ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ ಅ. 20, 2019 ರಂದು ಬೆಳಗಾವಿ ಶಾಖೆಯ ಉದ್ಘಾಟನೆ ಮತ್ತು ಒಂದು ದಿನದ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದು ಡಾ. ಸಮೀರ ಸರ್ನೋಬತ್ ತಿಳಿಸಿದರು.
ಅವರು ಇಂದು ಪತ್ರಿಕೆಗಾರರ ಸಭೆಯಲ್ಲಿ ಮಾತನಾಡುತ್ತ, ಕೇಂದ್ರ ರಾಜ್ಯ ಉಗಿಬಂಡಿ ಮಂತ್ರಿ ಸುರೇಶ ಅಂಗಡಿ ಉದ್ಘಾಟಿಸಲಿದ್ದು, ಡಾ. ಪ್ರಭಾಕರ ಕೋರೆ ಸಂಸದರು ರಾಜ್ಯಸಭೆ, ಕಾರ್ಯಾಧ್ಯಕ್ಷರು, ಕೆಎಲ್ಇ ಸಂಸ್ಥೆ ಮುಖ್ಯ ಅತಿಥಿಗಳು ಆಗಮಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ವಿ.ಆರ್.ಎಲ್ ಸಮೂಹ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ, ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ವೀರ ಬ್ರಹ್ಮಚಾರಿ, ಆಯುಷ್ ಇಲಾಖೆ ,ಕರ್ನಾಟಕ ಸರ್ಕಾರಮಾಜಿ ನಿರ್ದೇಶಕರು, ಡಾ. ಎ.ಎಲ್.ಪಾಟೀಲ ಆಗಮಿಸುವರು.
ವಿಶೇಷ ಅತಿಥಿಗಳಾಗಿ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಕರ್ನಾಟಕ ಅಧ್ಯಕ್ಷ ಡಾ. ಎನ್. ಎ. ಮಗದುಮ್ ಆಗಮಿಸಿ “ಚಿಕ್ಕಮಕ್ಕಳ ರೋಗಗಳು,ಚರ್ಮರೋಗ, ಕಡಿಮೆ ಅವಧಿಯ ಆರೋಗ್ಯ ಸಮಸ್ಯೆಗಳು ಮತ್ತು ಪ್ರತಿದಿನದ ಚಿಕಿತ್ಸೆಯಲ್ಲಿ ವಿರಳಾತಿ ವಿರಳ ಔಷಧಿಗಳ ಮಹತ್ವ” ದ ಬಗ್ಗೆ ಬೆಂಗಳೂರು, ಮಂಗಳೂರು ಮತ್ತು ಬೆಳಗಾವಿಯ ಕಿರಿಯ ಹೋಮಿಯೋಪತಿಕ್ ತಜ್ಞರು ತಮ್ಮ ಅನುಭವ, ತಮ್ಮ ಸಂಶೋಧನೆ ಮತ್ತು ಹೋಮಿಯೋಪತಿಯ ಇತ್ತೀಚಿನ ಆಧುನಿಕ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ ಎಂದರು.
ಇದು ನಮ್ಮ ವೈದ್ಯರು, ವೈದ್ಯ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವೀಧರರು, ನುರಿತ ವೈದ್ಯರ ಜ್ಞಾನವೃದ್ಧಿಗೆ ಸಹಕಾರಿ ಯಾಗುವುದರಿಂದ ಯಾವುದೇ ಅನುಮಾನವಿಲ್ಲ ಮತ್ತು ಅವರಿಗೆ ದೈನಂದಿನ ಚಿಕಿತ್ಸೆಯಲ್ಲಿ ಸಹಾಯವಾಗಬಹುದು ಎಂದು ಪತ್ರಿಕೆಗಾರರ ಸಭೆಯಲ್ಲಿ ತಿಳಿಸಿದರು.
ಡಾ. ಆರ್. ವಾಯ್. ನದಾಫ, ಡಾ.ಸಮೀರ ಸರ್ನೋಬತ್, ಡಾ. ಪದ್ಮರಾಜ ಪಾಟೀಲ, ಡಾ. ಯೋಗೇಶ ದ್ರಾವಿಡ್, ಡಾ. ರಾಜೇಶ ಪತ್ರಿಕೆಗಾರರ ಸಭೆಯಲ್ಲಿ ಹಾಜರಿದ್ದರು.