ಕೆಎಲ್‍ಇ ಆಯುರ್ವೇದಿಕ್ ಯುಡಿಎಮ್ ದಂತ ಮಂಜನ

(ಸುವಾಸನೆಯುಕ್ತ ಆಯುರ್ವೇದಿಕ್ ದಂತ ಮಂಜನ)

ಆಹಾರ ಸೇವನೆಗೂ ಸಹಾಯಕ, ಉತ್ತಮ ಆರೋಗ್ಯಕ್ಕೆ, ಮುಖದ ಸೌಂದರ್ಯ ಮತ್ತು ಸ್ಪಷ್ಟವಾಗಿ ಉಚ್ಚರಿಸಲು ಬೇಕು ಆರೋಗ್ಯಯುತ ದಂತಗಳು. ದೇಶದಲ್ಲಿ ಶೇ. 90 ಕ್ಕಿಂತ ಅಧಿಕ ಜನರು ಹಲ್ಲುಗಳ ತೊಂದರೆಯಿಂದ ಬಳಲುತ್ತಿದ್ದಾರೆ. ಅಜ್ಞಾನ ಹಾಗೂ ನಿಷ್ಕಾಳಜಿಯಿಂದ ಹಲ್ಲುಗಳನ್ನು ಅಕಾಲಿಕವಾಗಿ ಕಳೆದುಕೊಳ್ಳತ್ತಿದ್ದಾರೆ. ಆದ್ದರಿಂದ ಹಲ್ಲುಗಳ ರಕ್ಷಣೆಗೆ ಕಾಳಜಿವಹಿಸಿ. ಮುಖದ ಸೌಂದರ್ಯದಲ್ಲಿ ಬಾಯಿಯ ದಂತ ಪಂಕ್ತಿಯು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಖದ ಮಂದಹಾಸ ವ್ಯಕ್ತಿತ್ವದ ಪ್ರತಿಬಿಂಬವಾದ ದಂತಕಾಂತಿಯನ್ನು ಕಾಪಾಡಿಕೊಳ್ಳಲು ಬೆಳಗಾವಿಯ ಕೆಎಲ್‍ಇ ಸಂಸ್ಥೆಯ ಆಯುರ್ವೇದಿಕ ಔಷಧಾಲಯವು ಅತ್ಯಂತ ಪರಿಣಾಮಕಾರಿಯಾದ ನಾವಿಣ್ಯಪೂರ್ಣ ದಂತ ಮಂಜನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

udm

ಭಾರತೀಯ ಸಂಸ್ಕøತಿಯ ಪರಂಪರೆಯನ್ನು ಸದಾ ಜನರಿಗೆ ಪರಿಚಯಿಸಲು ಮುಂದಡಿ ಇಡುವ ಕೆಎಲ್‍ಇ ಆಯುರ್ವೇದಿಕ ಔಷಾಧಾಲಯವು 1938ರಲ್ಲಿ ಸ್ಥಾಪನೆಯಾಗಿದ್ದು, ನಾಗರಿಕರ ಆರೋಗ್ಯ ರಕ್ಷಣೆ ಮತ್ತು ಆರೋಗ್ಯಯುತ ಜೀವನಕ್ಕೆ ಅವಶ್ಯವಿರುವ ಆಯುರ್ವೇದಿಕ ಉತ್ಪನ್ನಗಳನ್ನು ತಯಾರಿಸುತ್ತಿದೆ. ಅದರಲ್ಲಿ ಯುಡಿಎಂ ದಂತ ಮಂಜನ ಕೂಡ ಒಂದು. ಬಾಯಿಯ ಆರೊಗ್ಯವನ್ನು ಕಾಪಾಡುವಲ್ಲಿ ಈ ದಂತ ಮಂಜನ ಅತೀ ಪರಿಣಾಮಕಾರಿಯಾಗಿದ್ದು, ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಾದ ಈ ಮಂಜನ ಅನ್ನು ಅಬಾಲ ವೃದ್ದರೆನ್ನದೆ ಎಲ್ಲರೂ ಉಪಯೋಗಿಸಬಹುದು. ದೈನಂದಿನ ಉಪಯೋಗದಿಂದ ಹಲ್ಲು ನೋವು, ಬಾಯಿಯಲ್ಲಿ ಹುಣ್ಣು, ಅನೊರೆಕ್ಸಿಯಾ, ವಸಡಿನಲ್ಲಿ ರಕ್ತ ಸೋರಿಕೆ, ಹಲ್ಲಿನ ಸಂವೇದನಾಶೀಲತೆ, ಬಾಯಿಯ ದುರ್ವಾಸನೆ, ವಸಡಿನಲ್ಲಿ ಉರಿ, ಹಲ್ಲು ಹುಳುಕುಗಳಿಂದ ದೂರವಿರಿಸಿ, ಸದಾಕಾಲ ಶುದ್ದ ಹಾಗೂ ಬಿಳಿಯಾಗಿರಿಸುತ್ತದೆ.

ಪರಿಣಾಮಕಾರಿಯಾದ ಇದು ಅಮೂಲ್ಯ ಗಿಡಮೂಲಿಕೆಗಳಾದ ನಿಂಬಾ, ಹರಿತಕಿ, ಮಲಕಿ, ಬಿಬಿತಕಿ ಹಾಗು ಇನ್ನಿತರೆ ಅಮೂಲ್ಯ ಔಷಧಿಯುಕ್ತ ಸಸ್ಯ, ಹರಿತಕಿ, ಬಿಬಿತಕಿ, ಆಮಲಕಿ, ಬಬೂಲ್ ತ್ವಕ ಚೂರ್ಣ, ಬಕುಲ ತ್ವಕ ಚೂರ್ಣ, ಕಾದಿರ ತ್ವಕ ಚೂರ್ಣ, ನಿಂಬ ತ್ವಕ ಚೂರ್ಣ, ಸೈಂಧವ ಲವಣ, ಕರ್ಪೂರ, ಅರ್ಕ (ಅರಕ) ಹಾಗೂ ಅದರ ಉಪಕ್ರಮಗಳನ್ನು ಸೇರಿಸಿ ತಯಾರಿಸಲಾಗಿದೆ.

ಉಪಯೋಗಿಸುವ ಬಗೆ

ದಂತ ಮಂಜನವನ್ನು ಇತರೆ ಟೂತಪೇಸ್ಟಗಳಂತೆ ಬಳಸಬಹುದಾಗಿದೆ. ಸರಳವಾಗಿ ಬಾಯಲ್ಲಿ ಹಾಕಿ ಒದ್ದೆಯಾದ ಬ್ರಷ್‍ನಿಂದ ದೈನಂದಿನ 45 ಡಿಗ್ರಿಯಲ್ಲಿ ಬ್ರಶ್‍ನಿಂದ ಉಜ್ಜಬೇಕು. ಪ್ರತಿದಿನ ಎರಡು ಬಾರಿ ಈ ಮಂಜನದಿಂದ ಬ್ರಶ್ ಮಾಡಬೇಕು. ವಸಡಿನ ಆರೋಗ್ಯಕ್ಕಾಗಿ ತೋರುಬೆರಳು ಉಪಯೋಗಿಸಿ ವಸಡಿನ ಮೇಲೆ ಮಾಲಿಶ ಮಾಡಬಹುದು. ಬ್ರಷ್ ಮಾಡಿದ ನಂತರ ಬಾಯಿಯನ್ನು ತಣ್ಣನೆ ನೀರಿನಿಂದ ಮುಕ್ಕಳಿಸಬೇಕು.

ದಂತ ಮಂಜನವು ಬೆಳಗಾವಿಯ ಶಹಪೂರದಲ್ಲಿರುವ ಕೆಎಲ್‍ಇ ಸಂಸ್ಥೆಯ ಬಿಎಮ್ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲ್ಲಿ ದೊರೆಯುತ್ತದೆ. ಅಧಿಕ ಮಾಹಿಗಾಗಿ ಮೊ. 9886088826 ಇಲ್ಲಿಗೆ ಸಂಪರ್ಕಿಸುವಂತೆ ಕೋರಿಕೆ.

Popular Doctors

Related Articles