ಸಿಹಿ ಕಹಿ ಮಿಶ್ರಣ ಜೀವನದ ತಿರುಳು. ಸಿಹಿ ಇಲ್ಲದಿರೆ ಕಹಿಯ ಗುಣ, ಕಹಿ ಇಲ್ಲದಿರೆ ಸಿಹಿಯ ಗುಣ ತಿಳಿಯದು. ಹಾಗೇಯೇ ಆರೋಗ್ಯದ ವಿಷಯ ಬಂದಾಗ ಸಿಹಿಯ ಪ್ರಮಾಣ ಹೆಚ್ಚಾದರೆ ತೊಂದರೆಯುಂಟಾಗುವದು ಸಹಜ. ಇಂದು ಮಧುಮೇಹ ಯಾವ ಸೀಮೆಯನ್ನೂ ಬಿಟ್ಟಿಲ್ಲ. ಅದರಿಂದ ಬಳಲುವ ಜನರ ಪ್ರಮಾಣ ತೀವ್ರಗತಿಯಲ್ಲಿ ಏರತೊಡಗಿರುವದು ಆತಂಕದ ವಿಷಯ. ಡಯಾಬಿಟಿಸ್ ಹೆಚ್ಚಾದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಉದರದ ಸಮೀಪವಿರುವ ಪಾನಕ್ರಿಯಾ ಎಂಬ ಗ್ರಂಥಿಯಿಂದ ಇನ್ಸುಲಿನ್ ಬಿಡುಗಡೆಯಾಗುತ್ತದೆ. ಮಧುಮೇಹದಿಂದಾಗಿ ಇನ್ಸುಲಿನ್ ದೇಹಕ್ಕೆ ಬೇಕಾಗುವ ಪ್ರಮಾಣದಲ್ಲಿ ಉತ್ಪಾದನೆಗೊಳ್ಳುವುದಿಲ್ಲ. ಇದನ್ನು ಹೈಪರಗ್ಲೈಸನಿಯಾ ಅಥವಾ ಅಧಿಕ ಸಕ್ಕರೆ ರೋಗ ಎಂದು ಕರೆಯುತ್ತಾರೆ.
ಗರ್ಭಿಣಿಯರಲ್ಲಿ ಮಧುಮೇಹ
ಮಹಿಳೆಯರು ಗರ್ಭವತಿ ಯಾಗಿರುವ ಸಂದರ್ಭದಲ್ಲಿ ಮಧುಮೇಹ ಕಾಣಿಸಿಕೊಳ್ಳುವದೇ ಗರ್ಭಿಣಿ ಮಹಿಳೆಯರಲ್ಲಿ ಮಧುಮೇಹ. ಗರ್ಭಧಾರಣೆಗೆ ಮುಂಚೆ ಮಧುಮೇಹ ಕಾಯಿಲೆ ಮಹಿಳೆಗೆ ಇರಲಿ ಅಥವಾ ಬಿಡಲಿ, ಗರ್ಭಧಾರಣೆ ನಂತರ ಇದು ಸಾಮಾನ್ಯ. ಪ್ರಸವದ ಸಮಯದವರೆಗೂ ಮುಂದುವರೆಯುವ ಮಧುಮೇಹದಿಂದ ಬಳಲುವ ಮಹಿಳೆಯರ ಸಂಖ್ಯೆ ಕಡಿಮೆ. ಮಹಿಳೆ ಗರ್ಭಿಣಿಯಾದ ನಂತರ 24 ನೇ ವಾರದಿಂದ ಸಾಮಾನ್ಯವಾಗಿ ಇದು ಕಾಣಿಸಿಕೊಳ್ಳುತ್ತದೆ. ಅಧಿಕ ಸಕ್ಕರೆಯುಕ್ತ ರಕ್ತವು ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.
ಯಾರಿಗೆ ಗರ್ಭವತಿ ಮಧುಮೇಹ ಕಾಣಿಸಿಕೊಳ್ಳುತ್ತದೆ
30 ವರ್ಷ ಮೀರಿದ ಮಹಿಳೆಯರು.
ಅತೀ ಹೆಚ್ಚು ತೂಕ ಹೊಂದಿದವರು.
ಕೌಟುಂಬಿಕವಾಗಿ ಮಧುಮೇಹವನ್ನು ಬಳುವಳಿಯಾಗಿ ಪಡೆದವರು.
9 ಪೌಂಡಗಳಿಗಿಂತ ಅಧಿಕ ತೂಗುವ ಮಗುವನ್ನು ಹೊಂದಿದವರು.
ನಿಗಧಿತ ಅವಧಿಗಿಂತ ಮುಂಚಿನ ಹೆರಿಗೆ.
ಚಿಕಿತ್ಸೆ
ಕಾರ್ಬೋಹೈಡ್ರೆಟ್ಸ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ವರ್ಜಿಸಬೇಕು. ವ್ಯಾಯಾಮ ಮಾಡಿ. ರಕ್ತ ಮತ್ತು ಮೂತ್ರ ಪರಿಕ್ಷೆ ಮಾಡಿಸಿಕೊಳ್ಳಿ. ಇನ್ಸುಲಿನ : ಗರ್ಭವತಿ ಮಧುಮೇಹಿಗಳು ತಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಇನ್ಸುಲಿನ ತೆಗೆದುಕೊಳ್ಳಿ.
ದುಷ್ಪರಿಣಾಮ:
ಗರ್ಭವತಿಯಾಗಿದ್ದಾಗ ಮಧುಮೇಹಿಗಳಾಗಿದ್ದರೆ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ. ಮಧುಮೇಹ ಹೊಂದಿದ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಮೂತ್ರಿ ಜನಕಾಂಗದಲ್ಲಿ ಸೋಂಕು ತಗುಲಿ, ಬ್ಯಾಕ್ಟಿರಿಯಾ ಆಗಿ ಪರಿವರ್ತಣೆಗೊಳ್ಳುವದಲ್ಲದೇ ಅವು ಬೆಳಯಲು ದಾರಿ ಸುಗಮವಾಗುತ್ತದೆ.
ಪ್ರೀ ಎಕ್ಲಾಂಪ್ಸಿಯಾ : ಇದು ಗರ್ಭಿಣಿ ಸ್ತ್ರೀಯರಲ್ಲಿ ಕಾಣಿಸಿಕೊಳ್ಳುವದು ಸಹಜ. ಅಧಿಕ ರಕ್ತದೊತ್ತಡ ಹೊಂದಿದ್ದರೆ, ಮುಖ ಕೈ ಕಾಲುಗಳಲ್ಲಿ ಬಾವು ಬರುತ್ತಿದ್ದರೆ, ತೀವ್ರ ತೂಕ ಹೊಂದಿದ್ದದರೆ ಪ್ರೀ ಎಕ್ಲಾಂಪ್ಸಿಯಾ ಬರುತ್ತದೆ.
ಪಾಲಿಹೈಡ್ರಾನಿಯಸ್: ಪಾಲಿಹೈಡ್ರಾನಿಯಸ್ ಕೂಡ ಬಂದೆರಗುತ್ತದೆ. ಅತ್ಯಧಿಕ ಅಮ್ನಯೋಟಿಕ್ ಇಂಧನ ಪದಾರ್ಥ ಪಡೆದವರಾಗಿರುತ್ತೀರಿ. ಅಮ್ನಿಯೋಟಿಕ್ ಇಂಧನವು ಗರ್ಭಾಶಯದೊಳಗೆ ಶೇಖರಣೆಗೊಳ್ಳುತ್ತದೆ. ದೇಹದ ಒಂದು ಭಾಗವಾಗಿರುವ ಗರ್ಭಾಶಯ ಗರ್ಭಧಾರಣೆ ಸಮಯದಲ್ಲಿ ಶಿಶುವನ್ನು ತಡೆದಿಡುತ್ತದೆ.
ಮ್ಯಾಕ್ರೋಸೋಮಿಯಾ: (ಬೃಹದಾಕಾರದ ಮಗು) ರಕ್ತದಲ್ಲಿರುವ ಅಧಿಕ ಸಕ್ಕರೆ ಅಂಶವನ್ನು ಗರ್ಭದಲ್ಲಿರುವ ಮಗು ಪಡೆದು, ಸಾಕಷ್ಟು ಇನ್ಸುಲಿನ್ ತಯಾರಿಸುತ್ತದೆ. ಹೆಚ್ಚುವರಿ ಇನ್ಸುಲಿನ ಮತ್ತು ಸಕ್ಕರೆ ಅಂಶವು ಮಗುವಿನ ಬೆಳವಣಿಗೆ ಹಾಗೂ ಅಧಿಕ ಬೊಜ್ಜಿಗೆ ದಾರಿಮಾಡಿಕೊಡುತ್ತದೆ.
ಹೈಪೋಗ್ಲೈಸಿಮಿಯಾ: (ಕಡಿಮೆ ಸಕ್ಕರೆ ಅಂಶ) ಪ್ರಸವ ಸಂದರ್ಭದಲ್ಲಿ ರಕ್ತದಲ್ಲಿ ಅಧಿಕ ಸಕ್ಕರೆ ಅಂಶ ಹೊಂದಿದ್ದರೆ ಮಗು ಹೆಚ್ಚುವರಿ ಇನ್ಸುಲಿನ ಉತ್ಪಾದಿಸುವದರಿಂದ ಮಗುವಿನ ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಗೊಳ್ಳುತ್ತದೆ.
ನವಜಾತ ಶಿಶುವಿಗೆ ಕಾಮಾಲೆ: ನವಜಾತ ಶಿಶುವಿಗೆ ಕಾಮಾಲೆ ಸೋಂಕು ತಗುಲಿದ್ದರೆ, ಅದರ ಚರ್ಮ ಸಂಪೂರ್ಣ ಹಳದಿ ವರ್ಣಕ್ಕೆ ತಿರುಗುತ್ತದೆ. ಪ್ರಸವ ಪೂರ್ವದಲ್ಲಿ ಮಗು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಪ್ರಸವದ ನಂತರ ಮಗುವಿನ ಯಕೃತ್ತು ರಕ್ತ ಕಣಗಳನ್ನು ತಯಾರಿಸುವದನ್ನು ನಿಲ್ಲಿಸುತ್ತದೆ. ಅಲ್ಲದೆ ಅದರಿಂದ ಬಿಡುಗಡೆ ಪಡೆಯುತ್ತದೆ. ಈ ಕ್ರಿಯೆಯಿಂದ ನಿರುಪಯುಕ್ತವಾಗಿ ಉತ್ಪತ್ತಿಯಾಗುವದೇ ಬಿಲಿರುಬಿನ್.
ಪ್ರಸವದ ನಂತರ ಮಧುಮೇಹ ಸಹಜಗೊಳ್ಳುವದೇ
ನಿಜವಾಗಿಯೂ ರಕ್ತದಲ್ಲಿರುವ ಸಕ್ಕರೆ ಅಂಶವು ಶಿಶುವಿಗೆ ಜನ್ಮ ನೀಡಿದ ನಂತರ ಸಹಜ ಸ್ಥಿತಿಗೆ ಮರಳುತ್ತದೆ. ಮಧುಮತಿಯಾಗಿದ್ದಾಗ ಮಧುಮೇಹ ಹೊಂದಿದ್ದರೆ, ಪ್ರಸವದ ನಂತರ ಜೀವನದಲ್ಲಿ ಬಂದೆರಗುವ ಸಾಧ್ಯತೆ ಅಧಿಕ. ಭೊಜನದ ಯೋಜನೆ ರೂಪಿಸಸಿಕೊಳ್ಳುವದು ಅತ್ಯಂತ ಮಹತ್ವದ್ದು. ನಿಯಮಿತವಾಗಿ ವ್ಯಾಯಾಮ ಮಾಡುತ್ತ ಆರೋಗ್ಯಯುತ ಭಾರವಿರಲಿ. ನಿಗದಿತ ಆರು ವಾರಕ್ಕೊಮ್ಮೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಪರೀಕ್ಷಿಸಿಕೊಂಡ ನಂತರ ನಿಮ್ಮ ಸಕ್ಕರೆ ಕಾಯಿಲೆ ಬೆಳೆಯುವದನ್ನು ನಿಯಂತ್ರಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅಥವಾ ಮಧುಮೇಹ ಕುರಿತ ನಿಮ್ಮ ಸಮಸ್ಯೆಗಳಿದ್ದಲ್ಲಿ myarogya.in@gmail.com ಇಲ್ಲಿಗೆ ಸಂಪರ್ಕಿಸಿ.
ಡಾ ಎಂ ವಿ ಜಾಲಿ
ಮಧುಮೇಹ ವೈದ್ಯರು
ಬೆಳಗಾವಿ
About the Author: Dr. M V Jali, FRCP(London), FRCP(Edin), FRCP(Glasgow)
Chief Editor, Diabetes Doctor (Madhumeha-Vaidya Professor of Diabetology, KAHER J N Medical College
Medical Director & CE, KLES Dr. Prabhakar Kore Hospital & Medical Research Centre Belagavi 590010