ಚಿಕಿತ್ಸಾಲಯ: ಕನಿಷ್ಠ ಸೌಲಭ್ಯಗಳು ಇರಬೇಕು

ನಿಯಮಗಳನ್ನು ರೂಪಿಸಿದ ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ (ಪಿಟಿಐ): ಅಲೋಪಥಿ ಮತ್ತು ಆಯುಷ್‌ ವಿಧಾನದಲ್ಲಿ ಚಿಕಿತ್ಸೆ ನೀಡುವ ಕೇಂದ್ರಗಳು ಕನಿಷ್ಠ ಸೌಲಭ್ಯಗಳನ್ನು ಹೊಂದಿರಬೇಕು

ಎಂಬ ಮಾನದಂಡವನ್ನು ಕೇಂದ್ರ ಆರೋಗ್ಯ ಸಚಿವಾಲಯವು ರೂಪಿಸಿದೆ. ಕನಿಷ್ಠ ಸೌಲಭ್ಯಗಳೇನು ಎಂಬುದನ್ನು ಹೇಳಿರುವ ಸರಕರಾವು,

ಚಿಕಿತ್ಸಾ ಕೇಂದ್ರದ ನೋಂದಣಿಗೆ ಈ ಸೌಲಭ್ಯಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

ಚಿಕಿತ್ಸಾಲಯ (ಕೇಂದ್ರ ಸರ್ಕಾರ) ನಿಯಮಗಳು 2019ಕ್ಕೆ ತಿದ್ದುಪಡಿ ತಂದು ಕನಿಷ್ಠ ಸೌಲಭ್ಯಗಳ ಮಾನದಂಡವನ್ನು ಜಾರಿಗೆ ತರಲು

ನಿರ್ಧರಿಸಲಾಗಿದೆ. ಮೂಲಸೌಕರ್ಯ, ಮಾನವ ಸಂಪನ್ಮೂಲ, ಸಲಕರಣೆಗಳು, ಔಷಧಗಳು, ಬೆಂಬಲ ಸೇವೆ ಮತ್ತು ದಾಖಲಾತಿ ವ್ಯವಸ್ಥೆ

ಇದರಲ್ಲಿ ಒಳಗೊಂಡಿರುತ್ತದೆ. ಈ ಮಾನದಂಡಗಳನ್ನು ಪೂರೈಸದಿದ್ದರೆ ಚಿಕಿತ್ಸಾಲಯದ ನೋಂದಣಿ ಮಾಡಲಾಗುವು

ದಿಲ್ಲ. ಚಿಕಿತ್ಸಾಲಯ ನಡೆಸಬೇಕಿದ್ದರೆ ನೋಂದಣಿ ಕಡ್ಡಾಯ

ರೋಗಪತ್ತೆ ಪ್ರಯೋಗಾಲಯಗಳಿಗೆ ಮಾತ್ರ ಈಗ ಕನಿಷ್ಠ ಸೌಲಭ್ಯಗಳ ಮಾನದಂಡ ಅನ್ವಯವಾಗುತ್ತಿದೆ. 2018ರ ಮೇಯಲ್ಲಿ ಈ

ಅಧಿಸೂಚನೆ ಹೊರಡಿಸಲಾಗಿದೆ. ಚಿಕಿತ್ಸಾಲಯ ಸೇವೆಗಳಲ್ಲಿ ಏಕರೂಪತೆ ತರುವುದು ಕನಿಷ್ಠ ಸೌಲಭ್ಯ ಮಾನದಂಡ ನಿಗದಿಯ

ಗುರಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಚಿಕಿತ್ಸಾಲಯಗಳಲ್ಲಿ ಭಾರಿ ಶುಲ್ಕ ಹೇರಿಕೆ, ಸೇವೆಗಳಲ್ಲಿ ಲೋಪ, ಚಿಕಿತ್ಸಾ ಮಾನದಂಡಗಳನ್ನು ಪಾಲಿಸದಿರುವುದು ಮುಂತಾದ

ಆರೋಪಗಳು ಆಗಾಗ ಕೇಳಿ ಬರುತ್ತಿದೆ. ಹಾಗಾಗಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ

ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಆಗಾಗ ಪತ್ರ ಬರೆಯುತ್ತಿರುತ್ತದೆ. ಚಿಕಿತ್ಸಾಲಯಗಳಲ್ಲಿನ ಲೋಪವು ರೋಗಿಯ

ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳುತ್ತದೆ ಮತ್ತು ಆರೋಗ್ಯ ಸೇವೆಯ ವೆಚ್ಚದಲ್ಲಿ ಪಾರದರ್ಶಕತೆಯ ಕೊರತೆ ಎಂಬುದು ಕೇಂದ್ರದ ಕಳವಳಕ್ಕೆ

ಕಾರಣ

ಚಿಕಿತ್ಸಾಲಯಗಳ ನೋಂದಣಿ ಮತ್ತು ನಿಯಂತ್ರಣಕ್ಕಾಗಿಯೇ ಚಿಕಿತ್ಸಾಲಯಗಳ ಕಾಯ್ದೆಯನ್ನು ಕೇಂದ್ರವು ರೂಪಿಸಿದೆ. ಇದು, ಸರ್ಕಾರಿ

ಮತ್ತು ಖಾಸಗಿ 

ವಲಯದ ಚಿಕಿತ್ಸೆ ಮತ್ತು ರೋಗ ಪತ್ತೆ ಕೇಂದ್ರಗಳೆರಡಕ್ಕೂ ಅನ್ವಯ

ವಾಗುತ್ತದೆ.

ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಸೇರಿ 11 ರಾಜ್ಯಗಳು ಮಾತ್ರ 

ಈ ಕಾಯ್ದೆಯನ್ನು ಅಳವಡಿಸಿಕೊಂಡಿವೆ.

ಪ್ರಸ್ತಾವಿತ ಅಂಶಗಳು

ಚಿಕಿತ್ಸಾಲಯವು ರೋಗಿಗಳು, ಅವರ ಕುಟುಂಬ ಸದಸ್ಯರು, ಸಿಬ್ಬಂದಿ ಮತ್ತು ಸಂದರ್ಶಕರಿಗೆ ಸುರಕ್ಷಿತ

ವಾತಾವರಣ ಒದಗಿಸಬೇಕು

ಸುತ್ತಲಿನ ವಾತಾವರಣವು ಸ್ವಚ್ಛವಾಗಿರಬೇಕು, ಸ್ಥಳೀಯ ನಿಯಮಗಳನ್ನು ಪಾಲಿಸಿರಬೇಕು

ಮೂಲಭೂತ ಕಾರ್ಯನಿರ್ವಹಣೆಗೆ ಎಷ್ಟು ಬೇಕೋ ಅಷ್ಟು ಸ್ಥಳಾವಕಾಶ ಇರಬೇಕು

ಗಾಳಿ, ಬೆಳಕು ಇರಬೇಕು, ನೀರು ಪೂರೈಕೆ ಬೇಕು

ಚಿಕಿತ್ಸಾಲಯದ ಗೇಟು ಅಥವಾ ಕಟ್ಟಡದ ಮೇಲೆ ಸ್ಥಳೀಯ ಭಾಷೆಯಲ್ಲಿ ಹೆಸರು ಬರೆದಿರಬೇಕು

ಅಲ್ಲಿ ಚಿಕಿತ್ಸೆ ನೀಡುವ ವೈದ್ಯರ ಹೆಸರು ಮತ್ತು ನೋಂದಣಿ ಸಂಖ್ಯೆ, ವಿವಿಧ ವೈದ್ಯರು ಮತ್ತು ತಜ್ಞರ ಶುಲ್ಕ, ಚಿಕಿತ್ಸಾಲಯದ ಕೆಲಸದ ಅವಧಿ,

ಒದಗಿಸುತ್ತಿರುವ ಸೇವೆಗಳ ವಿವರವನ್ನು ಪ್ರದರ್ಶಿಸಬೇಕು. ಇದು ಸ್ಥಳೀಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಇರಬೇಕು

ಕನಿಷ್ಠ ಒಬ್ಬರು ಬೆಂಬಲ ಸೇವಾ ಸಿಬ್ಬಂದಿ ಇರಬೇಕು. ಕೆಲಸದ ಒತ್ತಡದ ಆಧಾರದಲ್ಲಿ ಇದನ್ನು ಹೆಚ್ಚಿಸಬೇಕು

ಒಬ್ಬ ವೈದ್ಯ ಅಥವಾ ಒಬ್ಬರಿಗಿಂತ ಹೆಚ್ಚು ವೈದ್ಯರು ಇರುವ ಚಿಕಿತ್ಸಾಲಯಗಳಿಗೆ ಇದು ಅನ್ವಯ

Popular Doctors

Related Articles