ತೀವ್ರ ಎದೆನೋವು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 78 ವರ್ಷದ ವ್ಯಕ್ತಿಯು ತಪಾಸಣೆಗೆ ಬಂದಾಗ, ಮಹಾಅಫದಮನಿಯ ಕವಾಟವು ಹಾನಿಗೊಳಗಾಗಿರುವದು ಕಂಡು ಬಂದಿತು. ತಡಮಾಡದ ನಗರದ ಹರಿಯಂತ ಆಸ್ಪತ್ರೆಯ ಹಿರಿಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಎಂ ಡಿ ದಿಕ್ಷಿತ ಅವರ ತಂಡವು ತಾವಿ ಶಸ್ತ್ರಚಿಕಿತ್ಸೆ ನೆರವೇರಿಸಿ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅತ್ಯಂತ ಕ್ಲಿಷ್ಠಕರವಾದ ಟ್ರಾನ್ಸಕ್ಯಾಥೆಟರ ಮಹಾಪಧಮನಿ ವಾಲ್ವ್ ರಿಪ್ಲೇಸಮೆಂಟ ( ತಾವಿ) ಶಸ್ತ್ರಚಿಕಿತ್ಸೆಯನ್ನು ಬೆಳಗಾವಿ ನಗರದ 78 ವರ್ಷದ ರೋಗಿಯೊಬ್ಬರಿಗೆ ಮಾಡುವದರ ಮೂಲಕ ಕೆಲವೇ ದಿನಗಳಲ್ಲಿ ಆಸ್ಪತ್ರೆಯು
ಮೂರನೇ ಎದೆಗೂಡಿನ ಶಸ್ತ್ರಚಿಕಿತ್ಸೆಗೊಳ್ಲಪಡಿಸಿ ಖ್ಯಾತಿಯನ್ನು ಗಳಿಸಿದೆ. ಟಾವಿ ಅಂದರೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್. ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸಾ ವಿಧಾನದೊಂದಿಗೆ ರೋಗಿಯ ಹಾನಿಗೊಳಗಾದ ಮಹಾಪಧಮನಿಯ ಕವಾಟವನ್ನು ಚಿಕ್ಕ ರಂದ್ರದ ಮೂಲಕ ನೆರವೇರಿಸಲಾಗಿದ್ದು, ದೇಹಕ್ಕಾಗುವ ದೊಡ್ಡ ಗಾಯದಿಂದ ಮುಕ್ತಗೊಳಿಸಲಾಗಿದೆ. ಅರಿಹಂತ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಹಿರಿಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಎಂ. ಡಿ. ದೀಕ್ಷಿತ್ ಅವರಿಗೆ ಡಾ. ಅಮೋಲ್ ಸೋನ್ವೆ, ಡಾ. ಪ್ರಭು ಹಳಕಟ್ಟಿ ಹಾಗೂ ಡಾ. ಪ್ರಶಾಂತ ಎಂ ಬಿ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.
ತೆರೆದ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸುವ ಬದಲು ಚಿಕ್ಕ ರಂದ್ರದ ಮೂಲಕ ಕವಾಟವನ್ನು ಬದಲಾಯಿಸಲು ಕೇವಲ ಒಂದೂವರೆ ಗಂಟೆಗಳ ಕಾಲದಲ್ಲಿ ನೆರವೇರಿಸಲಾಯಿತು.
ಬೆಳಗಾವಿ ನಗರದ ಖಂಜರ ಗಲ್ಲಿ ನಿವಾಸಿ ರಫೀಕ್ ಅಹ್ಮದ್ ಘಿವಾಲೆ ಅವರಿಗೆ 78 ವರ್ಷ ವಯಸ್ಸಾದ ಕಾರಣ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಬದಲು ತಾವಿ ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಿದರು. ಕುತೂಹಲಕಾರಿಯಾಗಿ, ಶಸ್ತ್ರಚಿಕಿತ್ಸೆ ನಡೆದ ಕೇವಲ 48 ಗಂಟೆಗಳ ಒಳಗಾಗಿ ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ತಜ್ಞವೈದ್ಯರ ತಂಡವನ್ನು ಅರಿಹಂತ ಆಸ್ಪತ್ರೆಯ ಅಧ್ಯಕ್ಷ ರಾವ್ ಸಾಹೇಬ ಪಾಟೀಲ, ನಿರ್ದೇಶಕ ಅಭಿನಂದನ ಪಾಟೀಲ ಅಭಿನಂದಿಸಿದ್ದಾರೆ. ಶಸ್ತ್ರಚಿಕಿತ್ಸೆ ಗೊಳಗಾದ ರೋಗಿಯ ಆರೋಗ್ಯವನ್ನು ವಿಚಾರಿಸಿ ಶೀಘ್ರ ಗುಣಮುಖವಾಗುವಂತೆ ಹಾರೈಸಿದರು.
ಈ ಹಿಂದೆ, ದೇಶದ ಎರಡನೇ ಮತ್ತು ಕರ್ನಾಟಕದಲ್ಲಿ ಮೊದಲನೆಯದದಾಗಿ ಮಹಾರಾಷ್ಟ್ರದ ಸಾಂಗೋಳದ 75 ವರ್ಷದ ಮಹಿಳೆಗೆ ಯಶಸ್ವಿಯಾಗಿ ನಡೆಸಲಾಯಿತು, ನಂತರ ಗೋವಾದ ವಾಸ್ಕೋದ 77 ವರ್ಷದ ವ್ಯಕ್ತಿ ಮತ್ತು ಈಗ ಮೂರನೇ ಶೀರ್ಷಧಮನಿ ಅಪಧಮನಿ 78 ವರ್ಷದ ರೋಗಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಅರಿಹಂತ್ ಆಸ್ಪತ್ರೆ ಮೂಲಕ ನಾಗರಿಕರಿಗಾಗಿ ಹಲವು ಚಟುವಟಿಕೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇಲ್ಲಿ 24 ಗಂಟೆಗಳ ಕಾಲ ಗ್ಯಾಸ್ಟ್ರೋ, ಲಿವರ್ ಸಂಬಂಧಿತ ಕಾಯಿಲೆಗಳ ಚಿಕಿತ್ಸೆ ಜೊತೆಗೆ ಯಕೃತ್ತಿನ ಕಸಿ ಭವಿಷ್ಯದಲ್ಲಿ ಮಾಡಲಾಗುತ್ತದೆ. ಇದರೊಂದಿಗೆ ಆರ್ಥೋಪೆಡಿಕ್, ಬೇರಿಯಾಟ್ರಿಕ್, ನ್ಯೂರೋ ವಿಭಾಗವನ್ನೂ ಶೀಘ್ರ ಆರಂಭಿಸಲಿದ್ದು, ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.