ಚಿಕ್ಕಂದಿನಲ್ಲಿ ಸಹಜವಾಗಿದ್ದ ಹೆಣ್ಣು ಮಗು ಬೆಳೆಬೆಳೆಯುತ್ತ ಅಸಹಜತೆಗೆ ಮರಳತ್ತ ಸಾಗಿದಳು. ಅವಳ ಬೆನ್ನು ಮೂಳೆ ವಕ್ರವಾಗಿದ್ದು, ಎಸ್ ಅಥವಾ ಸಿ ಆಕಾರದಲ್ಲಿದ್ದರೆ ಅದು ಸ್ಕೊಲಿಯಾಸಿಸ್. 8 ವರ್ಷದ ಬಾಲಕಿ ಒಂದು ಭುಜ ಮೇಲಾಗಿ, ಇನ್ನೊಂದು ಭುಜ ಕೆಳಗಾಗಿ ನಡೆಯುತ್ತಿದ್ದಳು. ಅವಳ ಪೋಷಕರು ಅದನ್ನು ಗುರುತಿಸಿ ವೈದ್ಯರಲ್ಲಿಗೆ ಕರೆದೊಯ್ಯುವ ವೇಳೆಗೆ ಅದು ತೀವ್ರ ಬೆಳೆಯುತ್ತಿರುವದು ಕಂಡುಬಂತು.
ಮನುಷ್ಯನ ದೇಹ ರಚನೆಯಲ್ಲಿ ಬೆನ್ನು ಮೂಳೆ ಪ್ರಮುಖ ಅಂಗ. ಆರೋಗ್ಯವಂತ ಮನುಷ್ಯರಲ್ಲಿ ಬೆನ್ನುಮೂಳೆ ರಚನೆ ನೇರವಾಗಿದ್ದಾಗ ಮಾತ್ರ ಸುಂದರವಾಗಿ ಕಾಣುತ್ತಾರೆ. ನಡಿಗೆಯ ಚಲನವನದಲ್ಲಿ ಯಾವುದೇ ರೀತಿಯ ತೊಂದರೆಯುಂಟಾಗುವುದಿಲ್ಲ. ಆದರೆ ಬೆನ್ನುಮೂಳೆ ವಕ್ರವಾಗಿದ್ದಲ್ಲಿ ಅದು ಇಂಗ್ಲೀಷ ಅಕ್ಷರ ಮಾಲೆಯ ಎಸ್ ಅಥವಾ ಸಿ ಆಕಾರದಲ್ಲಿದ್ದರೆ ವಿಕಾರವಾದ ಅಸಹಜವಾಗುತ್ತದೆ. ನಡೆಯುವಾಗ ಸಮತೋಲನ ಕಳೆದುಕೊಳ್ಳುವದು, ಚಟುವಟಿಕೆಯಲ್ಲಿ ಇತರ ಮಕ್ಕಳಿಗಿಂತ ಹಿಂದೆ ಉಳಿಯಬಹುದು.
ಬೆನ್ನುಮೂಳೆ ಶಸ್ತ್ರಚಿಕಿತ್ಸಕರಾದ ಡಾ. ಸಂಜಯ ಪಾಟೀಲ ಅವರು ಹೇಳುವಂತೆ, ಸ್ಕೊಲಿಯಾಸಿಸ್ ಶೇ. 1.5 ರಿಂದ 2 ರಷ್ಟು ಪುರುಷರಲ್ಲಿ ಹಾಗೂ ಶೇ. 5ರಷ್ಟು ಮಹಿಳೆಯಲ್ಲಿ ಕಂಡು ಬರುತ್ತದೆ. ಎಲ್ಲ ಸ್ಕೊಲಿಯಾಸಿಸ್‍ಗಳಿಗೂ ಶಸ್ತ್ರಚಿಕಿತ್ಸೆಯ ಅವಶ್ಯವಿರುವುದಿಲ್ಲ. ಕೆಲವೊಂದು ದೀರ್ಘವಾಗಿ ಬೆಳೆದು ಚಿಕಿತ್ಸೆಗೆ ಸ್ಪಂಧಿಸದಿದ್ದರೆ ಅದಕ್ಕೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ.
