ಕೊರೊನಾ ಸಂಕಷ್ಟದಲ್ಲಿ ವೈದ್ಯರ ಸೇವೆ ಸ್ಮರಣೆ: ಯುವ ವೈದ್ಯರಿಗೆ ಸನ್ಮಾನ: ಕೆಎಲ್‌ಇ ಆಸ್ಪತ್ರೆ: ಮಕ್ಕಳಿಗೆ ‘ಕ್ಷೀರಭಾಗ್ಯ’

ಕೊರೊನಾ ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲಿ ವೈಯಕ್ತಿಕ ಸಂಗತಿಗಳನ್ನು ಬದಿಗಿಟ್ಟು ಕಾರ್ಯನಿರ್ವಹಿಸುತ್ತಿರುವ ವೈದ್ಯರು ಅಭಿನಂದನಾರ್ಹರು. ವೈದ್ಯರ ಸೇವಾಮನೋಭಾವನೆ, ಕರುಣೆ, ಪ್ರೀತಿಯ ಮೂಲಕ ಸೇವೆ ನೀಡುತ್ತಿದ್ದಾರೆ. ಅವರ ಕಾರ್ಯ ದೇವಸ್ವರೂಪವಾಗಿದೆ ಎಂದು ಕೆಎಲ್‌ಇ ಮಹಿಳಾ ಸ್ವಶಕ್ತಿ ಕೋಶದ ಅಧ್ಯಕ್ಷರಾದ ಆಶಾತಾಯಿ ಕೋರೆ ಅವರು ಹೇಳಿದರು.

ಬೆಳಗಾವಿ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಹಾಗೂ
ಕ್ಷೀರಭಾಗ್ಯಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಸ್ಪತ್ರೆಯ ಚಿಕ್ಕಮಕ್ಕಳ ಒಳ ರೋಗಿ ವಿಭಾಗದಲ್ಲಿ ಮಕ್ಕಳಿಗೆ ಉಚಿತವಾಗಿ ಹಾಲು ವಿತರಿಸುವ ಯೋಜನೆ ಇದಾಗಿದೆ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಕನಸಿನ ಕೂಸು. ಸಮಾಜದ ಮಧ್ಯಮ ಹಾಗೂ ಕೆಳವರ್ಗದವರ ಮಕ್ಕಳ ಪೌಷ್ಟಿಕಾಂಶ ಕೊರತೆ ನೀಗಿಸಲು ಸಹಕಾರಿಯಾಗಿದೆಎಂದರು.

ಸಂಜೀವಿನಿಯಾಗಿದೆ: ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಚಾರ್ಯರಾದ ಡಾ.ಎನ್.ಎಸ್. ಮಹಾಂತ
ಶೆಟ್ಟಿ ಅವರು ಮಾತನಾಡಿ, ‘ಆಧುನಿಕತೆಗೆ ಸಿಲುಕಿ ಜೀವನದ ವಾಸ್ತವ ಮರೆತಿರುವ ಮಾನವ ಕುಲಕ್ಕೆ ಕೊರೊನಾ ಸವಾಲೆಸೆ
ದಿದೆ. ಸಂದರ್ಭದಲ್ಲಿ ಕೆಎಲ್‌ಇ ಆಸ್ಪತ್ರೆಯು ಪ್ರಶಂಸನೀಯ ಕಾರ್ಯ ಮಾಡುತ್ತಿದೆ. ಅದರಲ್ಲೂ ಬಡ ರೋಗಿಗಳಿಗೆ ಸಂಜೀವಿನಿಯಾಗಿದೆಎಂದು ಹೇಳಿದರು.

DSC 0427 scaled

ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ.ಎಸ್‌.ಸಿ. ಧಾರವಾಡ, ‘ಮಕ್ಕಳ ಪೋಷಣೆಗೆ ಹಾಲು ಸಹಕಾರಿ. ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಅವರಿಗೆ ಉಚಿತವಾಗಿ ಹಾಲು ನೀಡುವ ಕಾರ್ಯಕ್ರಮ ಸಹಕಾರಿಯಾಗಿದೆಎಂದು ತಿಳಿಸಿದರು.

ಯುಎಸ್ಎಂಕೆಎಲ್‌ಇ ನಿರ್ದೇಶಕ ಡಾ.ಎಚ್‌.ಬಿ. ರಾಜಶೇಖರ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್. ಕಡ್ಡಿ ಮಾತನಾಡಿದರು.

ಯುವ ವೈದ್ಯರಾದ ಡಾ.ಶ್ರೀಕಾಂತ ಮೇತ್ರಿ ಹಾಗೂ ಶ್ವಾಸಕೋಶ ತಜ್ಞ ಡಾ.ಗುರುರಾಜ ಉಡಚನಕರ ಅವರನ್ನು ಸನ್ಮಾನಿಲಾಯಿತು. ಆರೋಗ್ಯ ಸಹಾಯಕಿಯರ ತರಬೇತಿಯ 3ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿಲಾಯಿತು.

ಕೆಎಲ್‌ಇ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.. ಉಡಚನಕರ, ಕೆಎಲ್ಇ ನರ್ಸಿಂಗ್‌ ವಿಜ್ಞಾನ ಸಂಸ್ಥೆಯ ಪ್ರಾಶುಪಾಲ ವಿಕ್ರಾಂತ ನೇಸರಿ, ಹಿರಿಯ ವೈದ್ಯರಾದ ಡಾ.ಸಿ.ಎನ್. ತುಗಶೆಟ್ಟಿ, ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ರಾಜೇಶ್ವರಿ ಕಡಕೋಳ, ಡಾ.ಸತೀಶ ಧಾಮಣಕರ, ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಅಶೋಕ ಪಾಂಗಿ, ಡಾ.ಅನಂತರೆಡ್ಡಿ ರೆಡ್ಡೇರ ಪಾಲ್ಗೊಂಡಿದ್ದರು.

Popular Doctors

Related Articles