ಅತ್ಯಂತ ಕ್ಲಿಷ್ಟಕರ ಮತ್ತು ಸಂಕೀರ್ಣತೆಯಿಂದ ಕೂಡಿದ ವಿರಳವಾದ ಮೊಡಿಫೈಡ ರಾಸ್ ಪ್ರಕ್ರಿಯೆಯ

ಅತ್ಯಂತ ಕ್ಲಿಷ್ಟಕರ ಮತ್ತು ಸಂಕೀರ್ಣತೆಯಿಂದ ಕೂಡಿದ ವಿರಳವಾದ ಮೊಡಿಫೈಡ ರಾಸ್ ಪ್ರಕ್ರಿಯೆಯ ಮೂಲಕ ಪಲ್ಮನರಿ ವಾಲ್ವ್ (ಕವಾಟ) ಅನ್ನು ತೆಗೆದು ಹಾಳಾದ ಅರೋಟಿಕ್ ವಾಲ್ವ ಜಾಗದಲ್ಲಿ ಕೂರಿಸಿ, ಡೆಕ್ರಾನ್ ಗ್ರಾಫ್ಟ ಎನಫೊರ್ಸ್ ಮೂಲಕ ಪಲ್ಮನರಿ ವಾಲ್ವನ್ನು ಜೈವಿಕ ತಂತ್ರಜ್ಞಾನದ ಮೂಲಕ ಡಾ ಪ್ರವೀಣ ತಂಬ್ರಳ್ಳಿಮಠ ಅವರು ತಯಾರಿಸಿ ಕಸಿ ಮಾಡಲಾಯಿತು. ವಾಲ್ವಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಮರುಜೋಡಿಸುವಲ್ಲಿ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತ್ರಚಿಕಿತ್ಸಾ ವೈದ್ಯರು ಯಶಸ್ವಿಯಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ತೀವ್ರತರವಾದ ಎದೆಬಿಗಿತ, ಉಸಿರಾಟದ ತೊಂದರೆ, ಆಯಾಸ, ನೆಗಡಿ ಮತ್ತು ಜ್ವರದಿಂದ ಬಳಲುತ್ತ ತೀವ್ರ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದ 10 ವರ್ಷದ ಬಾಲಕನಿಗೆ ಪರೀಕ್ಷಿಸಲಾಗಿ, ಹೃದಯದಲ್ಲಿ ತೊಂದರೆಯಿದ್ದು, ಅರೋಟಿಕ್ ವಾಲ್ವನಲ್ಲಿ ಸೋರಿಕೆಯಾಗುತ್ತ ಹೃದಯವು ದೊಡ್ಡದಾಗಿ ಬೆಳೆಯುತ್ತಿರುವದು ಮತ್ತು ಹಾಳಾಗಿದ್ದು ಕಂಡುಬಂದಿತು. ಬಾಲಕನ ಹೃದಯ ಶಸ್ತ್ರಚಿಕಿತ್ಸೆ ಅತ್ಯವಶ್ಯವಾಗಿತ್ತು.

Dacron Graft Enforced Modified Ross Procedure at KLES Dr Prabhakar Kore Hospital, Belagavi
ಹಾಳಾದ ಅರೋಟಿಕ್ ವಾಲ್ವ್ ಅನ್ನು ತೆಗೆದುಹಾಕಿ ಅದೇ ಸ್ಥಳದಲ್ಲಿ ಪಲ್ಮನರಿ ವಾಲ್ವ್ ಅನ್ನು ಮರುಜೋಡಿಸಿದರೆ, ಪಲ್ಮನರಿ ವಾಲ್ವ್ ಅನ್ನು ಜೈವಿಕ ವಿಧಾನವಾದ ಡೆಕ್ರಾನ್ ಗ್ರಾಫ್ಟ ಮೂಲಕ ಅಲ್ಲಿಯೇ ನಿಯೋ ಪಲ್ಮನರಿ ವಾಲ್ವ್ ತಯಾರಿಸಿ ಕಸಿ ಮಾಡಲಾಯಿತು. ಈ ಅತ್ಯಾಧುನಿಕ ವಿಧಾನದಿಂದ ಬಾಲಕ ಬೆಳೆದಂತೆ ವಾಲ್ವ್ ಕೂಡ ಅಭಿವೃದ್ದಿ ಹೊಂದುತ್ತದೆ. ಇದರಿಂದ ಬಾಲಕ ಸಹಜ ಜೀವನ ನಡೆಸಲು ಸಹಕಾರಿಯಾಗುತ್ತದೆ. ಅಲ್ಲದೇ ದೈಹಿಕ ಚಟುವಟಿಕೆಗಳಲ್ಲಿ ಯಾವುದೇ ತೊಂದರೆಯಿಲ್ಲದೇ ಪಾಲ್ಗೊಳ್ಳಲು ಅನುಕೂಲ ಕಲ್ಪಿಸುತ್ತದೆ.
ಸಾಂಪ್ರದಾಯಿಕವಾಗಿ ಕೃತಕ ವಾಲ್ವ್ ಅನ್ನು ಮರುಜೋಡಿಸಲಾಗುತ್ತದೆ. ಆದರೆ ಈ ಕೃತಕ ವಾಲ್ವ್ ಬಾಲಕನಿಗೆ ಸರಿ ಹೊಂದುತ್ತಿರಲಿಲ್ಲ. ಅಲ್ಲದೇ ಜೀವನದೂದ್ದಕ್ಕೂ ರಕ್ತ ತೆಳುವಾಗಲಿಕ್ಕೆ ವಾರ್ಫಾರಿನ್/ಅಸಿಟ್ರೋಮ್ ಮಾತ್ರೆಯನ್ನು ಸೇವಿಸಬೇಕಾಗುತ್ತಿತ್ತು. ಆದರೆ ಈ ಮಾತ್ರೆ ಮೆದಳು ಮತ್ತು ದೇಹದ ವಿವಿಧ ಭಾಗಗಳಲ್ಲಿ ರಕ್ತ ಸೋರಿಕೆ ಉಂಟಾಗಬಹುದು. ಅಲ್ಲದೇ ವಾಲ್ವ್ ಕೂಡ ಬಂದಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಡೆಕ್ರಾನ್ ಗ್ರಾಫ್ಟ ಎನಫೊರ್ಸಡ್ ಮೋಡಿಫೈಡ್ ರಾಸ್ ಪ್ರೊಸಿಜರ ಮಾಡಲು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೌಶಲ್ಯ, ಸೌಲಭ್ಯಗಳು ಹಾಗೂ ನುರಿತ ತಜ್ಞವೈದ್ಯರು ಸಿಬ್ಬಂದಿ ಅತ್ಯವಶ್ಯ. ಈ ಬಾಲಕನ ಶಸ್ತ್ರಚಿಕಿತ್ಸೆಯನ್ನು ಸುಮಾರು 6 ಗಂಟೆಗಳ ಕಾಲ ದೀರ್ಘ ಸಮಯದವರಗೆ ನಡೆಸಲಾಯಿತು. ಈ ರೀತಿಯ ಶಸ್ತ್ರಚಿಕಿತ್ಸೆಯನ್ನು ಭಾರತದಲ್ಲಿಯೇ ಪ್ರಥಮ ಬಾರಿಗೆ ನೇರವೇರಿಸಲಾಗಿದೆ.
ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಪ್ರವೀಣ ತಂಬ್ರಳ್ಳಿಮಠ ಅವರಿಗೆ ಡಾ. ನಿಕುಂಜ ವ್ಯಾಸ್, ಅರವಳಿಕೆ ತಜ್ಞರಾದ ಡಾ. ಶರಣಗೌಡಾ ಪಾಟೀಲ, ಡಾ. ಅಭಿಜಿತ ಶಿತೋಳೆ ಸಹಕಾರ ನೀಡಿದರೆ, ಶಸ್ತ್ರಚಿಕಿತ್ಸೆಯ ನಂತರ ಡಾ ವಿರೇಶ ಮಾನ್ವಿ ಹಾಗೂ ಡಾ. ನಿಧಿ ಮಾನ್ವಿ ಗೋಯಲ್ ಅವರು ಚಿಕಿತ್ಸೆ ನೀಡಿದರು. ಬಾಲಕ ಈಗ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ. ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಕೆಎಲ್‍ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. ಬಾಲಕನ ಶಸ್ತ್ರಚಿಕಿತ್ಸೆಯನ್ನು ನೌಕರರ ವಿಮಾ ಯೋಜನೆಯಡಿ ಸಂಪೂರ್ಣವಾಗಿ ಉಚಿತ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗಿದೆ.


Team of Cardiac Surgeons lead by Dr Praveen Tambrallimath achieved yet another milestone in the history of KLES Dr Prabhakar Kore Hospital, Belagavi by successfully performing a rare heart surgery known as “Dacron Graft Enforced Modified Ross Procedure” on the 10-year child. The child had a congenital and critical heart condition.

LEAVE A REPLY

Please enter your comment!
Please enter your name here