ನಿಮಗೆಲ್ಲ ತಿಳಿದಿರುವಂತೆ, ಈ ಶತಮಾನದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಆರೋಗ್ಯ ಸೇವೆ, ವೃತ್ತಿ, ವ್ಯವಸ್ಥೆ ಹಾಗೂ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸೇವಾ ಯೋದರ ಮೇಲೆ ಬೆಳಕು ಚೆಲ್ಲಲಾರಂಭಿಸಿದೆ. ಈ ಸಾಂಕ್ರಾಮಿಕ ಅವಧಿಯಲ್ಲಿ ಮುಂಬರುವ ದಿನಗಳು ನಮ್ಮ ಮೇಲೆ ಮತ್ತು ನಮ್ಮಲ್ಲಿ ಏನಿದೆ, ಹೇಗೆ ಪರಿಣಾಮ ಬೀರಲಿದೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಅತ್ಯಂತ ಪ್ರಮುಖವಾಗಿ ನಮ್ಮನ್ನು ನಾವು ಹೇಗೆ ಉಳಿಸಿಕೊಳ್ಳಬೆಕು ಹಾಗೂ ನಮಗೆ ಗೊತ್ತು ಹೃದಯದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದು. ಶೇ. 80ರಷ್ಟು ಕೋವಿಡ್ -19 ಪೀಡಿತ ರೋಗಿಗಳು ಹೃದಯ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ವಿಶ್ವದಲ್ಲಿ ಹೃದ್ರೋಗದಿಂದ ಸಾಯುವವರ ಪ್ರಮಾಣವು ಸಾಮಾನ್ಯವಾಗಿದ್ದು, ಮಧುಮೇಹ, ಧೂಮ್ರಪಾನ, ರಕ್ತದೊತ್ತಡ ಹಾಗೂ ಬೊಜ್ಜಿನಿಂದ ಬಳಲುತ್ತಿದ್ದರೆ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಅದರಲ್ಲಿಯೂ ಸಾಂಕ್ರಾಮಿಕ ರೋಗವಾದ ಕೋವಿಡ್ ಸಮಯದಲ್ಲಿ ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಯಿಂದ ನಮಗೂ ಕೂಡ ಅದು ಬಾಧಿಸಬಹುದು ಎಂದು ಹೃದ್ರೋಗಿಗಳು ಆಸ್ಪತ್ರೆಗೆ ಹೋಗುವದಕ್ಕೆ ಹಿಂಜರಿಯುತ್ತಿರುವದನ್ನು ನಾವು ಗಮನಿಸುತ್ತಿದ್ದೇವೆ.
ಹಿರಿಯ ಹೃದ್ರೋಗ ತಜ್ಞವೈದ್ಯರಾದ ಡಾ. ಸುರೇಶ ಪಟ್ಟೇದ ಅವರು ಮೈಆರೋಗ್ಯಕ್ಕೆ ನೀಡಿದ ವಿಶೇಷ ಸಂದರ್ಶನ.
ಕೊರೊನಾ ಕೋವಿಡ್ – 19 ಸೋಂಕಿಗೆ ಒಳಗಾದ ಸಾಮಾನ್ಯರಿಗಿಂತಲೂ ಹೃದ್ರೋಗ ಹೊಂದಿದವರಿಗೆ ತುಲನೆ ಮಾಡಿದಾಗ ಹೃದ್ರೋಗಿಗಳಿಗೆ ತೊಂದರೆ ಅಧಿಕವೇ ?
ಡಾ. ಸುರೇಶ ಪಟ್ಟೇದ : ಕೋವಿಡ್ -19 ಸೊಂಕು ಪೀಡಿತರಾದ ಹೃದರೋಗಿಳು ಅತೀ ಹೆಚ್ಚು ತೊಂದರೆಗೊಳಗಾಗುತ್ತಾರೆ. ಹೃದ್ರೋಗಿಗಳಿಗೆ ಸೋಂಕು ತಗುಲಿದರೆ ಅವರಿಗೆ ತೀವ್ರತರವಾದ ಸೊಂಕು ಹಾಗೂ ಅತ್ಯಧಿಕ ತೊಂದರೆ ಉಂಟಾಗಲಿದೆ. ಅಲ್ಲದೇ ಹೃದಯದ ಪರಿಸ್ಥಿಯು ತೀವ್ರ ಹದಗೆಡಲಿದೆ.
ಕೋವಿಡ್ -19 ಹರದಯಕ್ಕೆ ಹೇಗೆ ಪರಿಣಾಮ ಬೀರಲಿದೆ ?
ಡಾ. ಪಟ್ಟೇದ: ಹೌದು ಇದು ಸತ್ಯ, ಕೋವಿಡ್ ಸೊಂಕು ದಾಳಿ ಮಾಡಿದಾಗ ಹೃದಯದ ರಕ್ತನಾಳ ವ್ಯವಸ್ಥೆಯ ಮೇಲೆ ಒತ್ತಡ ಬೀರಿ ಶ್ವಸಕೋಶ ಹಾಳಾಗಲು ಕಾರಣವಾಗುತ್ತದೆ. ಇದರಿಂದ ರಕ್ತದಲ್ಲಿನ ಆಮ್ಲಜನಕವು ಕಡಿಮೆಗೊಂಡು ಸೊಂಕಿತ ಶ್ವಾಸಕೋಶವು ಆಮ್ಲಜನಕವನ್ನು ಸರಿಯಾಗಿ ಪೂರೈಸದಿದ್ದಾಗ ರಕ್ತದೊತ್ತಡವು ಉಂಟಾಗುತ್ತದೆ. ದೇಹದ ವಿವಿಧ ಅಂಗಾಂಗಳಿಗೆ ಶೀಘ್ರವಾಗಿ ಆಮ್ಲಜನಕವನ್ನು ಪೂರೈಸಲು ಸಾಧ್ಯವಾಗದೇ ಇದ್ದಾಗ ಹೃದಯವು ತೀವ್ರ ಒತ್ತಡಕ್ಕೆ ಒಳಗಾಗುತ್ತದೆ.
ಮಧುಮೇಹ, ರಕ್ತದೊತ್ತಡದ ಜೊತೆಗೆ ಹೃದ್ರೋಗ ಹೊಂದಿರವವರಿಗೆ ತೀವ್ರ ತೊಂದರೆಯಾಗಲಿದೆಯೇ ?
ಡಾ. ಪಟ್ಟೇದ: ಹೌದು . ಸುಮಾರು 60 ವರ್ಷ ಮೇಲ್ಪಟ್ಟವರು ಹಾಗೂ ಮಧುಮೇಹ, ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದು, ಕೊವಿಡ್ -19 ಸೊಂಕಿಗೆ ಒಳಗಾಗಿದ್ದರೆ ಗಂಭೀರ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಇವರಿಗೆ ಹೆಚ್ಚಿನ ಚಿಕಿತ್ಸೆ ಮತ್ತು ಆರೈಕೆ ಅತ್ಯವಶ್ಯ. ಅವರಿಗೆ ಸಲಹೆ ನೀಡುವದೇನೆಂದರೆ ಹೊರಗಿನ ಯಾವುದೇ ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೇ ಮನೆಯಲ್ಲಿಯೇ ಇರುವದು ಒಳಿತು. ಇವುಗಳಿಂದ ಬಳಲುತ್ತಿರುವ ರೋಗಿಗಳು ನಿರಂತರವಾಗಿ ಔಷಧಿಗಳನ್ನು ಪಡೆಯುತ್ತ ದೂರವಾಣಿ ಮುಖಾಂತರ ಸಲಹೆ ಸೂಚನೆಗಳನ್ನು ಪಡೆದು ಪಾಲಿಸಿ.
ಅಸ್ವಸ್ಥ ರೋಗಿಗಳಿಗೆ ನಿಮ್ಮ ಸಲಹೆ ಏನು ?
ಡಾ. ಪಟ್ಟೇದ: ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸಿದಂತೆ ಸರಳವಾದ ನಿಯಮಗಳಾದ ಸಾಮಾಜಿಕ ಅಂತರ, ಮಾಸ್ಕ ಧರಿಸುವದು ಹಾಗೂ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳುವದು ಇವುಗಳನ್ನು ಪಾಲಿಸಿದರೆ ಒಳಿತು. ಇನ್ನೊಮ್ಮೆ ನಾನು ಸಲಹೆ ನೀಡುವದೇನೆಂದರೆ ಮನೆಯಲ್ಲಿಯೇ ಉಳಿದುಕೊಂಡು ಕಾರ್ಯಚಟುವಟಿಕೆಗಳಿಂದ ಇರಬೇಕು. ನೀವೇನಾದರೂ ಕೊರೊನಾ ಗುಣಲಕ್ಷಣಗಳನ್ನು ಹೊಂದಿದ್ದರೆ ಶೀಘ್ರವಾಗಿ ತಪಾಸಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ. ತಡ ಮಾಡಿದಷ್ಟು ತೊಂದರೆಗಳು ಅತ್ಯಧಿಕ. ಎಂದಿಗೂ ಹೆದರಬೇಡಿ, ಇದು ಆತಂಕ ಮತ್ತು ಒತ್ತಡಕ್ಕೆ ಕಾರಣವಾಗುತ್ತದೆ.
ಹೃದ್ರೋಗಿಗಳು ಚಿಕಿತ್ಸಾ ಪ್ರಕ್ರಿಯೆ ಮಾಡಿಸಿಕೊಂಡ ಇಂಪ್ಲ್ಯಾಂಟಗಳ ಪರಿಸ್ಥಿತಿ ಹೇಗೆ ?
ಡಾ. ಪಟ್ಟೇದ: ಹೃದಯದ ವಾಲ್ವಗಳು, ಸ್ಟೆಂಟ್ಸ್, ಪೇಸ್ಮೇಕರ, ಅಂಪ್ಲಾಝ್ ಡಿವೈಸ್ಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಅವುಗಳಿಗೆ ಸೋಂಕು ಮಾರಕವಾಗುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ.
ಸೊಂಕು ಪೀಡಿತ ಸಾಮಾನ್ಯರಿಗಿಂತ ಹೃದ್ರೋಗ ರೋಗಿಗಳು ಕೋವಿಡ್ ಸೊಂಕು ತಗುಲಿದರೆ ಸಾವು ಹೆಚ್ಚು ?
ಡಾ. ಪಟ್ಟೇದ: ಸಮೀಕ್ಷೆಯಂತೆ ವಯಸ್ಸಾಗಿದ್ದು ಹೃದ್ರೋಗಕ್ಕೆ ಒಳಗಾಗಿದ್ದರೆ ಸಾವು ಸಂಭವಿಸುವ ಸಾಧ್ಯತೆಗಳು ಅಧಿಕವಾಗಿವೆ. ಆದರೆ ಇಂತಃ ಗಂಭಿರತೆಯಲ್ಲಿಯೂ ಕೂಡ ಹೃದಯ ತೊಂದರೆಯಿಂದ ಬಳಲುತ್ತಿರುವ ಅತ್ಯಧಿಕ ರೋಗಿಗಳು ಸೊಂಕಿನಿಂದ ಪಾರಾಗಿ, ಗುಣಮುಖರಾಗಿ ಹೊರಬಂದಿದ್ದಾರೆ.
ಮನೆಯಲ್ಲಿದ್ದುಕೊಂಡೇ ಹೃದಯದ ಆರೈಕೆ ಹೇಗೆ ಮಾಡಬೇಕು?
ಡಾ. ಪಟ್ಟೇದ: ಮನೆಯಲ್ಲಿಯೇ ಇರುವದರಿಂದ ಏಕಾಂಗಿತನ ಕಾಡುತ್ತ, ಸಮಾಜಿಕವಾಗಿ ಬೆರೆಯುವದರಿಂದ ವಂಚಿತವಾಗಿ ಮನಸ್ಸಿಗೆ ಬೇಸರವಾಗಬಹುದು. ಟಿವಿ ವೀಕ್ಷಣೆಯಿಂದ ದೂರವಿರಿ. ಧಾರ್ಮಿಕ ಗ್ರಂಥ, ಮನೆಗಳಲ್ಲಿನ ಆಟದಲ್ಲಿ ತೊಡಗಿಕೊಳ್ಳಿ. ಚಟುವಟಿಕೆಯಿಂದ ಇರಿ. ಮನೆಯ ಆವರಣದೊಳಗೆ ನಡೆದಾಡಿ, ಪ್ರಾಣಾಯಾಮ (ದೀರ್ಘ ಉಸಿರಾಟ ಕ್ರಿಯೆ) ಮಕ್ಕಳೊಂದಿಗೆ ಆಟ, ಧನಾತ್ಮಕ ನಡುವಳಿಕಯೊಂದಿಗೆ ಮನೆಯವರೊಂದಿಗೆ ಸಂತೋಷದಿಂದಿರಿ. ದೀರ್ಘ ವಿಶ್ರಾಂತಿ ತೆಗೆದುಕೊಳ್ಳುವದನ್ನು ಮರೆಯದಿರಿ.7-8 ಗಂಟೆಯವರೆಗಿನ ನಿದ್ದೆಯು ನಿಮ್ಮ ಶಕ್ತಿ ಮತ್ತು ಉಲ್ಲಾಸವನ್ನು ಹೆಚ್ಚಿಸುತ್ತದೆ.
ಡಾ. ಸುರೇಶ ಪಟ್ಟೇದ ಅವರು ಮುಖ್ಯವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಬೆಚ್ಚಗಿನ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು. ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಿ, ಕೇವಲ ಕೊವಿಡನಂತಹ ಪರಿಸ್ಥಿತಿಯಲ್ಲಿ ಮಾತ್ರವಲ್ಲ, ಎಲ್ಲ ಸಮಯದಲ್ಲಿಯೂ ನಿಮ್ಮ ರೋಗನಿರೋಧಕ ಶಕ್ತಿ ನಿರ್ವಹಿಸಲು ಸಹಾಯ ಮಾಡುತ್ತದೆ.