ಎಚ್ಚರ: ಸ್ಮಾರ್ಟ್ ಫೋನ್ ನಿಮ್ಮನ್ನು ಕುರುಡಾಗಿಸಬಹುದು

ತಂತ್ರಜ್ಞಾನವಿಂದು ಇಡೀ ವಿಶ್ವವನ್ನೇ ನಮ್ಮ ಬೆರಳತುದಿಗೆ ತಂದು ನಿಲ್ಲಿಸಿದೆ. ಆದರೆ ಸ್ಮಾರ್ಟ ಫೊನ್ ಬಂದ ನಂತರ ಪ್ರತಿಯೊಬ್ಬರ ಕೈಯಲ್ಲೂ ರಾರಾಜಿಸುತ್ತಿದೆ. ವೇಗವಾದ ಇಂಟರನೆಟ್ ಸಂಪರ್ಕದಿಂದ ಯಾವುದೇ ಮಾಹಿತಿಯನ್ನು ಕ್ಷಣದಾರ್ಧದಲ್ಲಿ ಬೆರಳ ತುದಿಯಲ್ಲಿ ಪಡೆಯಬಹುದು ಇಂಟರ್ನೆಟ್ ಸಂಪರ್ಕದೊಂದಿಗೆ ಹುದುಗಿರುವ ಮೊಬೈಲ್ ತಂತ್ರಜ್ಞಾನವು ಜನರನ್ನು ಬಿರುಗಾಳಿಯಂತೆ ಆವರಿಸಿಕೊಂಡಿದೆ. ಆದರೆ ಅದನ್ನು ವಿರೋಧಿಸಲು ನಮಗೆ ಸಾಧ್ಯವಿಲ್ಲ. ಏಕೆಂದರೆ ಮೊಬೈಲ್ ತಂತ್ರಜ್ಞಾನ ನಮ್ಮಷ್ನ್ನು ಎಷ್ಟು ಆವರಿಸಿದೆ ಎಂದರೆ ಅದಿಲ್ಲದಿದ್ದರೆ ನಮಗೆ ಜೀವಿಸದಷ್ಟು ಅಸಾಧ್ಯವಾಗಿದೆ. ಮೊಬೈಲ್ ಇಂದು ವಿಶ್ವದಲ್ಲೇ ಹೆಚ್ಚು ಸ್ಪರ್ಶಿಸಲ್ಪಟ್ಟ ವಸ್ತು. ನಮ್ಮ ಜೀವನದ ಅವಿಭಾಜ್ಯ ಅಂಗ ಎಂಬಂತಾಗಿದೆ. ಆದರೆ ಮೊಬೈಲ್ ಎನ್ನುವ ಭೂತಕನ್ನಡಿ ನಮ್ಮ ಬಹುಸಮಯವನ್ನು ಹಾಳುಮಾಡುವಲ್ಲಿ ಸಹಕಾರಿಯಾಗುತ್ತಿದೆ. ನಮಗೆ ಎಷ್ಟು ಒಳ್ಳೆಯದವೋ ಎಷ್ಟೇ ಕೆಟ್ಟದ್ದಾಗಿದೆ.

ನಮ್ಮ ಸ್ಮೃತಿಪಟಲದ ಚಿಂತನಾಲಹರಿಯನ್ನು ಕಳೆದುಕೊಳ್ಳುವದರೊಂದಿಗೆ ಇಚಟವಾಗಿ ಮಾರ್ಪಟ್ಟಿದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿ ಆರೋಗ್ಯದ ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮುತ್ತಿದೆ. ಭಾರತದಲ್ಲಿ ಸುಮಾರು 90 ಕೋಟಿಗೂ ಅಧಿಕ ಜನರು ಸ್ಮಾರ್ಟ್‌ಫೋನ್ ಬಳಕೆಯನ್ನು ಮಾಡುತ್ತಿದ್ದಾರೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ ಅತೀಹೆಚ್ಚು ಇಂಟರ್ನೆಟ್ ಡೇಟಾದ ಬಳಕೆಯಲ್ಲಿ ಪ್ರಥಮ ಸ್ಥಾನದಲ್ಲಿ ಚೀನಾ ಇದ್ದರೆ ಭಾರತೀಯರು ದ್ವಿತೀಯ ಸ್ಥಾನದಲ್ಲಿದ್ದೇವೆ. ಭಾರತೀಯರು ಸುಮಾರು ಮೂರು ಗಂಟೆಗಳ ಕಾಲ ಮೊಬೈಲ ಬಳಕೆಯಲ್ಲಿ ಅಂಟಿಕೊಂಡಿದ್ದಾರೆ.

ಅಮೆರಿಕದ ಓಹಿಯೋದ ಟೊಲೆಡೊ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಂತೆ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಂದ ಹೊರಸೂಸುವ ತೀಕ್ಷ್ಣವಾದ ಬೆಳಕು ಕಣ್ಣುಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಕಣ್ಣುಗಳಲ್ಲಿ “ವಿಷಕಾರಿ ಅಣುಗಳ” ಬೆಳವಣಿಗೆಯನ್ನು ಉತ್ತೇಜಿಸಿ, ತಲೆನೋವು, ನಿದ್ರಾಹೀನತೆ, ಚಡಪಡಿಕೆ, ದೃಷ್ಠಿದೋಷ, ಒಣಗಿದ ಕಣ್ಣುಗಳು, ನೋವು ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ (ಗಂಭೀರ ಕಣ್ಣಿನ ಕಾಯಿಲೆ) ಉಂಟಾಗುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ.

ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆಯು ವಿವಿಧ ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು, ಇವು ಕೆಲವೊಮ್ಮೆ ಚಿಕಿತ್ಸೆ ಸ್ಪಂಧಿಸದೇ ಇರಬಹುದು. ಕಣ್ಣಿನ ಒತ್ತಡ, ಕುತ್ತಿಗೆ ಮತ್ತು ಭುಜದ ನೋವು, ವಾಹನ ಚಾಲನೆಯಲ್ಲಿ ಅಪಘಾತಗಳು (ಚಾಲನೆ ಮಾಡುವಾಗ ಫೋನ್ ಬಳಕೆ) ಮತ್ತು ಅತೀ ಮುಖ್ಯವಾಗಿ ಬಂಜೆತನಕ್ಕೆ ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ (ಡಬ್ಲ್ಯುಎಚ್‌ಒ) ಸೆಲ್ ಫೋನ್ ಹೊರಸೂಸುವ ವಿಕಿರಣಗಳಿಂದ ಕ್ಯಾನ್ಸರ್ ಬಂದೆರಗಬಹುದು. ಅದರಲ್ಲಿಯೂ ಮುಖ್ಯವಾಗಿ ದೀರ್ಘಕಾಲೀನ ಮತ್ತು ಅನಿಯಂತ್ರಿತ ಸೆಲ್‌ಫೋನ್‌ಗಳ ಬಳಕೆಯಿಂದ ಮೆದುಳಿನ ಕ್ಯಾನ್ಸರ್ ಅಧಿಕವಾಗಿ ಕಂಡುಬರುತ್ತದೆ.

ಹೊರಬರುವದು ಹೇಗೆ?

1. ಕಣ್ಣುಗಳನ್ನು ಮೇಲಿಂದ ಮೇಲೆ ಮಿಟುಕಿಸುವದು, ಇದರಿಂದ ನಿಮ್ಮ ಕಣ್ಣುಗಳನ್ನು ತೇವವಾಗಿಸಿ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಪ್ರತಿ 15-20 ನಿಮಿಷಗಳಿಗೊಮ್ಮೆ ಸುಮಾರು 20-30 ಬಾರಿ ಮಿಟುಕಿಸುವ ಮೂಲಕ ನಿಮ್ಮ ಕಣ್ಣುಗಳನ್ನು ಒದ್ದೆಯಾಗಿರಿಸಿಕೊಳ್ಳಿ. ಮಿಟುಕಿಸುವುದು ನಿಮ್ಮ ಕಣ್ಣುಗಳನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.

2. ಮೊಬೈಲ್ ಪರದೆಯ ಪ್ರಕಾಶಮಾನ ಹೊಳಪನ್ನು (ಬ್ರೈಟನೆಸ್) ಕಡಿಮೆ ಮಾಡಿ. ಆಂಟಿರಿಫ್ಲೆಕ್ಟಿವ್ ಅನ್ನು ಸ್ಮಾರ್ಟ್‌ಫೋನ್ ಪರದೆಯ ಮೇಲೆ ಇರಿಸಿ. ತಣ್ಣೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆಕೊಳ್ಳಿರಿ.

3. ಪ್ರತಿ 15-20 ನಿಮಿಷಗಳಿಗೆ ಪರದೆಯಿಂದ ವಿರಾಮ ತೆಗೆದುಕೊಳ್ಳಿ. ಹಗಲಿನ ವೇಳೆಯಲ್ಲಿ ಅಥವಾ ರಾತ್ರಿಯಲ್ಲಿ ಆಕಾಶದಲ್ಲಿ ನೀವು ಹಸಿರಾಗಿರುವಷ್ಟು ದೂರ ನೋಡಿ. ಈ ಸರಳ ವ್ಯಾಯಾಮವು ಕಣ್ಣಿನ ಸ್ನಾಯುಗಳಿಗೆ ಹಿತವಾದ ಪರಿಣಾಮವನ್ನು ನೀಡುತ್ತದೆ

mobile usage brain tumor

4. ನಿಮ್ಮ ಪರದೆಯು ಬಹಳ ಪ್ರಕಾಶಮಾನ ಅಥವಾ ಕಪ್ಪಾಗಿರುವಂತೆ ಮಾಡಬೇಡಿ. ಇದರಿಂದ ನಿಮ್ಮ ಗಮನವನ್ನು ಕಾಪಾಡಿಕೊಳ್ಳಲು ಸಮಸ್ಯೆಯುಂಟಾಗುತ್ತದೆ.

5. ಮೊಬೈಲ್ ಪರದೆಯನ್ನು ಸ್ವಚ್ಚ ಮತ್ತು ಸ್ಪಷ್ಟವಾಗಿ ಇಟ್ಟುಕೊಳ್ಳಿ. ಧೂಳು, ಹೊಲಸು, ಕಲೆಗಳು ಮತ್ತು ಬೆರಳಚ್ಚುಗಳನ್ನು ತೆಗೆದುಹಾಕಲು ಒಣ ಬಟ್ಟೆಯಿಂದ ನಿಮ್ಮ ಸ್ಮಾರ್ಟ್‌ಫೋನ್ ಪರದೆಯನ್ನು ನಿಯಮಿತವಾಗಿ ಸ್ವಚ್ಚಗೊಳಿಸಿ.

7. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ದೂರವಿಡಿ. ನಿಮ್ಮ ಕಣ್ಣುಗಳಿಗೆ ವಿರಾಮ ನೀಡಲು ಫೋನ್ ಅನ್ನು ಕನಿಷ್ಠ 16-18 ಇಂಚುಗಳಷ್ಟು ದೂರದಲ್ಲಿಡಲು ಪ್ರಯತ್ನಿಸಿ.

8. ಮಲಗುವ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಸಬೇಡಿ. ರಾತ್ರಿ ದೀಪವಿಲ್ಲದೆ ನೋಡುವುದು ಹೆಚ್ಚು ಅಪಾಯಕಾರಿ. ಮಲಗುವುದು ಮತ್ತು ಪರದೆಯನ್ನು ನೋಡುವುದು ಕುತ್ತಿಗೆ, ಭುಜದ ನೋವು, ನಿದ್ರಾಹೀನತೆ, ಕಾಯಿಲೆಗೆ ಕಾರಣವಾಗಬಹುದು. ಮೊಬೈಲ್ ಅನ್ನು ಎಂದಿಗೂ ಹಾಸಿಗೆಯಲ್ಲಿ ಇಡಬೇಡಿ (ದಿಂಬಿನ ಕೆಳಗೆ) ಹಾಸಿಗೆಯಿಂದ ಕನಿಷ್ಠ 8 ಅಡಿ ದೂರವಿಡಿ.

ನಿಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ನೀವು ನಿರಂತರವಾಗಿ ಇದ್ದರೆ, ನಿಮ್ಮ ಕಣ್ಣುಗಳನ್ನು ನಿಯಮಿತವಾಗಿ ತಪಾಸಣೆಗೊಳ್ಪಡಿಸುವದು ಅತ್ಯವಶ್ಯ. ನಿರಂತರವಾಗಿ ಉಪಯೋಗಿಸುವದರಿಂದ ನಿಮ್ಮ ಕಣ್ಣುಗಳ ದೃಷ್ಠಿ ಕ್ಷೀಣಿಸಿ, ಕನ್ನಡಕ ಬೇಕಾಗಬಹುದು. ಆದ್ದರಿಂದ ಕನ್ನಡಕವನ್ನು ನಿಮಗೆ ನೀವೇ ಕಾಣಿಕೆಯನ್ನಾಗಿ ಪಡೆದುಕೊಳ್ಳಬೇಡಿ. ಎಚ್ಚರ !

LEAVE A REPLY

Please enter your comment!
Please enter your name here