2 ವರ್ಷದ ಬಾಲಕನ ಹೊಟ್ಟೆಯಲ್ಲಿದ್ದವು 12 ಆಯಸ್ಕಾಂತ ಬಟನಗಳು !

ನೆರೆಯ ಗೋವಾ ರಾಜ್ಯದ 2 ವರ್ಷದ ಮಗುವೊಂದು ತೀವ್ರ ಹೊಟ್ಟೆನೋವು ಹಾಗೂ ಕಪ್ಪಾದ ಬಣ್ಣದ ಮಲದೊಂದಿಗೆ ತೊಂದರೆಯನ್ನು ಅನುಭವಿಸುತ್ತ ಕೆಎಲ್ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಆಗಮಿಸಿತ್ತು. ಇದಕ್ಕೂ ಮುಂಚೆ ಕೊರೊನಾ ವೈರಸ್ ಕೋವಿಡ್ -19 ಸಂದರ್ಭದಲ್ಲಿ ದೇಶಾದ್ಯಂತ ಲಾಕಡೌನ ಪರಿಸ್ಥಿಯಲ್ಲಿ ಬಾಲಕನ ಚಿಕಿತ್ಸೆಗಾಗಿ ಪಾಲಕರು ಸುತ್ತಾಡಿ ಸುಸ್ತಾಗಿದ್ದರು. ಕೊನೆಗೆ ಗೋವಾದ ಜಿಲ್ಲಾಡಳಿತ ಅನುಮತಿ ಪಡೆದು ಬೆಳಗಾವಿಗೆ ಆಗಮಿಸಿದ್ದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಲಕನನ್ನು ಎಕ್ಸರೇ ತೆಗೆದು ನೋಡಿದಾಗ ಹೊಟ್ಟೆಯಲ್ಲಿ ಯಾವುದೋ ವಸ್ತುಗಳು ಗೋಚರಿಸಿದವು. ತಡಮಾಡದೇ ಚಿಕ್ಕಮಕ್ಕಳ ತಜ್ಞಶಸ್ತ್ರಚಿಕಿತ್ಸಕರಾದ ಡಾ. ಸಂತೋಷ ಕುರಬೆಟ್ ಅವರು ಶಸ್ತ್ರಚಿಕಿತ್ಸೆ ನೆರವೇರಿಸಿ ಬಾಲಕ ನುಂಗಿದ್ದ 12 ಆಯಸ್ಕಾಂತೀಯ ಬಟನ್ ಹೊರತೆಗೆದು ಜೀವ ಉಳಿಸುವಲ್ಲಿ ಯಶಸ್ವಿಯಾದರು.

ತೀವ್ರ ತೊಂದರೆ ಅನುಭವಿಸುತ್ತಿದ್ದ ಬಾಲಕ ಕ್ಷಣಕ್ಷಣದಲ್ಲಿ ಆರೋಗ್ಯ ಗಂಭೀರವಾಗತೊಡಗಿತು. ಇದನ್ನರಿತ ಡಾ. ಸಂತೋಷ ಅವರು ಮದ್ಯರಾತ್ರಿ ಶಸ್ತ್ರಿಕಿತ್ಸೆಗೆ ಅಣಿಯಾಗಿ, ಲ್ಯಾಪ್ರೊಟಾಮಿ ಮೂಲಕ ಶಸ್ತ್ರಚಿಕಿತ್ಸೆ ಮಾಡಲು ಹೊರಟರೆ ಮತ್ತೊಂದು ಆಘಾತ ಎದುರಾಯಿತು. ಹೊಟ್ಟೆಯ ಸಣ್ಣ ಕರುಳಿನಲ್ಲಿ ಸುಮಾರು 5 ರಂದ್ರಗಳು ಕಂಡುಬಂದವು. ಒಂದೊಂದು ಆಯಸ್ಕಾಂತವು ಬೇರೆ ಬೇರೆ ಜಾಗದಲ್ಲಿದ್ದರೂ ಕೂಡ ಅವುಗಳು ಒಂದಕ್ಕೊಂದು ಅಂಟಿಕೊಂಡು ಹೊಟ್ಟೆಯ ವಿವಿಧ ಭಾಗಗಳಲ್ಲಿ ರಂದ್ರಗಳನ್ನು ಮಾಡಿದ್ದವು. ಸುಮಾರು ಆಯಸ್ಕಾಂತಗಳನ್ನು ಹೊರತೆಗೆಯುವದು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರವಾಗಿತ್ತು. ಸುಮಾರು ಎರಡುವರೆ ಗಂಟೆಗೂ ಅಧಿಕ ಸಮಯದವರೆಗೆ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಅವುಗಳನ್ನು ಒಂದೊಂದಾಗಿ ಹೊಟ್ಟೆಯಿಂದ ಹೊರತೆಗೆಯಲಾಯಿತು. ಅಲ್ಲದೇ 3 ಕಡೆ ಹಾಳದ ಕರಳನ್ನು ಮರುಜೋಡಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ 5ನೇ ದಿನಕ್ಕೆ ಹೊರಗಿನಿಂದ ಆಹಾರ ನೀಡಲು ಪ್ರಾರಂಭಿಸಿದರೆ ಕೇವಲ 7 ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಯಿತು.

12 Magnets removed from intestine rotated Child after Surgery

ಮೊದಲು ಭಾರತದಲ್ಲಿ 4-6 ಆಯಸ್ಕಾಂತದ ಆಟದ ಬಟನ್ಗಳನ್ನು ನುಂಗಿದ ವರದಿಯಾಗಿತ್ತು. ಆದರೆ ಪ್ರಥಮಬಾರಿಗೆ 12 ಆಯಸ್ಕಾಂತದ ಆಟದ ಬಟನಗಳನ್ನು ನುಂಗಿದ ಪ್ರಕರಣ ಇದೇ ಮೊದಲು. ಅಲ್ಲದೇ ಎಲ್ಲ ಬಟನಗಳನ್ನು ಸುರಕ್ಷಿತವಾಗಿ ಹೊರತೆಗೆಯುವದಲ್ಲದೇ ಹಾಳಾದ ಕರಳನ್ನು ಜೋಡಿಸಿ ಮಗುವನ್ನು ಪ್ರಾಣಾಪಾಯದಿಂದ ಪಾರುಮಾಡುವಲ್ಲಿ ಡಾ. ಸಂತೋಷ ಕುರಬೆಟ ಅವರು ಯಶಸ್ವಿಯಾಗಿದ್ದಾರೆ.

ಬಾಲಕ ಯಾವ ವಸ್ತುವನ್ನು ನುಂಗಿದ್ದಾನೆ ಎನ್ನುವ ಕುರಿತು ಪಾಲಕರಿಗೆ ಅರಿವು ಇರಲಿಲ್ಲ. ಆದರೆ ಬಾಲಕ ಇಂಗ್ಲೀಷ ಅಕ್ಷರ ಮಾಲೆಯ 12 ಆಯಸ್ಕಾಂತಗಳನ್ನು ನುಂಗಿದ್ದ. ನಂತರ ಆಸ್ಪತ್ರೆಗೆ ಮರುಭೇಟಿ ನೀಡಿದಾಗ ಪಾಲಕರಿಗೆ ವೈದ್ಯರು ನಿಮ್ಮ ಮಗು ನುಂಗಿದ ವಸ್ತುಗಳ ಕುರಿತು ವಿವರಿಸಿ, ಮಕ್ಕಳು ಆಟವಾಡುವಾಗ ಪಾಲಕರು ನಿರ್ಲಕ್ಷವಹಿಸದೇ ಅವರತ್ತ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಒಬ್ಬೊಬ್ಬರನ್ನು ಬಿಡದೇ ಅವರೊಂದಿಗೆ ಇರಬೇಕು. ಚಿಕ್ಕಮಕ್ಕಳಿಗೆ ಆಹಾರ ಅಥವಾ ವಸ್ತುಗಳ ಕುರಿತು ಸರಿಯಾದ ಮಾಹಿತಿ ಇರುವುದಿಲ್ಲ. ಆದ್ದರಿಂದ ಪಾಲಕರು ಎಚ್ಚರ ವಹಿಸಬೇಕೆಂದು ಡಾ. ಸಂತೋಷ ಕುರಬೆಟ ಅವರು ಸಲಹೆ ನೀಡುತ್ತಾರೆ. ಬಾಲಕನ ಪಾಲಕರು ವೈದ್ಯರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಲಾಕಡೌನ ಅಂತ ಪರಿಸ್ಥಿತಯಲ್ಲಿ ತುರ್ತು ಚಿಕಿತ್ಸೆ ಲಭಿಸುವದು ಅತ್ಯಂತ ಕಠಿಣವಾಗಿರುತ್ತದೆ. ಆದರೆ ಇದೇ ಸಂದರ್ಭದÀಲ್ಲಿ ಸುಮಾರು 7 ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ನೆರವೇರಿ ಮಕ್ಕಳನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲ್ಲಿ ಯಶಸ್ವಿಯಾಗಿದ್ದಾರೆ.

ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಸಂತೋಷ ಕುರಬೆಟ ಹಾಗೂ ಅವರ ತಂಡವನ್ನು ಕೆಎಲ್ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. ಜಾಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ ಎಸ್ ಮಹಾಂತಶೆಟ್ಟಿ ಅವರು ಅಭಿನಂದಿಸಿದ್ದಾರೆ.

Popular Doctors

Related Articles