ಯುವಜನರಿಗೆ ಬೇಕಲ್ಲವೇ ಆರೋಗ್ಯ ವಿಮೆ?

ಕೃಪೆ : ಪ್ರಜಾವಾಣಿ

ಈಶ್ವರನಟರಾಜನ್ಎನ್.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಮೂರನೆಯ ಒಂದರಷ್ಟು (40 ಕೋಟಿ) ಯುವ ಜನರಿದ್ದಾರೆ. ದುಡಿಯುವವರಲ್ಲಿ ಅರ್ಧದಷ್ಟು ಜನ ಇವರೇ. ಜೀವನೋತ್ಸಾಹದ ಹಲವಾರು ಆಸಕ್ತಿಗಳನ್ನು ಹೊಂದಿರುವ ಮತ್ತು ಕೈಯಲ್ಲಿ ದುಡ್ಡು ಇರುವ ವರ್ಗವು ಹಲವು ಕಾರಣಗಳಿಗೆ ಇತರರ ಗಮನ ಸೆಳೆಯುತ್ತದೆ. ವಯಸ್ಸಿಗೆ ಬಂದಿರುವ ಇಬ್ಬರು ಮಕ್ಕಳ ತಂದೆಯಾಗಿರುವ ನಾನು ಮನೆಯಲ್ಲಿ ಅವರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇನೆ. ಅವರ ಬೇಕುಬೇಡಗಳೆಲ್ಲ ನನಗೆ ಗೊತ್ತು.

ಹೊಸ ತಲೆಮಾರಿನವರ ಮನಃಸ್ಥಿತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕೆಂದರೆ ಕೆಲವು ಸಂಗತಿಗಳತ್ತ ನಾವು ಗಮನ ಹರಿಸಬೇಕು. 1981ರಿಂದ 1996 ನಡುವಿನ ಅವಧಿಯಲ್ಲಿ ಜನಿಸಿದ ಪೀಳಿಗೆಮಿಲೆನಿಯಲ್ಸ್‌ ಎಂದು ಕರೆಸಿಕೊಳ್ಳುತ್ತಿದೆ. ದೇಶಿ ಅರ್ಥ ವ್ಯವಸ್ಥೆಯು ಸಾಂಪ್ರದಾಯಿಕ ಆರ್ಥಿಕತೆಯಿಂದ ಮುಕ್ತ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಯತ್ತ ಬದಲಾಗುತ್ತಿದ್ದ ವಿಶಿಷ್ಟ ಕಾಲಘಟ್ಟದಲ್ಲಿ ಪೀಳಿಗೆಯವರು ಜನಿಸಿದ್ದಾರೆ. ಸರಕು ಮತ್ತು ಸೇವೆಗಳಿಗೆ ಹಣ ವೆಚ್ಚ ಮಾಡುವುದರಲ್ಲಿ ಅವರು ಹೆಚ್ಚು ನಂಬಿಕೆ ಹೊಂದಿದ್ದಾರೆ.

ದೇಶದ ಬಳಕೆದಾರ ಪ್ರಧಾನ ಆರ್ಥಿಕತೆಯನ್ನು ಮುನ್ನಡೆಸಿಕೊಂಡು ಹೋಗುವವರಲ್ಲಿ ಅವರೂ ಒಬ್ಬರು. ಭವಿಷ್ಯದ ಬದುಕಿನ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲದಿರುವುದು, ಸದ್ಯದ ಪ್ರತಿಫಲಗಳ ಬಗ್ಗೆಯೇ ಹೆಚ್ಚು ಒಲವು ಹೊಂದಿರುವುದು, ವರ್ತಮಾನದಲ್ಲಷ್ಟೇ ಬದುಕುತ್ತಿರುವುದು ಅವರ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುವ ವಿಶಿಷ್ಟ ಗುಣಲಕ್ಷಣಗಳು. ಅವರಲ್ಲಿನ ಇಂತಹ ಮನಃಸ್ಥಿತಿಯ ಕಾರಣದಿಂದಾಗಿಯೇ ಆರೋಗ್ಯ ವಿಮೆ ವಿಚಾರವು ಅವರಿಂದ ಗಾವುದ ದೂರ ಇದೆ. ಕಾಫಿ, ಬರ್ಗರ್‌ ಸೇವನೆ, ಇನ್‌ಸ್ಟಾಗ್ರಾಂನಲ್ಲಿ ಸೆಲ್ಫಿ ಅಪ್‌ಲೋಡ್‌ ಮಾಡುವಂತಹ ಚಟುವಟಿಕೆಗಳಲ್ಲಿಯೇ ಅವರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ.

ಆರೋಗ್ಯ ವಿಮೆ ಎನ್ನುವುದು ದೀರ್ಘಾವಧಿ ಹೊಣೆಗಾರಿಕೆ. ನಾನು ಗಟ್ಟಿ ಮುಟ್ಟಾಗಿರುವೆ. ದಿನವೂ ಜಿಮ್‌ಗೆ ಹೋಗುವೆ. ಪೌಷ್ಟಿಕ ಆಹಾರ ಸೇವಿಸುವೆ. ಹೀಗಾಗಿ ಹಂತದಲ್ಲಿ ಅನಾರೋಗ್ಯ ನನ್ನನ್ನು ಬಾಧಿಸುವುದಿಲ್ಲಎಂದು ನನ್ನ ಹಿರಿಯ ಮಗ ಹೇಳುತ್ತಾನೆ. ಅವನ ವಯಸ್ಸಿನ ಬಹುತೇಕರ ಚಿಂತನಾಲಹರಿ ಇದೇ ಆಗಿದೆ. ಬಗೆಯ ಪ್ರವೃತ್ತಿಯಿಂದಾಗಿಯೇ ಅವರು ಆರೋಗ್ಯ ವಿಮೆ ಖರೀದಿಸುವುದನ್ನು ಮುಂದೂಡುತ್ತಲೇ ಇರುತ್ತಾರೆ. ಅವರಿಗೆ ವರ್ತಮಾನದ ಬದುಕೇ ಮುಖ್ಯ. ಭವಿಷ್ಯದಲ್ಲಿ ಆಕಸ್ಮಿಕವಾಗಿ ಎದುರಾಗಬಹುದಾದ ಅನಾರೋಗ್ಯ ಪರಿಸ್ಥಿತಿಯಲ್ಲಿ ಬಳಕೆ ಮಾಡಲು ವಿಮೆ ಪಡೆಯುವುದು ಹಂತದಲ್ಲಿ ಅನಗತ್ಯ ಎನ್ನುವುದು ಅವರ ವಿಚಾರಲಹರಿ.

ಆರೋಗ್ಯ ವಿಮೆಯು ದುಬಾರಿ, ವೃದ್ಧಾಪ್ಯದಲ್ಲಿ ಬೇಕಾಗುವ ಆರೋಗ್ಯ ವಿಮೆಗೆ ವಯಸ್ಸಿನಲ್ಲಿ ಪ್ರತಿ ವರ್ಷವೂ ಸಾವಿರಾರು ರೂಪಾಯಿ ವೆಚ್ಚ ಮಾಡುವುದು ಅನುತ್ಪಾದಕ ಎನ್ನುವ ಮನೋಭಾವವೂ ಅವರಲ್ಲಿ ಮನೆ ಮಾಡಿದೆ. ವಾಸ್ತವದಲ್ಲಿ ಇಂತಹ ಆಲೋಚನೆಯೇ ಸರಿಯಲ್ಲ.

ನಾವೇ ರೂಢಿಸಿಕೊಂಡಿರುವ ವೇಗದ ಜೀವನ ಶೈಲಿಯಿಂದಾಗಿ, ಮಾನಸಿಕ ಒತ್ತಡ, ಆತಂಕ, ಮಧುಮೇಹದ ಪ್ರಕರಣಗಳು ಹೆಚ್ಚುತ್ತಿವೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ವರದಿಯಾಗುತ್ತಿವೆ. ಡೆಂಗಿ, ಮಲೇರಿಯಾದಂತಹ ಕಾಯಿಲೆಗಳು ಹೆಚ್ಚುತ್ತಿವೆ. ಈಗ ಕೋವಿಡ್‌19 ಪಿಡುಗೂ ಬಾಧಿಸುತ್ತಿದೆ.

ತಾರುಣ್ಯಾವಸ್ಥೆಯಲ್ಲಿ ಆರೋಗ್ಯ ವಿಮೆ ಖರೀದಿಸುವುದು ಅಗ್ಗ. ವಯಸ್ಸಾದ ನಂತರ ವಿವಿಧ ಬಗೆಯ ಕಾಯಿಲೆಗಳು ಮನುಷ್ಯನನ್ನು ಕಾಡಬಹುದು, ಆಗ ಆರೋಗ್ಯ ವಿಮೆ ಪಡೆಯುವುದು ತುಸು ಕಷ್ಟವಾಗುತ್ತದೆ. ದುಬಾರಿಯಾಗಿಯೂ ಪರಿಣಮಿಸಿರುತ್ತದೆ.

ಆರೋಗ್ಯ ವಿಮೆ ಖರೀದಿಸುವ ಸುದೀರ್ಘ ಪ್ರಕ್ರಿಯೆ ಕೂಡ ಯುವ ಜನರು ಸೌಲಭ್ಯದಿಂದ ವಿಮುಖರಾಗಲು ಇನ್ನೊಂದು ಕಾರಣ. ಯುವ ಜನರೆಲ್ಲ ಈಗ ಡಿಜಿಟಲ್‌ ತಂತ್ರಜ್ಞಾನದ ವ್ಯಾಮೋಹಿಗಳು. ಅವರು ತಮಗಿಷ್ಟದ ತಿಂಡಿ, ಆಹಾರವನ್ನು ಆನ್‌ಲೈನ್‌ ಮೂಲಕವೇ ಖರೀದಿಸುತ್ತಾರೆ. ಮೊಬೈಲ್‌ ವಾಲೆಟ್‌ನಿಂದ ಸರಾಗವಾಗಿ ಹಣ ಪಾವತಿಸುತ್ತಾರೆ. ಮೊಬೈಲ್‌ ಆ್ಯಪ್‌ ಮೂಲಕವೇ ಟ್ಯಾಕ್ಸಿ ಬಾಡಿಗೆ ನೀಡುತ್ತಾರೆ. ಆದರೆ, ಆರೋಗ್ಯ ವಿಮೆ ಖರೀದಿಸುವ ಪ್ರಕ್ರಿಯೆಯು ಸುದೀರ್ಘವಾಗಿರುತ್ತದೆ. ಕಾಗದದಲ್ಲಿ ಮಾಹಿತಿ ಭರ್ತಿ ಮಾಡುವುದು ತಲೆನೋವಿನ ಕೆಲಸ ಎಂದೇ ಅವರು ಭಾವಿಸುತ್ತಾರೆ.

ಹೀಗಾಗಿ ಯುವ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ವಿಮೆ ಸೌಲಭ್ಯದ ವ್ಯಾಪ್ತಿಗೆ ತರಲು ಪಾಲಿಸಿ ಖರೀದಿ ಪ್ರಕ್ರಿಯೆಯನ್ನು ಹೆಚ್ಚು ಸರಳ ಮತ್ತು ತ್ವರಿತಗೊಳಿಸುವ ತುರ್ತು ಅಗತ್ಯ ಇದೆ. ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಪ್ರಯತ್ನಗಳು ನಡೆದಿವೆಆರೋಗ್ಯ ವಿಮೆಯ ಪ್ರಯೋಜನಗಳ ಬಗ್ಗೆ ಅವರಲ್ಲಿ ಹೆಚ್ಚಿನ ತಿಳಿವಳಿಕೆ ಮೂಡಿಸಲು ಇನ್ನಷ್ಟು ಪ್ರಯತ್ನಗಳು ನಡೆಯಬೇಕು. ಲಭ್ಯ ಇರುವ ವಿವಿಧ ಬಗೆಯ ಉತ್ಪನ್ನಗಳನ್ನು ಹೇಗೆ ಖರೀದಿಸಬೇಕು ಎಂಬ ಬಗ್ಗೆ ಯುವಕರಿಗೆ ಸಮಗ್ರ ಮಾಹಿತಿ ಸುಲಭವಾಗಿ ಸಿಗಬೇಕು.

ಸಾಮಾನ್ಯ ವಿಮೆ ಮಂಡಳಿಯು (ಜಿಐಸಿ), ವಿಮೆ ಕಂಪನಿಗಳ ಸಹಯೋಗದಲ್ಲಿ ನಿಟ್ಟಿನಲ್ಲಿ ವ್ಯಾಪಕವಾದ ಪ್ರಚಾರ ಆಂದೋಲನ ಹಮ್ಮಿಕೊಂಡಿದೆ. ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು. ಯುವಕರು ಹೆಚ್ಚಾಗಿ ಸಮಯ ಕಳೆಯುವ ಅಂತರ್ಜಾಲದ ವಿವಿಧ ತಾಣಗಳಲ್ಲಿ ಬಗ್ಗೆ ಪ್ರಚಾರ ಆಂದೋಲನ ನಡೆಯಬೇಕು. ಆನ್‌ಲೈನ್‌ನಲ್ಲಿಯೇ ಅವರು ವಿಮೆ ಪಾಲಿಸಿ ಖರೀದಿ ನಿರ್ಧಾರಕ್ಕೆ ಬರುವಂತಾಗಲು ಅಗತ್ಯ ಮಾಹಿತಿ ಕೈಗೆಟುಕುವಂತೆ ಇರಬೇಕು. ಅವರ ಅಗತ್ಯಗಳಿಗೆ ಅನುಗುಣವಾಗಿ ವಿಮೆ ಸೌಲಭ್ಯ ಕಲ್ಪಿಸುವ ಉತ್ಪನ್ನಗಳನ್ನೂ ಒದಗಿಸಬೇಕು.

ಅವರ ಬಜೆಟ್‌ಗೆ ಅನುಕೂಲಕರವಾದ ವಿಮೆ ಪರಿಹಾರ ಮೊತ್ತ, ಕ್ರೀಡೆ ಮತ್ತು ಸಾಹಸ ಚಟುವಟಿಕೆಗಳಿಗೆ ಹೆಚ್ಚುವರಿ ವಿಮೆ ಪರಿಹಾರದಂತಹ ಸೌಲಭ್ಯಗಳು ಲಭ್ಯ ಇರಬೇಕು. ಅವರ ಚಟುವಟಿಕೆಗಳನ್ನು ಆಧರಿಸಿ ಆರೋಗ್ಯ ವಿಮೆಯ ಕಂತು ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಕೋಟಕ್‌ ಜನರಲ್‌ ಇನ್ಶುರೆನ್ಸ್‌ ಕಂಪನಿಯು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮಗಳಡಿ, ಆರೋಗ್ಯ ರಕ್ಷಣೆಯ ನವೋದ್ಯಮಗೋಕಿ(GOQii) ಕಂಪನಿ ಸಹಯೋಗದಲ್ಲಿ ಇಂತಹ ವಿಮೆ ಸೌಲಭ್ಯವನ್ನು ಜಾರಿಗೆ ತಂದಿದೆ.

(ಲೇಖಕ ಕೋಟಕ್‌ ಜನರಲ್ ಇನ್ಶುರೆನ್ಸ್‌ನ ಸಿಒಒ)

lಯುವ ಜನರ ಮನೋಭಾವ ಬದಲಾಗಬೇಕು

lಸಮಗ್ರ ಮಾಹಿತಿ ಬೆರಳತುದಿಯಲ್ಲಿ ಸಿಗುವಂತಿರಲಿ

lಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಅಗತ್ಯ

lಆನ್ಲೈನ್ನಲ್ಲಿ ಸುಲಭ ಖರೀದಿ ಸೌಲಭ್ಯ 

lಹೆಚ್ಚುವರಿ ವಿಮೆ ಪರಿಹಾರ ಒದಗಬೇಕು

Popular Doctors

Related Articles