ಸ್ತ್ರೀ ಎಂದರೆ ಒಂದು ಶಕ್ತಿ ಅವಳು ಪ್ರತಿಯೊಂದು ಕುಟುಂಬz ಆಧಾರ ಸ್ತಂಭವಾಗಿದ್ದಾಳೆ. ಅವಳು ಮಾನವ ಜೀವನದ ಭೂತಕಾಲ, ವಾಸ್ತವ ಹಾಗೂ ಭವಿಷ್ಯದ ಮೂಲವಾಗಿದ್ದಾಳೆ. ಗರ್ಭಾವಸ್ಥೆಯಿಂದ ಹಿಡಿದು ಹೆರಿಗೆಯವರೆಗೆ ಸ್ತ್ರೀಯಲ್ಲಿ ಸಹಜವಾಗಿ ಕೆಲವೊಂದು ಬದಲಾವಣೆಗಳಾಗುತ್ತವೆ ಅವುಗಳ ಪರಿಣಾಮವಾಗಿ ಆಕೆ ಅಥವಾ ಶಿಶುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಈ ರೀತಿಯಾದಾಗ ಕೆಲವೊಂದು ವ್ಯತಿರಿಕ್ತ ಪರಿಸ್ಥಿತಿಗಳಿಂದಾಗಿ ತಾಯಿ ಮತ್ತು ಮಗುವಿನ ಮgಣÀ ಪ್ರಮಾಣದಲ್ಲಿ ನಿರೀಕ್ಷಿತ ಪ್ರಮಾಣದ ಇಳಿಕೆ ಕಂಡುಬಂದಿಲ್ಲವೆಂದು ಬೆಂಗಳೂರಿನ ದಿವಾಕರ ಸ್ಪೆಷ್ಯಲಿಟ್ಯ ಆಸ್ಪತ್ರೆಯ ನಿರ್ದೇಶಕಿ ಡಾ. ಹೇಮಾ ದಿವಾಕರ ಮಾತನಾಡುತ್ತಿದ್ದರು. ಅವರಿಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಮಾನ್ಯತಾ”ಕೇಂದ್ರಿಕೃತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತ ಮಾತನಾಡುತ್ತಿದ್ದರು. 2013 ರಲ್ಲಿ ಪ್ರತಿ ಲಕ್ಷ ಹೆರಿಗೆಗಳಲ್ಲಿ ಸುಮಾರು 342 ಜನ ತಾಯಂದಿರು ಮರಣಹೊಂದುತ್ತಿದ್ದರು 2017 ರ ಸಮೀಕ್ಷೆಯ ಪ್ರಕಾರ ಅದರಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದು ಪ್ರತಿ ವರ್ಷ 211 ರಷ್ಟು ತಾಯಂದಿರು ವೈದ್ಯಕೀಯ ಹಾಗೂ ಮತ್ತಿತರೆ ಕಾರಣಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೂ ಸಹ ಇದನ್ನು ಇನ್ನಷ್ಟು ಹತೋಟಿಗೆ ತರುವಲ್ಲಿ ನಾವು ನೀವೆಲ್ಲ ಯತೇಚ್ಛವಾಗಿ ಶ್ರಮಿಸಬೇಕಾಗಿದೆ ಎಂದು ಪ್ರಶೀಕ್ಷಣಾರ್ತಿಗಳನ್ನು ಕುರಿತು ಕರೆ ನೀಡಿದರು.
ಕಾರ್ಯಕ್ರಮದ ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ್ದ ಯುಎಸ್ಎಮ್ ಕೆಎಲಇ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತ ತಾಯ್ತನವೆಂಬುದು ಸ್ತ್ರೀ ಸಂಕುಲಕ್ಕೆ ಒಂದು ವರದಾನವೇ ಸರಿ. ಆದರೆ ಇತ್ತೀಚಿನ ವ್ಯಾಯಾಮ ರಹಿತ ಜೀವನ, ಆಧುನಿಕ ಜೀವನ ಶೈಲಿಯಿಂದಾಗಿ ತಾಯಂದಿರು ಸರಿಯಾದ ಪೋಷಕಾಂಶಗಳ ಸೇವನೆಯ ಕೊರತೆಯಿಂದಾಗಿ ನೈಸರ್ಗಿಕ ಹೆರಿಗೆ ( ನಾರ್ಮಲ ಡೆಲಿವರಿ) ಪದ್ದತಿ ಹಾಗೂ ಕೆಲವೊಂದು ಕ್ಲಿಷ್ಟಕರ ಸಂದರ್ಭಗಳಲ್ಲಿ ಸಿಸೇರಿಯನ್ ಹೆರಿಗೆಗಳಿಗೆ ಮೊರೆಹೋದರೂ ಸಹ ತಾಯಿ ಹಾಗೂ ಶಿಶುವಿನ ಮರಣದ ಸಂಖ್ಯೆ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ವೈಜ್ಞಾನಿಕ ತಳಹದಿಯ ಆಧಾರದ ಮೇಲೆ ಹೆರಿಗೆ ಪದ್ದತಿಯನ್ನು ಅನುಸರಿಸುವದರ ಮೂಲಕ ತಾಯಿ ಹಾಗೂ ಶಿಶುವಿನ ಮರಣದ ಸಂಖ್ಯೆಯನ್ನು ಹತೋಟಿಗೆ ತರಲು ಶ್ರಮಿಸುತ್ತಿರುವ “ಮಾನ್ಯತಾ” ತಂಡಕ್ಕೆ ನಿಜಕ್ಕೂ ಧನ್ಯವಾದಗಳು ಎಂದು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಎಲ್ ಇ £ Àಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಕರ್ನಾಟಕದಲ್ಲಿ ಒಂದು ಲಕ್ಷ ಜೀವಂತ ಜನನಗಳಿಗೆ ಸುಮಾರು 100 ತಾಯಂದಿರು ಮರಣಹೊಂದುತ್ತಿದ್ದಾರೆ ಹಾಗೂ ಶಿಶು ಮರಣದ ಪ್ರಮಾಣವು 25 ಇದ್ದು ಇವೆರಡನ್ನು ಕಡಿಮೆ ಮಾಡುವಲ್ಲಿ “ಮಾನ್ಯತಾ” ಕಾರ್ಯಕ್ರಮವು ಖಾಸಗೀ ವೈದ್ಯಿರಿಗೆ ಹಾಗೂ ಶುಶ್ರೂಷಕಿಯರಿಗೆ ತರಬೇತಿ ನೀಡುವಲ್ಲಿ ಸರಕಾರದೊಂದಿಗೆ ಮಹತ್ತರ ಪಾತ್ರವನ್ನು ವಹಿಸುತ್ತಿದೆ ಎಂದು ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ , ಸ್ರ್ತೀರೋಗ ಮತ್ತು ಪ್ರಸೂತಿ ವಿಭಾಗ ಮುಖ್ಯಸ್ಥರಾದ ಡಾ. ರಾಜೇಶ್ವರಿ ಕಡಕೋಳ ಡಾ. ದರಶಿತ ಶೆಟ್ಟಿ, ಡಾ.ಸತೀಶ ದಾಮನಕರ, ಡಾ. ವಿಧ್ಯಾ ಕಾಖಂಡಕಿ, ಡಾ.ಕೆ.ಎನ್ ಹುಲಿಕಟ್ಟಿ, ಡಾ.ಮುಕ್ತಾ, ಡಾ.ರವೀಂದ್ರ ನರಸಾಪೂರ ಮತ್ತು ವಿವಿಧ ಆಸ್ಪತ್ರೆಯಿಂದ ಬಂದ ನರ್ಸಿಂಗ ಸಿಬ್ಬಂಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರವನ್ನು ಡಾ.ವಿಧ್ಯಾ ಕಾಖಂಡಕಿ ನಿರೂಪಿಸಿದರು, ಡಾ.zರ್ಶಿತಶೆಟ್ಟಿ ಸ್ವಾಗತಿಸಿದರು ಡಾ.ಮುಕ್ತಾ ವಂದಿಸಿದರು.