ಹಾಲಿನ ಹಲ್ಲುಗಳು ಮಗುವಿನ ಅಮೂಲ್ಯ ಆಸ್ತಿ. ಈ ಹಲ್ಲುUÀಳು ಹುಟ್ಟುವ ಸಮಯದಿಂದ ಸರಿಯಾಗಿ ಕಾಳಜಿ ವಹಿಸಬೇಕು. ಏಕೆಂದರೆ ಇದು ತಿನ್ನುವುದಕ್ಕಾಗಿ, ಮಾತನಾಡಲು, ಸೌಂದರ್ಯದಂತಹ ಪ್ರಮುಖ ಕಾರ್ಯUÀಳನ್ನು ನಿರ್ವಹಿಸುತ್ತದೆ, ಶಾಶ್ವತ ಹ®Äèಗಳು ಹೊರಹೊಮ್ಮುವವರೆಗೆ ನೈಸರ್ಗಿಕ ಸ್ಥಳ ಹಿrಯುವ ಅಸ್ತ್ರದಂತೆ ಕಾರ್ಯ ನಿರ್ವಹಿಸುತ್ತದೆ. ಬಾಯಿಯ ಆರೋಗ್ಯವು ಸಾಮಾನ್ಯ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ ಸಾಮಾನ್ಯ ಆರೋಗ್ಯವು ಬಾಯಿಯ ಆರೋಗ್ಯದಲ್ಲಿ ಪ್ರತಿಫಲಿಸುತ್ತದೆ. ಹೆಚ್ಚಿನ ಪೊಷಕರು ಹಾಲಿನ ಹಲ್ಲುಗಳನ್ನು ಏಕೆ ಕಾಳಜಿ ವಹಿಸಬೇಕು ಎಂದು ಆಗಾಗ್ಗೆ ಯೋಚಿಸುತ್ತಾರೆ, ಅದು ಅಂತಿಮವಾಗಿ ಬೀಳುತ್ತವೆ ಮತ್ತು ಹಲ್ಲಿನ ಚಿಕಿತ್ಸೆಯಿಂದ ಮಗುವನ್ನು ಏಕೆ ಅಳುವಂತೆ ಮಾಡಬೇಕು, ಕೆಲವರು ಹಲ್ಲಿನ ಚಿಕಿತ್ಸೆಯಿಂದ ದೃಷ್ಟಿಯು ದುರ್ಬಲಗೊಳ್ಳುತ್ತದೆ ಎಂದು ನಂಬಿದ್ದಾರೆ. ಇವೆಲ್ಲವು ತಪ್ಪು ಕಲ್ಪನೆ.
ಮಕ್ಕಳಲ್ಲಿ ಕಂಡುಬರುವ ಸಮಾನ್ಯ ಹಲ್ಲಿನ ಸಮಸ್ಯೆ ಎಂದರೆ ಹಲ್ಲಿನ ಹುಳುಕು ಇದು ಗಟ್ಟಿಯಾದ ಜಿಗುಟಾದ ಸಕ್ಕರೆ ಪದಾರ್ಥ ಸೇವನೆಯಿಂದ, ಆಗಾಗ್ಗೆ ತಿಂಡಿ ಸೇವನೆಯಿಂದ ಮತ್ತು ಅಸಮರ್ಪಕ ಬಾಯಿಯ ನೈರ್ಮಲ್ಯ ಅಭ್ಯಾಸಗಳ ಕಾರಣದಿಂದಾಗಿ ಕಂಡುಬರುವುದು. ದಿನನಿತ್ಯ ಬಾಯಿಯ ಆರೈಕೆಯು ಒಳ್ಳೆಯ ಅಭ್ಯಾಸ ಮತ್ತು ನಿಯಮಿತ ಮಧ್ಯಂತರದಲ್ಲಿ ದಂತವೈದ್ಯರನ್ನು ಭೇಟಿ ಮಾಡುವ ಮೂಲಕ ಇದನ್ನು ತಡೆಯಬಹುದು. ಸಾಮಾನ್ಯ ಮನೆ ಅಭ್ಯಾಸಗಳಲ್ಲಿ ಊಟದ ಸಮಯದಲ್ಲಿ ಮಾತ್ರ ಸಕ್ಕರೆಯ ಬಾಯಿಯ ಸೇವಿಸುವುದು. ಪ್ಲೋರಿಡೇಟದ ಟೂತಪೇಸ್ಟನೊಂದಿಗೆ ಸರಿಯಾಗಿ ಹಲ್ಲುಜ್ಜುವ ಅಭ್ಯಾಸಗಳು ಸೇರಿವೆ. ವೃತ್ತಿಪರ ಆರೈಕೆಯಲ್ಲಿ ಆವರ್ತಕ ದಂತ ತಪಾಸಣೆ ಮತ್ತು ವೃತ್ತಿಪರವಾಗಿ ಅನ್ವಯಿಸಲಾದ ಪ್ಲೋರಿಡಗಳು ಮತ್ತು ಸೀಲೇಂಟಗಳು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕನಿಷ್ಠ ಮತ್ತು ಮಧ್ಯಮ ಹುಳುಕು ಹಲ್ಲುಗಳನ್ನು ಚಿಕಿತ್ಸೆಯಿಂದ ಸಾಮಾನ್ಯ ರೂಪ ಮತ್ತು ಕಾರ್ಯಕ್ಕೆ ಮರುಸ್ಥಾ¦ಸಬಹುದು. ಹಲ್ಲಿನ ನರವು ಸೋಂಕಿಗೆ ಒಳಗಾದಾಗ ಹಲ್ಲಿನ ಮೂಲ ಕಾಲುವೆಯ ಚಿಕಿತ್ಸೆಯನ್ನು (RCT) ಮಾqÀÄವ ಮೂಲಕ ಉಳಿಸಬಹುದು. ಕೆಟ್ಟದಾಗಿ ಹುಳಿತಿರುವ ಹಲ್ಲುಗಳನ್ನು ತೆಗೆದು ಶಾಶ್ವತ ಹಲ್ಲುಗಳು ಹೊರಹೊಮ್ಮುವವರಿಗೆ ಅದರ ಸ್ಥಳದಲ್ಲಿ ಜಾಗವನ್ನು ನಿರ್ವಹಿಸುವ ಉಪಕರಣವನ್ನು ಬಳಸಬೇಕಾಗುತ್ತದೆ.
ತಮ್ಮ ಮಗುವಿನ ಹಲ್ಲುಗಳ ಬಗ್ಗೆ ಸಾಮಾನ್ಯವಾಗಿ ಪೋಷಕರು ಹೇಳುವ ಮತ್ತೊಂದು ಸಾಮಾನ್ಯ ಸಮಸ್ಯೆ ಎಂದರೆ ಎರಡು ಹಲ್ಲುಗಳು ಒಂದೇ ಸ್ಥಳದಲ್ಲಿ ಕಾಣುವುದು. ಇದು ಅತಿಯಾಗಿ ಉಳಿದುಕೊಂಡಿರುವ ಹಾಲಿನ ಹಲ್ಲು, ಇದನ್ನು ತೆಗೆಯಬೇಕಾಗುತ್ತದೆ.
ಇದಲ್ಲದೆ ಅನೇಕ ಪೋಷಕರು ತಮ್ಮ ಮಗುವಿನ ಬಾಯಿಯಲ್ಲಿ ಅನಿಯಮಿತವಾಗಿ / ವಕ್ರವಾಗಿ ಜೋಡಿಸಲಾದ ಹಲ್ಲುಗಳ ಬಗ್ಗೆ ದೂರು ನೀqÀÄತ್ತಾರೆ. ಇದು ಸಾಮನ್ಯವಾಗಿ 8-12 ವರ್ಷ ವಯಸ್ಸಿನವರಲ್ಲಿ ವಿಶೇಷವಾಗಿ ಕೆಳಗಿನ ಮುಂಬಾಗದ ದವಡೆಯಲ್ಲಿ ಕಾಣಬಹುದು.
ಇದು ದವಡೆ ಬೆಳೆದಂತೆ ನೈಸರ್ಗಿಕವಾಗಿ ಸರಿಪಡಿಯುತ್ತದೆ. ಆದಾಗ್ಯೂ ಈ ಸ್ಥಿತಿಯು ªÀÄÄ0ದುವರಿದರೆ ಅದನ್ನು ಆರ್ಥೊದೊಂಟಿಕ ಚಿಕಿತ್ಸೆಯಿಂದ ಸರಿಪಡಿಸಬಹುದು.
ಮಕ್ಕಳು ಆಟವಾಡುವಾಗ ಅಥವಾ ಜಿಗಿಯುವಾಗ ಕೆಲವೊಮ್ಮೆ ಅವರ ಹಾಲು ಅಥವಾ ಶಾಶ್ವತ ಹಲ್ಲುಗಳನ್ನು ಗಾಯಗೊಳಿಸುತ್ತಾರೆ ಅಥವಾ ಬೀಳಿಸಿಕೊಳ್ಳುತ್ತಾರೆ. ಶಾಶ್ವತ ಹಲ್ಲು ಗಾಯವಾದಾಗ ಅವುಗಳನ್ನು ಉಳಿಸುವುದು ಬಹಳ ಮುಖ್ಯ ಎಕೆಂದರೆ ಅವುಗಳು ಜೀವಿತಾವಧಿಯಲ್ಲಿ ವಿವಿಧ ಕಾರ್ಯಗಳನ್ನು ಪೂರೈಸಲು ಅಗತ್ಯವಾಗಿದೆ. ಆಕಸ್ಮಿಕವಾಗಿ ಶಾಶ್ವತ ಹಲ್ಲು ಬಿದ್ದರೆ ಅದನ್ನು ತಣ್ಣನೆಯ ಹಾಲಿನಲ್ಲಿ ಇಟ್ಟು ತಕ್ಷಣ ದಂತವೈದ್ಯರ ಬಳಿಗೆ ಬಂದರೆ ಆ ಹಲ್ಲನ್ನು ಉಳಿಸಬಹುದು.
ಹಲವು ಮಕ್ಕಳು ಹೆಬ್ಬೆರಳನ್ನು ಚೀಪುವುದು, ಹಲ್ಲುಗಳನ್ನು ಕಡಿಯುವುದು, ಬಾಯಿಯಿಂದ ಉಸಿರಾಡುವುದು ಇಂತಹ ಬಾಯಿಯ ಅಭ್ಯಾಸಗಳನ್ನು ಹೊಂದಿರುತ್ತಾರೆ. F ಅಭ್ಯಾಸಗಳು ಧೀರ್ಘ ಕಾಲ ಮುಂದುವರಿದರೆ ವ್ಯಕ್ತಿಯ ನೋಟದ ಮೇಲೆ ಹಾನಿಕಾರಕ ಪರಿಣಾಮವನ್ನು ಉಂಟುಮಾಡುತ್ತದೆ ಆದ್ದರಿಂದ ಈ ಅಭ್ಯಾಸಗಳನ್ನು ಆದಷ್ಟು ಬೇಗ ನಿಲ್ಲಿಸಬೇಕು. ಮಕ್ಕಳ ದಂತವೈದ್ಯರ ಈ ನಿಟ್ಟಿನಲ್ಲಿ ಸಹಾಯ ಮಾಡುವರು.
ಕಾಹೆರ ಕೆ. ಎಲ್. ಇ ದಂತ ಮಹಾವಿದ್ಯಾಲಯದ ಮಕ್ಕಳ ದಂತ ಚಿಕಿತ್ಸಾ ವಿಭಾಗದ ವೈದ್ಯರು ಶಿಶುಗಳ ಮತ್ತು ಮಕ್ಕಳ ಬಾಯಿಯ ರೋಗಗಳನ್ನು ತಡೆಗಟ್ಟುವ ಮತ್ತು ಚಿಕಿತ್ಸಿಕ ಬಾಯಿಯ ಆರೊಗ್ಯ ರಕ್ಷಣೆಯ ಚಿಕಿತ್ಸೆಯನ್ನು ಒದಗಿಸುತ್ತಾರೆ. ವಿಶೇಷ ಆರೋಗ್ಯ ಅಗತ್ಯತೆಗಳನ್ನು ಹೊಂದಿರುವ ಮಕ್ಕಳಿಗೆ ಬಾಯಿಯ ಆರೋಗ್ಯದ ಅಗತ್ಯತೆಗಳನ್ನು ಸಹ ನಾವು ಪೂರೈಸುತ್ತೇವೆ. ನಿಮ್ಮಮಗುವಿಗೆ ಯಾವುದೇ ಹಲ್ಲಿನ ಸಮಸ್ಯೆ ಇದ್ದಲ್ಲಿ ದಯವಿಟ್ಟು ಕೆಎಲ್ಇ ದಂತ ಮಹಾವಿದ್ಯಾಲಯದ ಮಕ್ಕಳ ದಂತ ಚಿಕಿತ್ಸಾ ವಿಭಾಗವನ್ನು ಭೇಟಿ ಮಾಡಿ. ಆರೋಗ್ಯ ಹೊಂದಿರುವವನಿಗೆ ಭರವಸೆ ಇರುತ್ತದೆ ಮತ್ತು ಭರವಸೆ ಇರುವವನಿಗೆ ಎಲ್ಲವೂ ಇರುತ್ತದೆ.
ಡಾ. ವಿದ್ಯಾವತಿ ಎಚ್. ಪಾಟೀಲ ಡಾ. ಶೀವಯೋಗಿ ಎಮ್. ಹೂಗಾರ
ಉಪನ್ಯಾಸಕರು ಮುಖ್ಯ ಉಪನ್ಯಾಸಕರು