ವಿಟ್ಯಾಮಿನ್ ಡಿ ಮಹತ್ವ

ವಿಟ್ಯಾಮಿನ ಡಿ ಕೊಬ್ಬಿನಾಂಶ ಕರಗಿಸುವ ವಿಟ್ಯಾಮಿನಗಳ ಗುಂಪಿಗೆ ಸೇರುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಪೇಟ್ ಅಂಶವನ್ನು ವೃದ್ದಿಸುತ್ತದೆಯಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮಗೆ ವಿಟ್ಯಾಮಿನ ಡಿ ಸಿಗುವದು ಸೂರ್ಯ ರಶ್ಮಿಯಲ್ಲಿ ಸೂರ್ಯನ ಕಿರಣಗಳಿಂದ ತಪ್ಪಿಸಿಕೊಂಡರೆ ವಿಟ್ಯಾಮಿನ ಡಿ ಕೊರತೆಯನ್ನು ಕಾಡುತ್ತದೆ.

ಸೂರ್ಯನಿಂದ ವಿಟ್ಯಾಮಿನ ಡಿ ಹೇಗೆ ?

ವಿಟ್ಯಾಮಿನ ಡಿ ಉತ್ಪತ್ತಿ ಮಾಡುವ ಅಂಗ, ಧರ್ಮ, ಸೂರ್ಯನ ಅಲ್ಟ್ರಾವೈಲೆಟ್ (ಯುವಿ) ಕಿರಣ ಚರ್ಮದ ಮೇಲೆ ಬಿದ್ದು ದೇಹದಲ್ಲಿ ವಿಟ್ಯಾಮಿನ್ ಡಿ ಆಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಇದನ್ನು ಸೂರ್ಯರಶ್ಮಿ ವಿಟ್ಯಾಮಿನ ಎಂತಲೂ ಕರೆಯುತ್ತಾರೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಯುವಿ ಕಿರಣ ಇರುತ್ತದೆ. ಈ ಸಮಯದಲ್ಲಿ ದಿನಕ್ಕರ್ಧ ಗಂಟೆ ಬಿಸಿಲಿಗೆ ಪ್ರತಿಯೊಬ್ಬರೂ ಬೆನ್ನು ಹಾಗೂ ಮೈ ಒಡ್ಡಲೇಬೇಕು. ಲೊಶನ್ ಛತ್ರಿ ಮುಸುಕು ಬಳಸದೇ ನೇರವಾಗಿ ಕಿರಣ ಮೈಮೇಲೆ ಬೀಳುವಂತೆ ನೋಡಿಕೊಳ್ಳಬೇಕು.ದಿ ಇಂಡಿಯನ್ ಡಯಟಿಕ್ ಅಸೋಸಿಯೇಶನ್ ಪ್ರಕಾರ ನಿತ್ಯ 400 ಐಯು (10 ಗ್ರಾಮ) ವಿಟ್ಯಾಮಿನ್ ಡಿ ಬೇಕು. ಇಂದು ವಿಶ್ವದಾದ್ಯಂತ ಸುಮಾರು ನೂರು ಕೋಟಿ ಮಂದಿಯಲ್ಲಿ ವಿಟ್ಯಾಮಿನ್ ಡಿ ಕೊರತೆ ಇದೆ.

surya

ಸರ್ವ ರೋಗಕ್ಕೂ ಮದ್ದು: ವಿಟ್ಯಾಮಿನ ಡಿ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿರದಿದ್ದರೆ ಕ್ಯಾನ್ಸರ ರಿಕೆಟ್ಸ್, ಸಂಧಿವಾತ, ಹೃದಯ ಸಂಬಂಧಿ ಖಾಯಿಲೆ, ಮೂತ್ರಪಿಂಡದ ಖಾಯಿಲೆ, ಕ್ಷಯ ಸೋಂಕು, ಬೊಜ್ಜು, ಕೂದಲು ಉದುರುವಿಕೆ ಮತ್ತು ಖಿನ್ನತೆಯಂತಹ ಖಾಯಿಲೆಗಳನ್ನು ತಡೆಗಟ್ಟುತ್ತದೆ. ವಿಟ್ಯಾಮಿನ ಡಿ ಗೆ ಶ್ವಾಸಕೋಶದ ಸೋಂಕಿನಿಂದ ಬರುವ ಖಾಯಿಲೆಗಳ ರೋಗಾಣುಗಳ ವಿರುದ್ದ ಹೋರಾಡುವ ಶಕ್ತಿಯಿದೆ.

ಹೀಗಾಗಿ ಸಾಮಾನ್ಯ ಶೀತ ನೆಗಡಿಯ ರೋಗಾಣುಗಳ ಜೊತೆಗೆ ಇದು ಹೋರಾಡುತ್ತದೆ. ರಕ್ತದೊತ್ತಡ, ಮಧುಮೇಹ ಖಾಯಿಲೆ ಪ್ರಮಾಣ ಕಡಿಮೆ ಮಾಡುತ್ತದೆ. ದೇಹದಲ್ಲಾದ ಗಾಯವನ್ನು ಒಣಗಿಸುವಂತೆ ಮತ್ತು ಮಾಗುವಂತೆ ಮಾಡುತ್ತದೆ. ಮುಖ್ಯವಾಗಿ ಮೂಳೆಯ ಬೆಳವಣೆಗೆಗೂ ಇದು ಸಹಕಾರಿ. ಅವಧಿಗೆ ಮುನ್ನ ಹೆರಿಗೆಯಾಗುವ ಅಪಾಯದ ಪ್ರಮಾಣವನ್ನು ತಗ್ಗಿಸುತ್ತದೆ. ಅಲ್ಲದೇ ವಿಟ್ಯಾಮಿನ್ ಡಿ ಕೊರತೆಯಿಂದ ಪ್ರಸವದ ನಂತರ ತಾಯಿಗೆ ಬೆನ್ನು ನೋವು ಕಾಣಿಸಿಕೊಳ್ಳಬಹುದು. ವಿಟ್ಯಾಮಿನ ಡಿ ಕೊರತೆಯಿಂದ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ.

ಕೊರತೆಯ ಪರಿಣಾಮ

ದೇಹದಲ್ಲಿ ವಿಟ್ಯಾಮಿನ್ ಡಿ ಕಡಿಮೆಯಾದಂತೆ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಇದರಿಂದ ದೀರ್ಘಕಾಲಿಕ ರೋಗಗಳು, ರಿಕೆಟ್ಸ, ಅಸ್ಟಿಯೋಮಲೇಸಿಯಾ, ಮೂಳೆ ಸವೆತ, ನರ ರೋಗಗಳು, ಅನೇಕ ಕ್ಯಾನ್ಸರ, ಥೈರಾಯಿಡ ಸಮಸ್ಯೆ, ಬೆನ್ನು ನೋವು, ರಕ್ತದೊತ್ತಡ, ಮಧುಮೇಹ, ಋತುಚಕ್ರ ಸಂಬಂಧಿ ಸಮಸ್ಯೆಗಳು ತಲೆದೂಗುವವು.

ವಿಟ್ಯಾಮಿನ ಡಿ ಎಲ್ಲಿಂದ ಸಿಗುತ್ತದೆ ?

ವಿಟ್ಯಾಮಿನ ಡಿ ಮೂಲ ಸೂರ್ಯ, ಜೊತೆಗೆ ವಿಟ್ಯಾಮಿನ ಡಿ ಇರುವ ಏಕೈಕ ತರಕಾರಿ ಅಣಬೆ. ಇನ್ನುಳಿದ ಆಹಾರಗಳೆಂದರೆ ಮೊಟ್ಟೆ, ಮೀನು, ಮಾಂಸ, ಹಾಗಂತ ಸಸ್ಯಾಹಾರಿಗಳು ಗಾಬರಿಯಾಗಬೇಕಿಲ್ಲ. ಹಾಲು ಹಾಲಿನ ಉತ್ಪನ್ನಗಳು, ಸೋಯಾಬೀನ್ಸ್, ಕಾಳುಗಳು, ರಾಗಿ, ಬದಾಮಿ, ಹಸಿರು ತರಕಾರಿ, ಬೀನ್ಸ ಇತ್ಯಾದಿಗಳಲ್ಲಿ ವಿಟ್ಯಾಮಿನ ಡಿ ಇರುತ್ತದೆ.ಇವುಗಳಲ್ಲಿ ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ, ರಕ್ತ ಹೀನತೆ ಕಡಿಮೆ ಮಾಡುವ ಕಬ್ಬಿನಾಂಶ ಮತ್ತು ರಕ್ತದೊತ್ತಡ ನಿವಾರಿಸುವ ಪೊಟ್ಯಾಶಿಯಂ ಹೇರಳವಾಗಿ ದೊರಕುತ್ತದೆ. ಇದರ ಜೊತೆಗೆ ನೀವು ಗಮನಿಸಬೇಕಾದ ಕೆಲವು ವಿಷಯಗಳೆಂದರೆ,

ಬಿಸಿಲಿಗೆ ಸ್ವಲ್ಪ ದೇಹ ಒಡ್ಡಿಕೊಳ್ಳಿ

ಮಕ್ಕಳನ್ನು ಒಂದು ತಾಸಾದರೂ ಮನೆ ಹೊರಗೆ ಆಟವಾಡಲು ಬಿಡಿ,

ಸ್ನಾನ ಆದ ಬಳಿಕ ಬಿಸಿಲಿನಲ್ಲಿ ಕೂದಲು ಒಣಗಿಸಿ. ಇದು ಹೆಣ್ಣುಮಕ್ಕಳಲ್ಲಿನ ಖಿನ್ನತೆ ನಿಯಂತ್ರಿಸುತ್ತದೆ.


ಡಾ
. ಜ್ಯೋತಿ ವಸೆದಾರ, ಬೆಳಗಾವಿ

Popular Doctors

Related Articles