ವಿಶ್ವ ಲೂಪಸ್ ದಿನಾಚರಣೆ

belagavi

ಬಹುವಿಧ ಖಾಯಿಲೆಗಳಿಗೆ ಕಾರಣವಾಗುವ ಲುಪಸ್ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಮೇ 10 ರಂದು ವಿಶ್ವ ಲೂಪಸ್ ದಿನವನ್ನು ಆಚರಿಸುತ್ತಿದೆ.
ಮುಖ್ಯವಾಗಿ ಯುವತಿಯರ ಮೇಲೆ ಪರಿಣಾಮ ಬೀರುವ ಲೂಪಸ್ ರೋಗಕ್ಕೆ ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಮಕ್ಕಳೂ ಸಹ ಈ ರೋಗಕ್ಕೆ ಬಲಿಯಾಗುತ್ತಾರೆ. ದೇಹದ ರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ. ಇದು ಹಲವು ವಿಧಗಳಲ್ಲಿ ಕಾಣ ಸಿಕೊಳ್ಳುತ್ತದೆ. ಅನೇಕ ರೀತಿಯ ಗುಣಲಕ್ಷಣಗಳು ಕಂಡುಬರುವದರಿAದ ಇದನ್ನು ಕಂಡುಹಿಡಿಯಲು ಕಷ್ಟದಾಯಕವಾಗುತ್ತದೆ. ರೋಗವನ್ನು ಕಂಡುಹಿಡಿಯಲು ವಾರಗಳಿಂದ ತಿಂಗಳುಗಳನ್ನು ತೆಗೆದುಕೊಳ್ಳಬಹುದು. ರೋಗಿಯು ಕೀಲು ನೋವು, ಮುಖದ ಮೇಲೆ ಗುಳ್ಳೆಯಂತÀಹ ಸೌಮ್ಯ ಲಕ್ಷಣಗಳು ಕಂಡುಬAದು, ಮೂತ್ರಪಿಂಡ ವೈಫಲ್ಯ, ಪಾರ್ಶ್ವವಾಯು ಸೇರಿದಂತೆ ಮುಂತಾದ ಗಂಭೀರ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ರೋಗನಿರ್ಣಯ ಮಾಡುವುದು ಅತ್ಯಂತ ಕಠಿಣ ಅಲ್ಲದೇ ನಿರ್ಧರಿತವಾದ ಚಿಕಿತ್ಸೆ ನೀಡಿ ಅಂಗಾಗಳು ಹಾಳಾಗುವದನ್ನು ತಪ್ಪಿಸುವದು ಬಹಳ ಮುಖ್ಯ.


ಲಕ್ಷಣಗಳು ಒಂದೇ ಬಾರಿಗೆ ಕಂಡುಬರುವುದಿಲ್ಲ. ಆದ್ದರಿಂದ ರೋಗನಿರ್ಣಯಕ್ಕೆ ಪೂರ್ವ ರೋಗಲಕ್ಷಣಗಳನ್ನು ಪರಸ್ಪರ ಸಂಬAಧಿಸುವುದು ಬಹಳ ಮುಖ್ಯ. ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ರಕ್ತ ಪರೀಕ್ಷಿಸಿದಾಗ ಈ ರೋಗವು ಕಂಡುಬAದರೂ ಸಹ ಎಲ್ಲರಲ್ಲಿಯೂ ಈ ರೋಗ ಇದೆ ಎಂದು ನಿರ್ಣಯಿಸಲು ಸಾಧ್ಯವಿಲ್ಲ. ಆದರೆ ಕೆಲವು ವಿಶೇಷ ರಕ್ತ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಲುಪಸ ರೋಗಪತ್ತೆ ಮಾಡಲು ಸರಿಯಾದ ಲಕ್ಷಣಗಳು, ವಿಶೇಷ ಪರೀಕ್ಷೆಗಳ ಅಗತ್ಯವಿದೆ.
ಸೂರ್ಯನ ಕಿರಣಗಳಿಂದ ರಕ್ಷಣೆ, ನಿರಂತರ ವ್ಯಾಯಾಮ, ಆರೋಗ್ಯಯುತ ಆಹಾರ ಸೇವನೆ, ಹೊಸ ವೈದ್ಯಕೀಯ ಚಿಕಿತ್ಸೆ ವಿಶೇಷವಾಗಿ ಜೈವಿಕ ಔಷಧಗಳಿಂದ ಸುಧಾರಿತ ಫಲಿತಾಂಶ ಪಡೆಯಬಹುದು. ಕಡಿಮೆ ಪ್ರಮಾಣದ ಸ್ಟೀರಾಯ್ಡ್ಗ ಮಿಶ್ರಿತ ಔಷಧಿಗಳಿಂದ ಕಡಿಮೆ ಅವಧಿಯಲ್ಲಿ ಶೀಘ್ರ ಚೇತರಿಕೆ ಕಾಣಬಹುದು. ಆದ್ದರಿಂದ ಭಯಪಡುವ ಅಗತ್ಯವಿಲ್ಲ. ನಮ್ಮ ಸುಮುತ್ತಲಿನ ನೈರ್ಮಲ್ಯ ಬಹುಮುಖ್ಯವಾಗಿರುತ್ತದೆ.
ಸೋಂಕು ಚಿಕಿತ್ಸೆಯನ್ನು ಸಂಕೀರ್ಣಗೊಳಿಸಬಹುದು ಮತ್ತು ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು. ಲುಪಸನಿಂದ ಬಳಲುತ್ತಿದ್ದರೂ ಕೂಡ ವೈದ್ಯರ ಮೇಲ್ವಿಚಾರಣೆಯಲ್ಲಿ ಗರ್ಭಧರಿಸಬಹುದು ಅಲ್ಲದೇ ಸುರಕ್ಷಿತ ಹೆರಿಗೆ ಸಾಧ್ಯ. ಅದಕ್ಕಾಗಿಯೇ ಗರ್ಭಾವಸ್ಥೆಯಲ್ಲಿಯೂ ಕೂಡ ಔಷಧಿಗಳನ್ನು ಸೇವಿಸುವಂತ ವ್ಯವಸ್ಥೆ ಕಲ್ಪಿಸಲಾಗಿದೆ. ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ಕೆಲವೊಂದು ಬಾರಿ ರೋಗವು ಉಲ್ಬಣಗೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಆಗ ಕೆಲವು ಮಾರ್ಪಾಡುಗಳನ್ನು ಮಾಡಿ ಚಿಕಿತ್ಸೆ ಮುಂದುವರೆಸಬೇಕಾಗುತ್ತದೆ. ದೀರ್ಘಕಾಲೀನ ಚಿಕಿತ್ಸೆಯಿಂದ ರೋಗಿಯ ದೇಹವು ಬಹುವಿಧವಾದ ಆರೋಗ್ಯ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಆದ್ದರಿಂದ ಈ ರೋಗದ ವಿರುದ್ದ ಹೋರಾಡಲು ಭಾವನಾತ್ಮಕವಾಗಿ ಕುಗ್ಗಿ ಹೋಗುವ ರೋಗಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ನಿರಂತರವಾಗಿ ನಾವು ಕೈಜೋಡಿಸಬೇಕಾಗುತ್ತದೆ.
ಈ ರೋಗವು ನಮ್ಮನ್ನು ಗೊಂದಲಕ್ಕೀಡು ಮಾಡುವದಲ್ಲದೇ ಅನುಮಾನದಿಂದ ನೋಡುವಂತೆ ಮಾಡುತ್ತದೆ. ಯುವತಿಯರಲ್ಲಿ ಕೀಲುನೋವು ಕಂಡುಬAದರೆ ಅಥವಾ ಬೇರೆ ಯಾವುದೇ ರೋಗಲಕ್ಷಣಗಳು ಕಂಡುಬರದಿದ್ದರೂ ಕೂಡ ಲುಪಸ್ ಇರುವ ಸಾಧ್ಯತೆ ಇರುತ್ತದೆ. ಇದಕ್ಕೆ ಚಿಕಿತ್ಸೆ ದಿರ್ಘಕಾಲದ್ದಾಗಿದ್ದು, ಔಷಧಿಗಳ ಸೇವನೆ ಮುಖ್ಯವಾಗಿರುತ್ತದೆ.

LEAVE A REPLY

Please enter your comment!
Please enter your name here