ಜುಲೈ 28-ವಿಶ್ವ ಹೆಪಟೈಟಿಸ್ (ಕಾಮಾಲೆ) ದಿನಾಚರಣೆ

ಜಗತ್ತಿನಾದ್ಯಂತ ಸುಮಾರು 290 ಮಿಲಿಯನ್ ಜನರು ವೈರಲ್ ಹೆಪಟೈಟಿಸ್ನಿಂದ ತಮ್ಮಗರಿವಿಲ್ಲದೇ ಬಳಲುತ್ತಿದ್ದಾರೆ. ಆದ್ದರಿಂದ ಹೆಪಟೈಟಿಸ್ (ಪಿತ್ತಜನಕಾಂಗದ ಉರಿಯೂತ) ಬಗ್ಗೆ ಅರಿವು ಮೂಡಿಸಲುಫೈಂಡ್ ಮಿಸ್ಸಿಂಗ್ ಮಿಲಿಯನ್ಸ್ಎಂಬ ಘೋಷಣೆಯೊಂದಿಗೆ ಆಚರಿಸುತ್ತಿದ್ದೇವೆ ಹಾಗೂ ಹೆಪಟೈಟಿಸ್ಬಿವೈರಸ್ ಕಂಡು ಹಿಡಿದ ನೋಬೆಲ್ ಪ್ರಶಸ್ತಿ ವಿಜೇತ ಬಾರೂಕ್ ಸ್ಯಾಮುಯಲ್ ಬ್ಲಂಬರ್ಗ್ ಅವರ ಗೌರವಾರ್ಥ ಪ್ರತಿ ವರ್ಷ ಜುಲೈ 28 ರಂದು ಅಂತರಾಷ್ಟ್ರೀಯ ಹೆಪಟೈಟಿಸ್ ದಿನಾಚರಣೆ ಆಚರಿಸುತ್ತಿದ್ದೇವೆ.

ವೈರಲ್ ಹೆಪಟೈಟಿಸ್ ಕಾಮಾಲೆ ರೋಗಕ್ಕೆ ಕಾರಣವಾಗಿದ್ದು ರಕ್ತದಲ್ಲಿ ಟ್ರಾನ್ಸ್ ಅಮೈನೇಜ್ ಕಿಣ್ವಗಳು ಹೆಚ್ಚಾಗಿರುತ್ತವೆ. ತಲೆನೋವು, ಮಾಂಸಖಂಡಗಳ ನೋವು, ಕೀಲುನೋವು, ವಾಕರಿಕೆ ಹಾಗೂ ಅರುಚಿ ಕಾಣಿಸಿಕೊಂಡು ಎರಡು ವಾರಗಳವರೆಗೆ ಕಾಮಾಲೆ ಉತ್ಪತ್ತಿಯಾಗುತ್ತದೆ. ವಾಂತಿ ಹಾಗೂ ಹೊಟ್ಟೆಯಲ್ಲಿ ಅಸ್ವಸ್ಥತೆಗಳಿರುತ್ತವೆ. ರಕ್ತದಲ್ಲಿ ಅಲ್ಕಲೈನ್ ಪಾಸ್ಪಟೇಸ್ ಹಾಗೂ ಪ್ರೋಥ್ರೋಂಬಿನ್ ಟೈಮ್ನಲ್ಲಿ ಹೆಚ್ಚಳವಾಗಿರುತ್ತದೆ. ವೈರಲ್ ಹೆಪಟೈಟಿಸ್ಗೆ ಕಾರಣಗಳೆಂದರೆ, ಹೆಪಟೈಟಿಸ್ , ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ, ಹೆಪಟೈಟಿಸ್ , ಸೈಟೋಮೇಗಾಲೋ ವೈರಸ್, ಎಪಸ್ಟೈನ್ಬಾರ್ ವೈರಸ್, ಹರ್ಪಿಸ್ ಸಿಂಪ್ಲೆಕ್ಸ ಮತ್ತು ಯಲೋ ಫಿವರ್. ಎಕ್ಯೂಟ್ ವೈರಲ್ ಹೆಪಟೈಟಿಸ್ ತೊಂದರೆಗಳೆಂದರೆ, ಎಕ್ಯೂಟ್ ಲಿವರ್ ಫೇಲ್ಯೂಅರ್, ಕೊಲೆಸ್ಟಾಟಿಕ್ ಹೆಪಟೈಟಿಸ್, ಅಪ್ಲಾಸ್ಟಿಕ್ ಅನಿಮಿಯಾ, ಕ್ರೋನಿಕ್ ಲಿವರ್ ಡಿಸಿಜ್, ಸಿರೋಸಿಸ್ ಹಾಗೂ ರಿಲಾಪ್ಸಿಂಗ್ ಹೆಪಟೈಟಿಸ್.

ಹೆಪಟೈಟಿಸ್ ವೈರಸ್ಗಳು ಬೇರೆ ಬೇರೆ ಪಂಗಡಕ್ಕೆ ಸೇರಿದ್ದರು ಕೂಡ ಸಾಮಾನ್ಯ ಅಂಶಗಳನ್ನೊಳಗೊಂಡ ಪಿತ್ತ ಜನಕಾಂಗದ ವ್ಯಾಧಿಗಳನ್ನುಂಟು ಮಾಡುತ್ತವೆ.

ಹೆಪಟೈಟಿಸ್: ಎಂಟಿರೋ ವೈರಸ್ ಪಿಕೋರ್ನಾ ವೈರಸ್ ಗುಂಪಿಗೆ ಸೇರಿದೆ. ಮಲಬಾಯಿ ಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿಯ ಲಕ್ಷಣಗಳು ವ್ಯಕ್ತವಾಗುವ 2-3 ವಾರಗಳ ಮೊದಲು ಹಾಗೂ ನಂತರ 2 ವಾರಗಳವರೆಗೆ ಮಲದಲ್ಲಿ ವೈರಸ್ಗಳು ಕಂಡು ಬರುತ್ತವೆ. ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಶೇಕಡಾ 30 ರಷ್ಟು ಯುವಕರಲ್ಲಿ ಕಾಮಾಲೆ ಸೋಂಕಿನ ಪುರಾವೆಗಳು ಕಾಣಿಸಿಕೊಳ್ಳುವುದಿಲ್ಲ. ಜನದಟ್ಟಣೆ ಹಾಗೂ ಅಸ್ವಚ್ಛತೆಯಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರಕ್ತದಲ್ಲಿ ಆ್ಯಂಟಿಹೆಚ್ಎವ್ಹಿ ಕಂಡುಬರುತ್ತದೆ. ರಕ್ತದಲ್ಲಿ ಅಲ್ಕಲೈನ್ ಪಾಸ್ಪಟೇಜ್ ಪ್ರಮಾಣ ಕೋಲಿಸ್ಯಾಟಿಕ್ ಫೇಜ್ನಲ್ಲಿ ಹೆಚ್ಚಾದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

ಹೆಪಟೈಟಿಸ್ಬಿ: ಜಗತ್ತಿನಾದ್ಯಂತ 300 ಮಿಲಿಯನ್ ಜನರಿಗೆ ಸೋಂಕು ತಗುಲಿದೆ. ಇದು ದೀರ್ಘಕಾಲದ ಲಿವರ್ ವ್ಯಾಧಿಗಳಿಗೆ ಹಾಗೂ ಹಿಪ್ಯಾಟೋ ಸೆಲ್ಯೂಲಾರ್ ಕಾರ್ಸಿನೋಮಾಗೆ ಪ್ರಮುಖ ಕಾರಣವಾಗಿದೆ. ಶೇ. 90 ರಷ್ಟು ಸೋಂಕು ಹೊಂದಿದ ಗರ್ಭಿಣಿಯಿಂದ ನವಜಾತ ಶಿಶುವಿಗೆ ಸೋಂಕು ಹರಡುತ್ತದೆ ಹಾಗೂ ಶೇ. 10 ರಷ್ಟು ಸ್ಟರಿಲೈಸ್ಡ್ ಇಲ್ಲದ ಚುಚ್ಚುಮದ್ದು, ಟ್ಯಾಟೂ, ಅಕ್ಯೂಪಂಚರ್ ಸೂಜಿಗಳನ್ನು, ಅನಸ್ಕ್ರೀನ್ಡ್ ಬ್ಲಡ್ ಪ್ರೋಡಕ್ಟ್ಸಗಳನ್ನು ಬಳಸುವುದರಿಂದ ಹಾಗೂ ಅಸುರಕ್ಷಿತ ಲೈಂಗಿಕತೆಯಿಂದ ಹರಡುತ್ತದೆ. ಸೋಂಕಿನಿಂದ ಹೆಚ್ಬಿಎಸ್ಎಜಿ ರಕ್ತದಲ್ಲಿ ಗೋಚರಿಸುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲ. ಹೆಪಟೈಟಿಸ್ಬಿವ್ಯಾಕ್ಸಿನ್ ತೆಗೆದುಕೊಳ್ಳುವುದರಿಂದ ಇದರಿಂದ ರಕ್ಷಣೆ ಪಡೆಯಬಹುದು. ಇದರ ಸೋಂಕಿನ ಪ್ರಮಾಣ ತಗ್ಗಿಸಲು ಆ್ಯಂಟಿ ವೈರಲ್ ಥೆರಪಿ ಔಷಧಿಗಳಾದ ಅಲ್ಪಾಇಂಟರ್ಪೇರಾನ್, ಲ್ಯಾಮಿವುಡಿನ್, ಅಡೇಪೊವಿರ್ ಹಾಗೂ ಎಲ್ಡಿಆಕ್ಸಿಥೈಮಿಡಿನ್ಗಳನ್ನು ಬಳಸಲಾಗುತ್ತದೆ. ದೀರ್ಘಕಾಲದ ಹೆಪಟೈಟಿಸ್ ಬಿ ಸೋಂಕಿತರು ಸಿರೋಸಿಸ್ ಹಾಗೂ ಹಿಪ್ಯಾಟೋ ಸೆಲ್ಯೂಲಾರ್ ಕಾರ್ಸಿನೋಮಾದಿಂದ ಬಳಲುತ್ತಾರೆ. ಸೋಂಕಿನಲ್ಲಿ ಲಿವರ್ ಟ್ರಾನ್ಸಪ್ಲಾಂಟೇಶನ್ ನಿಷೇಧಿಸಲಾಗಿದೆ.

ಹೆಪಟೈಟಿಸ್ಡಿ (ಡೆಲ್ಟಾ ವೈರಸ್) : ಆಫ್ರಿಕಾ ಹಾಗೂ ಸೌಥ್ ಅಮೇರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದುಬಿ ವೈರಸ್ ಜೊತೆಗೆ ಬೆಳವಣಿಗೆ ಹೊಂದಿ ಕಾಮಾಲೆಯನ್ನು ಉಲ್ಬಣಗೊಳಿಸುತ್ತದೆ. ಇದರಿಂದ ಆ್ಯಂಟಿಹೆಚ್.ಡಿ.ವ್ಹಿ ಸೋಂಕು ರಕ್ತದಲ್ಲಿ ಗೋಚರಿಸುತ್ತದೆ. ಹೆಪಟೈಟಿಸ್ಬಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದರಿಂದ ಹೆಪಟೈಟಿಸ್ಡಿತಡೆಗಟ್ಟಬಹುದು.

ಹೆಪಟೈಟಿಸ್ಸಿ: ಆರ್.ಎನ್. ಪ್ಲಾವಿ ವೈರಸ್ನಿಂದ ಹರಡುತ್ತದೆ. ಬ್ಲಡ್ ಟ್ರಾನ್ಸಪ್ಯೂಜ್ ಅಥವಾ ಬ್ಲಡ್ ಪ್ರೋಡಕ್ಟ್ಸ ಟ್ರಾನ್ಸಪ್ಯೂಜ್ನಿಂದ ಕಾಮಾಲೆ ಜೊತೆಗೆ ಎಕ್ಯೂಟ್ ಹೆಪಟೈಟಿಸ್ ಸಿಂಡ್ರೋಮ್ ಉತ್ಪತ್ತಿ ಮಾಡುತ್ತದೆ. ಬೇರೆಯವರು ಬಳಸಿದ ರೇಜರ್, ಟೂತ್ಬ್ರಷ್ ಬಳಸುವುದರಿಂದ, ಅಸ್ವಚ್ಛತೆಯಿಂದ ಕೂಡಿದ ಸೂಜಿಗಳನ್ನು ಉಪಯೋಗಿಸುವುದರಿಂದ, ಸೋಂಕಿತ ಗರ್ಭಿಣಿಯಿಂದ ನವಜಾತ ಶಿಶುವಿಗೆ, ಅನ್ಸ್ಕ್ರೀನ್ಡ್ ರಕ್ತದ ಉತ್ಪನ್ನಗಳನ್ನು ಬಳಸುವವರಿಗೆ ಹೆಚ್.ಸಿ.ವ್ಹಿ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಸೋಂಕು ತಗುಲಿ 2 ರಿಂದ 4 ವಾರಗಳಲ್ಲಿ ರಕ್ತದಲ್ಲಿ ಸಿಆರ್.ಎನ್. ಪತ್ತೆ ಹಚ್ಚುವುದರಿಂದ ಸೋಂಕನ್ನು ದೃಢಪಡಿಸಬಹುದು. ಸೋಂಕಿಗೆ ಪಿಗೈಲೆಟೆಡ್ ಅಲ್ಪಾಇಂಟರ್ಪೇರಾನ್ ಹಾಗೂ ರಿಬಾವ್ಹಿರಿನ್ ಔಷಧಿಗಳನ್ನು ನೀಡಲಾಗುತ್ತದೆ.

ಹೆಪಟೈಟಿಸ್ಇದು ಗರ್ಭಿಣಿಯರಲ್ಲಿ ಪಿತ್ತಜನಕಾಂಗದ ವೈಫಲ್ಯ ಉಂಟು ಮಾಡಬಹುದು. ಇದು ಹೆಪಟೈಟಿಸ್ ಲಕ್ಷಣಗಳನ್ನು ಹೊಂದಿರುತ್ತದೆ. ಸೈಟೋಮೆಗಲೋ ವೈರಸ್ ಹಾಗೂ ಎಪ್ಸ್ಟೀನ್ಬಾರ್ ವೈರಸ್ಗಳು ಲಿವರ್ ಫಂಕ್ಷನ ಟೆಸ್ಟಗಳಲ್ಲಿ ವ್ಯತ್ಯಾಸಗಳನ್ನುಂಟು ಮಾಡುತ್ತವೆ ಹಾಗೂ ಇಕ್ಟರಿಕ್ ಹೆಪಟೈಟಿಸ್ ಉಂಟು ಮಾಡುತ್ತದೆ. ಹರ್ಪಿಸ್ ಸಿಂಪ್ಲೆಕ್ಸ್ದಿಂದ ಹೆಪಟೈಟಿಸ್ ಸೋಂಕು ಉತ್ಪತ್ತಿ ಅತೀ ವಿರಳವಾಗಿದೆ.

ಆಲ್ಕೋಹಾಲ್ ಹೆಪಟೈಟಿಸ್: ಕಡಿಮೆ ಅವಧಿಯ ಅತೀ ಮದ್ಯಪಾನದಿಂದ ಅಥವಾ ದೀರ್ಘಾವಧಿಯ ಮದ್ಯಪಾನದಿಂದ ಉಂಟಾಗುತ್ತದೆ. ಸೋಂಕಿನಿಂದ ಚರ್ಮ ಹಾಗೂ ಕಣ್ಣುಗಳು ಹಳದಿ ವರ್ಣ ಹೊಂದುತ್ತವೆ. ಹೊಟ್ಟೆಯಲ್ಲಿ ನೀರು ತುಂಬುವುದು, ಅಸ್ವಸ್ಥತೆ, ಯಕೃತ್ ವೃದ್ಧಿ, ರಕ್ತದಲ್ಲಿ ಹೆಚ್ಚಾದ ಲಿವರ್ ಕಿಣ್ವಗಳು, ಸಿರೋಸಿಸ್, ಆಯಾಸ, ಮೂರ್ಛೆ, ಹೆಪ್ಯಾಟಿಕ್ ಎನ್ಸೆಫಲೊಪಥಿ ಹಾಗೂ ಕೆಲವು ಸಲ ಮರಣ ಉಂಟಾಗುತ್ತದೆ.

ಅಟೋಇಮ್ಯೂನೋ ಹೆಪಟೈಟಿಸ್ ಬಿ ಇದು ಇಮ್ಯೂನೋ ವ್ಯಾಧಿಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ರಕ್ತದಲ್ಲಿ ಅಧಿಕ ಇಮ್ಯೂನೋಗ್ಲೋಬಿಲೂನ್ಸ್ ಹಾಗೂ ಅಟೋ ಆ್ಯಂಟಿ ಬಾಡಿಸ್ಗಳು ಇರುತ್ತವೆ.

ಹೆಪಟೈಟಿಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳು:

ವಯಕ್ತಿಕ, ಮನೆಯ ಹಾಗೂ ಸಾಮಾಜಿಕ ಸ್ವಚ್ಛತೆಗಳು ರೋಗ ಹರಡುವಿಕೆಯನ್ನು ತಡೆಗಟ್ಟಲು ಮಹತ್ವದ ಪಾತ್ರ ವಹಿಸುತ್ತವೆ.

ಶರೀರದ ಅತಿಯಾದ ತೂಕವನ್ನು ಕಡಿಮೆ ಮಾಡಬೇಕು.

ಸಮತೋಲನ ಆಹಾರ ಸೇವಿಸಬೇಕು.

ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ವ್ಯಾಯಾಮಗಳನ್ನು ಮಾಡಬೇಕು.

ಕೀಟನಾಶಕ, ರಾಸಾಯನಿಕ ಇತ್ಯಾದಿಗಳಿಂದ ದೂರವಿರಬೇಕು.

ಮದ್ಯಪಾನ, ಧೂಮ್ರಪಾನ, ಗುಟಕಾ, ಗಾಂಜಾ ಮುಂತಾದ ದುಶ್ಚಟಗಳನ್ನು ತ್ಯಜಿಸಬೇಕು.

ಅಸ್ವಚ್ಛತೆಯಿಂದ ಕೂಡಿದ ಸೂಜಿಗಳನ್ನು ಬಳಸಬಾರದು.

ಬೇರೆಯವರ ರಕ್ತವು ನಿಮ್ಮ ರಕ್ತವನ್ನು ಸಂಪರ್ಕಿಸಿದಾಗ ಕೂಡಲೇ ವೈದ್ಯರನ್ನು ಭೇಟಿಯಾಗಿರಿ.

ಟೂಥಬ್ರಷ್, ರೇಜರ್ ಇತ್ಯಾದಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು.

ಸುರಕ್ಷಿತ ಲೈಂಗಿಕತೆ ಹೊಂದಬೇಕು.

ಮಲಮೂತ್ರ ವಿಸರ್ಜನೆ ಮಾಡಿದಾಗ ಹಾಗೂ ಆಹಾರ ಸೇವಿಸುವ ಮೊದಲು ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು.

ಅನಾವಶ್ಯಕ ಹಾಗೂ ಅತಿಯಾಗಿ ಔಷಧಿಗಳನ್ನು ಸೇವಿಸಬಾರದು.

ಎಲ್ಲರೂ ಹೆಪಟೈಟಿಸ್ಬಿ ವ್ಯಾಕ್ಸಿನ್ ತೆಗೆದುಕೊಳ್ಳಬೇಕು.

Dr. Shivashankarprasad S. Devalapur

ಡಾ|| ಎಸ್.ಎಸ್. ದೇವಲಾಪೂರ

ಎಂ.ಡಿ. (ಆಯು) ,ವೈದ್ಯಸಾಹಿತಿಗಳುಬೈಲಹೊಂಗಲ ಮೊಃ 9535568309

1 COMMENT

LEAVE A REPLY

Please enter your comment!
Please enter your name here