ನ್ನೆಸ್‌ ದಾಖಲೆ ನಿರೀಕ್ಷೆಯಲ್ಲಿ ರಾಮಯ್ಯ ಆಸ್ಪತ್ರೆ ವೈದ್ಯರ ಸಾಧನೆ

ಅಪರೂಪದ ಶಸ್ತ್ರಚಿಕಿತ್ಸೆ: ಅತಿ ದೊಡ್ಡ ಮೂತ್ರಪಿಂಡ

ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಕಿಡ್ನಿಯೊಂದಿಗೆ ಡಾ. ಪುವ್ವಾಡ ಸಂದೀಪ

ಪ್ರಜಾವಾಣಿ ವಾರ್ತೆ

ತೀವ್ರ ಬೆನ್ನು ನೋವು ಮತ್ತು ಮೂತ್ರ ಸೋಂಕಿನಿಂದ ಬಳಲುತ್ತಿದ್ದ 47 ವರ್ಷದ ಬೆಳಗಾವಿಯ ಶಿಕ್ಷಕರೊಬ್ಬರು ಆಗಸ್ಟ್‌ನಲ್ಲಿ ಎಂ.ಎಸ್‌. ರಾಮಯ್ಯ ಆಸ್ಪತ್ರೆಯ ವೈದ್ಯರನ್ನು ಭೇಟಿ ಮಾಡಿದ್ದರು. ರಕ್ತತಪಾಸಣೆ, ಸಿ.ಟಿ ಸ್ಕ್ಯಾನ್‌ ಮತ್ತು ಎಂಆರ್‌ಐ

ಸ್ಕ್ಯಾನ್‌ ಮಾಡಿದಾಗ ಎಡ ಬದಿಯ ಕಿಡ್ನಿ ಸೋಂಕಿಗೆ ಒಳಗಾಗಿ ಊದಿಕೊಂಡಿತ್ತು. 13×13 ಸೆಂಟಿ ಮೀಟರ್‌ಗೆ ಹಿಗ್ಗಿದ್ದ ಮೂತ್ರಪಿಂಡದಲ್ಲಿ ಹಲವಾರು ನೀರುಗುಳ್ಳೆ, ಚಿಕ್ಕ ಗಡ್ಡೆಗಳು ಬೆಳೆದಿದ್ದವು. ಅವುಗಳಿಂದ ನಿರಂತರವಾಗಿ ಕೀವು ಮತ್ತು ರಕ್ತ ಸೋರುತ್ತಿತ್ತು. ಬೆಂಗಳೂರಿನ ಎಂ.ಎಸ್‌. ರಾಮಯ್ಯ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ (ಯುರಾಲಜಿ) ತಜ್ಞ ವೈದ್ಯರು 

ಅತ್ಯಂತ ಕ್ಲಿಷ್ಟಕರ ಮತ್ತು ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ರೋಗಿಯೊಬ್ಬರ ರೋಗಪೀಡಿತ 7.2 ಕೆ.ಜಿ ಗಾತ್ರದ ಮೂತ್ರಪಿಂಡವನ್ನು (ಕಿಡ್ನಿ) ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

surgery

ವೈದ್ಯಕೀಯ ಭಾಷೆಯಲ್ಲಿ ರೋಗಿಯ ಈ ಸ್ಥಿತಿಯನ್ನು ಮೂತ್ರಕೋಶದ ನಂಜು ‘ಯುರೊಸೆಪ್ಸಿಸ್‌‘, ಎಡಿಪಿಕೆಡಿ (ಅಡಲ್ಟ್‌ ಪಾಲಿಸಿಸ್ಟಿಕ್‌ ಕಿಡ್ನಿ ಡಿಸೀಸ್‌) ಮತ್ತು ಸಿಕೆಡಿ (ಕ್ರೋನಿಕ್‌ ಕಿಡ್ನಿ ಡಿಸೀಸ್‌) ಎಂದು ಹೇಳಲಾಗುತ್ತದೆ.  ‘ರೆಟ್ರೊಪೆರಿಟೋನಿಯಲ್‌ನೆಫ್ರೆಕ್ಟೊಮಿ’ಶಸ್ತ್ರಚಿಕಿತ್ಸೆ ಮೂಲಕ ರೋಗಗ್ರಸ್ತ  ಕಿಡ್ನಿಯನ್ನು ತೆಗೆದು ಹಾಕಿದರು.

ವಿಶ್ವದ ಅತಿ ದೊಡ್ಡ ಕಿಡ್ನಿ ಇದು ಎಂದು ವೈದ್ಯಲೋಕ ಅಂದಾಜಿಸಿದ್ದು, ಶೀಘ್ರ ಗಿನ್ನೆಸ್‌ ದಾಖಲೆ ಸೇರುವ ನಿರೀಕ್ಷೆ ಇದೆ. 2016ರಲ್ಲಿ ದುಬೈಆಸ್ಪತ್ರೆಯ ವೈದ್ಯ ಡಾ.ಫರಿಬೋರ್ಜ್ ಬಘೇರಿ, ರೋಗಿಯ ದೇಹದಿಂದ ಹೊರತೆಗೆದಿದ್ದ 4.25 ಕೆ.ಜಿ. ಕಿಡ್ನಿ ಇದುವರೆಗೆ ಗಿನ್ನಿಸ್‌ ದಾಖಲೆಯಲ್ಲಿತ್ತು.

ರಾಮಯ್ಯ ಆಸ್ಪತ್ರೆಯ ಯುರಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಖ್ಯಾತ ಮೂತ್ರ ಶಾಸ್ತ್ರಜ್ಞ ಡಾ. ಪುವ್ವಾಡ ಸಂದೀಪ್‌, ಡಾ. ಡಿ. ರಮೇಶ್‌, ಡಾ. ಪ್ರಸಾದ್‌ ಎಂ., ಡಾ. ಮಾನಸ, ಅರಿವಳಿಕೆ ತಜ್ಞೆ ಗೀತಾ ಸಿ.ಆರ್‌. ಮತ್ತು ತಂಡ ಸುಮಾರು ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿದೆ

ಸವಾಲಿನ ಶಸ್ತ್ರಚಿಕಿತ್ಸೆ

ಸೋಂಕು ತಗುಲಿದ ಮೂತ್ರಪಿಂಡಗಳ ಗಾತ್ರ ಹೆಚ್ಚಾಗುವುದರಿಂದ ಹೊಟ್ಟೆ ಊದಿಕೊಳ್ಳುತ್ತದೆ. ಇನ್ನುಳಿದ ಅಂಗಾಂಗಳ ಮೇಲೆ ಒತ್ತಡ ಬಿದ್ದು ಉಸಿರಾಟಕ್ಕೆ ತೊಂದರೆಯಾಗುತ್ತದೆ. ಸೋಂಕು ತಗುಲಿದ ಕಿಡ್ನಿಯನ್ನು ಹಾಗೆಯೇ ಬಿಟ್ಟಿದ್ದರೆ ರೋಗಿಯ ರಕ್ತದೊತ್ತಡ ಅಧಿಕವಾಗಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಗಾಳಿ ತುಂಬಿದ ದೊಡ್ಡ ಚೆಂಡಿನ ಗಾತ್ರದಷ್ಟಿದ್ದ ಕಿಡ್ನಿ ಮೇಲಿನ ನೀರಿನ ಗುಳ್ಳೆಗಳನ್ನು ದೇಹದ ಒಳಗಡೆಯೇ ಬಲೂನುಗಳ ರೀತಿ ಪಂಕ್ಚರ್‌ ಮಾಡಲಾಯಿತು. ಇಲ್ಲದಿದ್ದರೆ ಹೊರ ತೆಗೆಯುವುದು ಕಷ್ಟವಾಗುತಿತ್ತು ಎಂದು ಡಾ. ಪುವ್ವಾಡ ಸಂದೀಪ್‌ ವಿವರಿಸಿದರು.

2011: ಮಹಾರಾಷ್ಟ್ರದ ಧುಲೆಯ ಯುರಾಲಜಿ ಇನ್‌ಸ್ಟಿಟ್ಯೂಟ್‌ನಲ್ಲಿ ಹೊರತೆಗೆದ ಕಿಡ್ನಿ ತೂಕ– 2.14 ಕೆ.ಜಿ  

2016: ದುಬೈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಕಿಡ್ನಿ ತೂಕ–4.25 ಕೆ.ಜಿ 

2019, ಆಗಸ್ಟ್‌ 28: ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ತೆಗೆಯ

ಲಾದ ಕಿಡ್ನಿ ತೂಕ–7.2 ಕೆ.ಜಿ.

ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿ ತೆಗೆಯುವುದು ಸಾಮಾನ್ಯ. ಇಷ್ಟೊಂದು ದೊಡ್ಡ ಗಾತ್ರದ ಕಿಡ್ನಿಯನ್ನು ಶಸ್ತ್ರಚಿಕಿತ್ಸೆ ಅಪರೂಪದ ಕೆಲಸ

ಡಾ. ಪುವ್ವಾಡ ಸಂದೀಪ್‌,

ಸಹಾಯಕ ಪ್ರಾಧ್ಯಾಪಕ, ಯುರಾಲಜಿ ವಿಭಾಗ, ರಾಮಯ್ಯ ಆಸ್ಪತ್ರೆ

Popular Doctors

Related Articles