ಮಲೇರಿಯಾವು ಉಷ್ಣ ಹಾಗೂ ಉಪೋಷ್ಣವಲಯದಲ್ಲಿ ಕಂಡು ಬರುತ್ತದೆ. ಇದು ಪ್ರೋಟೋಜೋವ ಸೋಂಕಾಗಿದ್ದು, ಪ್ಲಾಸ್ಮೋಡಿಯಂ ಫಾಲ್ಸಿ ಫಾರಂ, ವೈವಾಕ್ಸ್, ಓವೇಲ್, ಮಲೇರಿಯೆ ಮತ್ತು ನೋಲೆಸಿ ಎಂಬ ಪ್ರಭೇದಗಳಿವೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಸನ್ 2019 ರಲ್ಲಿ ಜಗತ್ತಿನಾದ್ಯಂತ ಅಂದಾಜು 229 ಮಿಲಿಯನ್ ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಇದು ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಹೆಣ್ಣು ಅನಾಫಿಲಿಸ್ ಸೊಳ್ಳೆ ಕಡಿತದಿಂದ ಹರಡುತ್ತದೆ. ಇದು ಸೋಂಕಿತ ಗರ್ಭಿಣಿ ಸ್ತ್ರೀಯಿಂದ ಪ್ಲೆಸೆಂಟಾ ಮೂಲಕ ಮಗುವಿಗೆ, ಸೋಂಕಿತ ಬ್ಲಡ್ ಟ್ರನ್ಸ್‍ಫ್ಯೂಜ್ ಮತ್ತು ಸೋಂಕಿತ ಸೂಜಿಗಳ ಮೂಲಕ ಹರಡುತ್ತದೆ.
ರೋಗಲಕ್ಷಣಗಳು:
ಮಲೇರಿಯಾ ವ್ಯಕ್ತವಾಗುವ ಮೊದಲು ಆಯಾಸ, ಅರುಚಿ, ತಲೆ ನೋವು ಮತ್ತು ಚಳಿ ಕಂಡು ಬರುತ್ತದೆ.
1. ಕೋಲ್ಡ್ಸ್ಟೇಜ್: ರೋಗಿಗೆ ಶರೀರ ನಡುಗು, ಹಲ್ಲುಗಳು ಕಟಗುಡುತ್ತವೆ, ಬ್ಲ್ಯಾಂಕೆಟ್‍ನಿಂದ ಹೊಚ್ಚಿಕೊಳ್ಳುತ್ತಾನೆ ಮತ್ತು ಜ್ವರ ತೀವ್ರತೆ ಹೆಚ್ಚುತ್ತಾ ಹೋಗುತ್ತದೆ. ಈ ಹಂತವು 30 ನಿಮಿಷದಲ್ಲಿ ಕೊನೆಗೊಳ್ಳುತ್ತದೆ.
2. ಹಾಟ್ಸ್ಟೇಜ್: ನಡುಕ ಕಡಿಮೆಯಾಗಿ ಉಷ್ಣತೆಯ ಅನುಭವವಾಗಿ ಬ್ಲ್ಯಾಂಕೆಟ್ ತೆಗೆಯುತ್ತಾನೆ. ಮುಖ ಕೆಂಪೇರುತ್ತದೆ, ತಲೆ ನೋವು, ವಾಂತಿ, ಶುಷ್ಕತೆ ಮತ್ತು ಚರ್ಮದ ಉರಿತ. ಶರೀರದ ಉಷ್ಣತೆಯು 400ಅ ಕ್ಕಿಂತಲೂ ಅಧಿಕವಾಗುತ್ತದೆ. ಈ ಹಂತವು 3-4 ಗಂಟೆಗಳಲ್ಲಿ ಕೊನೆಗೊಳ್ಳುತ್ತದೆ.
3. ಸ್ವೆಟಿಂಗ್ಸ್ಟೇಜ್: ಅತಿಯಾಗಿ ಬೆವರು ಉಂಟಾಗಿ ದೇಹದ ಉಷ್ಣತೆ ತಗ್ಗಿ ನಿರಾಳವೆನಿಸುತ್ತದೆ.
ಪ್ಲಾ. ಮಲೇರಿಯಾ: ಇಲ್ಲಿ ಪ್ರತಿ ನಾಲ್ಕು ದಿನಕ್ಕೊಮ್ಮೆ ಜ್ವರ ಕಾಣಿಸಿಕೊಳ್ಳುತ್ತದೆ. ಇದು ಚಿಕ್ಕಮಕ್ಕಳಲ್ಲಿ ನೆಪ್ರೋಟಿಕ್ ಸಿಂಡ್ರೋಮ್ ಹಾಗೂ ನೆಪ್ರೈಟಿಸ್ ಉತ್ಪತ್ತಿಮಾಡುತ್ತದೆ.
ಪ್ಲಾ. ವೈವಕ್ಸ್: ಪ್ರತಿ ಮೂರು ದಿನಕ್ಕೊಮ್ಮೆ ಜ್ವರ (ಖಿeಡಿಣiಚಿಟಿ ಜಿeveಡಿ) ಕಾಣಿಸಿಕೊಳ್ಳುತ್ತದೆ.
ಪ್ಲಾ. ಫಾಲ್ಸಿಫಾರಂ: ಇಲ್ಲಿ ಪ್ರತಿದಿನ ಜ್ವರ ಅಥವಾ ಪ್ರತಿ ಮೂರು ದಿನಗಳ ನಂತರ ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವು ಸಲ ಜ್ವರಕ್ಕೆ ಯಾವ ನಿರ್ದಿಷ್ಟ ರೂಪವಿಲ್ಲ. ಇದು ಅತಿ ಅಪಾಯವನ್ನುಂಟು ಮಾಡುವುದಾಗಿದೆ. ಅಸ್ವಸ್ಥತೆ, ತಲೆನೋವು, ವಾಂತಿ, ಕೆಮ್ಮು, ಭೇದಿ, ಕಾಮಾಲೆ, ಲಿವರ್ ಕಾರ್ಯದಲ್ಲಿ ವ್ಯತ್ಯಾಸ, ಲಿವರ್ ವೃದ್ಧಿ, ಸ್ಪಿಲ್ನ್ ವೃದ್ಧಿ ಮತ್ತು ರಕ್ತಹೀನತೆ ಕಂಡು ಬರುತ್ತದೆ.
ಫಾಲ್ಸಿಫಾರಂಮಲೇರಿಯಾದಉಪದ್ರವಗಳು:
ಕೋಮಾ (ಮೆದುಳು ಮಲೇರಿಯಾ), ತೀವ್ರಜ್ವರ, ಅಪಸ್ಮಾರ, ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುವುದು, ರಕ್ತ ಹೀನತೆ, ಶ್ವಾಸಕೋಶಗಳ ಊತ, ಕಿಡ್ನಿ ಕಾರ್ಯ ವೈಫಲ್ಯತೆ, ರಕ್ತಸ್ರಾವ, ಮೆಟಬಾಲಿಕ್ ಎಸಿಡೋಸಿಸ್, ಶಾಕ್ (ಅಲ್ಗಿಡ್ ಮಲೇರಿಯಾ), ಅಸ್ಪಿರೇಶನ್ ನ್ಯೂಮೋನಿಯಾ, ಹೈಪರ್ ಪ್ಯಾರಾಸೈಟೆಮಿಯಾ, ಬ್ಲ್ಯಾಕ್ ವಾಟರ್ ಫೀವರ್ ಮತ್ತು ಗರ್ಭಿಣಿ ಸ್ತ್ರೀಯರಲ್ಲಿ ಗರ್ಭಪಾತ.
ಪತ್ತೆಹೆಚ್ಚುವಿಕೆ:
ಥಿಕ್ ಹಾಗೂ ಥಿನ್ ಸ್ಮಿಯರ್ , ಎಂಟಿಜೆನ್ , ಐಸಿಆರ್ ಮತ್ತು ಕ್ಯೂಬಿಸಿ ಪರೀಕ್ಷೆಗಳನ್ನು ಮಾಡಿಸಬೇಕು.ಟೆಸ್ಟ್.
ತಡೆಗಟ್ಟುವಿಕೆ:
ಕೀಟನಾಶಕ ಸಿಂಪಡಿಸಿದ ಸೊಳ್ಳೆ ಪರದೆಯನ್ನು ಬಳಸಬೇಕು. ಮನೆಯ ಗೋಡೆಗಳಿಗೆ ಹಾಗೂ ಮನೆಯ ಸುತ್ತಮುತ್ತಲು ಡಿಡಿಟಿ ಯಂತಹ ಕೀಟನಾಶಕವನ್ನು ಸಿಂಪಡಿಸಬೇಕು. ಮನೆಯ ಕಿಟಕಿ ಮತ್ತು ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಬೇಕು. ಮನೆಯ ಸುತ್ತಮುತ್ತಲು ಹಾಗೂ ಚÀರಂಡಿಯಲ್ಲಿ ನೀರು ನಿಲ್ಲದಂತೆ ಮಾಡಬೇಕು. ಉದ್ದನೆಯ ಸ್ಲೀವ್ಸ್ ಹಾಗೂ ಟ್ರೂಜರ್ಸ್ ಧರಿಸಬೇಕು. ಮಲೇರಿಯಾ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ವೈದ್ಯರನ್ನು ಭೇಟಿಮಾಡಿ ಕಿಮೋ ಪ್ರೊಪೈಲಕ್ಸಿಸ್ ಚಿಕಿತ್ಸೆ ತೆಗೆದುಕೊಳ್ಳಬೇಕು.
ಚಿಕಿತ್ಸೆ: ಜ್ವರ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು.
ಮಲೇರಿಯಾ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 25 ರಂದು ‘ವಿಶ್ವ ಮಲೇರಿಯಾ ದಿನಾಚರಣೆ’ ಆಚರಿಸಲಾಗುತ್ತದೆ.
ಡಾ.ಎಸ್.ಎಸ್.ದೇವಲಾಪೂರ ಎಂ.ಡಿ.
ಬೈಲಹೊಂಗಲ. ಜಿಲ್ಲೆ: ಬೆಳಗಾವಿ
ಮೊ.9535568309