ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಎರಡನೇ ಯಶಸ್ವಿ ಯಕೃತ್ತು ಕಸಿ

ಅನೇಕ ವರ್ಷಗಳಿಂದ ಲೀವರ ವೈಫಲ್ಯದಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಲೀವರ ಕಸಿ ಮಾಡುವದರ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವದಲ್ಲದೇ, ಉತ್ತರ ಕರ್ನಾಟಕದಲ್ಲಿಯೇ ದ್ವಿತೀಯ ಯಶಸ್ವಿ ಯಕೃತ್ತಿನ ಕಸಿ ಮಾಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರು ಯಶಸ್ವಿಯಾಗಿದ್ದಾರೆ.
ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಖಾನಾಪೂರ ತಾಲೂಕಿನ ಕುಪ್ಪತಗಿರಿ ಗ್ರಾಮದ ನಿವಾಸಿಯಾದ 50 ವರ್ಷದ ನರಸಿಂಗ ಪಾಟೀಲ ಎನ್ನುವವರ ಮೆದುಳು ನಿಷ್ಕಿçÃಯಗೊಂಡು, ತನ್ನ ಕರ‍್ಯವನ್ನು ನಿಲ್ಲಿಸಿದಾಗ ಕುಟುಂಬ ಸದಸ್ಯರೊಂದಿಗೆ ಆಪ್ತಸಮಾಲೋಚನೆ ಮಾಡಿ, ವ್ಯಕ್ತಿಯು ದಾನ ಮಾಡಿದ ಲೀವರ ಅನ್ನು ಯಕೃತ ವೈಫಲ್ಯದಿಂದ ಬಳಲುತ್ತಿದ್ದ ಹುಬ್ಬಳ್ಳಿಯ ವ್ಯಕ್ತಿಗೆ ಕಸಿ ಮಾಡಲಾಗಿದೆ ಎಂದು ಹಿರಿಯ ಗ್ಯಾಸ್ಟೊçಎಂಟ್ರಾಲಾಜಿಸ್ಟ ಡಾ. ಸಂತೋಷ ಹಜಾರೆ ಅವರು ಹೇಳಿದ್ದಾರೆ.
ಕೆಲವೆ ತಿಂಗಳ ಅಂತರದಲ್ಲಿ ಒಂದರ ಹಿಂದೆ ಮತ್ತೊಂದು ಹೀಗೆ ಎರಡು ಲೀವರ ಕಸಿ ಮಾಡಿದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಹಾಗೂ ಲಿವರ ಕಸಿ ಕೇಂದ್ರವಾಗಿ ಉತ್ತರ ಕರ್ನಾಟಕ, ಮಹಾರಾಷ್ಟತರ ಹಾಗೂ ಗೋವಾ ರಾಜ್ಯಗಳ ಜನತೆಗೆ ಆಶಾಕಿರಣವಾಗಿ ಹೊರಹೊಮ್ಮಿದೆ. ಕೇವಲ ಮೆಟ್ರೊ ನಗರಗಳಿಗೆ ಸೀಮಿತವಾಗಿದ್ದ ಲೀವರ ಕಸಿ ಶಸ್ತçಚಿಕಿತ್ಸೆಗಳನ್ನು ಅವಶ್ಯವಿರುವ ರೋಗಿಗಳಿಗೆ ಕೈಗೆಟಕುವ ದರದಲ್ಲಿ ನೀಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ಇತ್ತೀಚಿನ ದಿನಗಳಲ್ಲಿ ಅಂಗಾAಗ ದಾನದ ಅರಿವು ಹೆಚ್ಚಾಗುತ್ತಿದ್ದು, ರೋಗಿಯ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಅಂಗಗಳನ್ನು ದಾನ ಮಾಡಲು ಮುಂದೆ ಬರುತ್ತಿದ್ದಾರೆ, ಇದು ಅನೇಕ ಮಾರಣಾಂತಿಕ ಅನಾರೋಗ್ಯದ ರೋಗಿಗಳಿಗೆ ಎರಡನೇ ಜೀವನಕ್ಕೆ ಸಹಾಯ ಮಾಡುತ್ತಿದೆ.

WhatsApp Image 2023 01 07 at 4.44.30 PM 1


ಯಶಸ್ವಿ ಯಕೃತ ಕಸಿ ನೆರವೇರಿಸಿದ ಆಸ್ಪತ್ರೆಯ ಹಾಗೂ ಬೆಂಮಗಳೂರಿನ ಡಿಎಂ ಅಸ್ಟರ ಆಸ್ಪತ್ರೆಯ ವೈದ್ಯರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.

Popular Doctors

Related Articles