ಕೊರೊನಾ ವಿರುದ್ದ ಹೋರಾಟಕ್ಕೆ ದಿವ್ಯೌಷಧಿ ಆಯುರ್ವೇದ

ಆಯುರ್ವೇದವು ಪ್ರಾಚೀನ ಭಾರತೀಯ ಔಷಧಿ ವ್ಯವಸ್ಥೆಯಾಗಿದ್ದು, ಪ್ರತಿ ಭಾರತೀಯರ ಮನೆಗಳಲ್ಲಿ ವಿವಿಧ ರೀತಿಯ ಉತ್ಪನ್ನಗಳು ಸುಲಭವಾಗಿ ಲಭ್ಯವಿವೆ. ಇವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಆದ್ದರಿಂದ ಇವುಗಳನ್ನು ನಿರಂತರವಾಗಿ ಸೇವಿಸಬೆಕೆಂದು ಕೆಎಲ್ ಸಂಸ್ಥೆಯ ಬಿ ಎಂ ಕಂಕಣವಾಡಿ ಆಯುರ್ವೇದಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ. ಶ್ರೀನಿವಾಸಪ್ರಸಾದ ಸಲಹೆ ನೀಡುತ್ತಾರೆ.

ಮೈಆರೋಗ್ಯ ವೆಬಸೈಟಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಇತ್ತೀಚಿಗೆ ಉದ್ಭವಿಸಿರುವ ಕೋವಿಡ್ -19 ರೋಗವನ್ನು ತಡೆಗಟ್ಟಲು ಹಾಗೂ ಗುಣಮುಖ ಪಡಿಸಲು ಯಾವುದೇ ಪ್ರಬಲ ಔಷಧಿ ಇಲ್ಲದೇ ಇರುವದರಿಂದ ಸಾಂಕ್ರಾಮಿಕ ರೋಗವಾಗಿ ವಿಶ್ವದಾದ್ಯಂತ ತಾಂಡವವಾಡುತ್ತಿದೆ. ಸಂದರ್ಭದಲ್ಲಿ ಆಯುರ್ವೇದವು ಬಹುಪಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು. ಆದ್ದರಿಂದ ಆಯುರ್ವೇದವನ್ನು ರೋಗವನ್ನು ಗುಣಪಡಿಸಲು ಪರೀಕ್ಷಿಸಬಹುದು ಎಂದು ಪ್ರತಿಪಾದಿಸಿದ ಅವರು, ಮನೆಯಲ್ಲಿಯೇ ಸರಳವಾಗಿ ಲಭಿಸುವ ಔಷಧಿಗಳನ್ನು ಬಳಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಂತೆ ವಿವರಿಸುತ್ತಾರೆ.

ಪ್ರಾಚೀನ ಕಾಲದಿಂದಲೂ ಆಯುರ್ವೇದವು ವೈರಸ್ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಆಯುರ್ವೇದ ವಿಜ್ಞಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಜ್ವರಕ್ಕೆ ಸೂಕ್ಷ್ಮಾಣುಜೀವಿಗಳು ಕಾರಣ. ಜ್ವರದ ವಿರುದ್ದ ಹೋರಾಡಲು ಆಯುರ್ವೇದದಲ್ಲಿ ಬಹುವಿಧ ಅ್ಯಂಟಿ ವೈರಲ್ ಔಷಧಿಗಳು ಲಭ್ಯವಿವೆ. ಅಲ್ಲದೇ ರೋಗನಿರೋಧಕ ವರ್ಧಕ ಕ್ಯಾಪ್ಸುಲ್, ಟ್ಯಾಬೆಲೆಟ್, ಟಾನಿಕ ರೂಪದಲ್ಲಿ ಆಯುರ್ವೇದದಲ್ಲಿ ಸಾಕಷ್ಟು ಔಷಧಿಗಳಿವೆ. ಇವುಗಳನ್ನು ರೋಗನಿರೋಧಕ ಶಕ್ತಿ ಹೆಚ್ಚಿಸಲು ಉಪಯೋಗಿಸಬಹುದು. ಅಮೃತಬಳ್ಳಿ, ತುಳಸಿ, ಅರಿಷಿನಿ, ಸಕ್ಕರೆ ರಹಿತ ಚವನಪ್ರಾಶ, ಕರಿಮೆಣಸು, ಲವಂಗ, ಶುಂಠಿ, ತುಪ್ಪ, ಜೇನುತುಪ್ಪ, ಗುಡ್ಡನೆಲ್ಲಿಕಾಯಿ ಇತ್ಯಾದಿಗಳು ವೈರಸ್ಗಳೊಂದಿಗೆ ಹೋರಾಡುವ ಶಕ್ತಿ ಹೊಂದಿದ್ದು, ಖಾಯಿಲೆಯನ್ನು ದೂರಮಾಡುವ ಶಕ್ತಿಯನ್ನು ಪಡೆದುಕೊಂಡಿವೆ. ಆದ್ದರಿಂದ ಆಯುರ್ವೇದವು ರೋಗನಿರೋಧಕ ಸಾಮಥ್ರ್ಯವನ್ನು ಹೆಚ್ಚಿಸುವ ಸೂತ್ರಗಳು.

ತಜ್ಞವೈದ್ಯರು ಸೂಚಿಸುವ ಆಯುರ್ವೇದ ಔಷಧಿಗಳೊಂದಿಗೆ ಉತ್ಪನ್ನಗಳನ್ನು ಹೆಚ್ಚಿಸುವದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಸೊಂಕಿನಿಂದ ದೇಹವನ್ನು ರಕ್ಷಿಸುತ್ತದೆ.

ಕೋವಿಡ್ -19 ವಿರುದ್ದ ಹೋರಾಡುತ್ತಿರುವ ವೈದ್ಯಕೀಯ ಯೋಧರಾದ ವೈದ್ಯರು, ದಾದಿಯರು ಮತ್ತು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕಾ ಕ್ರಮಗಳಿವೆಯೇ ಎಂಬ ಪ್ರಶ್ನೆಗೆ ಉತ್ತಿರಿಸಿದ ಅವರು, ದಿನಕ್ಕೆ ಎರಡು ಬಾರಿ ಅರಿಷಿನದೊಂದಿಗೆ ಒಂದು ಗ್ಲಾಸ ಹಾಲು, ಮೂಗಿನ ಹೊಳ್ಳಗೆ ಎಳ್ಳು ಅತವಾ ತೆಂಗಿನ ಎಣ್ಣೆಯನ್ನು ಹಚ್ಚುವದು, ಬೆಚ್ಚಗಿನ ನೀರು ಕುಡಿಯುವದು, ಹಸಿರು ಚಹಾ (ಗ್ರೀನ್ ಟೀ) ಆಯುರ್ವೇದದ ಕಣ್ಣಿನ ಎಣ್ಣೆಯನ್ನು ಎರಡು ಬಾರಿ ಹಾಕಿಕೊಳ್ಳುವದು, ತ್ರೀಫಲದಿಂದ 3-4 ಬಾರಿ ಮುಕ್ಕಳಿಸುವದರಿಂದ ಬಾಯಿಯ ಮೂಲಕ ಕೊರೊನಾ ಹರಡುವದನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಲಿದೆ.

ಅಲ್ಲದೇ ಕೆಎಲ್ ಬಿ ಎಂ ಕಂಕಣವಾಡಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಥವಾ ಯಾವುದೇ ಆಯುರ್ವೇದ ಔಷಧಾಲಯಗಳಲ್ಲಿ ಔಷಧಗಳು ಸುಲಭವಾಗಿ ಸಿಗುತ್ತವೆ. ಸಕ್ರೀಯ ವ್ಯಾಯಾಮ, ಧ್ಯಾನ, ಉಸಿರಾಟದ ವ್ಯಾಯಾಮದಂತಃ ಉಷ್ಣತೆ ಮತ್ತು ಶಕ್ತಿಯುತ ವ್ಯಾಯಾಮವನ್ನು ಮಾಡುವದರೊಂದಿಗೆ ನಿರಂತರವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬೇಕು. ಇವು ರಕ್ತ ಪರಿಚಲನೆಯನ್ನು ಹೆಚ್ಚಿಸುವದಲ್ಲದೇ ದೇಹವನ್ನು ಸಧೃಡಗೊಳಿಸುತ್ತದೆ. ತಾಜಾ ನಿಂಬೆ ರಸ, ಬೆಲ್ಲವೂ ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ.ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ಮತ್ತು ತತ್ವಜ್ಞಾನಾಧಾರಿತ ಗ್ರಂಥ ಓದುವದು ಪರಿಣಾಮಾಕಾರಿ ಆಲೋಚನೆಗೆ ಒತ್ತು ನೀಡಬಲ್ಲವು. ಪೌಷ್ಠಿಕ ಆಹಾರ ಸೇವನೆ, ತಾಜಾ ಹಾಗೂ ಹಸಿರು ತರಕಾರಿ ಸೇವಿಸುವದರಿಂದಲೂ ದೇಹವನ್ನು ಸಧೃಡಗೊಳಿಸುತ್ತವೆ. ಮತ್ತು ಆಯುರ್ವೇದವು ಅತ್ಯಂತ ಪರಿಣಾಮ ಬೀರಿ ರೋಗದಿಂದ ಚೇತರಿಸಿಕೊಂಡು ಶೀಘ್ರ ಗುಣಮುಖ ಹೊಂದಲು ಅನುಕೂಲ ಕಲ್ಪಿಸುತ್ತದೆ ಅಂದು ತಿಳಿಸಿದರು.

Popular Doctors

Related Articles