ಇಲ್ಲಿದೆ ವಕ್ರ ಬೆನ್ನುಹುರಿಗೆ ಶಸ್ತ್ರಚಿಕಿತ್ಸೆ (ಸ್ಕೋಲಿಯಾಸಿಸ್)

ಚಿಕ್ಕಂದಿನಲ್ಲಿ ಸಹಜವಾಗಿದ್ದ ಹೆಣ್ಣು ಮಗು ಬೆಳೆಬೆಳೆಯುತ್ತ ಅಸಹಜತೆಗೆ ಮರಳತ್ತ ಸಾಗಿದಳು. ಅವಳ ಬೆನ್ನು ಮೂಳೆ ವಕ್ರವಾಗಿದ್ದು, ಎಸ್ ಅಥವಾ ಸಿ ಆಕಾರದಲ್ಲಿದ್ದರೆ ಅದು ಸ್ಕೊಲಿಯಾಸಿಸ್. 8 ವರ್ಷದ ಬಾಲಕಿ ಒಂದು ಭುಜ ಮೇಲಾಗಿ, ಇನ್ನೊಂದು ಭುಜ ಕೆಳಗಾಗಿ ನಡೆಯುತ್ತಿದ್ದಳು. ಅವಳ ಪೋಷಕರು ಅದನ್ನು ಗುರುತಿಸಿ ವೈದ್ಯರಲ್ಲಿಗೆ ಕರೆದೊಯ್ಯುವ ವೇಳೆಗೆ ಅದು ತೀವ್ರ ಬೆಳೆಯುತ್ತಿರುವದು ಕಂಡುಬಂತು.
ಮನುಷ್ಯನ ದೇಹ ರಚನೆಯಲ್ಲಿ ಬೆನ್ನು ಮೂಳೆ ಪ್ರಮುಖ ಅಂಗ. ಆರೋಗ್ಯವಂತ ಮನುಷ್ಯರಲ್ಲಿ ಬೆನ್ನುಮೂಳೆ ರಚನೆ ನೇರವಾಗಿದ್ದಾಗ ಮಾತ್ರ ಸುಂದರವಾಗಿ ಕಾಣುತ್ತಾರೆ. ನಡಿಗೆಯ ಚಲನವನದಲ್ಲಿ ಯಾವುದೇ ರೀತಿಯ ತೊಂದರೆಯುಂಟಾಗುವುದಿಲ್ಲ. ಆದರೆ ಬೆನ್ನುಮೂಳೆ ವಕ್ರವಾಗಿದ್ದಲ್ಲಿ ಅದು ಇಂಗ್ಲೀಷ ಅಕ್ಷರ ಮಾಲೆಯ ಎಸ್ ಅಥವಾ ಸಿ ಆಕಾರದಲ್ಲಿದ್ದರೆ ವಿಕಾರವಾದ ಅಸಹಜವಾಗುತ್ತದೆ. ನಡೆಯುವಾಗ ಸಮತೋಲನ ಕಳೆದುಕೊಳ್ಳುವದು, ಚಟುವಟಿಕೆಯಲ್ಲಿ ಇತರ ಮಕ್ಕಳಿಗಿಂತ ಹಿಂದೆ ಉಳಿಯಬಹುದು.
ಬೆನ್ನುಮೂಳೆ ಶಸ್ತ್ರಚಿಕಿತ್ಸಕರಾದ ಡಾ. ಸಂಜಯ ಪಾಟೀಲ ಅವರು ಹೇಳುವಂತೆ, ಸ್ಕೊಲಿಯಾಸಿಸ್ ಶೇ. 1.5 ರಿಂದ 2 ರಷ್ಟು ಪುರುಷರಲ್ಲಿ ಹಾಗೂ ಶೇ. 5ರಷ್ಟು ಮಹಿಳೆಯಲ್ಲಿ ಕಂಡು ಬರುತ್ತದೆ. ಎಲ್ಲ ಸ್ಕೊಲಿಯಾಸಿಸ್‍ಗಳಿಗೂ ಶಸ್ತ್ರಚಿಕಿತ್ಸೆಯ ಅವಶ್ಯವಿರುವುದಿಲ್ಲ. ಕೆಲವೊಂದು ದೀರ್ಘವಾಗಿ ಬೆಳೆದು ಚಿಕಿತ್ಸೆಗೆ ಸ್ಪಂಧಿಸದಿದ್ದರೆ ಅದಕ್ಕೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ.
Scoliosis-Treatment
Pc: http://www.childrenshospital.org/
ಪ್ರಮುಖ ಕಾರಣಗಳು:
ಸ್ಕೋಲಿಯಾಸಿಸಿ ಉಂಟಾಗಲು ಹಲವಾರು ಕಾರಣಗಳಿವೆ. ಮುಖ್ಯವಾಗಿ ಪೋಲಿಯೋ ಮತ್ತು ಮೆದುಳಿನಲ್ಲಿನ ತೊಂದರೆ ಹಾಗೂ ಜನ್ಮತಃವಾಗಿ ಬೆನ್ನುಹುರಿಯ ಸಮಸ್ಯೆ ಇರುವದು.
1) ಮೆದುಳಿನಲ್ಲಿ ತೊಂದರೆ 2) ಕಾಲುಗಳ ಅಳತೆಯಲ್ಲಿನ ವ್ಯತ್ಯಾಸ, 3) ಅನುವಂಶೀಯತೆ,
4) ಮಾಂಸಖಂಡಗಳ ಕೊರತೆ ಮತ್ತು ಅಶಕ್ತತೆ, 5) ಬೆನ್ನು ಹುರಿಯ ಮೇಲೆ ಬೆಳದಿರುವ ಗಡ್ಡೆ
6) ರಕ್ತ ಸಂಬಂಧಿಗಳಲ್ಲಿ ಮದುವೆಯಾಗುವದು.
ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಸ್ಕೊಲಿಯಾಸಿಸ್‍ನ್ನು ಚಿಕ್ಕಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿಯೇ ಕಂಡುಹಿಡಿದರೆ ಶಸ್ತ್ರಚಿಕಿತ್ಸೆ ಅವಶ್ಯವಿಲ್ಲದೆಯೇ ವಿಶೇಷ ಜಾಕೆಟ ಬಳಸಿ ಮತ್ತು ಪ್ಲಾಸ್ಟರ ಮೂಲಕ ಅದನ್ನು ಸರಿಪಡಿಸಬಹುದೆಂದು ಹೇಳುತ್ತಾರೆ ತಜ್ಞವೈದ್ಯರಾದ ಡಾ. ಸಂಜಯ ಪಾಟೀಲ.
ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗಬಹುದು. ವಯಸ್ಸಾದಂತೆ ಬೆನ್ನುಹುರಿಯ ವಕ್ರತೆ ಹೆಚ್ಚಾಗಿ ಗಡುಸಾಗಿರುವದರಿಂದ ಕೆಲವೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾದರೂ ಅದು ಫಲಕಾರಿಯಾಗದೇ ಇರಬಹುದು. ಪೋಷಕರ ಜೊತೆ ಶಿಕ್ಷಕರೂ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅಂತಃ ಮಕ್ಕಳು ಶಾಲೆ ಅಥವಾ ಸುತ್ತಮುತ್ತಲ ಪ್ರದೇಶದಲ್ಲಿ ಕಂಡು ಬಂದರೆ ಸಮೀಪದ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಆ ಮಕ್ಕಳು ಸಮಾಜದಲ್ಲಿ ಮುಕ್ತ ಮನಸ್ಸಿನಿಂದ ಗೌರವಯುತವಾಗಿ ಜೀವಿಸಲು ಪೋಷಕರು, ಶಿಕ್ಷಕರೂ ಹಾಗೂ ಸಮಾಜ ಸಹಕರಿಸಿದರೆ ಸಾಧ್ಯವಿದೆ.
ಯಾರಿಗೆ ಶಸ್ತ್ರಚಿಕಿತ್ಸೆ:
ಬೆನ್ನುಹುರಿ ಅತ್ಯಧಿಕ ವಕ್ರವಿರುವರು, ನರಗಳ ದೌರ್ಬಲ್ಯವಿರುವವರು, ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು, ಚಲನವಲನದಲ್ಲಿ ಅಸಮತೋಲನದಿಂದಿರುವವರು, ಬೆನ್ನುಹುರಿ ವಕ್ರತೆ ಅಧಿಕಗೊಳ್ಳುತ್ತಿದ್ದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ.
ಸ್ಕೊಲಿಯಾಸಿಸ್ ಪರೀಕ್ಷಿಸುವ ವಿಧಾನ: ಬೆನ್ನುಹುರಿಯ ನೇರಕ್ಕೆ ಎರಡೂ ಕೈಗಳನ್ನೆತ್ತಿ ನೇರವಾಗಿ ಇವೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ. ಬೆನ್ನುಹುರಿ ವಕ್ರವಾಗಿದೆಯೋ ಎಂಬುದನ್ನು ಪರೀಕ್ಷಿಸಿ. ಮುಂದಕ್ಕೆ ಬಾಗಿದಾಗ ಸೊಂಟದ ಮೇಲ್ಭಾಗ ಅಥವಾ ಕೆಳಭಾಗದಲ್ಲಿ ವ್ಯತ್ಯಾಸ ಇದೆಯೇ ಎಂದು ಪರೀಕ್ಷಿಸುತ್ತಾರೆ. ವೈದ್ಯರು ಎಕ್ಸರೇ, ಸ್ಕ್ಯಾನ್ ಮಾಡಿ ಅದರ ಮೇಲೆ ನಿಖರವಾಗಿ ಪರೀಕ್ಷಿಸಿ. ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತಾರೆ. ಎಷ್ಟು ಡಿಗ್ರಿ ಬೆನ್ನುಹುರಿ ಬಾಗಿದೆ ಎಂದು ಎಕ್ಸರೇ ಮೂಲಕ ಹೇಳಲು ಸಾಧ್ಯ.
ವೈದ್ಯರಲ್ಲಿ ತಪಾಸಿಸಿದಾಗ ಸ್ಕೊಲಿಯಾಸಿಸ್ ಅಥವಾ ಬೆನ್ನುಮೂಳೆ ವಕ್ರವಾಗಿರುವದನ್ನು ದೃಢಪಡಿಸಿ, ಶಸ್ತ್ರಚಿಕಿತ್ಸೆ ಮಾಡುವದರ ಮೂಲಕ ಬೆನ್ನು ಮೂಳೆಯನ್ನು ಸರಿಪಡಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಅವಳನ್ನು ಶಸ್ತ್ರಚಿಕಿತ್ಸೆಗೊಳಪಡಿಸದಿದ್ದರೆ, ಅವಳ ಬೆನ್ನು ಗೂನಾಗಿ ವಿಕಾರವಾಗಿ ಕಾಣಿಸುವ ಸಾಧ್ಯತೆ ಅತ್ಯಧಿಕವಾಗಿತ್ತು.

sco

Popular Doctors

Related Articles