ಬೆಳಗಾವಿಯ ಶಾಹು ನಗರದ ನಿವಾಸಿ, ನ್ಯಾಯಾಂಗ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀಮತಿ ಉಷಾ ವಿ. ಯಾಲಕ್ಕಿಶೆಟ್ಟರ(63) ಅವರು ಇತ್ತೀಚೆಗೆ ಶ್ವಾಸಕೋಶ ತೊಂದರೆಯಿಂದ ಮೃತಪಟ್ಟಿದ್ದು, ಮರಣಾನಂತರ ಅವರ ಕುಟುಂಬ ಸದಸ್ಯರು ಜೆಎನ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅವರ ದೇಹದಾನ ಮಾಡಿದರು. ಇದಕ್ಕೂ ಮೊದಲು ಉಷಾ ಅವರ ಇಚ್ಚೆಯಂತೆ ಕೆಎಲ್ಇ ರೋಟರಿ ಸ್ಕಿನ್ ಬ್ಯಾಂಕಗೆ ಚರ್ಮದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪ್ಲಾಸ್ಟಿಕ ಸರ್ಜರಿ ವಿಭಾಗದ ಡಾ. ಸುಹಾಸಗೌಡ ಅವರು ಮೃತರ ಚರ್ಮವನ್ನು ತೆಗೆದು ಸ್ಕಿನ್ ಬ್ಯಾಂಕಗೆ ಹಸ್ತಾಂತರಿಸಿದರು. ಮೃತರ ದೇಹವನ್ನು ವಿದ್ಯಾರ್ಥಿಗಳ ಸಂಶೋಧನೆ ಮತ್ತು ಅಭ್ಯಾಸಕ್ಕೆ ಉಪಯೋಗಿಸಲಾಗುವದು. ಅವರ ಚರ್ಮವನ್ನು ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳಿಗೆ ಉಪಯೋಗಿಸಲಾಗುವದು ಎಂದು ಕೆಎಲ್ಇ ರೋಟರಿ ಸ್ಕಿನ್ ಬ್ಯಾಂಕನ ನಿರ್ದೇಶಕರಾದ ಡಾ. ರಾಜೇಶ ಪವಾರ ಅವರು ತಿಳಿಸಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಕುಟುಂಬ ಸದಸ್ಯರನ್ನು ಅಭಿನಂದಿಸಿದ್ದು, ಶ್ರೀಮತಿ ಉಷ ಹಾಗೂ ಅವರ ಕುಟುಂಬದವರ ಕಾರ್ಯ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.