ಚಳಿಗಾಲ ಪ್ರಾರಂಭವಾಗಿ ಈಗ ಕೊನೆಯ ಹಂತದಲ್ಲಿದೆ. ಅದರಲ್ಲಿಯೂ ಜನೇವರಿ ತಿಂಗಳಲ್ಲಿ ಸಾಕಷ್ಟು ಚಳಿಯಿಂದ ಕೂಡಿರುತ್ತದೆ. ಮುಂಜಾನೆ ಮತ್ತು ಸಾಯಂಕಾಲದ ಅವಧಿಯಲ್ಲಿ ಕೊರೆಯುವ ಚಳಿ, ತಂಪಾದ ಬೀಸು ಗಾಳಿಯಿಂದ ಹಿರಿಯ ನಾಗರಿಕರು ಮತ್ತು ಚಿಕ್ಕ ಮಕ್ಕಳು ಮುಂಜಾಗೃತೆವಹಿಸಬೇಕಾಗುತ್ತದೆ. ಶೀತ ಜ್ವರ, ಉಸಿರಾಟದ ತೊಂದರೆ, ಕೆಮ್ಮು, ಕಫದಿಂದ ಬಳಲುತ್ತಿರುವವರು ನಿರ್ಲಕ್ಷಿಸದೇ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ ಹೃದಯ ತಜ್ಞವೈದ್ಯರಾದ ಡಾ. ಸುರೇಶ ಪಟ್ಟೇದ ಅವರು.
ತೀವ್ರತರವಾದ ಚಳಿಯಿಂದಾಗಿ ಸಾಮಾನ್ಯವಾಗಿ ಹೃದಯದ ರಕ್ತನಾಳಗಳು ಸಂಕುಚಿತಗೊಂಡು ರಕ್ತÀ ಸಂಚಾರದಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಸಾರಾಗವಾಗಿ ಹರಿದಾಡಬೇಕಿರುವ ರಕ್ತವು ಚಳಿಗಾಲದಲ್ಲಿ ಒತ್ತಡದಿಂದ ಚಲನೆಗೊಳ್ಳುತ್ತದೆ. ಇದರಿಂದ ಹೃದಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಹೃದಯಾಘಾತವಾಗುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಆದ್ದರಿಂದ ಹೃದಯ ರೋಗಿಗಳು, ಹೃದಯ ಶಸ್ತ್ರ ಚಿಕಿತ್ಸೆಗೊಳಗಾದವರು, ಹೃದಯಾಘಾತವನ್ನು ಅನುಭವಿಸಿರುವವರು ಚಳಿಯಿಂದ ಸಾಕಷ್ಟು ರಕ್ಷಿಸಿಕೊಳ್ಳಬೇಕು.
ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಸಹ ಚಳಿಗಾಲದಲ್ಲಿ ಅಧಿಕವಾಗಿ ಹೃದಯಾಘಾತಗಳಾಗಿರುವದನ್ನು ಅಂಕಿ–ಸಂಖ್ಯೆಗಳ ಮುಖಾಂತರÀ ನಿಖರವಾಗಿ ಖಚಿತಪಡಿಸಿವೆ. ಆದ್ದರಿಂದ ವಿಶೇಷವಾಗಿ ಹಿರಿಯ ನಾಗರಿಕರು ಚಳಿಗಾಲದಲ್ಲಿ ಬೇಗ ವಾಯು ವಿಹಾರಕ್ಕೆ ಹೋಗುವದು ಸೂಕ್ತವಲ್ಲ. ಚಳಿಗಾಲದಲ್ಲಿ ತಂಪಾದ ನೀರಿನ ಸ್ನಾನ ಮತ್ತು ರಾತ್ರಿ ಪ್ರವಾಸವನ್ನು ಮಾಡದಂತೆ ಎಚ್ಚರಿದ್ದಾರೆ. ಹಿತವಾದ ಸೂರ್ಯನ ಬಿಸಿಲಿನಲ್ಲಿ ವಾಯವಿಹಾರ ಮಾಡುವದು ಒಳಿತು. ಮನೆಯಲ್ಲಿ ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳದೇ ಹಗುರವಾದ ವ್ಯಾಯಾಮ ಮತ್ತು ಚಿಕ್ಕ ಪುಟ್ಟ ಕೆಲಸದಲ್ಲಿ ನಿರತರಾಗಿ ಚಟುವಟಿಕೆಯ ದಿನಚರಿಯಿಂದರಬೇಕು. ಬೆಚ್ಚನಯ ನೀರಿನ ಸೇವನೆ, ತಾಜಾ ಮತ್ತು ಬಿಸಿಯಾದ ಆಹಾರ ಸೇವನೆ ಮಾಡಬೇಕು. ಚಳಿಯಲ್ಲಿ ಸ್ವೆಟರ್ ಬಳಕೆ ಮತ್ತು ತಲೆಗೆ ಟೊಪ್ಪಿಗೆ ಅಥವಾ ಕಿವಿ ಮುಚ್ಚುವಂತೆ ಸ್ಕಾರ್ಪ್ ಮತ್ತು ಕಾಲುಗಳಿಗೆ ಕಾಲು ಚೀಲ ಹಾಗೂ ಬೂಟ್ಸ ಉಪಯೋಗಿಸುವದು ಅತ್ಯಂತ ಸುರಕ್ಷಿತ.
ಡಾ. ಪಟ್ಟೇದ ಅವರ ಪ್ರಕಾರ ಅತಿಯಾದ ಚಳಿ, ಹವಾಮಾನದಲ್ಲಿಯ ಏರಿಳಿತ, ವಾತಾವರಣದಲ್ಲಿಯ ಒತ್ತಡ ಕಡಿಮೆಯಾದಾಗ, ಮೋಡ ಕವಿದ ವಾತಾವರಣಗಳು ರಕ್ತ ಸಂಚಾರದಲ್ಲಿ ವ್ಯತಯವಾಗಿ ಹೃದಯಾಘಾತ ಹೆಚ್ಚಾಗುವ ಸಾಧ್ಯತೆಗಳಿವೆಂಬ ಆಬಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಚಳಿಗಾಲದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ತಗೆದುಕೊಳ್ಳಲು ತಿಳಿಸಿದ್ದಾರೆ.
Dr. Suresh V Patted, Prof. & Head of Cardiology &
Interventional Cardiologist @
KLES Dr. Prabhakar Kore Hospital & MRC, Belgaum