ನೇತ್ರದಾನ ಮಾಡಿ ಇನ್ನೊಬ್ಬರ ಬಾಳಿಗೆ ಬೆಳಕಾಗಿ

ಕಣ್ಣುಗಳಿದ್ದರೂ ಕೂಡ ಬಾಹ್ಯ ಸೌಂದರ್ಯ ಮತ್ತು ಕುಟುಂಬವನ್ನು ನೋಡಲು ಸಾಧ್ಯವಾಗದ ಪರಿಸ್ಥಿಯನ್ನು ಅಂಧತ್ವವು ದೃಷ್ಟಿಯನ್ನು ಕಸಿದುಕೊಂಡಿರುತ್ತದೆ. ಒಂದೇ ಒಂದು ದಿನ ವಿಶ್ವವನ್ನು ಕಣ್ಣಾರೆ ನೋಡದಿದ್ದರೆ ಜೀವಿಸುವದು ಅಸಾಧ್ಯ. ಶೇ. 90 ರಷ್ಟು ಸೌಂಜ್ಙೆಗಳು ಕಣ್ಣಿನಿಂದ ಮೆದುಳಿಗೆ ರವಾಣೆಯಾಗಿ ಎಲ್ಲ ಸೌಂದರ್ಯವನ್ನು ಸವಿಯಲು ಸಾಧ್ಯ. ವಿಶ್ವದಾದ್ಯಂತ ಅಂಧತ್ವ ಬಹು ದೊಡ್ಡ ಸಮಸ್ಯೆ. ಭಾರತದಲ್ಲಿ ಸದ್ಯ 12 ಮಿಲಿಯನ್ ಜನರು ಅಂಧತ್ವದಿಂದ ಬಳಲುತ್ತಿದ್ದು, ಇದರಲ್ಲಿ 1.20 ಲಕ್ಷ ಜನರು ಕಾರ್ನಿಯಲ್ ಅಂಧತ್ವದಿಂದ ಬಳಲುತ್ತಿದ್ದಾರೆ. ಅಲ್ಲದೇ ಪ್ರತಿವರ್ಷ 25 ರಿಂದ 30 ಸಾವಿರ ಜನರು ಈ ಗುಂಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕಾರ್ನಿಯಾ(ಕಣ್ಣಿನ ಪಟಲ) ಕಣ್ಣಿನ ಅತೀ ಮುಖ್ಯ ಅಂಗ. ಆದರೆ ಇದಕ್ಕೆ ಸೋಂಕು ತಗಲುವದು, ಗಾಯ, ಅಪೌಷ್ಟಿಕಾಂಶತೆ ಮತ್ತು ವಂಶವಾಹಿನಿ ಅಥವಾ ಜನ್ಮತಃ ತೊಂದರೆಗಳಿಂದ ಅಂಧತ್ವಕ್ಕೆ ಕಾರಣ. ಇದನ್ನು ತಡೆಗಟ್ಟಲು ಸಾಧ್ಯ.

Eye-Donation

ಮರಣಾ ನಂತರ ವ್ಯಕ್ತಿಯು ತನ್ನ ಆರೋಗ್ಯಕರ ಕಣ್ಣನ್ನು ದಾನ ಮಾಡುವದೇ ನೇತ್ರದಾನ. ಕಾರ್ನಿಯಾಗೆ ಸಂಬಂಧಿಸಿದಂತೆ ಬಂದ ಅಂಧತ್ವ ಮತ್ತು ನರ ಹಾನಿಯಂತಹ ಸಮಸ್ಯೆಯಿಂದ ಅಂಧತ್ವ ಬಂದವರಿಗೆ ಮಾತ್ರ ದಾನ ಮಾಡಿದ ಕಣ್ಣುಗಳಿಂದ ಸದುಪಯೋಗವಾಗುತ್ತದೆ. ಕಾರ್ನಿಯಾ ಕಸಿ ಮಾಡಿಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದರೆ, ದಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ದೇಶದಲ್ಲಿ ವಾರ್ಷಿಕ 75 ಸಾವಿರದಿಂದ ಒಂದು ಲಕ್ಷದವರೆಗಿನ ಕಾರ್ನಿಯಾಗಳ ಅಗತ್ಯವಿದೆ. ಆದರೆ, ಸುಮಾರು 22 ಸಾವಿರ ಕಾರ್ನಿಯಾಗಳು ಮಾತ್ರ ದಾನ ಮಾಡಲಾಗುತ್ತಿದೆ.

ಮರಣಾನಂತರ ಮಾತ್ರ ನೇತ್ರದಾನ ಮಾಡಬಹುದು.

ಕಣ್ಣುಗಳನ್ನು ಸಾವಿನ ನಂತರ ಮಾತ್ರ ದಾನ ಮಾಡಲು ಸಾಧ್ಯ. ಒಂದು ವರ್ಷ ವಯೋಮಾನಕ್ಕಿಂತ ಹೆಚ್ಚಿರುವ ಯಾವುದೇ ವ್ಯಕ್ತಿ ಅಥವಾ ಸಮೀಪ ದೃಷ್ಟಿದೋಷ, ದೂರದೃಷ್ಟಿ ದೋಷ ಅಥವಾ ಆಸ್ಟಿಗ್ಮ್ಯಾಟಿಸಂನಂತಹ ವಕ್ರೀಕಾರಕ ದೋಷ ಇರುವವರು ಅಥವಾ ಕೆಟರ‍್ಯಾಕ್ಟ್ (ಕಣ್ಣಿನ ಪೊರೆ) ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು, ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾದಿಂದ ಬಳಲುತ್ತಿರುವವರಿಂದಲೂ ನೇತ್ರದಾನ ಮಾಡಬಹುದು. ಆದರೆ, ಏಡ್ಸ್, ಹೆಪಟೈಟಿಸ್ ಬಿ ಅಥವಾ ಸಿ, ರೇಬೀಸ್, ಸೆಪ್ಟಿಕೇಮಿಯಾ, ಕಾಲರಾ, ಮೆನಿಂಜೈಟಿಸ್ ಹೊಂದಿರುವವರು ನೇತ್ರದಾನ ಮಾಡುವಂತಿಲ್ಲ.

ಸಾವು ಸಂಭವಿಸಿದ 4–6 ಗಂಟೆಯೊಳಗೆ ಕಣ್ಣುಗಳನ್ನು ತೆಗೆಯಬೇಕು. ಕಣ್ಣು ಬ್ಯಾಂಕಿನ ತಂಡವು ಮನೆ ಅಥವಾ ಆಸ್ಪತ್ರೆಯಲ್ಲಿ ಕಣ್ಣುಗಳನ್ನು ತೆಗೆಯುತ್ತದೆ. ಕಣ್ಣುಗಳನ್ನು ತೆಗೆಯುವ ಪ್ರಕ್ರಿಯೆ 10–15 ನಿಮಿಷಗಳದ್ದಾಗಿರುತ್ತದೆ. ಕಸಿ ಮಾಡಲು ಅಗತ್ಯವಾಗಿರುವ ಕಾರ್ನಿಯಾ ಭಾಗವನ್ನು ಮಾತ್ರ ತೆಗೆಯಲಾಗುತ್ತದೆಯೇ ಹೊರತು ಇಡೀ ಕಣ್ಣಿನ ಗುಡ್ಡೆಯನ್ನು ತೆಗೆಯುವುದಿಲ್ಲ ಮತ್ತು ಇದರಿಂದ ಮುಖಚರ್ಯೆಗೆ ಯಾವುದೇ ತೊಂದರೆಯಾಗುವುದಿಲ್ಲ. ಯಾವುದೇ ಸಾಂಕ್ರಾಮಿಕ ರೋಗ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲೆಂದು ಸ್ವಲ್ಪ ಪ್ರಮಾಣದ ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ. ಕಣ್ಣು ದಾನ ಮಾಡುವವರ ಮತ್ತು ಪಡೆದುಕೊಳ್ಳುವವರ ಮಾಹಿತಿಗಳನ್ನು ಗೌಪ್ಯವಾಗಿಡಲಾಗುತ್ತದೆ.

ಕಣ್ಣನ್ನು ಹೊರತೆಗೆದ 72 ಗಂಟೆಗಳೊಳಗೆ ಕಸಿಯನ್ನು ಮಾಡಲೇಬೇಕಾಗುತ್ತದೆ. ಒಂದು ಜೋಡಿ ಕಣ್ಣುಗಳು ಇಬ್ಬರು ಅಂಧರ ಬಾಳಿಗೆ ಬೆಳಕಾಗುತ್ತವೆ.
ಮತ್ತೊಬ್ಬರ ದೃಷ್ಟಿಗೆ ದಾರಿದೀಪವಾಗುವಂತಹ ಕಣ್ಣನ್ನು ದಾನ ಮಾಡುವುದರಿಂದ ಉಂಟಾಗುವ ಸಂತೋಷಕ್ಕಿಂತ ಬೇರೆ ಯಾವುದೇ ಸಂತೋಷವಿರುವುದಿಲ್ಲ. ಸಾವಿನ ನಂತರ ಅವರ ಕುಟುಂಬ ಸದಸ್ಯರು ಸ್ವಯಂಪ್ರೇರಿತರಾಗಿ ಮುಂದೆ ಬಂದರೆ ಕಣ್ಣುಗಳನ್ನು ದಾನ ಮಾಡಬಹುದಾಗಿದೆ. ಕಣ್ಣನ್ನು ಪಡೆಯಲು ಅವರ ಕುಟುಂಬದ ಅನುಮತಿ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.

ನಿಮ್ಮ ಕಣ್ಣುಗಳನ್ನು ದಾನ ಮಾಡಲು ಹಿಂಜರಿಕೆ ಬೇಡ. ಇಂದೇ ನಿಮ್ಮ ಕಣ್ಣುಗಳನ್ನು ದಾನ ಮಾಡುವ ವಾಗ್ದಾನ ಮಾಡಿ. ಕಣ್ಣುಗಳನ್ನು ದಾನ ಮಾಡುವಂತೆ ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಪ್ರೇರೇಪಿಸಿ.

About the Author: Dr. Umesh Harakuni, Ophthalmologist

Popular Doctors

Related Articles