ಕೆಎಲ್ಇ ವಿಶ್ವವಿದ್ಯಾಲಯದ 27 ಚಿನ್ನದ ವೈದ್ಯವಿದ್ಯಾರ್ಥಿನಿಯರು

ಕೆಎಲ್‌ಇ ವಿಶ್ವವಿದ್ಯಾಲಯದಲ್ಲಿ ಕಲಿಕೆಯಲ್ಲಿ ಅತ್ಯುತ್ತಮವಾದ ಪರಿಸರವಿದ್ದು, ಅದರಲ್ಲಿಯೂ ಹುಡಗಿಯರಿಗೆ ಒಳ್ಳೆಯ ಶಿಕ್ಷಣಕ್ಕೆ ಸಹಕಾರಿಯಾಗಿದೆ. ಆದ್ದರಿಂದಲೇ ಇಲ್ಲಿ ಹುಡುಗಿಯರೇ ಅತೀ ಹೆಚ್ಚಿನ ಶಂಖ್ಯೆಯಲ್ಲಿ ಸುವರ್ಣ ಪದಕವನ್ನು ಪಡೆಯುವದರ ಮೂಲಕ ಸ್ತ್ರೀಶಕ್ತಿಯನ್ನು ಎತ್ತಿ ಹಿಡಿದಿದ್ದಾರೆ 35 ಸುವರ್ಣ ಪದಕದಲ್ಲಿ 27 ಹುಡುಗಿಯರೇ ಚಿನ್ನವನ್ನು ಬಾಚಿಕೊಳ್ಳುವದರ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಅದಕ್ಕೆ ಬೆಂಬಲವಾಗಿ ನಿಂತಿರುವದು ಕೆಎಲ್‌ಇ ವಿಶ್ವವಿದ್ಯಾಲಯ ಎಂದು ಬೇರೆ ಹೇಳಬೆಕಾಗಿಲ್ಲ ಎಂದು ಹೈದರಾಬಾದನ ಏಶಿಯನ್ ಇನ್ಸಟಿಟ್ಯೂಟ ಆಫ್ ಗ್ಯಾಸ್ಟೊçÃಎಂಟ್ರಾಲಾಜಿ ಆಸ್ಪತ್ರೆಯ ಕರ‍್ಯಾಧ್ಯಕ್ಷರು ಹಾಗೂ ಮುಖ್ಯ ಗ್ಯಾಸ್ಟೊçಎಂಟ್ರಾಲಾಜಿಸ್ಟ ಆದ ಡಾ. ಡಿ ನಾಗೇಶ್ವರ ರೆಡ್ಡಿ ಅವರಿಂದಿಲ್ಲಿ ಹೇಳಿದರು.

ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ ಆ್ಯಂಡ ರಿಸರ್ಚ(ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ)ನ ದಿ. 19 ಅಗಷ್ಟ 2021 ರಂದು ಏರ್ಪಡಿಸಲಾದ 11ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ವಿಶ್ವದ ಅನೇಕ ವಿಶ್ವವಿದ್ಯಾಲಯಗಳ ಕ್ಯಾಂಪಸಗಳಂತೆ ದೇಶದ ವಿವಿಗಳ ಪೈಕಿ ಕೆಎಲ್‌ಇ ಅತ್ಯುತ್ತಮ ಹಸಿರು ಕ್ಯಾಂಪಸ್ ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳಲ್ಲಿ ಶಿಸ್ತು ಇದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು, ವಿಶ್ವಗುಣಮಟ್ಟದ ಚಿಕಿತ್ಸೆ, ವಿದ್ಯಾಥಿಗಳಿಗೆ ಬೋಧನೆ ಹಾಗೂ ಅತ್ಯುತ್ತಮವಾದ ಕಲೆಗಳ ಮೂಲಕ ಶಿಕ್ಷಣ ನೀಡುತ್ತಿರುವದು ಶ್ಲಾಘನೀಯ ಎಂದರು.

1882ರಲ್ಲಿ ಚಮತ್ಕಾರ ಮಾಡುವಂಥ ಔಷಧ ಇರಲಿಲ್ಲ. ಆದರೂ ಕೂಡ ವೈದ್ಯರು ತಮ್ಮ ಕಲೆಯ ಮೂಲಕ ರೋಗಿಯನ್ನು ಪರೀಕ್ಷಿಸಿ ಔಷಧ ನೀಡುತ್ತಿದ್ದರು. ಅದಕ್ಕೆ ಮುಖ್ಯವಾಗಿ ವಿಜ್ಞಾನದ ಜೊತೆಗೆ ಸಹನುಭೂತಿ. ರೋಗಿಯ ಸಂಪೂರ್ಣ ಅಧ್ಯಯನ ಮಾಡಿದಾಗ ಶೇ. ೯೦%ರಷ್ಟು ಸಿದ್ದತೆ ಮುಗಿದಂತೆ. ಮಾನವನ ಜೀವನ ಶೈಲಿ ಆಹಾರ, ಚುಚ್ಚುಮದ್ದು ಹಾಗೂ ಶುದ್ದ ಕುಡಿಯುವ ನೀರನ್ನು ಅವಲಂಭಿಸಿದೆ ಎಂದ ಅವರು, ೧೯೧೮ರಲ್ಲಿ ಸ್ಪ್ಯಾನಿಷ್ ಸಾಂಕ್ರಾಮಿಕ ನಾಲ್ಕು ಅಲೆ ಹೊಂದಿತ್ತು. ೨೦೧೯ರಲ್ಲಿ ಬಂದ ‘ಕೋವಿಡ್ -೧೯’ ಮೂರನೇ ಅಲೆ ಬಂದಿದೆ. ಇಷ್ಟರಲ್ಲಿ ಮಿಲಿಯನ್ ಗಟ್ಟಲೆ ಜನರು ಸಾವಿಗೀಡಾಗಿದ್ದಾರೆ. ಈಗ ನಮ್ಮ ಬಳಿ ವ್ಯಾಕ್ಸಿನ್ ಇದೆ. ನಾಲ್ಕನೇ ಅಲೆಯಲ್ಲಿ ಸಾವು ಕಡಿಮೆಯಾಗಬಹುದು ಅಭಿಪ್ರಾಯಪಟ್ಟರು.

DSC 1697

ಕಲೆ + ವಿಜ್ಞಾನ + ಸಹಾನುಭೂತಿ ವೈದ್ಯರ ಉತ್ತಮ ಔಷಧವಾಗಿ ಕೆಲಸ ಮಾಡಬಲ್ಲದು. ಕಲೆ ವಿಜ್ಞಾನ ಹಾಗೂ ಸಹಾನುಭೂತಿ ಕೂಡಿದಾಗ ಮಾತ್ರ ಔಷಧ. ವೈದ್ಯರಿಗೆ ಯಾವಾಗಲೂ ಕನಸು ದೊಡ್ಡದಾಗಿರಬೇಕು. ಆದರೆ ಇಡುವ ಹೆಜ್ಜೆ ಮಾತ್ರ ಚಿಕ್ಕದಾಗಿರಲಿ. ಪ್ರಯೋಗಾತ್ಮಕದಿಂದ ಮಾತ್ರ ಪರಿಪೂರ್ಣತೆ ಸಾಧ್ಯವಾಗಲಿದೆ. ಸಮಾಜ ಮತ್ತು ಸಮುದಾಯದಲ್ಲಿ ನಂಬಿಕಸ್ಥ ವಯದ್ಯರಾಗಿ ಸೇವೆ ಸಲ್ಲಿಸಿ ಎಂದು ಸಲಹೆ ನೀಡಿದರು.

ಪ್ರತಿದಿನ ನಿಮ್ಮ ಕ್ಷೇತ್ರದ ಮೂರು ಹೊಸ ಸಂಗತಿಗಳನ್ನು ತಿಳಿದುಕೊಳ್ಳಬೇಕು. ಅದು ಜ್ಞಾನದ ಮಟ್ಟವನ್ನು ಹೆಚ್ಚಿಸುತ್ತದೆ. ಕಠಿಣ ಪರಿಶ್ರಮ ಅಂದರೆ ಸ್ಮರ‍್ಟ ರ‍್ಕ ಮಾಡಬೇಕು. ಆಗ ಸಾಧನೆ ಮಾಡಲು ಸಾಧ್ಯ. ಕಠಿಣ ಪರಿಶ್ರಮದಿಂದ ನಮ್ಮ ಕ್ಷೇತ್ರದಲ್ಲಿ ಪರಿಣತಿ ಹೊಂದಬಹುದು. ಕೆಲಸ, ಓದು ಸ್ಮರ‍್ಟ್ ಆಗಿರಬೇಕು. ಪ್ರಯೋಗಭ್ಯಾಸ, ಸಹೋದ್ಯೋಗಿಗಳೊಂದಿಗೆ ನರ್ಸಿಂಗ, ಕಿರಿಯ ಹಿರಿಯ ವೈದ್ಯರು ಸ್ನೇಹಯುತ ಸಂಭAಧ, ಔಷಧ ಒಂದೇ ಅಪ್ರತಿಮ ವಿಜ್ಞಾನ ಆಗಲು ಸಾಧ್ಯವಿಲ್ಲ. ವೈದ್ಯರ ಪರಿಣತಿ, ತಿಳಿವಳಿಕೆ, ರೋಗದ ಬಗ್ಗೆ ಅಧ್ಯಯನವೂ ಪ್ರಮುಖವಾಗುತ್ತದೆ ಎಂದರು.

DSC 1635

ನಾನು ಡಾಕ್ಟರ್ ಎಂದು ಹೇಳಿಕೊಳ್ಳುವಂತೆ ಇರಬಾರದು. ಆ ಮಟ್ಟದಲ್ಲಿ ತರಬೇತಿ, ಪರಿಣತಿ ಹೊಂದಿರಬೇಕು ಎಂದ ಅವರು ಪ್ರತಿ ಮಕ್ಕಳು ಕೂಡ ತಮ್ಮ ತಂದೆ, ತಾಯಿ ಮೇಲೆ ನಂಬಿಕೆ ಇಡಬೇಕು. ಅವರು ನಿಮ್ಮ ಗುರಿ ಮುಟ್ಟಿಸುತ್ತಾರೆ. ಗುಡ್ ಡಾಕ್ಟರ್, ಗ್ರೇಟ್ ಡಾಕ್ಟರ್ ವ್ಯತ್ಯಾಸ ಇದೆ. ವೈದ್ಯಕೀಯ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದರೆ ಸಾಲದು. ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಅಂಥವರು ಗ್ರೇಟ್ ಡಾಕ್ಟರ್, ಗ್ರೇಟ್ ಡಾಕ್ರ‍್ಸರ ಆಗಲು ಸಾಧ್ಯ. ನಮ್ಮ ಸುತ್ತಲು ಧನಾತ್ಮಕ ಚಿಂತನೆಯ ಜನರನ್ನು ಇಟ್ಟುಕೊಂಡಿರಬೇಕು. ಸೋಲು ಯಾವತ್ತಿಗೂ ಕೊನೆ ಅಲ್ಲ. ತಪ್ಪು ಮಾಡಿದಾಗಲೇ ಗುರಿಯ ದಾರಿ ಸುಲಭವಾಗುತ್ತದೆ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಡಾ. ವಿವೇಕ ಸಾವೋಜಿ ಅವರು ವಿಶ್ವವಿದ್ಯಾಲಯದ ವಾರ್ಷಿಕ ವರದಿ ಮಂಡಿಸಿದರು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1565 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ್ದು, 35 ವಿದ್ಯಾರ್ಥಿಗಳು ಸುವರ್ಣ ಪದಕ ಪಡೆದುಕೊಂಡಿದ್ದಾರೆ. 18 ಜನ ಪಿಹೆಚ್‍ಡಿ, 452 ಸ್ನಾತ್ತಕೋತ್ತರ, 943 ಪದವಿ, 7 ಪೋಸ್ಟ ಡಾಕ್ಟರಲ್ (ಡಿಎಂ), 10 ಸರ್ಟಿಫಿಕೇಟ್, 10 ಫೆಲೊಶಿಪ್ ಹಾಗೂ 6 ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ. ಎಂಬಿಬಿಎಸನಲ್ಲಿ ಡಾ. ಮೋಹಿನಿ ಅಗರವಾಲ ಮೂರು ಚಿನ್ನದ ಪದಕ ಪಡೆದರೆ, ಬಿಎಎಂಎಸ್‌ನಲ್ಲಿ ಡಾ. ಅಕ್ಷತಾ ಲಡಗಿ ಅವರು 3 ಸುವರ್ಣ ಪದಕ, ಬಿಪಿಟಿಯಲ್ಲಿ ರುತುಜಾ ಬಲೋಲಿಯಾ 2 ಚಿನ್ನ, ಪದಕಗಳನ್ನು ಪಡೆದುಕೊಂಡಿದ್ದಾರೆ.

Dr Akshata Sukumar

ವೇದಿಕೆ ಮೇಲೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಪ್ರಭಾಕರ ಕೋರೆ, ಕುಲಸಚಿವ ಡಾ. ವಿ ಎ ಕೋಠಿವಾಲೆ, ಕಂಟ್ರೋಲರ ಆಫ್ ಎಕ್ಸಾಮಿನೇಶನನ್ ಡಾ. ಜ್ಯೋತಿ ನಾಗಮೋತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ, ನಿರ್ದೇಶಕರಾದ ಡಾ. ವಿ ಎಸ್ ಸಾಧುನವರ,ಎಸ ಸಿ ಮೆಟಗುಡ್, ಕಾರ್ಯದರ್ಶಿ ಡಾ. ಬಿ ಜಿ ದೇಸಾಯಿ, ಡಾ. ವಿ ಡಿ ಪಾಟೀಲ, ಡಾ ಎಂ ವಿ ಜಾಲಿ, ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ಅಲ್ಕಾ ಕಾಳೆ, ಡಾ. ಪ್ರಶಾಂತ ಜಾಡರ, ಸುಧಾ ರೆಡ್ಡಿ, ಎಂ ಎಸ್ ಗಣಾಚಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Popular Doctors

Related Articles