ಜ್ಞಾನ ಹಂಚಿಕೆ ಮತ್ತು ಕಲಿಕೆ ಸದಾ ಚಟುವಟಿಕೆಗಳಿಂದ ಕೂಡಿರಬೇಕು. ಆಧುನಿಕತೆಯಲ್ಲಿ ಸಂಪರ್ಕ ಸಾಧನೆ ಅತ್ಯಂತ ಮುಖ್ಯ. ಸ್ಥಳೀಯ ರೋಗಿಗಳಿಗೆ ಅರ್ಥವಾಗುವ ರೀತಿಯಲ್ಲಿ ಸಂವಹನ ಕಲೆ ರೂಡಿಸಿಕೊಂಡು ಮುಂದೆ ಸಾಗಬೇಕಾಗಿದೆ ಎಂದು ಕರ್ನಾಟಕ ಆರ್ಥೊಪೆಡಿಕ್ ಅಸೋಸಿಯೇಶನ್ನ ಪೂರ್ವಾಧ್ಯಕ್ಷ ಡಾ. ಮಲ್ಲಿಕಾರ್ಜುನ ಸ್ವಾಮಿ ಅವರಿಂದಿಲ್ಲಿ ಹೇಳಿದರು.
ಕರ್ನಾಟಕ ಅರ್ಥೋಪೆಡಿಕ್ ಅಸೊಸಿಯೇಶನ್, ಬೆಳಗಾವಿ ಅರ್ಥೋಪೆಡಿಕ್ ಸರ್ಜನ್ಸ್ ವೆಲ್ಫೇರ ಸೊಸಾಯಿಟಿ,ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೆಳಗಾವಿ ವೈದ್ಯಕೀಯ ಮಹಾವಿದ್ಯಾಲಯದ ಎಲುಬು ಕೀಲು ವಿಭಾಗವು ಸಂಯುಕ್ತಾಶ್ರಯದಲ್ಲಿ ನಡೆದ ಹಿಪ್ & ನೀ ಅಥ್ರ್ರೋಪ್ಲಾಸ್ಟಿ ( ಛಪ್ಪೆ ಮತ್ತು ಮೊಣಕಾಲು) ಬ್ಯಾಕ್ ಟು ಬೆಸಿಕ್ಸ್ ಎಂಬಇನ್ಸಟ್ರಕ್ಷನಲ್ ಕೋರ್ಸ್ ಲೆಕ್ಚರ ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ಶಿಕ್ಷಣದಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಜ್ಞಾನದ ಉಡುಗರೆ ಮನುಕುಲಕ್ಕೆ ನೀಡುವ ಅತುನ್ನತ ಕಾಣಿಕೆ. ಸದಾ ಸಂಶೋಧನೆ ಇರಲೇಬೇಕು. ಸಂಶೋಧನೆಯ ಒಳ್ಳೆಯ ಪ್ರತಿಫಲ ಜನಸಾಮಾನ್ಯರಿಗೆ ಲಭಿಸಿ ಆರೋಗ್ಯಯುತ ಸಮಾಜ ನಿರ್ಮಿಸುವಲ್ಲಿ ಸಫಲವಾಗಬೇಕು. ವೈದ್ಯಕೀಯ ರಂಗ ಅತ್ಯಂತ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಸೇವೆಯನ್ನು ಇನ್ನೂ ಉತ್ತಮಗೊಳಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಕೆಎಲ್ಇ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿ ಎ ಕೋಠಿವಾಲೆ ಅವರು ಮಾತನಾಡಿ, ತಾಂತ್ರಿಕತೆಯಿಂದ ಕೂಡಿದ ಎಲಬುಕೀಲು ವಿಭಾಗವು ಅತ್ಯಂತ ನೈಪುಣ್ಯತೆಯನ್ನು ಹೊಂದಿರಬೇಕು. ಎಲಬುಕೀಲು ವಿಭಾಗದಲ್ಲಿ ಕಾರ್ಯ ಮಾಡುವ ಯುವ ವೈದ್ಯರು ಸದಾ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡಿರಬೇಕು. ಜೆಎನ್ ವೈದ್ಯಕೀಯ ಮಹಾವಿದ್ಯಾಲಯವು ಉತ್ತಮ ಎಲುಬು ಕೀಲು ತಜ್ಞರನ್ನು ರೂಪಿಸಿದೆ. ಅವರಿಂದು ಜಗತ್ತಿನಾದ್ಯಂತ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಅರ್ಥೋಪೆಡಿಕ್ ಅಸೊಸಿಯೇಶನ ಅಧ್ಯಕ್ಷರಾದ ಡಾ. ಹೆಚ್ ಎಸ್ ಚಂದ್ರಶೇಖರ ಅವರು ಮಾತನಾಡಿದರು.
ಡಾ. ವಿವೇಕ ಸಾವೋಜಿ, ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ಎಮ್. ವ್ಹಿ. ಜಾಲಿ, ಡಾ ಭರತ ರಾಜು, ಡಾ. ಗಂಗಾಧರ ಉಮರಾಣಿ, ಡಾ. ಶೈಲೇಶ ಉದಪುಡಿ, ಡಾ. ವಿನಯ ದಾಸ್ತಿಕೊಪ್ಪ, ಡಾ. ಅನಿಲ ಪಾಟೀಲ, ಡಾ. ಎಸ್ ಟಿ ಸಾಣಿಕೊಪ್ಪ, ಡಾ. ಸತೀಶ ನೇಸರಿ, ಡಾ. ಬಿ ಎಫ್ ಪಾಟೀಲ,ಡಾ. ಪುನಿತ ಚಮಕೇರಿ, ಡಾ. ರವಿ ಜತ್ತಿ ಸಮಾರಂಭಲ್ಲಿ ಉಪಸ್ಥಿತರಿದ್ದರು. ಡಾ ಎಸ್ ಕೆ ಸೈದಾಪುರ ನಿರೂಪಿಸಿದರು.