ಪತ್ರೆಗೆ ಎನ್‌ಎಬಿಹೆಚ್ ಮಾನ್ಯತೆar
                                                        
                                                            
                                                                        editor -                                                                                                                                             
                                                    
                    
                    
ಬೆಳಗಾವಿ :ನಗರದ ಅರಿಹಂತ್ ಆಸ್ಪತ್ರೆಯು ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ಎಬಿಎಚ್)ಯಿಂದ ಸಂಪೂರ್ಣ ಗುಣಮಟ್ಟದ ಮಾನ್ಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಎನ್ಎಬಿಎಚ್ ಭಾರತದಲ್ಲಿನ ಆರೋಗ್ಯ ಸೌಲಭ್ಯಗಳ ಗುಣಮಟ್ಟಕ್ಕೆ ಮಾನ್ಯತೆ ನೀಡುವ ಅಥವಾ ನಿರ್ಧರಿಸುವ ಸಂಸ್ಥೆಯಾಗಿದ್ದು, ಒಂದು...
                    
                                        
                                    ಬಾಲ್ಯ ಕ್ಯಾನ್ಸರ ಚಿಕಿತ್ಸೆಯ ವಿಳಂಬವನ್ನು ಕಡಿಮೆಗೊಳಿಸಿ
                                                        
                                                            
                                                                        editor -                                                                                                                                             
                                                    
                    
                    
ವಿಶ್ವದಾದ್ಯಂತ 3 ಲಕ್ಷಕ್ಕೂ ಅಧಿಕ ಮಕ್ಕಳು ಪ್ರತಿವರ್ಷ ಕ್ಯಾನ್ಸರಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಸುಮಾರು 2.23 ಲಕ್ಷ ಮಕ್ಕಳು ಭಾರತದವರಾಗಿದ್ದು ಅತ್ಯಂತ ಕಳವಳಕಾರಿ. ಬಾಲ್ಯದ ಕ್ಯಾನ್ಸರ ಸರಿಯಾದ ಸಮಯಕ್ಕೆ ಕಂಡು ಹಿಡಿದು ಸೂಕ್ತ ಚಿಕಿತ್ಸೆಯನ್ನು...
                    
                                    ತೆರೆದ ಹೃದಯ ಶಸ್ತ್ರಚಿಕಿತ್ಸೆ ಬದಲು ಚಿಕ್ಕ ರಂದ್ರದ ಮೂಲಕ ಹೃದಯ ಕವಾಟ ಬದಲಾವಣೆ
                                                        
                                                            
                                                                        editor -                                                                                                                                             
                                                    
                    
                    
ತೀವ್ರ ಎದೆನೋವು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 78 ವರ್ಷದ ವ್ಯಕ್ತಿಯು ತಪಾಸಣೆಗೆ ಬಂದಾಗ, ಮಹಾಅಫದಮನಿಯ ಕವಾಟವು ಹಾನಿಗೊಳಗಾಗಿರುವದು ಕಂಡು ಬಂದಿತು. ತಡಮಾಡದ ನಗರದ ಹರಿಯಂತ ಆಸ್ಪತ್ರೆಯ ಹಿರಿಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ....
                    
                                    ಚಳಿಗಾಲದಲ್ಲಾಗುವ ಶ್ವಾಸಕೋಶ ತೊಂದರೆಗಳು
                                                        
                                                            
                                                                        editor -                                                                                                                                             
                                                    
                    
                    
ಹವಾಮಾನ ಬದಲಾವಣೆಯಿಂದ ತೀವ್ರತರ ಚಳಿಗಾಳಿ ಬೀಸುತ್ತಿದ್ದು, ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ತಂಪಿನ ವಾತಾವರಣದಿಂದಾಗಿ ಹಲವಾರು ಸಮಸ್ಯೆಗಳು ಎದುರಾಗಬಹುದು. ನಡುಗಿಸುವ ಚಳಿಯಿಂದಾಗಿ ದೇಹದ ಉಷ್ಣತೆ ಕಡಿಮೆಯಾಗಿ ರಕ್ತದ ಚಲನೆಯ ವೇಗವೂ...
                    
                                    ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಎರಡನೇ ಯಶಸ್ವಿ ಯಕೃತ್ತು ಕಸಿ
                                                        
                                                            
                                                                        editor -                                                                                                                                             
                                                    
                    
                    
ಅನೇಕ ವರ್ಷಗಳಿಂದ ಲೀವರ ವೈಫಲ್ಯದಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಲೀವರ ಕಸಿ ಮಾಡುವದರ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವದಲ್ಲದೇ, ಉತ್ತರ ಕರ್ನಾಟಕದಲ್ಲಿಯೇ ದ್ವಿತೀಯ ಯಶಸ್ವಿ ಯಕೃತ್ತಿನ ಕಸಿ ಮಾಡುವಲ್ಲಿ...
                    
                                    ನೆರೆಯ ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್: ರಾಜ್ಯದಲ್ಲಿಯೂಮುಂಜಾಗ್ರತೆ ಕ್ರಮಗಳು ಜಾರಿ : ಸಚಿವ ಡಾ.ಕೆ.ಸುಧಾಕರ್
                                                        
                                                            
                                                                        editor -                                                                                                                                             
                                                    
                    
                    
ಬೆಳಗಾವಿ, ಸುವರ್ಣಸೌಧ (ಕರ್ನಾಟಕ ವಾರ್ತೆ)ಡಿ.22; ಕೋವಿಡ್ ವೈರಾಣು ಪುನಃ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ತೀವ್ರವಾಗಿ ಹಬ್ಬುತ್ತಿದ್ದು, ಮುಂಜಾಗ್ರತೆಯಾಗಿ ರಾಜ್ಯದಲ್ಲಿ ಕೊರೋನಾ ತಡೆಗಟ್ಟಲು ಮುಖ್ಯಮಂತ್ರಿಗಳು ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ವಿಡಿಯೋ...
                    
                                    ವೈದ್ಯ ವಿಜ್ಞಾನದಲ್ಲಿ ಸದಾ ಹೊಸತು ಇರಬೇಕು: ಡಾ. ಕೋರೆ
                                                        
                                                            
                                                                        editor -                                                                                                                                             
                                                    
                    
                    
ವೈದ್ಯ ವಿಜ್ಞಾನವು ನಿರಂತರವಾಗಿ ಬೆಳವಣಿಗೆ ಹೊಂದುತ್ತಿದ್ದು, ಉನ್ನತ ಶಿಕ್ಷಣದಲ್ಲಿ ಸಂಶೋಧನೆಗಳ ಮೂಲಕ ಸದಾ ಹೊಸತನ್ನು ಕಂಡುಕೊಳ್ಳಬೇಕು. ವೈದ್ಯರ ಕಲಿಕೆಯಲ್ಲಿನ ಬೆಳವಣಿಗೆಗಳ ನಡುವೆ ಚರ್ಮರೋಗ ವಿಭಾಗದಲ್ಲಿ ಶೈಕ್ಷಣಿಕ ಆವಿಷ್ಕಾರಗಳ ವಿನಿಮಯ ಮತ್ತು ಮಿತಿಗಳೊಂದಿಗೆ ವೈದ್ಯ...
                    
                                    ನಾವು ಪಾರ್ಶ್ವವಾಯು (ಸ್ಟ್ರೋಕ್) ಹೇಗೆ ತಡೆಗಟ್ಟಬಹುದು?
                                                        
                                                            
                                                                        editor -                                                                                                                                             
                                                    
                    
                    
ವಿಶ್ವ ಸ್ಟ್ರೋಕ್ ದಿನಾಚರಣೆ ನಿಮಿತ್ಯವಾಗಿ ಈ ಲೇಖನ
ಮೆದುಳಿನ ಭಾಗಕ್ಕೆ ಯಾವಾಗ ರಕ್ತದ ಹರಿವು ನಿಂತು ಹೋಗುತ್ತದೆಯೋ ಆಗ ಪಾರ್ಶ್ವವಾಯು (ಸ್ಟ್ರೋಕ್) ಆಗುತ್ತದೆ. ಅದು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತದ ಹರಿವು ಯಾವುದೋ ಕಾರಣಕ್ಕೆ ಸ್ಥಗಿಗೊಳ್ಳುವದನ್ನು ಇಸ್ಕೆಮಿಕ್ ಸ್ಟ್ರೋಕ್ ಎಂದು ಕರೆಯಲಾಗುತ್ತದೆ. ಮೆದುಳಿನಲ್ಲಿ ಉಂಟಾಗುವ ರಕ್ತಸ್ರಾವವನ್ನು ಹೆಮೊರೆಜಿಕ್ (ಹೆಪ್ಪುಗಟ್ಟಿ) ಸ್ಟೊçÃಕ್ ಎನ್ನಲಾಗುತ್ತದೆ. ಮೆದುಳಿಗೆ ಅಗತ್ಯವಿರುವಷ್ಟು ರಕ್ತ, ಆಮ್ಲಜನಕ ಹಾಗೂ ಪೋಷಕಾಂಶಗಳ ಪೂರೈಕೆಯನ್ನು ಕಡಿಮೆಗೊಳಿಸುತ್ತದೆ. ಇದರಿಂದ ಪಾರ್ಶ್ವವಾಯು ಉಂಟಾಗುತ್ತದೆ. ಇದು ಸಾಮಾನ್ಯವಾಗಿ 65 ರಿಂದ 75 ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದರೆ 35 ರಿಂದ 45 ರ ವಯಸ್ಸಿನವರಲ್ಲಿ ಕಡಿಮೆ.
ಪಾಶ್ವವಾಯು ಭಾರತದಲ್ಲಿ ಸಾವು ಮತ್ತು ಅಂಗವಿಕಲತೆಗೆ ಪ್ರಮುಖ ಕಾರಣವಾಗಿದೆ. ಕಳೆದ 3 ದಶಕಳಿಂದ ಶೇ. 70ರಷ್ಟು ಸಾವುಗಳು ನರ ಸಂಬAಧಿತ ಖಾಯಿಲೆಗಳಿಂದ ಉಂಟಾಗುತ್ತಿರುವದು ಕಂಡು ಬಂದಿದೆ. 2019ರಲ್ಲಿ ಸುಮಾರು 13 ಲಕ್ಷಕ್ಕೂ ಅಧಿಕ ಜನರು ಪಾರ್ಶ್ವವಾಯುವಿನಿಂದ ಬಳಲಿದ್ದು, ಅದರಲ್ಲಿ 6.99 ಲಕ್ಷ ಅಂದರೆ ಶೇ. 7.4ರಷ್ಟು ಜನ ಸಾವಿಗೀಡಾಗಿದ್ದಾರೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ 84-262/100 ಹಾಗೂ ನಗರದಲ್ಲಿ 334-424/100, ಜನಸಂಖ್ಯೆ ಆಧಾರದಲ್ಲಿ ನಡಸಿದ ಸಮೀಕ್ಷೆಯಲ್ಲಿ 119-145 ರಕ್ತದೊತ್ತಡ ಇದ್ದರೆ ಪಾರ್ಶ್ವವಾಯು ಬಂದೆರಗುವ ಸಾಧ್ಯತೆ ಅಧಿಕವಾಗಿರುತ್ತದೆ. ಅತೀಯಾದ ಏರು ರಕ್ತದೊತ್ತಡ, ವಾಯುಮಾಲಿನ್ಯ, ಮಧುಮೇಹ, ಆಹಾರ ಶೈಲಿ ಹಾಗೂ ಬೊಜ್ಜು ಅತ್ಯಂತ ಅಪಾಯಕಾರಿ.
ಪಾರ್ಶ್ವವಾಯುಗೆ ತುರ್ತು ವೈದ್ಯಕೀಯ ಕಾಳಜಿ ಹಾಗೂ ಶೀಘ್ರ ಚಿಕಿತ್ಸೆ ನೀಡಿದರೆ ಮೆದುಳಿಗೆ ಉಂಟಾಗುವ ಗಂಭೀರತೆಯನ್ನು ತಡೆಯಬಹುದು. ಇದು ಯಾವಾಗ ಬೇಕಾದರೂ ಬಂದೆರಗಬಹುದು. ಲಕ್ಷಣಗಳು ಕಂಡ ಕೂಡಲೇ ಆದಷ್ಟು ಬೇಗ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಬೇಕು. ಸ್ಟ್ರೋಕ್ ಆಗುವ ಮುಂಚೆ ಕೆಲವು ಸೂಚನೆಗಳು ಕಂಡು ಬರುತ್ತವೆ. ತಲೆನೋವು, ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಅಲ್ಲದೇ ಕೆಲ ದಿನಗಳ ಹಿಂದೆ ಗಂಭೀರ ಪಾರ್ಶ್ವವಾಯುವಿಗೆ ಒಳಗಾಗಿರುತ್ತಾರೆ. ಆದ್ದರಿಂದ ನಿರ್ಲಕ್ಷ್ಯ ತಾಳದೇ ಶೀಘ್ರವೇ ಚಿಕಿತ್ಸೆ ಪಡೆಯಬೇಕು.
ಮುನ್ನೆಚ್ಚರಿಕೆ ಲಕ್ಷಣಗಳು:
ಮುಖ, ತೋಳು ಅಥವಾ ಕಾಲು ದೇಹದ ಒಂದು ಬದಿಯಲ್ಲಿ ದೌರ್ಬಲ್ಯ ಕಂಡು ಬರುತ್ತದೆ. ಬೇರೆಯವರನ್ನು ಗುರುತಿಸುವಲ್ಲಿ ತೊಂದರೆ ಅಥವಾ ಗೊಂದಲಕ್ಕೀಡಾಗುವದು. ಮಾತನಾಡುವಲ್ಲಿ ಕಠೀಣತೆ ಎದುರಾಗುವದು. ಒಂದು ಅಥವಾ ಎರಡೂ ಕಣ್ಣುಗಳ ದೃಷ್ಠಿಗೆ ತೊಂದರೆ. ನಡೆದಾಡುವಾಗ ಅಥವಾ ನಿಲ್ಲಲು ಅಸಮತೋಲನ. ತಲೆ ತಿರುಗುವಿಕೆ. ಯಾವುದೇ ಕಾರಣವಿಲ್ಲದೇ ತೀವ್ರತರವಾದ ತಲೆನೋವು.
ಕಾರಣ: ಆಧುನಿಕತೆಯಲ್ಲಿ ಐಷಾರಾಮಿ ಜೀವನಕ್ಕೆ ಒಗ್ಗಿಕೊಳ್ಳುತ್ತಿರವವರು ಯಾವುದೇ ವ್ಯಾಯಾಮ, ಯೋಗ ಸೇರಿದಂತೆ ಚಟುವಟಿಕೆಗಳಿಲ್ಲದೇ ಜಡಜೀವನಶೈಲಿ ನಡೆಸುತ್ತಿರುವದು ಪ್ರಮುಖ ಕಾರಣ. ಅನಿಯಮಿತ ರಕ್ತದೊತ್ತಡ, ಮಧುಮೇಹ, ದೂಮಪಾನ, ಮದ್ಯಸೇವನೆ ಹಾಗೂ ಹೃದಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿದ್ದರೆ ಪಾರ್ಶ್ವವಾಯು ಉಂಟಾಗುವಲ್ಲಿ ಪ್ರಮುಖ ಕಾರಣವಾಗುತ್ತದೆ.
ತಡೆಗಟ್ಟುವಿಕೆ:
ನಿಮಗೆ ಉಂಟಾಗುವ ಪಾರ್ಶ್ವವಾಯುನ ಅಪಾಯಕಾರಿ ಹಾಗೂ ಗಂಭಿರತೆಯನ್ನು ಅರ್ಥಮಾಡಿಕೊಂಡು ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸುತ್ತ ಆರೋಗ್ಯಯುತ ಜೀವನಶೈಲಿ ಅಳವಡಿಸಿಕೊಂಡರೆ ಸ್ಟ್ರೋಕ್ ಅನ್ನು ತಡೆಗಟ್ಟಬಹುದು. ಈಗಾಗಲೇ ಪಾರ್ಶ್ವವಾಯುಗೆ ಒಳಗಾಗಿದ್ದರೆ ಮುಂದಾಗುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.
ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಿ:
ವೈದ್ಯರು ಸೂಚಿಸಿದಂತೆ ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ಔಷಧೋಪಚಾರವನ್ನು ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಔಷಧಿ ಸೇವಿಸುವದನ್ನು ನಿಲ್ಲಿಸಬೇಡಿ. ಒಂದು ವೇಳೆ ಮಾತ್ರೆ ನಿಲ್ಲಿಸಿದರೆ ಸ್ಟ್ರೋಕ್ ಗೆ ಕಾರಣವಾಗಬಹುದು.
ಸಕ್ಕರೆ ಅಂಶ ನಿಯಂತ್ರಣದಲ್ಲಿರಲಿ:
ನಿಯಮಿತ ಔಷಧೋಪಚಾರ, ಆಹಾರ ಪಥ್ಯೆ, ಯೋಗ ವ್ಯಾಯಾಮದ ಮೂಲಕ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊAಡು ಆರೋಗ್ಯವಾಗಿರಿ. ದಿನನಿತ್ಯ ನೀವು ಸೇವಿಸುವ ಆಹಾರದಲ್ಲಿ ಕೊಲೆಸ್ಟ್ರಾಲ ಹಾಗೂ ಕೊಬ್ಬು ಕಡಿಮೆ ಪ್ರಮಾಣದಲ್ಲಿರಲಿ. ಕೊಬ್ಬಿನಾಂಶವಿರುವ ಮಾಂಸ ಹಾಗೂ ಆಹಾರವನ್ನು ತ್ಯಜಿಸಿ. ವೈದ್ಯರ ಸಲಹೆ ಮೇರಗೆ ಅವಶ್ಯವಿರುವ ವ್ಯಾಯಾಮ ಮಾಡುತ್ತ ಕೊಲೆಸ್ಟಾçಲ್ ನಿಯಂತ್ರಣದಲ್ಲಿಡಿ. ಹಣ್ಣುಗಳು ಹಾಗೂ ತರಕಾರಿಯನ್ನು ಸಾಕಷ್ಟು ಸೇವಿಸಿ.
ತಂಬಾಕು ಸೇವನೆ ನಿಲ್ಲಿಸಿ: ತಂಬಾಕು ಸೇವೆನೆಯನ್ನು ತ್ಯಜಿಸುವದರಿಂದ ಪಾರ್ಶ್ವವಾಯು ಆಗುವ ಅಪಾಯವನ್ನು ಕಡಿಮೆ ಮಾಡಬಹುದು. ಮದ್ಯಸೇವನೆಯು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ರಕ್ತ ಸರಾಗವಾಗಿ ಸಾಗಲು ತೊಂದರೆಯನ್ನುAಟು ಮಾಡಿ, ಪ್ರತಿರೋಧ ಒಡ್ಡಿ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.
ನಿಯಮಿತ ವ್ಯಾಯಾಮ: ನಡೆದಾಡುವದು, ಓಡಾಟ, ಹಗ್ಗದಾಟ, ಸೈಕ್ಲಿಂಗ, ಈಜುವದು, ಯೋಗ, ಧ್ಯಾನ, ಪ್ರಾಣಾಯಾಮ ಸೇರಿದಂತೆ ಯೋಗಾಸನ ಮಾಡುವದರಿಂದ ರಕ್ತದೊತ್ತಡ, ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
 ಡಾ. ಸರೋಜಾ ಎ. ಒ. , ನರರೋಗ ಹಿರಿಯ ತಜ್ಞವೈದ್ಯರು
                    
                                    

