ವೈದ್ಯ ವಿಜ್ಞಾನದಲ್ಲಿ ಸದಾ ಹೊಸತು ಇರಬೇಕು: ಡಾ. ಕೋರೆ

ವೈದ್ಯ ವಿಜ್ಞಾನವು ನಿರಂತರವಾಗಿ ಬೆಳವಣಿಗೆ ಹೊಂದುತ್ತಿದ್ದು, ಉನ್ನತ ಶಿಕ್ಷಣದಲ್ಲಿ ಸಂಶೋಧನೆಗಳ ಮೂಲಕ ಸದಾ ಹೊಸತನ್ನು ಕಂಡುಕೊಳ್ಳಬೇಕು. ವೈದ್ಯರ ಕಲಿಕೆಯಲ್ಲಿನ ಬೆಳವಣಿಗೆಗಳ ನಡುವೆ ಚರ್ಮರೋಗ ವಿಭಾಗದಲ್ಲಿ ಶೈಕ್ಷಣಿಕ ಆವಿಷ್ಕಾರಗಳ ವಿನಿಮಯ ಮತ್ತು ಮಿತಿಗಳೊಂದಿಗೆ ವೈದ್ಯ ವಿಜ್ಞಾನವು ಪ್ರಗತಿಯಲ್ಲಿದೆ ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆ್ಯಂಡ ರಿಸರ್ಚನ (ಕಾಹೆರ) ಕುಲಪತಿ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಅಭಿಪ್ರಾಯಪಟ್ಟರು. 

ಇಂಡಿಯನ್ ಅಸೋಸಿಯೇಶನ್ ಆಫ್ ಡೆರಮಟಾಲಾಜಿ,ವೆನೆರಾಲಾಜಿಸ್ಟ ಮತ್ತು ಲೆಪ್ರೊಲಾಜಿಸ್ಟ ಕರ್ನಾಟಕ ಘಟಕ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಇವುಗಳ ಸಂಯುಕ್ತಾಶ್ರದಲ್ಲಿ ಏರ್ಪಡಿಸಲಾಗಿದ್ದ ಕುಟಿಕಾನ್-2022, 13 ನೇ ಭಾರತೀಯ ಚರ್ಮರೋಗ ವೈದ್ಯರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯವಿಜ್ಞಾನದಲ್ಲಿ ಚರ್ಮಶಾಸ್ತ್ರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಚರ್ಮವು ಇಡೀ ದೇಹವನ್ನು ಆವರಿಸುವ ದೊಡ್ಡ ಅಂಗಾAಶವಾಗಿದೆ. ಸೋರಿಯಾಸಿಸ್, ವಿಟಲಿಗೋ, ಸುಟ್ಟಗಾಯಗಳು, ಚರ್ಮದ ಕ್ಯಾನ್ಸರ್, ಇತ್ಯಾದಿ ವಿವಿಧ ರೋಗಗಳಿಗೆ ಒಡ್ಡಿಕೊಳ್ಳುತ್ತದೆ. ಈ ಕೆಲವು ಕಾಯಿಲೆಗಳಿಗೆ ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದೆ ಎಂದು ಅವರು ತಿಳಿಸಿದರು. 

ಯಾರಾದರೂ ತನ್ನ ಬೋಳು ತಲೆಯ ಮೇಲೆ ಕೂದಲು ಮತ್ತೆ ಬೆಳೆಯಲು ಪ್ರಯತ್ನಿಸಿದರೆ ಸ್ವಾಗತಾರ್ಹ ಎಂದು ತಮಾಷೆ ಮಾಡಿದ ಅವರು, ಕೌಶಲ್ಯ, ಜ್ಞಾನ, ಕ್ಲಿನಿಕಲ್ ತಂತ್ರಗಳು ಮತ್ತು ಅನುಭವಗಳ ವಿನಿಮಯವನ್ನು ಯುವ ವೈದ್ಯರೊಂದಿಗೆ ಹಂಚಿಕೊಳ್ಳಬೇಕು ಮತ್ತು ಕಲಿಕೆ-ಬೋಧನೆ ಉಪಕ್ರಮಗಳನ್ನು ಇನ್ನಷ್ಟು ಬಲಪಡಿಸಬೇಕು ಎಂದು ಅವರು ಸಲಹೆ ನೀಡಿದರು.

Cuticon 1 22

ಐಎಡಿವಿಎಲ್ ಪ್ರಧಾನ ಕಾರ್ಯದರ್ಶಿ ಡಾ.ದಿನೇಶ್ ಕುಮಾರ್ ದೇವರಾಜ ಮಾತನಾಡಿ, ಡರ್ಮಟಾಲಜಿಸ್ಟ್ ಅಸೋಸಿಯೇಷನ್ ಅತೀ ಹೆಚ್ಚು ತಜ್ಞವೈದ್ಯರನ್ನು ಹೊಂದಿದ ದೇಶದ 2ನೇ ದೊಡ್ಡ ವೈದ್ಯಕೀಯ ಸಂಘ. ಶಿಕ್ಷಣದಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಅದು ಉತ್ತುಂಗದಲ್ಲಿ ನಿಲ್ಲುತ್ತದೆ. ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎನ್ನುವದನ್ನು ಅರಿತು ಕಾರ್ಯ ಮಾಡಬೇಕು. ದೇಶ ಹಾಗೂ ಸಮಾಜವು ನಮಗೆ ನೀಡಿದ ಕೊಡುಗೆ ಮರೆಯಬಾರದು. ಆರೋಗ್ಯದ ಕುರಿತು ಜನರಲ್ಲಿ ಅರಿವು ಮೂಡಿಸುವ ಕರ‍್ಯ ನಿರಂತರವಾಗಿರಬೇಕು. ಎಲ್ಲರೂ ಕೂಡಿಕೊಂಡು ನೀಡಿದ ಕೊಡುಗೆ ಮತ್ತು ಭಾಗವಹಿಸುವಿಕೆ ಬಹುಮುಖ್ಯ. ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ಡಾ. ಸುಹಾಶ್ ಮಂಜ್ರೇಕರ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು, ಮತ್ತು ಡಾ. ಎಸ್ ಸಿ ನಟರಾಜ್ ಅವರು ಚರ್ಮರೋಗ ವಿಭಾಗವನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಡಾ. ರವಿ ಯಾದವ್ ಮಾತನಾಡಿದರು. ಮೂರು ದಿನಗಳ ಕಾಲ ನಡೆಯಲಿರುವ ಕುಟಿಕಾನ್-2002ರಲ್ಲಿ ಕಾಹೆರ ಉಪಕುಲಪತಿ (ಉಸ್ತುವಾರಿ) ಡಾ.ಎನ್.ಎಸ್.ಮಹಾಂತಶೆಟ್ಟಿ, ಕುಲಸಚಿವರಾದ ಡಾ.ವಿ.ಎ.ಕೋಠಿವಾಲೆ, ಡಾ. ಅಶೋಕ ಕುಮಾರ ಶೆಟ್ಟಿ, ಡಾ. ರವಿ ರಾಥೋಡ, ಡಾ. ಪ್ರಕಾಶ ಕೋಲೊಲ್ಗಿ, ಡಾ. ಸವಿತಾ ಎ. ಎಸ್. ಡಾ. ಡಿ ಪಿ ಜಯಂತ, ಡಾ. ವಿರೇಶ ಡಿ, ಡಾ.ಶಿವಕುಮಾರ ಪಾಟೀಲ, ಡಾ. ಸುಶ್ರತಾ ಕಾಮೋಜಿ, ಡಾ. ಸತೀಷ ಘೊಖಲೆ, ಡಾ. ಸಂತೋಷ ಶಿಂದೆ, ಡಾ. ಎ ಎಂ ಪಂಡಿತ, ಡಾ. ಭಾವನಾ ದೋಶಿ ಸೇರಿದಂತೆ ಸುಮಾರು 500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

Popular Doctors

Related Articles