ಹೆಪಟೈಟಿಸ್ ಬಗ್ಗೆ ತಿಳಿದುಕೊಳ್ಳಿ:

ಹೆಪಾಟೈಟಿಸ ವೈರಸ್ ಅತ್ಯಂತ ಮಾರಕವಾಗಿದ್ದು, ಅವುಗಳ ಕುರಿತು ತಿಳಿದುಕೊಳ್ಳುವದು ಅತ್ಯಂತ ಅವಶ್ಯ. ವೈರಲ್ ಹೆಪಟೈಟಿಸ್
ಕಾಮಾಲೆ ರೋಗಕ್ಕೆ ಕಾರಣವಾಗಿದ್ದು ರಕ್ತದಲ್ಲಿ ಟ್ರಾನ್ಸ್ ಅಮೈನೇಜ್ ಕಿಣ್ವಗಳು ಹೆಚ್ಚಾಗಿರುತ್ತವೆ. ತಲೆನೋವು, ಮಾಂಸಖಂಡಗಳ
ನೋವು, ಕೀಲುನೋವು, ವಾಕರಿಕೆ ಹಾಗೂ ಅರುಚಿ ಕಾಣಿಸಿಕೊಂಡು ಎರಡು ವಾರಗಳವರೆಗೆ ಕಾಮಾಲೆ ಉತ್ಪತ್ತಿಯಾಗುತ್ತದೆ. ವಾಂತಿ ಹಾಗೂ
ಹೊಟ್ಟೆಯಲ್ಲಿ ಅಸ್ವಸ್ಥತೆಗಳಿರುತ್ತವೆ.
ವೈರಲ್ ಹೆಪಟೈಟಿಸ್‍ಗೆ ಕಾರಣ: ಹೆಪಟೈಟಿಸ್ ಎ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ, ಹೆಪಟೈಟಿಸ್ ಈ, ಸೈಟೋಮೇಗಾಲೋ ವೈರಸ್,
ಎಪಸ್ಟೈನ್‍ಬಾರ್ ವೈರಸ್, ಹರ್ಪಿಸ್ ಸಿಂಪ್ಲೆಕ್ಸ ಮತ್ತು ಯಲೋ ಫಿವರ್. ಎಕ್ಯೂಟ್ ವೈರಲ್ ಹೆಪಟೈಟಿಸ್‍ನ ತೊಂದರೆಗಳೆಂದರೆ,
ಎಕ್ಯೂಟ್ ಲಿವರ್ ಫೇಲ್ಯೂಅರ್, ಕೊಲೆಸ್ಟಾಟಿಕ್ ಹೆಪಟೈಟಿಸ್, ಅಪ್ಲಾಸ್ಟಿಕ್ ಅನಿಮಿಯಾ, ಕ್ರೋನಿಕ್ ಲಿವರ್ ಡಿಸಿಜ್, ಸಿರೋಸಿಸ್
ಹಾಗೂ ರಿಲಾಪ್ಸಿಂಗ್ ಹೆಪಟೈಟಿಸ್. ಹೆಪಟೈಟಿಸ್ ವೈರಸ್‍ಗಳು ಬೇರೆ ಬೇರೆ ಪಂಗಡಕ್ಕೆ ಸೇರಿದ್ದರು ಕೂಡ ಸಾಮಾನ್ಯ
ಅಂಶಗಳನ್ನೊಳಗೊಂಡ ಪಿತ್ತ ಜನಕಾಂಗದ ವ್ಯಾಧಿಗಳನ್ನುಂಟು ಮಾಡುತ್ತವೆ.
ಹೆಪಟೈಟಿಸ್ ‘ಎ’: ಇದು ಎಂಟಿರೋ ವೈರಸ್‍ನ ಪಿಕೋರ್ನಾ ವೈರಸ್ ಗುಂಪಿಗೆ ಸೇರಿದೆ. ಮಲ-ಬಾಯಿ ಮೂಲಕ ಹರಡುತ್ತದೆ. ಸೋಂಕಿತ
ವ್ಯಕ್ತಿಯ ಲಕ್ಷಣಗಳು 2-3 ವಾರಗಳ ಮೊದಲು ಹಾಗೂ ನಂತರ 2 ವಾರಗಳವರೆಗೆ ಮಲದಲ್ಲಿ ವೈರಸ್‍ಗಳು ಕಂಡು ಬರುತ್ತವೆ. ಇದು
ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಶೇ. 30 ರಷ್ಟು ಯುವಕರಲ್ಲಿ ಕಾಮಾಲೆ ಸೋಂಕಿನ ಪುರಾವೆಗಳು ಕಾಣಿಸಿಕೊಳ್ಳುವುದಿಲ್ಲ.
ಜನದಟ್ಟಣೆ ಹಾಗೂ ಅಸ್ವಚ್ಛತೆಯಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರಕ್ತದಲ್ಲಿ ಆ್ಯಂಟಿ-ಹೆಚ್‍ಎವ್ಹಿ ಕಂಡುಬರುತ್ತದೆ.
ರಕ್ತದಲ್ಲಿ ಅಲ್ಕಲೈನ್ ಪಾಸ್ಪಟೇಜ್ ಪ್ರಮಾಣ ಕೋಲಿಸ್ಯಾಟಿಕ್ ಫೇಜ್‍ನಲ್ಲಿ ಹೆಚ್ಚಾದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.
ಹೆಪಟೈಟಿಸ್ ‘ಬಿ’: ಇಲ್ಲಿಯವರೆಗೂ ಜಗತ್ತಿನಾದ್ಯಂತ 300 ಮಿಲಿಯನ್ ಜನರಿಗೆ ಈ ಸೋಂಕು ತಗುಲಿದೆ. ಇದು ದೀರ್ಘಕಾಲದ ಲಿವರ್
ವ್ಯಾಧಿಗಳಿಗೆ ಹಾಗೂ ಹಿಪ್ಯಾಟೋ ಸೆಲ್ಯೂಲಾರ್ ಕಾರ್ಸಿನೋಮಾಗೆ ಪ್ರಮುಖ ಕಾರಣವಾಗಿದೆ. ಸುಮಾರು ಶೇ. 90ರಷ್ಟು ಸೋಂಕು
ಹೊಂದಿದ ಗರ್ಭಿಣಿಯಿಂದ ನವಜಾತ ಶಿಶುವಿಗೆ ಹರಡುತ್ತದೆ. ಶೇ. 10ರಷ್ಟು ಸ್ಟರಿಲೈಸ್ಡ್ ಇಲ್ಲದ ಚುಚ್ಚುಮದ್ದು, ಟ್ಯಾಟೂ,
ಅಕ್ಯೂಪಂಚರ್ ಸೂಜಿಗಳನ್ನು, ಅನಸ್ಕ್ರೀನ್ಡ್ ಬ್ಲಡ್ ಪ್ರೋಡಕ್ಟ್ಸಗಳನ್ನು ಬಳಸುವುದರಿಂದ ಹಾಗೂ ಅಸುರಕ್ಷಿತ ಲೈಂಗಿಕತೆಯಿಂದ
ಹರಡುತ್ತದೆ. ಈ ಸೋಂಕಿನಿಂದ ಹೆಚ್‍ಬಿಎಸ್‍ಎಜಿ ರಕ್ತದಲ್ಲಿ ಗೋಚರಿಸುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲ. ಹೆಪಟೈಟಿಸ್ ‘ಬಿ’ ವ್ಯಾಕ್ಸಿನ್
ತೆಗೆದುಕೊಳ್ಳುವುದರಿಂದ ಇದರಿಂದ ರಕ್ಷಣೆ ಪಡೆಯಬಹುದು. ದೀರ್ಘಕಾಲದ ಸೋಂಕಿತರು ಸಿರೋಸಿಸ್ ಹಾಗೂ ಹಿಪ್ಯಾಟೋ ಸೆಲ್ಯೂಲಾರ್
ಕಾರ್ಸಿನೋಮಾದಿಂದ ಬಳಲುತ್ತಾರೆ. ಈ ಸೋಂಕಿನಲ್ಲಿ ಲಿವರ್ ಟ್ರಾನ್ಸಪ್ಲಾಂಟೇಶನ್ ನಿಷೇಧಿಸಲಾಗಿದೆ.
ಹೆಪಟೈಟಿಸ್ ‘ಡಿ’ (ಡೆಲ್ಟಾ ವೈರಸ್): ಇದು ಆಫ್ರಿಕಾ ಹಾಗೂ ಸೌಥ್ ಅಮೇರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ‘ಬಿ’ ವೈರಸ್
ಜೊತೆಗೆ ಬೆಳವಣಿಗೆ ಹೊಂದಿ ಕಾಮಾಲೆಯನ್ನು ಉಲ್ಬಣಗೊಳಿಸುತ್ತದೆ. ಹೆಪಟೈಟಿಸ್ ‘ಬಿ’ ಯನ್ನು ಪರಿಣಾಮಕಾರಿಯಾಗಿ
ತಡೆಗಟ್ಟುವುದರಿಂದ ಹೆಪಟೈಟಿಸ್ ‘ಡಿ’ ತಡೆಗಟ್ಟಬಹುದು.
ಹೆಪಟೈಟಿಸ್ ‘ಸಿ’: ಇದು ಆರ್‍ಎನ್‍ಎ ಪ್ಲಾವಿ ವೈರಸ್‍ನಿಂದ ಹರಡುತ್ತದೆ. ಬ್ಲಡ್ ಟ್ರಾನ್ಸಪ್ಯೂಜ್ ಅಥವಾ ಬ್ಲಡ್ ಪ್ರೋಡಕ್ಟ್ಸ
ಟ್ರಾನ್ಸಪ್ಯೂಜ್‍ನಿಂದ ಕಾಮಾಲೆ ಜೊತೆಗೆ ಎಕ್ಯೂಟ್ ಹೆಪಟೈಟಿಸ್ ಸಿಂಡ್ರೋಮ್ ಉತ್ಪತ್ತಿ ಮಾಡುತ್ತದೆ. ಬೇರೆಯವರು ಬಳಸಿದ ರೇಜರ್,

logo


ಟೂತ್‍ಬ್ರಷ್ ಬಳಸುವುದರಿಂದ, ಅಸ್ವಚ್ಛತೆಯಿಂದ ಕೂಡಿದ ಸೂಜಿಗಳನ್ನು ಉಪಯೋಗಿಸುವುದರಿಂದ, ಸೋಂಕಿತ ಗರ್ಭಿಣಿಯಿಂದ ನವಜಾತ
ಶಿಶುವಿಗೆ, ಅನ್‍ಸ್ಕ್ರೀನ್ಡ್ ರಕ್ತದ ಉತ್ಪನ್ನಗಳನ್ನು ಬಳಸುವವರಿಗೆ ಹೆಚ್‍ಸಿವ್ಹಿ ಸೋಂಕು ತಗುಲುವ ಸಾಧ್ಯತೆ ಇರುತ್ತದೆ.
ಹೆಪಟೈಟಿಸ್ ‘ಈ’: ಇದು ಗರ್ಭಿಣಿಯರಲ್ಲಿ ಪಿತ್ತಜನಕಾಂಗದ ವೈಫಲ್ಯ ಉಂಟು ಮಾಡಬಹುದು. ಇದು ಹೆಪಟೈಟಿಸ್ ‘ಎ’ ಲಕ್ಷಣಗಳನ್ನು
ಹೊಂದಿರುತ್ತದೆ. ಸೈಟೋಮೆಗಲೋ ವೈರಸ್ ಹಾಗೂ ಎಪ್‍ಸ್ಟೀನ್‍ಬಾರ್ ವೈರಸ್‍ಗಳು ಲಿವರ್ ಫಂಕ್ಷನ ಟೆಸ್ಟಗಳಲ್ಲಿ
ವ್ಯತ್ಯಾಸಗಳನ್ನುಂಟು ಮಾಡುತ್ತವೆ ಹಾಗೂ ಇಕ್ಟರಿಕ್ ಹೆಪಟೈಟಿಸ್ ಉಂಟು ಮಾಡುತ್ತದೆ. ಹರ್ಪಿಸ್ ಸಿಂಪ್ಲೆಕ್ಸ್‍ದಿಂದ ಹೆಪಟೈಟಿಸ್
ಸೋಂಕು ಉತ್ಪತ್ತಿ ಅತೀ ವಿರಳವಾಗಿದೆ.
ಆಲ್ಕೋಹಾಲ್ ಹೆಪಟೈಟಿಸ್: ಇದು ಕಡಿಮೆ ಅವಧಿಯ ಅತೀ ಮದ್ಯಪಾನದಿಂದ ಅಥವಾ ದೀರ್ಘಾವಧಿಯ ಮದ್ಯಪಾನದಿಂದ
ಉಂಟಾಗುತ್ತದೆ. ಈ ಸೋಂಕಿನಿಂದ ಚರ್ಮ ಹಾಗೂ ಕಣ್ಣುಗಳು ಹಳದಿ ವರ್ಣ ಹೊಂದುತ್ತವೆ. ಹೊಟ್ಟೆಯಲ್ಲಿ ನೀರು ತುಂಬುವುದು,
ಅಸ್ವಸ್ಥತೆ, ಯಕೃತ್ ವೃದ್ಧಿ, ರಕ್ತದಲ್ಲಿ ಹೆಚ್ಚಾದ ಲಿವರ್ ಕಿಣ್ವಗಳು, ಸಿರೋಸಿಸ್, ಆಯಾಸ, ಮೂರ್ಛೆ, ಹೆಪ್ಯಾಟಿಕ್ ಎನ್‍ಸೆಫಲೊಪಥಿ
ಹಾಗೂ ಕೆಲವು ಸಲ ಮರಣ ಉಂಟಾಗುತ್ತದೆ.
ಅಟೋಇಮ್ಯೂನೋ ಹೆಪಟೈಟಿಸ್: ಇದು ಇಮ್ಯೂನೋ ವ್ಯಾಧಿಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ರಕ್ತದಲ್ಲಿ ಅಧಿಕ
ಇಮ್ಯೂನೋಗ್ಲೋಬಿಲೂನ್ಸ್ ಹಾಗೂ ಅಟೋ ಆ್ಯಂಟಿ ಬಾಡಿಸ್‍ಗಳು ಇರುತ್ತವೆ.
ಮುಂಜಾಗ್ರತಾ ಕ್ರಮಗಳು

• ವಯಕ್ತಿಕ, ಮನೆಯ ಹಾಗೂ ಸಾಮಾಜಿಕ ಸ್ವಚ್ಛತೆಗಳು ರೋಗ ಹರಡುವಿಕೆಯನ್ನು ತಡೆಗಟ್ಟಲು ಮಹತ್ವದ ಪಾತ್ರ ವಹಿಸುತ್ತವೆ.
• ಶರೀರದ ಅತಿಯಾದ ತೂಕವನ್ನು ಕಡಿಮೆ ಮಾಡಬೇಕು. ಸಮತೋಲನ ಆಹಾರ ಸೇವಿಸಬೇಕು.
• ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ವ್ಯಾಯಾಮಗಳನ್ನು ಮಾಡಬೇಕು.
• ಕೀಟನಾಶಕ, ರಾಸಾಯನಿಕ ಇತ್ಯಾದಿಗಳಿಂದ ದೂರವಿರಬೇಕು.
• ಮದ್ಯಪಾನ, ಧೂಮ್ರಪಾನ, ಗುಟಕಾ, ಗಾಂಜಾ ಮುಂತಾದ ದುಶ್ಚಟಗಳನ್ನು ತ್ಯಜಿಸಬೇಕು.
• ಅಸ್ವಚ್ಛತೆಯಿಂದ ಕೂಡಿದ ಸೂಜಿಗಳನ್ನು ಬಳಸಬಾರದು.
• ಬೇರೆಯವರ ರಕ್ತವು ನಿಮ್ಮ ರಕ್ತವನ್ನು ಸಂಪರ್ಕಿಸಿದಾಗ ಕೂಡಲೇ ವೈದ್ಯರನ್ನು ಭೇಟಿಯಾಗಿರಿ.
• ಟೂಥಬ್ರಷ್, ರೇಜರ್ ಇತ್ಯಾದಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು.
• ಸುರಕ್ಷಿತ ಲೈಂಗಿಕತೆ ಹೊಂದಬೇಕು. ಮಲ-ಮೂತ್ರ ವಿಸರ್ಜನೆ ಮಾಡಿದಾಗ ಹಾಗೂ ಆಹಾರ ಸೇವಿಸುವ ಮೊದಲು ಕೈಗಳನ್ನು
ಸೋಪಿನಿಂದ ತೊಳೆದುಕೊಳ್ಳಬೇಕು. ಅತಿಯಾಗಿ ಔಷಧಿಗಳನ್ನು ಸೇವಿಸಬಾರದು. ಹೆಪಟೈಟಿಸ್ ‘ಬಿ’ ವ್ಯಾಕ್ಸಿನ್ ತೆಗೆದುಕೊಳ್ಳಬೇಕು.
ಆಯುರ್ವೇದ ಶಾಸ್ತ್ರದಲ್ಲಿ ಪ್ರಮುಖವಾಗಿ ಭೂಮ್ಯಾಮಲಕಿ, ಅಮೃತ ಬಳ್ಳಿ, ತ್ರಿವೃತ್, ಕಾಲಮೇಘ, ಕಟುಕಿ, ಪುನರ್ನವಾ, ಕಾಕಮಾಚಿ,
ಕಾಸನಿ ಮತ್ತು ಹರಿತಕಿ ಮುಂತಾದ ಔಷಧೀಯ ಸಸ್ಯಗಳನ್ನು ಯಕೃತ್ ರೋಗಗಳಲ್ಲಿ ಉಪಯೋಗಿಸುತ್ತಾರೆ.
ಈ ಜುಲೈ 28 ರಂದು ಹೆಪಟೈಟಿಸ್ (ಪಿತ್ತಜನಕಾಂಗದ ಉರಿಯೂತ) ಬಗ್ಗೆ ಅರಿವು ಮೂಡಿಸಲು ‘ಹೆಪಟೈಟಿಸ್ ಕಾಂಟ್ ವೇಟ್’ ಎಂಬ
ಘೋಷಣೆಯೊಂದಿಗೆ ಆಚರಿಸುತ್ತಿದ್ದೇವೆ ಹಾಗೂ ಹೆಪಟೈಟಿಸ್ ‘ಬಿ’ ವೈರಸ್ ಕಂಡು ಹಿಡಿದ ನೋಬೆಲ್ ಪ್ರಶಸ್ತಿ ವಿಜೇತ ಬಾರೂಕ್
ಸ್ಯಾಮುಯಲ್ ಬ್ಲಂಬರ್ಗ್ ಅವರ ಗೌರವಾರ್ಥ ಪ್ರತಿ ವರ್ಷ ಜುಲೈ 28 ರಂದು ಅಂತರಾಷ್ಟ್ರೀಯ ಹೆಪಟೈಟಿಸ್ ದಿನಾಚರಣೆ
ಆಚರಿಸುತ್ತಿದ್ದೇವೆ.

Dr. Shivashankarprasad S. Devalapur

ಡಾ|| ಎಸ್.ಎಸ್. ದೇವಲಾಪೂರ
ಎಂ.ಡಿ. (ಆಯು)
ವೈದ್ಯಸಾಹಿತಿಗಳು, ಬೈಲಹೊಂಗಲ
ಮೊಃ 9535568309

Popular Doctors

Related Articles