ಸರ್ವೆ ಸಾಮಾನ್ಯವಾಗಿ ನಾವೆಲ್ಲರೂ ಬಿಕ್ಕಳಿಕೆಯ ತಾಪತ್ರಯವನ್ನು ಅನುಭವಿಸಿದ್ದೇವೆ. ಆಹಾರ ಸೇವಿಸುವಾಗ, ನೀರನ್ನು ಕುಡಿಯುವಾಗ ತಕ್ಷಣ ಗಂಟಲಲ್ಲಿ ಸಿಕ್ಕಿಹಾಕಿಕೊಂಡಂತಾಗಿ ಬಿಕ್ಕಳಿಕೆ ಬರುವದು ಸಾಮಾನ್ಯ. ಬಿಕ್ಕಳಿಕೆÀಯಿಂದ ಸಹಜವಾಗಿ ನಾವೆಲ್ಲ ತೊಂದರೆ ಅನುಭವಿಸಿದ್ದೇವೆ.
ಬಿಕ್ಕಳಿಕೆಗೆ ಕಾರಣ ಮತ್ತು ಪರಿಹಾರ:
ಶ್ವಾಸಕೋಶದ ಪೊರೆಯು ಚಿಕ್ಕದಾದರೆ ಧ್ವನಿಪೆಟ್ಟಿಗೆ ಭಾಗಷಹ ಮುಚ್ಚಿಹೋಗಿ “ಹಿಕ್” ಶಬ್ದದೊಂದಿಗೆ ಬಿಕ್ಕಳಿಕೆ ಆರಂಭವಾಗುತ್ತದೆ.
ಬಿಕ್ಕಳಿಕೆ ನಿಯಂತ್ರಿಸುವ ಸಾಮನ್ಯ ಕ್ರಮಗಳು
• ಸ್ವಲ್ಪ ಕ್ಷಣ ಶ್ವಾಶವನ್ನು ಬಿಗಿಯಾಗಿ ಹಿಡಿದಿಟ್ಟರೆ, ದೀರ್ಘವಾದ ಉಸಿರಾಟವನ್ನು ಪ್ರಯೋಗಿಸಿದರೆ ಬಿಕ್ಕಳಿಕೆಯನ್ನು ಕಡಿಮೆ ಮಾಡಬಹುದು. ಶ್ವಾಸವನ್ನು ಬಿಗಿಯಾಗಿ ಹಿಡಿಯುವದರಿಂದ ಉಸಿರಾಟದಲ್ಲಿಯ ಉಸಿರು ಬಿಗಿಯಾಗಿ ಹಿಡಿಯುವದರಿಂದ ಶ್ವಾಶಕೋಶದಲ್ಲಿ ಇ0ಗಾಲದ ಡೈಆಕ್ಸೈಡ್ ತುಂಬಿಕೊಂಡು ಶ್ವಾಶಕೋಶದ ಪೊರೆಯು ಸಾಮಾನ್ಯ ಸ್ಥಿತಿಗೆಬಂದು ಬಿಕ್ಕಳಿಕೆ ನಿಲ್ಲುತ್ತದೆ.
• ಸಕ್ಕರೆ ತಿನ್ನಿ ಬಿಕ್ಕಳಿಕೆ ಓಡಿಸಿ – ಬಿಕ್ಕಳಿಕೆ ಬಂದ ತಕ್ಷಣ ಒಂದು ಚಮಚೆ ಸಕ್ಕರೆಯನ್ನು ಬಾಯಿಗೆ ಹಾಕಿಕೊಳ್ಳಿ.
• ಮೊಣಕಾಲುಗಳನ್ನು ಎದೆಗೆ ಒತ್ತಿಕೊಳ್ಳಿ ಈ ಸರಳ ವ್ಯಾಯಮ ಕ್ರಮದಿಂದ ಬಿಕ್ಕಳಿಕೆಯ ತಾಪತ್ರಯವನ್ನು ನಿವಾರಿಸಬಹುದು.
• ನಿಂಬೆ ಹಣ್ಣಿನ ಶರಬತ್ ಸೇವನೆಯಿಂದ, ನಿಂಬೆ ಹಣ್ಣಿನ ತುಣಕನ್ನು ಬಾಯಲ್ಲಿ ಹಾಕಿಕೊಂಡು ಚೀಪುವದರಿಂದ ಬಿಕ್ಕಳಿಕೆಯನ್ನು ನಿಯಂತ್ರಿಸಬಹುದು.
• ಜೇನುತುಪ್ಪ ಸೇವನೆಯಿಂದಲೂ ಮತ್ತು ನಿಧಾನವಾಗಿ ಬಿಕ್ಕಳಿಕೆ ಬರುವ ಸಮಯ ತಂಪಾದ ನೀರನ್ನು ಕುಡಿಯುವದರಿಂದ ಸರಳವಾಗಿ ಬಿಕ್ಕಳಿಕೆಯನ್ನು ದೂರವಿಡಬಹುದು.
• ಆಹಾರವನ್ನು ನಿಧಾನವಾಗಿ ಮಾತನಾಡದೇ ಸೇವಿಸುವದರಿಂದ, ಅತಿಯಾದ ಒತ್ತಡ ಕಡಿಮೆಮಾಡುವದರಿಂದ ಬಿಕ್ಕಳಿಕೆಯನ್ನು ಸಾಕಷ್ಟು ಕಡಿಮೆ ಮಾಡಬಹುದು.
ಈ ಎಲ್ಲ ಉಪಕ್ರಮಗಳಿಂದ ಬಿಕ್ಕಳಿಕೆ ನಿಯಂತ್ರಣಕ್ಕೆ ಬಾರದಿದ್ದರೆ; ತಜ್ಞವೈದ್ಯರನ್ನು ಸಂಪರ್ಕಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಿ..
Hiccups are rapid spontaneous narrowing of the diaphragm muscle. During Hiccups the muscles contracts frequently, the opening between the vocal cords snaps shut to check the inflow of air and makes the hiccup sound.