ಡೆಂಗಿ: ಸಂಶೋಧನೆಗೆ ಉತ್ತೇಜನ ನಿರೀಕ್ಷೆ

ಪ್ರಜಾವಾಣಿ ವಾರ್ತೆ
ಬೆಂಗಳೂರು: ಡೆಂಗಿ ಕಾಯಿಲೆ ಕುರಿತಂತೆ ಸಂಶೋಧನೆಯಲ್ಲಿ ತೊಡಗಿರುವ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ
(ಆರ್‌ಜಿಯುಎಚ್‌ಎಸ್‌) ‌ಈ ಬಾರಿ ಉತ್ತಮ ರೀತಿಯಲ್ಲಿ ಮಾದರಿ (ಸ್ಯಾಂಪಲ್‌) ಸಿಗುವ ಸಾಧ್ಯತೆ ಇದೆ.

ಡೆಂಗಿಯನ್ನು ಮೊದಲಾಗಿ ಅಂದಾಜಿಸುವುದಕ್ಕಾಗಿ ಜೈವಿಕ ಗುರುತುಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಕಳೆದ ಶೈಕ್ಷಣಿಕ
ವರ್ಷದಲ್ಲಿ ಪ್ರಯೋಗ ಆರಂಭಿಸಿತ್ತು. ಆದರೆ, ಡೆಂಗಿ ಜ್ವರದ ಮಾದರಿಯ ಕೊರತೆಯಿಂದಾಗಿ ಸಂಶೋಧನೆ  ಅಪೂರ್ಣಗೊಂಡಿತ್ತು.
ಮಳೆಗಾಲದಲ್ಲೇ ಡೆಂಗಿ ಬಾಧಿಸುವುದು ಅಧಿಕವಾದ ಕಾರಣ ಈ ಬಾರಿ ಸಾಕಷ್ಟು ಸಂಖ್ಯೆಯಲ್ಲಿ ಮಾದರಿ ದೊರೆಯುವ ನಿರೀಕ್ಷೆಯನ್ನು ವಿಶ್ವವಿದ್ಯಾಲಯ ಇಟ್ಟುಕೊಂಡಿದೆ.

‘ಸಂಶೋಧನೆಗೆ 1 ಸಾವಿರ ಮಾದರಿಗಳ ಅಗತ್ಯವಿದೆ. ಕಳೆದ ಬಾರಿ ನಮಗೆ 540 ಮಾದರಿಗಳನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗಿತ್ತು.
ಸಾಕಷ್ಟು ಸಂಖ್ಯೆಯಲ್ಲಿ ಮಾದರಿ ಸಿಗದೆ ಹೋದರೆ ಸಂಶೋಧನೆಯಲ್ಲಿ ಯಶಸ್ಸು ಸಿಗಲು ಸಾಧ್ಯವಾಗುವುದಿಲ್ಲ’ ಎಂದು ವಿಶ್ವವಿದ್ಯಾಲಯದ
ಸುಧಾರಿತ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಜಿ.ಎಸ್‌.ವೆಂಕಟೇಶ್‌ ತಿಳಿಸಿದರು.

‘ಸಾಮಾನ್ಯವಾಗಿ ಅಕ್ಟೋಬರ್‌/ನವೆಂಬರ್ ವೇಳೆಗೆ ಡೆಂಗಿ ಜ್ವರದ ಸಂಖ್ಯೆ ಹೆಚ್ಚುತ್ತದೆ. ಆಗ ಸಾಕಷ್ಟು ಸಂಖ್ಯೆಯಲ್ಲಿ ಮಾದರಿ ಲಭ್ಯವಾಗುವ
ನಿರೀಕ್ಷೆ ಇದ್ದು, ಮುಂದಿನ ಫೆಬ್ರುವರಿ/ ಮಾರ್ಚ್‌ ವೇಳೆಗೆ ಸಂಶೋಧನಾ ಕಾರ್ಯ ಕೊನೆಗೊಳಿಸಿ ವರದಿ ಸಲ್ಲಿಸಬಹುದು’ ಎಂದು ಅವರು
ಹೇಳಿದರು.

Popular Doctors

Related Articles