ಚಳಿಗಾಲದಲ್ಲಾಗುವ ಶ್ವಾಸಕೋಶ ತೊಂದರೆಗಳು

ಹವಾಮಾನ ಬದಲಾವಣೆಯಿಂದ ತೀವ್ರತರ ಚಳಿಗಾಳಿ ಬೀಸುತ್ತಿದ್ದು, ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ತಂಪಿನ ವಾತಾವರಣದಿಂದಾಗಿ ಹಲವಾರು ಸಮಸ್ಯೆಗಳು ಎದುರಾಗಬಹುದು. ನಡುಗಿಸುವ ಚಳಿಯಿಂದಾಗಿ ದೇಹದ ಉಷ್ಣತೆ ಕಡಿಮೆಯಾಗಿ ರಕ್ತದ ಚಲನೆಯ ವೇಗವೂ ಕಡಿಮೆಯಾಗುತ್ತದೆ. ಹಾಗಾಗಿ ದೇಹವನ್ನು ಆದಷ್ಟು ಉಷ್ಣತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕಾದುದು ಅವಶ್ಯ. ಶೀತ, ಕೆಮ್ಮು, ಜ್ವರ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆ, ದೇಹ ಹೆಚ್ಚು ತಂಪಾಗಿರುವುದರಿಂದ ಶೀತ ಆಗಾಗ ಕಾಡುವ ಸಮಸ್ಯೆಯಾಗಿ ತಲೆದೋರುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು, ಉಸಿರಾಟ ಸಂಬಂಧಿ ತೊಂದರೆಗಳು ಹೆಚ್ಚಾಗುವುದು ಚಳಿಗಾಲದಲ್ಲಿಯೇ. ಈ ಕಾರಣಕ್ಕೆ ದೇಹಾರೋಗ್ಯ ಕಾಪಾಡಿಕೊಂಡು, ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯವಶ್ಯ.

ಚಳಿಗಾಲದಲ್ಲಿ ದೇಹದ ಉಷ್ಣತೆ ಕಡಿಮೆಯಾಗಿ ರಕ್ತದ ಚಲನೆಯ ವೇಗವೂ ಕಡಿಮೆಯಾಗುತ್ತದೆ. ವಾತಾವರಣ ವೈಪರೀತ್ಯದಿಂದಾಗಿ ದೇಹದಲ್ಲಿ ಬ್ಯಾಕ್ಟೀರಿಯಾ ವೈರಸ್ ಬೆಳವಣಿಗೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಚಳಿಗಾಲದಲ್ಲಿ ಸೋಂಕುಗಳು ಬೇಗ ಹರಡುತ್ತೆ. ಕೆಮ್ಮು ಸೀನು, ಶೀತ, ಜ್ವರ ಕೂಡ ತುಂಬಾ ಸಾಮಾನ್ಯ. ಇವುಗಳನ್ನು ಸಾಮಾನ್ಯ ಜ್ವರ ಮತ್ತು ಶೀತ ಎನ್ನುತ್ತಾರೆ. ಅಬಾಲವೃದ್ದರೆನ್ನದೇ ಎಲ್ಲರಲ್ಲಿಯೂ ಈ ಸೋಂಕು ಸಾಮಾನ್ಯ. ರೋಗ ನಿರೋಧಕ ಶಕ್ತಿ ಬಲವಾಗಿ ಇರುವವರಲ್ಲಿ ಇದು ಕೇವಲ ಜ್ವರ ಕಾಣಿಸಿಕೊಂಡರೆ, ರೋಗನಿಧಕ ಶಕ್ತಿ ಕಡಿಮೆ ಇರುವವರಲ್ಲಿ ತೀವ್ರ ರೂಪ ತಾಳಬಹುದಲ್ಲದೇ, ತೀವ್ರ ಸೈನುಸೈಟಿಸ್, ನ್ಯುಮೋನಿಯಾ ಆಗಿ ಕೂಡ ಪರಿವರ್ತಿತಗೊಳ್ಳಬಹುದು.

winter illnes

ಶ್ವಾಸಕೋಶ ತೊಂದರೆ ಚಳಿಗಾಲದಲ್ಲೇಕೆ ಹೆಚ್ಚು ?

ಸಾಮಾನ್ಯವಾಗಿ ಇನ್ಫ್ಲುಯೆಂಜಾ ರಿನೊವೈರಸ್, ಅಡೆನೊವೈರಸ್, ರೆಸ್ಪಿರೇಟರಿ ಸಿಮೆಟ್ರಿಕಲ್ ವೈರಸ್‌ಲ್ಸೋಂಕು ಚಳಿಗಾಲದಲ್ಲಿ ಹೆಚ್ಚು ಹರಡುತ್ತವೆ. ಈ ರೋಗುಣಾಗಳಿಂದ ಸಾಮಾನ್ಯ ಜ್ವರ ಅಥವಾ ಶೀತ ಹೆಚ್ಚಾಗಿ ಕಾಣುತ್ತದೆ. ಒರ್ವ ವ್ಯಕ್ತಿಯು ಜ್ವರದ ಸೋಂಕಿಗೆ ತುತ್ತಾದರೆ ರೋಗನಿರೋಧಕ ಶಕ್ತಿಯು ಕಡಿಮೆಯಾಗಿ ದ್ವೀತಿಯವಾಗಿ ಬ್ಯಾಕ್ಟಿರಿಯಲ್ ಸೋಂಕಿಗೂ ಬಲಿಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಸಾಮಾನ್ಯ ಸೋಂಕು ತೀವ್ರ ಸ್ವರೂಪ ತಾಳುತ್ತದೆ. ಮೈಕೈ ನೋವು, ಗಂಟಲು ಕೆರೆತ, ಜ್ವರ, ತಲೆನೋವು, ಸೀನು, ಶೀತ ಇವೆಲ್ಲ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು. ಆದರೆ ಉಸಿರು ಕಟ್ಟುವಿಕೆ, ಕಪ್, ಕೆಮ್ಮು, ಉಸಿರಾಡಲು ತೊಂದರೆಯಂತ ರೋಗಲಕ್ಷಣಗಳು ತೀವ್ರಸ್ವರೂಪವಾಗಿ ಕಂಡುಬರುತ್ತವೆ.

ಅದರಲ್ಲೂ ವೃದ್ದರು, ಶ್ವಾಸಕೋಶ, ಹೃದಯಸಂಬಂದಿ ರೋಗಗಳಿಂದ ಬಳಲುತ್ತಿರುವವರು, ಆದಷ್ಟು ಶೀಘ್ರ ವೈದ್ಯರ ಸಲಹೆ ಪಡೆದು ಚಿಕಿತ್ಸೆಪಡೆದುಕೊಳ್ಳುವದು ಒಳಿತು. ಹಾಗೆಯೇ ಜ್ವರ ನಿರೋಧಕ ವ್ಯಾಕ್ಸಿನ ಪಡೆದುಕೊಳ್ಳುವದರ ಮೂಲಕ ರೋಗನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಬಹುದು.

ಉಪಾಯ: ಬಿಸಿಯಾದ ಪೌಷ್ಟಿಕಾಂಶದಿಂದ ಕೂಡಿದ ಸಮತೋಲಿತ ಆಹಾರ ಸೇವನೆ, ಹಸಿರು ತರಕಾರಿ, ಹಣ್ಣುಗಳ ಸೇವನೆ, ವಿಟ್ಯಾಮಿನ ಸಿ ಅಧಿಕವಾಗಿರುವ ಹಣ್ಣುಗಳನ್ನು ಹೆಚ್ಚು ಸೇವನೆಯು ಪ್ರಮುಖ ಪಾತ್ರವಹಿಸುತ್ತದೆ. ಒಳ್ಳೆಯ ನಿದ್ರೆ ಕೂಡಾರೋಗ್ಯ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ನಿರಂತರ ವ್ಯಾಯಾಮ, ಸೂರ್ಯ ಕಿರಣಗಳಿಗೆ ಮೈಒಡ್ಡುವದರಿಂದ ವಿಟ್ಯಾಮಿನ್ ಡಿ ಲಭಿಸುತ್ತದೆ. .ಜನನಿಬಿಡ ಜಾಗಗಳಿಗೆ ಹೋಗುವ ಅಗತ್ಯ ಬಿದ್ದರೆ ಮಾಸ್ಕ ಧರಿಸಿ. ಇದರಿಂದ ಸೋಂಕು ಹರಡುವ ಹಾಗೂ ಅನೇಕ ಸಮಸ್ಯೆಗಳನ್ನು ದೂರವಿಡಬಹುದು.

ಮುಖ್ಯವಾಗಿ ಸಾದ್ಯವಾದಷ್ಟು ಬೆಚ್ಚಗಿರುವ ಬಟ್ಟೆಗಳನ್ನೇ ಧರಿಸಿ. ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ಚಳಿ ಹೆಚ್ಚಿರುವುದರಿಂದ ಸಂಪೂರ್ಣ ದೇಹ ಮುಚ್ಚುವಂತಹ ಬಟ್ಟೆಯನ್ನು ಧರಿಸಿಕೊಳ್ಳಬೇಕು. ಜ್ವರ, ಶೀತ, ನೆಗಡಿ, ಕೆಮ್ಮು ಮುಂತಾದ ಅತೀ ಸಾಮಾನ್ಯವಾಗಿ ಕಾಡುವ ಕಾಯಿಲೆಗಳೆಂದು ನಿರ್ಲಕ್ಷ ಮಾಡದೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು, ಆದಷ್ಟು ಬಿಸಿ ನೀರನ್ನೇ ಕುಡಿಯಬೇಕು: ತಣ್ಣೀರು, ತಂಪು ಪಾನೀಯ, ಐಸ್‌ಕ್ರೀಂ, ಫಾಸ್ಟಫುಡ್ ತಿನ್ನುವುದನ್ನು ಕಡಿಮೆಮಾಡಬೇಕು.

ಡಾ. ಜ್ಯೋತಿ ಹಟ್ಟಿಹೊಳಿ

ಶ್ವಾಸಕೋಶ ತಜ್ಞವೈದ್ಯರು

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ

Popular Doctors

Related Articles