೧೫ ವರ್ಷದ ಅನುಜ ಈಗೀಗ ಅಮ್ಮನ ಹತ್ತಿರ ದಿನವೂ ಹಣ ಕೇಳುವುದು ಹೆಚ್ಚಾಗಿತ್ತು. ಹಣದ ಮೊತ್ತ ಬಹಳ ಹೆಚ್ಚಿಲ್ಲದಿದ್ದರೂ ದಿನವೂ ಏಕೆ ಹಣ ಬೇಕಾಗಬಹುದು ಎಂದು ಅಮ್ಮನ ಅನುಮಾನ. ಶಾಲೆಗೆ ಬೇಕಾದ ಎಲ್ಲ ಪುಸ್ತಕಗಳು, ಸಮವಸ್ತ್ರ ಎಲ್ಲವೂ ಒಂದೇ ಬಾರಿಗೆ ತಂದಾಗಿದೆ. ಶಾಲೆಗೆ ಹೋಗಲು, ಬರಲು ಮನೆವರೆಗೂ ಆಟೋ ಬರುತ್ತದೆ. ಇನ್ನೂ ಏಕೆ ಹಣ ಬೇಕಾಗಬಹುದು ಎಂದು ಅಮ್ಮನ ಚಿಂತೆ. ಏಕೆಂದು ಹೇಳಿದರೆ ಹಾರಿಕೆ ಉತ್ತರ ಕೊಡುವುದು ಅಮ್ಮನ ಗಮನಕ್ಕೆ ಬಂದಿತ್ತು.
ಅವತ್ತು ಮಗ ಮನೆಗೆ ಬರುತ್ತಿದ್ದಂತೆ ಬಾಯಿಯಿಂದ ಏನೋ ವಾಸನೆ, ೨-೩ ದಿನ ತಡೆದು ನೋಡಿದರೂ ಆ ವಿಚಿತ್ರ ವಾಸನೆ ಅಮ್ಮನ ಗಮನಕ್ಕೆ ಬರಲಾರಂಬಿಸಿತ್ತು. ಅವನನ್ನು ಕೇಳಿದರೆ ಮತ್ತೆ ಹಾರಿಕೆ ಉತ್ತರ ಮತ್ತು ಸಿಡುಕು ಉತ್ತರ ಬರಲಾರಂಭಿಸಿತು. ಇನ್ನೂ ಹೆಚ್ಚಿಗೆ ಜಾಲಾಡಿಸಿ, ನಂತರ ಅಪ್ಪ, ಅಮ್ಮನ ಹೆದರಿಕೆಗೆ ನಿಧಾನವಾಗಿ ಬಾಯಿ ಬಿಡಲಾರಂಭಿಸಿದ. ಅನುಜ ಹಾಗೂ ಅವನ ಗೆಳೆಯರು ಇತ್ತೀಚೆಗೆ ಗುಟಕಾ ತಿನ್ನಲಾರಂಭಿಸಿದಾಗಿ ಹೇಳಿದನು. ಸುಮ್ಮನೆ ಹೇಗಿದೆ ಎಂದು ನೋಡಲು ಶುರು ಮಾಡಿದ ಈಗ ಚಟವಾಗಿ ಮಾರ್ಪಟ್ಟಿತ್ತು. ಅಮ್ಮ, ಅಪ್ಪ ಚಿಂತೆಗೀಡಾದರು. ಮನೆಯಲ್ಲಿ ಯಾರಿಗೂ ಗುಟಕಾ ತಿನ್ನುವುದಾಗಲಿ, ಸಿಗರೇಟು ಸೇದುವುದಾಗಲಿ ಯಾವ ಚಟವೂ ಇರಲಿಲ್ಲ. ಹಾಗಾಗಿ ಈ ಚಟವನ್ನು ಹೇಗೆ ಬಿಡಿಸುವುದೆಂದು ತಿಳಿಯದಾಯಿತು. ಅತ್ತಿತ್ತ ವಿಚಾರಿಸಲಾಗಿ, ಯಾರೋ, ದಂತವೈದ್ಯರ ಹತ್ತಿರ ಕರೆದುಕೊಂಡು ಹೋಗಲು ತಿಳಿಸಿದರು.
ಅಪ್ಪ, ಅಮ್ಮ ಅನುಜನನ್ನು ದಂತವೈದ್ಯರ ಪರವಾನಿಗೆ ಪಡೆದುಕೊಂಡು ಹೋದರು. ದಂತವೈದ್ಯರು ಅನುಜನ ಬಾಯಿಯನ್ನು ಪರಿಕ್ಷೀಸಿದರು ಆತನ ಹಲ್ಲುಗಳು ಹಾಗೂ ನಾಲಿಗೆ ಮತ್ತು ಬಾಯಿಯ ಇತರ ಭಾಗಗಳನ್ನು ಪರೀಕ್ಷೀಸಿದರು. ನಂತರ ಆನುಜ ಮತ್ತು ಆತನ ತಂದೆ, ತಾಯಿಯರನ್ನು ಕುಳ್ಳಿರಿಸಿ ಈ ಕೆಳಗಿನ ಮಾತುಗಳನ್ನು ಹೇಳಿದರು.
೧. ಒಂದೆರಡು ಹಲ್ಲುಗಳು ಹುಳುಕಾಗಿವೆ. ಅವುಗಳನ್ನು ನಾವು ಅಂದರೆ ದಂತವೈದ್ಯರು ಸೂಕ್ತ ಪರಿಕರಗಳು ಮತ್ತು ವಸ್ತುಗಳಿಂದ ಸರಿಪಡಿಸಬಹುದು. ಹಲ್ಲು ಹುಳುಕು ಸ್ವಲ್ಪ ಇದ್ದಾಗಲೇ ಅವುಗಳ ಉಪಚರಣೆ ಮಾಡುವುದು ಒಳಿತು. ಜಾಸ್ತಿ ಆದಲ್ಲಿ ಹಲ್ಲು ನೋವು, ಮುಖ ಬಾವು ಬರುವುದು ಆಗಬಹುದು. ಆಗಲೂ ಉಅಪಚರಿಸಬಹುದು ಆದರೆ ವ್ಯಕ್ತಿಗೆ ಹೆಚ್ಚಿಗೆ ತೊಂದರೆ ಆಗುವುದು.
೨. ೧೩ ವಯಸ್ಸಿನ ಅಥವಾ ಅವರಿಗಿಂತ ದೊಡ್ಡ ಮಕ್ಕಳಲ್ಲಿ ಓರೆ ಕೋರೆ ಹಲ್ಲುಗಳಿದ್ದಲ್ಲಿ, ಅವುಗಳನ್ನು ಸರಿಪಡಿಸಿ ಸುಂದರ ದಂತಪAಕ್ತಿಯನ್ನು ತಮ್ಮದಾಗಿಸಿಕೊಳ್ಳಬಹುದು.
೩. ೧೩ ರ್ಷಕ್ಕಿಂತ ಚಿಕ್ಕ ಮಕ್ಕಳ್ಳಿದ್ದಲ್ಲಿ ಅವರ ಹಲ್ಲಿನ ತೊಂದರೆಗಳನ್ನು ಚಿಕ್ಕಮಕ್ಕಳ ದಂತವೈದ್ಯರು ನೋಡುತ್ತಾರೆ.
೪. ಈಗ ಎಲ್ಲ ಕಡೆ ತಂಬಾಕು ಹಾಗೂ ಗುಟಕಾ ಚೀಟುಗಳು ತುಂಬಾಸುಲಭವಾಗಿ ಮತ್ತು ಕಡಿಮೆ ದರದಲ್ಲಿ ದೊರೆಯುತ್ತಿವೆ. ಹೀಗಾಗಿ ಬಹಳ ಸಂಖ್ಯೆಯಲ್ಲಿ ಮಕ್ಕಳು ಮತ್ತು ಹದಿಹರೆಯದವರು ಇದರ ಸೇವನೆಯಲ್ಲಿ ತೊಡಗುತ್ತಿದ್ದಾರೆ. ತಂಬಾಕು ಮತ್ತು ಗುಟಕಾ ಒಂದೆರಡು ತಿಂಗಳಲ್ಲಿ ಏನೂ ತೊಂದರೆ ಮಾಡಲಿಕ್ಕಿಲ್ಲ. ಆದರೆ ಇದರ ವ್ಯಸನ ಬಾಯಿಯ ಒಳಪದರ ಮೇಲೆ ಬಹಳ ಭೀಕರ ಪರಿಣಾಮ ಉಂಟುಮಾಡುತ್ತದೆ.
ಮೊದಮೊದಲು ವ್ಯಸನಿಗೆ ಬಾಯಿ ಉರಿ ಉಂಟಾಗಬಹುದು, ನಂತರ ಬಾಯಿಯ ಯಾವ ಒಳಭಾಗದಲ್ಲಿ ಯಾವ ತಂಬಾಕು ಅಥವಾ ಗುಟಕಾ ಇಟ್ಟುಕೊಳ್ಳುತ್ತಾರೋ ಆ ಭಾಗದಲ್ಲಿ ಬಾಯಿ ಕ್ಯಾನ್ಸರ್ ಉಂಟಾಗಬಹುದು. ಇದು ಒಂದೇ ದಿನದಲ್ಲಿ ಆಗುವುದಿಲ್ಲ. ತಂಬಾಕಿನಲ್ಲಿಯ ’ನಿಕೋಟಿನ’ ಮತ್ತು ಬೆಂಝಿನ’ನ ರಾಸಾಯಾನಿಕ ವಸ್ತುಗಳು ಬಾಯಿಯ ಒಳರ್ಮದ ಮೇಲೆ ಭೀಕರ ಪರಿಣಾಮ ಉಂಟುಮಾಡುತ್ತವೆ. ಪ್ರತಿ ಜೀವಕೋಶವು ಇದರ ದುಷ್ಪರಿಣಾಮಕ್ಕೆ ಗುರಿಯಾಗುತ್ತದೆ. ಪ್ರತಿ ಜೀವಕೋಶದ ಡಿಎನ್ಎ ಮರ್ಪಾಟುಗೋಳ್ಳುತ್ತದೆ, ಎಲ್ಲ ಜೀವಕೋಶಗಳಂತೆ ವ್ಯವಹರಿಸುವುದನ್ನು ಬಿಟ್ಟು ತನ್ನಷ್ಟಕ್ಕೆ ತಾನೆ ಬದಲಾದ ಜೀವಕೋಶಗಳನ್ನು ಮರುಉತ್ಪಾದನೆ ಮಾಡುತ್ತದೆ. ನಿಧಾನವಾಗಿ ಬೇರೆ ಚರ್ಯೆಯನ್ನು ತೋರಿಸಲಾರಂಭಿಸುತ್ತದೆ. ಮೊದಲು ಬಿಳಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ “ಫ್ರೀ ಮ್ಯಾಲಿಗ್ನೇನ್ಸಿ ಎನ್ನಲಾಗುತ್ತದೆ. ಅಂದರೆ ಇದು ಇನ್ನೂ ಬಾಯಿಯ ಕ್ಯಾನ್ಸರ ಆಗಿಲ್ಲ ಆದರೆ ವ್ಯಸನವನ್ನು ಹೀಗೆ ಮುಂದುವರಿಸಿದರೆ ಬಹಳಷ್ಟು ಬದಲಾದ ಜೀವಕೋಶಗಳಿಂದ ಬಹು ಬೇಗನೆ ಬಾಯಿ ಕ್ಯಾನ್ಸರ ಆಗಿ ಪರಿರ್ತನೆಗೊಳ್ಳಬಹುದು.
ನಂತರ ಮುಖ ಮತ್ತು ಬಾಯಿಯ ಆಕಾರ ಬದಲಾಗುತ್ತದೆ. ಮತ್ತು ವ್ಯಕ್ತಿಯ ದೈನಂದಿನ (ತಿನ್ನುವ ಮತ್ತು ಕುಡಿಯುವ) ಕೆಲಸ ಕರ್ಯಗಳು ರಾಜಿಯಾಗುತ್ತವೆ. ಬಾಯಿ ಕ್ಯಾನ್ಸರಗೆ ಈಗ ಬಹಳ ಚಿಕಿತ್ಸೆಗಳಿವೆ. ಆದರೆ ಚಿಕಿತ್ಸೆಯ ನಂತರವೂ ಇದು ಮರುಕಳಿಸಬಹುದು ಮತ್ತು ಬಾಯಿ ಕ್ಯಾನ್ಸರನ ಚಿಕಿತ್ಸೆಗೆ ಬಹಳ ಹಣವೂ ರ್ಚಾಗಬಹುದು ಆದ್ದರಿಂದ ಹೀಗೆ ಕ್ಯಾನ್ಸರಗೆ ಒಳಗಾಗಿ ಬಳಲುವುದಕ್ಕಿಂತ ಅದಾಗದಂತೆ ವ್ಯಸನದಿಂದ ದೂರ ಇರುವುದು ಜಾಣತನ.
ದಂತ ವೈದ್ಯರು ಈ ಎಲ್ಲ ಮಾಹಿತಿಯನ್ನು ಹೇಳಿದರು ಮತ್ತು ಅನುಜನಿಗೆ ಬಾಯಿ ಕ್ಯಾನ್ಸರ ಆದ ರೋಗಿಗಳ ಪೋಟೊಗಳನ್ನು ತೋರಿಸಿದರು.
ಇದೆಲ್ಲವನ್ನೂ ಕೇಳಿ, ಕ್ಯಾನ್ಸರಗೆ ಒಳಗಾದ ರೋಗಿಗಳ ಚಿತ್ರಗಳನ್ನು ನೋಡಿದ ಅನುಜ ಇನ್ನು ಮೇಲೆ ಗುಟಕಾ ತಿನ್ನುವುದಿಲ್ಲವೆಂದು ದಂತವೈದ್ಯರಿಗೆ ಮತ್ತು ತಂದೆ ತಾಯಿಗೆ ಮಾತು ಕೊಟ್ಟನು. ಹಾಗೂ ತನ್ನ ಗೆಳೆಯರಿಗೂ ಇದರ ಬಗ್ಗೆ ಮಾಹಿತಿ ಕೊಡುವುದಾಗಿ ಹೇಳಿದನು. ಅನುಜನ ತಂದೆ ತಾಯಿ ನಿಶ್ಚಿಂತೆಯಿಂದ ಮನೆಗೆ ಹೋದರು.
ಡಾ. ಸೀಮಾ ಹಳ್ಳಿಕೇರಿಮಠ
ಪ್ರಾಧ್ಯಾಪಕರು, ಓರಲ್ ಪ್ಯಾಥಾಲಾಜಿ ವಿಭಾಗ
ಕೆ. ಎಲ್. ಇ. ವಿಶ್ವನಾಥ ಕತ್ತಿ ದಂತ ಚಿಕಿತ್ಸಾ ಮಹಾವಿದ್ಯಾಲಯ, ಬೆಳಗಾವಿ.