ಹೈಪೋಥೈರಾಯಿಡಿಸಮ್

ನಮ್ಮ ದೇಹದಲ್ಲಿ ಥೈರಾಯ್ಡ್ ಹಾರ್ಮೋನನಲ್ಲಿ ಉಂಟಾಗುವ ವ್ಯತ್ಯಾಸದಿಂದ ಥೈರಾಯ್ಡ್ ಕಾಯಿಲೆ ಬಂದೆರಗುತ್ತದೆ.  ಹಾರ್ಮೋನಗಳು ತುಂಬಾ ಚಟುವಟಿಕೆಯಿಂದ ಕೂಡಿದ್ದರೆ ಹೈಪರ್ ಥೈರಾಯ್ಡ್, ಕಡಿಮೆ ಚಟುವಟಿಕೆ ಹೊಂದಿದ್ದರೆ ಹೈಪೋ ಥೈರಾಯ್ಡ್ ಎನ್ನುತ್ತಾರೆ. ಹೈಪೋಥೈರಾಯ್ಡಿಸಮ್ ಹಾರ್ಮೋನ್‍ಗಳಿಗೆ ಸಂಬಂಧ ಪಟ್ಟ ಕಾಯಿಲೆಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದೆ (ಮಧುಮೇಹಕ್ಕೆ  ಆಗ್ರ ಸ್ಥಾನದಲ್ಲಿದೆ).

ಸಮೀಕ್ಷೆ ಪ್ರಕಾರ ೪೨ ಮಿಲಿಯ ಭಾರತೀಯರು ಥೈರಾಯ್ಡ್ ತೊಂದರೆಯಿಂದ ಬಳಲುತ್ತಿದ್ದಾರೆ. ಹತ್ತರಲ್ಲಿ ಓರ್ವ ಮಹಿಳೆ ಸೌಮ್ಯ ಸ್ವರೂಪದ ಥೈರಾಯ್ಡ್ ವೈಫಲ್ಯ (ಸಬ್‍ಕ್ಲಿನಿಕಲ್ ಹೈಪೋಥೈರಾಯ್ಡಿಸಮ್) ಹೊಂದಿರಬಹುದು.

ಥೈರಾಯ್ಡ್  ಹಾರ್ಮೋನನಲ್ಲಿ ವ್ಯತ್ಯಾಸ ಬಂದರೆ ಜೀರ್ಣಕ್ರಿಯೆಯಲ್ಲಿ ತೊಂದರೆ, ಕ್ಯಾಲ್ಸಿಯಂ ಮತ್ತು ಐಯೋಡಿನ್ ಕೊರತೆ ಉಂಟಾಗುತ್ತದೆ.

ಥೈರಾಯ್ಡ್ ಎಂದರೇನು? 
ಥೈರಾಯ್ಡ್ ನಿಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಒಂದು ಗ್ರಂಥಿ.  ಈ  ಗ್ರಂಥಿಯು ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯಕವಾದ ಥೈರಾಯ್ಡ್ ಹಾರ್ಮೋನಗಳಾದ T3 (ಥೈರಾಕ್ಸಿನ್) ಮತ್ತು T4 (ಥೈರೋನಿನ್) ಎಂಬುದನ್ನು ಉತ್ಪಾದಿಸುತ್ತದೆ.

ಥೈರಾಯ್ಡ್ ಹಾರ್ಮೋನುಗಳು ಚಯಾಪಚಯವನ್ನು (ಮೆಟಾಬಲಿಸಮ್) ನಿಯಂತ್ರಿಸಿ, ಎಲ್ಲ ಕಣಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತವೆ.
ಥೈರಾಯ್ಡ್ ಹಾರ್ಮೋನುಗಳು ಇತರ ನಿರ್ನಾಳ ಗ್ರಂಥಿಗಳ ಕಾರ್ಯಗಳನ್ನೂ  ಯಂತ್ರಿಸುತ್ತದೆ. ಮುಖ್ಯವಾಗಿ ಅಂಗಾಂಗಗಳ ಹಾಗೂ ಶಾರೀರಿಕ  ಆರೋಗ್ಯವನ್ನು ಕಾಪಾಡುತ್ತವೆ.

ಹೈಪೋಥೈರಾಯಿಡಸಮ್ :
ಥೈರಾಯ್ಡ್ ಗ್ರಂಥಿ ಅಗತ್ಯಕ್ಕಿಂತ ಕಡಿಮೆ ಹಾರ್ಮೋನ್ ಉತ್ಪಾದನೆ ಮಾಡಿದರೆ ಉಂಟಾಗಬಹುದಾದ ರೋಗಕ್ಕೆ ಹೈಪೋಥೈರಾಯ್ಡಿಸಮ್ ಹಾಗೂ ಥೈರಾಯ್ಡ್ ಗ್ರಂಥಿಯಲ್ಲಿ ಉರಿ ಭಾವು ಉಂಟಾಗಿ ಅದರಲ್ಲಿರುವ ಹಾರ್ಮೋನಿನ ಸಂಗ್ರಹವು ರಕ್ತಕ್ಕೆ ಸೋರಿಕೆಯಾದರೆ, ರಕ್ತದಲ್ಲಿ ಹಾರ್ಮೋನ್ ಮಟ್ಟದ ಹೆಚ್ಚಳ ಉಂಟಾದಾಗ ಇದನ್ನು ಥೈರಾಯ್ಡೈಟಿಸ್ ಎಂದು ಕರೆಯುತ್ತಾರೆ.

ರೋಗ ಪತ್ತೆ:

ಥೈರಾಯಿಡಗೆ ಸಂಬಂಧಿಸಿದ ರಕ್ತ ತಪಾಸಣೆ ಹಾಗೂ ಅವಶ್ಯವಿದ್ದರೆ ಸ್ಕ್ಯಾನ ಮಾಡಿಸಬೇಕಾಗುತ್ತದೆ. ಅದೇ ರೀತಿಯಾಗಿ ಥೈರಾಯ್ಡ್ ಗ್ರಂಥಿಯ ಆಕೃತಿ ಮತ್ತು ರಚನೆಯ ವಿವರವನ್ನು ತಿಳಿಯಲು
ಸ್ಕ್ಯಾನ್ ಮಾಡಿಸಬಹುದು. ಕಂಡುಬಂದ ತೊಂದರೆಗೆ ಅನುಸಾರವಾಗಿ ವಿಷೇಶ ಪರೀಕ್ಷೆಗಳನ್ನೂ ಮಾಡಿಸಬಹುದು.
ಥೈರಾಯ್ಡ್ ನಿಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಗ್ರಂಥಿ.  ಇದೊಂದು ನಿರ್ನಾಳ ಗ್ರಂಥಿ. ಇದು ಶರೀರಕ್ಕೆ ಅವಶ್ಯವಾದ ಟಿ3 ಮತ್ತು ಟಿ4 ಎಂಬ ಎರಡು  ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

ರೋಗಲಕ್ಷಣಗಳು
ರೋಗಲಕ್ಷಣಗಳು ಹೈಪೋಥೈರಾಯ್ಡಿಸಮ್ ಎಷ್ಟು ತೀವ್ರವಾಗಿದೆ ಎಂಬುದರ ಮೇಲೆ ಅವಲಂಬಿಸಿದೆ.
ವ್ಯಕ್ತಿಯಿಂದ ವ್ಯಕ್ತಿಗೂ ಇದರಲ್ಲಿ ವ್ಯತ್ಯಾಸ ಆಗಬಹುದು. ಕೆಲವೊಮ್ಮೆ ಯಾವುದೇ ಲಕ್ಷಣಗಳು ಇರದೇ ಇರಬಹುದು.

ಯಾವುದೋ ಕಾರಣಕ್ಕೆ ಪರೀಕ್ಷೆ ಮಾಡಿದಾಗ ಪತ್ತೆಯಾಗಬಹುದು. ಮರೆಗುಳಿತನ, ಆಲೋಚನೆಯಲ್ಲಿ
ಮಂದಗತಿ,ದೇಹ ತೂಕ ಹೆಚ್ಚಳ. ಹಸಿವಿಲ್ಲದಿರುವುದು.ಅತಿಯಾದ ಚಳಿ.ಒಣ ಚರ್ಮ.ಕೂದಲು
ಉದುರುವುದು.ಅತಿಯಾದ ನಿದ್ದೆ ಮಲಬದ್ಧತೆ ತಿಂಗಳ ಋತು ಚಕ್ರದಲ್ಲಿ ಏರುಪೇರು, ಅಕಾಲಿಕ ಮುಟ್ಟು, ಅತಿಯಾದ
ಋತುಸ್ರಾವ, ಹೊಟ್ಟೆ ನೋವು, ಕೈಗಳಲ್ಲಿ ಇರುವೆ ಹರಿದಂತೆನಿಸುವುದು  (Carpal tunnel syndrome).
ಕಾಲುಗಳಲ್ಲಿ ಊತ, ಮುಖದಲ್ಲಿ ಬಾವು, ಸಂಧಿಗಳಲ್ಲಿ ನೋವು. ಅಧಿಕ ಕೊಲೆಸ್ಟ್ರಾಲ್, ಮಕ್ಕಳಲ್ಲಿ ಬೆಳವಣಿಗೆ ಇಲ್ಲದಿರುವುದು / ನಿಧಾನಗೊಳ್ಳುವುದು. ಮಗುವಿನಲ್ಲಿ ಮೊಲೆ ಹಾಲು ಕುಡಿಯುವಲ್ಲಿ ತೊಂದರೆ/ ಮಲಬದ್ಧತೆ.

 ಚಿಕಿತ್ಸೆ:
ಥೈರಾಯ್ಡ್ ತೊಂದರೆಗೆ ಸೂಕ್ತವಾದ ಮತ್ತು ಕರಾರುವಾಕ್ಕಾದ ಚಿಕಿತ್ಸೆ ನೀಡಲು ವಿಶೇಷ ತರಬೇತಿಯು ಅವಶ್ಯಕ. ಎಂಡೋಕ್ರೈನಾಲಜಿಸ್ಟ್ ವೈದ್ಯರು ಹೈಪರ್‌ಥೈರಾಯ್ಡಿಸಮ್  -ಗೆ  ಸೂಕ್ತವಾಗಿ ಚಿಕಿತ್ಸೆ ನೀಡುವ ಕೌಶಲ್ಯ ಹೊಂದಿರುತ್ತಾರೆ.

ಚಿಕಿತ್ಸೆ ವಿಧಾವನ್ನು ಆಯ್ಕೆ ಮಾಡುವಲ್ಲಿ ರೋಗದ ತೀವ್ರತೆ ವಿಧ ಹಾಗೂ ಅಷ್ಟೇ ಮುಖ್ಯವಾಗಿ
ರೋಗಿಯ ಪರಿಸ್ಥಿತಿಯನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ. ಹೈಪರ್‌ಥೈರಾಯ್ಡಿಸಮ್  ಚಿಕಿತ್ಸೆಗಾಗಿ ಮೂರು

ವಿಧಾನಗಳಿವೆ:
ಮೆಡಿಕಲ್ (ಔಷಧೀಯ): ಥೈರಾಯ್ಡ್ ಪ್ರತಿರೋಧಕ ಔಷಧಿ – ಮೇಥಿಮಜೋಲ್ (ನಿಯೋಮರ್ಕಜೋಲ್, ಥೈರೋಕ್ಯಾಬ್) , ಪ್ರೊಪೈಲ್‌ಥೈಯೊಯುರಸಿಲ್ (ಪಿಟಿಯು) ಇತ್ಯಾದಿ.
ವಿಕಿರಣಶೀಲ (ರೇಡಿಯೊಆಕ್ಟಿವ್) ಅಯೋಡಿನ್ ಚಿಕಿತ್ಸೆ:
ಅಯೋಡಿನ್ ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯಲ್ಲಿ  ಅವಿಭಾಜ್ಯ ಅಂಗ. ಆದುದರಿಂದ ವಿಕಿರಣ ಉಳ್ಳ
ಅಯೋಡಿನ್ ಅನ್ನು ಥೈರಾಯ್ಡ್ ಗ್ರಂಥಿ ಆಕರ್ಷಿಸುತ್ತದೆ ಹಾಗೂ ಇದನ್ನು ಶೇಕರಿಸುತ್ತದೆ. ಹೀಗೆ ವಿಪರೀತವಾಗಿ
ವರ್ತಿಸುತ್ತಿರುವ ಥೈರಾಯ್ಡ್ ಗ್ರಂಥಿಯು  ಸಣ್ಣ ಡೋಸ್ ವಿಕಿರಣ ಉಳ್ಳ ಅಯೋಡಿನ್-ಗೆ ಸುಲಭವಾಗಿ ತುತ್ತಾಗುತ್ತದೆ.
ಈ ಡೋಸ್ ಶಿರೀರಕ್ಕೆ ಇತರ ಹಾನಿಯುಂಟುಮಾಡಲು ತೀರಾ ಚಿಕ್ಕದು. ಇದು ಕೇವಲ ರೋಗಪೀಡಿತ  ಥೈರಾಯ್ಡ್  ಗ್ರಂಥಿಯನ್ನು ಮಾತ್ರ ನಾಶ ಮಾಡುತ್ತದೆ.
ಶಸ್ತ್ರ ಚಿಕಿತ್ಸೆ: ಶಸ್ತ್ರ ಚಿಕಿತ್ಸೆಯ ಮೂಲಕ ರೋಗ ಪೀಡಿತ ಥೈರಾಯ್ಡ್ ಗ್ರಂಥಿಯನ್ನು ತೆಗೆದು ಹಾಕಬಹುದು.
ಶಸ್ತ್ರ ಚಿಕಿತ್ಸೆಯ ತೊಂದರೆ ಹಾಗೂ ಅಪಾಯದ ಇತ್ಯಾದಿ ಕಾರಣಗಳಿಂದ ಇದು  ಸಾಮಾನ್ಯವಾಗಿ ಮೊದಲ ಆಯ್ಕೆ
ಆಗಿರುವುದಿಲ್ಲ. ಆದರೂ ಇದು ಕೆಲವೊಂದು ಸಂಧರ್ಭಗಳಲ್ಲಿ ಅನಿವಾರ್ಯ. ನುರಿತ ಹಾರ್ಮೋನ್ ತಜ್ಞವೈದ್ಯರ ಸಲಹೆ
ಅವಶ್ಯಕ.

dr vikrant ghatnatti endocrinologist

ಡಾ. ವಿಕ್ರಾಂತ ಘಟ್ನಟ್ಟಿ
ಎಂಡೋಕ್ರಿನಾಲಾಜಿಸ್ಟ
ಬೆಳಗಾವಿ

Popular Doctors

Related Articles