ಕಂಠದಲ್ಲಿ ಕೃಷ್ಣ…..! ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಕೆಎಲ್ಇ ವೈದ್ಯರು

ಇದೇನಿದು ಕಂಠದಲ್ಲಿ ಕೃಷ್ಣ ಎಂದು ಆಶ್ಚರ್ಯವಾಗುತ್ತದೆ ಅಲ್ಲವೆ….ನಿಜ ಕಂಠದಿಂದ ಕೃಷ್ಣನನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದ ಘಟನೆ ನಡೆದಿದೆ.
45ವರ್ಷದ ವ್ಯಕ್ತಿಯೊಬ್ಬ ದೇವರ ತೀರ್ಥ ಸೇವನೆ ಮಾಡುವ ಅಭ್ಯಾಸ ಹೊಂದಿದ್ದ. ಎಂದಿನಂತೆ ತೀರ್ಥ ಸೇವನೆ ಮಾಡುವಾಗ ಗಮನಿಸದೇ ಲೋಹದ ಕೃಷ್ಣನನ್ನು ನುಂಗಿದ್ದಾನೆ. ಇದರಿಂದ ಆತನಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿ ಸ್ಥಳಿಯ ವೈದ್ಯರನ್ನು ಚಿಕಿತ್ಸೆಗಾಗಿ ಸಂಪರ್ಕಿಸಿದ್ದಾನೆ. ಆಗ ಸ್ಥಳಿಯ ವೈದ್ಯರು ಎಕ್ಸರೇ ಮಾಡಿಸಲು ಸೂಚಿಸಿದ್ದಾರೆ. ಎಕ್ಸರೇ ರಿಪೋರ್ಟ್ ನಲ್ಲಿ ಕೃಷ್ಣ ಇರುವ ವಿಗ್ರಹ ಗಂಟಲಿನಲ್ಲಿ ಇರುವುದು ಸೆರೆಯಾಗಿದೆ.

ಇದನ್ನರಿತು ಹೆಚ್ಚಿನ ಚಿಕಿತ್ಸೆ ಪಡೆಯಲು ಬೆಳಗಾವಿಯ ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ದಾಖಲಾಗಿದ್ದಾನೆ. ಕೃಷ್ಣನ ಮೂರ್ತಿಯ ಎಡಗಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿದೆ ಎಂಬುವದನ್ನು ಎಂಡೋಸ್ಕೋಪ್ ಮುಖಾಂತರ ದೃಢಪಡಿಸಿಕೊಂಡು ಇಎನ್ ಟಿ ವಿಭಾಗದ ವೈದ್ಯರು ಯಶಸ್ಬಿ ಶಸ್ತ್ರ ಚಿಕಿತ್ಸೆ ಮಾಡಿ ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ವಿಗ್ರಹವನ್ನು ಹೊರ ತೆಗೆದಿದ್ದಾರೆ. ಈ ಶಸ್ತ್ರ ಚಿಕಿತ್ಸೆ ವೈದ್ಯರಿಗೆ ಸವಾಲಾಗಿತ್ತು

WhatsApp Image 2022 06 23 at 4.07.53 PM
WhatsApp Image 2022 06 23 at 4.07.55 PM

ಇಎನ್ ಟಿ ವಿಭಾದ ವೈದ್ಯರಾದ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ,ಅರವಳಿಕೆ(Anaesthetist) ವೈದ್ಯ ಡಾ. ಚೈತನ್ಯ ಕಾಮತ್ ಸೇರಿದಂತೆ ಇತರ ಶುಶ್ರೂಷೆಯರ ಸಹಾಯದಿಂದ ರೋಗಿಯ ಗಂಟಲಿನಲ್ಲಿರುವ ಕೃಷ್ಣನ ವಿಗ್ರಹವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದು ಯಶಸ್ವಿಯಾಗಿದ್ದಾರೆ…

Popular Doctors

Related Articles