ಮೂರ್ಛೆರೋಗ

ಮಾನವನ ನರಮಂಡಲ ಅತ್ಯಂತ ಸೂಕ್ಷ್ಮವಾದ ರಚನೆ. ದೇಹದಲ್ಲಿನ ವಿವಿಧ ಕಾರ್ಯಚಟುವಟಿಕೆಗಳಿಗೆ ನರಮಂಡಲವೇ ಆಧಾರ. ನರರೋಗಗಳು ಅನೇಕವಿದ್ದು, ಅದರಲ್ಲಿ ಮೂರ್ಛೆರೋಗವೂ ಒಂದು. ಸನಾತನ ಕಾಲದಿಂದಲೂ ಇದೊಂದು ದೈವಿಶಾಪವೆಂದು ಪರಿಗಣಿಸಿ, ಅವರನ್ನು ಕೀಳಾಗಿ ಕಾಣುವದರಿಂದ ಹಲವಾರು ಜನರು ಸೂಕ್ತ ಚಿಕಿತ್ಸೆ ಲಭಿಸದೇ ನೋವಿನಿಂದ ಬಳಲುತ್ತಿದ್ದಾರೆ. ಮೂಡನಂಬಿಕೆಗೆ ಒಳಗಾಗಿ ಅಪಾಯಕ್ಕೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ಸುಮಾರು 1 ಕೋಟಿಗೂ ಅಧಿಕ ಜನರು ರೋಗದಿಂದ ಬಳಲುತ್ತಿದ್ದಾರೆ. ಶೇ. 1ರಷ್ಟು ಜನರಲ್ಲಿ ಇದು ಕಂಡು ಬರುತ್ತಿದ್ದು, ಇದು ಯಾವುದೇ ವಯಸ್ಸಿನಲ್ಲಾದರೂ ಕಂಡು ಬರುತ್ತದೆ. ನವಜಾತ ಶಿಶುವಿನಿಂದ ಹಿಡಿದು ವಯಸ್ಸಾದವರವರೆಗೂ ಯಾವುದೇ ಕಾಲದಲ್ಲಾದರೂ ಬಂದೆರಗುತ್ತದೆ.

ಕಾರಣಗಳು :
ಮಾನವನ ಮೆದುಳು ಶತಕೋಟಿ ನರಕೋಶಗಳನ್ನು ಹೊಂದಿರುತ್ತದೆ. ಕೋಶಗಳು ಒಂದಕ್ಕೊಂದು ಹೊಂದಿಕೊಂಡು ವಿದ್ಯುತ್ತಛ್ಚಕ್ತಿ ಮತ್ತು ರಸಾಯನಿಕ ಕ್ರಿಯೆಗಳ ಸಹಾಯದಿಂದ ಕಾರ್ಯಗಳನ್ನು ಮಾಡುತ್ತಿರುತ್ತವೆ. ಕ್ರಿಯೆಯಲ್ಲಿ ವ್ಯತ್ಯಾಸ ಅಪಘಾತ ಅಥವಾ ಇನ್ನಿತರ ಸಂದರ್ಭಗಳಲ್ಲಿ ಮೆದುಳಿಗೆ ಪಟ್ಟು, ಮೆದುಳಿನಲ್ಲಿ ರಕ್ತಸ್ರಾವ, ಪಾಶ್ರ್ವವಾಯು, ತೀವ್ರತರವಾದ ಜ್ವರ, ರಕ್ತದಲ್ಲಿ ಸಕ್ಕರೆ ಮತ್ತು ಕ್ಯಾಲ್ಸಿಯಂ, ಸೋಡಿಯಂ ಅಂಶದಲ್ಲಿ ವ್ಯತ್ಯಾಸ,ಮೆದುಳಿನಲ್ಲಿ ಗಡ್ಡೆ ಅಥವಾ ಅನುವಂಶಿಕವಾಗಿ ಮೆದುಳಿನ ಬೆಳವಣಿಗೆಯಲ್ಲಿ ಕುಂಠಿತಗೊಂಡರೆ ಮೂರ್ಛೆರೋಗವು ಬರುತ್ತದೆ.

ಮೂರ್ಛೆರೋಗ ತೀವ್ರತರವಾದ ಫಿಟ್ಸ್ ಬಂದಾಗ ರೋಗಿಯು ಹಠಾತ್ತನೆ ಕೆಳಗೆ ಬೀಳುತ್ತಾನೆ. ಕೈಕಾಲುಗಳನ್ನು ಸೆಟೆಸುವದು, ಬಾಯಲ್ಲಿ ನೊರೆ ಬರುವದು, ಕಣ್ಣು ,ಮೇಲೆ ಮಾಡುವದು, ನಾಲಿಗೆ ಕಡಿದುಕೊಳ್ಳುವದ, ಉಸಿರಾಟ ತೀವ್ರಗೊಳ್ಳುವದು. ತಲೆ ನೋವ, ಕಣ್ಣಿಗೆ ಕತ್ತಲು ಕವಿಯುವದು, ತಲೆ ತಿರುಗುವಿಕೆ, ಕೈಕಾಲು ನಡಗುವದು, ಜುಮ್ಮೆನ್ನುವದು ಉಂಟಾಗುತ್ತದೆ. ಸಣ್ಣ ಪ್ರಮಾಣದ ಫಿಟ್ಸ್ ಬಂದಾಗ ರೋಗಿಯು ಒಮ್ಮೆಲೆ ತಟಸ್ಥವಾಗುವಿಕೆ, ಕಣ್ಣು ಪಿಳಕಿಸುವದು, ಬಾಯಿ ಚಪ್ಪರಿಸಉವದು, ಅಂಜುವಿಕೆ ಅಥವಾ ಗೊಂದಲಕ್ಕೊಳಗಾಗುತ್ತಾನೆ. ಬಿಸಿ ನೀರಿನಿಂದ ಸ್ನಾನ ಮಾಡಿದಾಗಲೂ ಮೂರ್ಛೆರೋಗ ಬರುವ ಸಾದ್ಯತೆ ಇರುತ್ತದೆ. 3 ವರ್ಷದ ಮಕ್ಕಳಲ್ಲಿ ತೀವ್ರತರವಾದ ಜ್ವರ ಬಂದಾಗಲೂ ಮೂರ್ಛೆರೋಗ ಬರುತ್ತದೆ. ಮಕ್ಕಳು ರೋಗಕ್ಕೆ ತುತ್ತಾಗುವದನ್ನು ರಪ್ಲೆಕ್ಸ್ ಎಪಿಲೆಪ್ಸಿ ಎಂದು ಕರೆಯಲಾಗುತ್ತದೆ.

ರೋಗ ಕಂಡುಹಿಡಿಯುವಿಕೆ: ಇಇಜಿ ಪರೀಕ್ಷೆಗೊಳಪಡಿಸಿ ಫಿಟ್ಸ್ ರೋಗವನ್ನು ಗುರುತಿಸಬಹುದು. ಮೆದುಳಿನ ನರಕೋಶದಲ್ಲಿ ಉತ್ಪತಿಯಾಗುವ ವಿದ್ಯುಚ್ಚಕ್ತಿ ಗುಣಗಳನ್ನು ETG ಎಂಬ ಪರೀಕ್ಷೆಯ ಮೂಲಕ ಹಾಗೂ ಇತರೆ ವಿಧಾನಗಳಾದ ಎಂಆರ್‍ಐ, ಸಿಟಿ ಸ್ಕ್ಯಾನ ಪರೀಕ್ಷೆಯ ಮೂಲಕವೂ ರೋಗದ ಮೂಲವನ್ನು ಕಂಡುಹಿಡಿಯಲಾಗುತ್ತದೆ.

ಚಿಕಿತ್ಸೆ: ಮೂರ್ಛೆರೋಗ ಬಂದ ಮೇಲೆ ಪರಿಣಿತ ವೈದ್ಯರಲ್ಲಿ ಸಲಹೆ ಪಡೆದುಕೊಳ್ಳುವದು ಮುಖ್ಯ. ಚಿಕಿತ್ಸೆಯ ಅವಧಿ ಕುರಿತು ಸರಿಯಾದ ಮಾಹಿತಿ ತಿಳಿದುಕೊಂಡು ಅದನ್ನು ಅನುಸರಿಸಿದರೆ ರೋಗಿಗಳಿಗೆ ಅನುಕೂಲವಾಗುತ್ತದೆ. ವೈದ್ಯರ ಸಲಹೆಗಳನ್ನು ಪಾಲಿಸುವದರಿಂದ ಶೇ. 80 ರಷ್ಟು ಅನುಕೂಲವಾಗಿ ಮೇಲಿಂದ ಮೇಲೆ ಬರುವ ಫಿಟ್ಸ್ ತಡೆಗಟ್ಟಬಹುದು. ಸಾಮಾನ್ಯವಾಗಿ 3-5 ವರ್ಷಗಳವರೆಗೆ ಚಿಕಿತ್ಸೆಯನ್ನು ಪಡೆಯುವದು ಅತ್ಯವಶ್ಯ. ಕೆಲ ಸಂದರ್ಭಗಳಲ್ಲಿ ಕೇವಲ 6 ತಿಂಗಳು ಅಥವಾ ಜೀವನ ಪರ್ಯಂತ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಚಿಕಿತ್ಸೆಯಿಂದ ನಿಯಂತ್ರಣಗೊಳ್ಳದಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಗುಣಪಡಿಸಬಹುದು.

ಪಾಲಿಸಬೇಕಾದ ಕ್ರಮಗಳು: ನಿರ್ದಿಷ್ಟಪಡಿಸಿದ ಸಮಯಕ್ಕೆ ಸರಿಯಾಗಿ ಔಷಧಿಗಳ ಸೇವನೆಉಪವಾಸ ಮಾಡುವದು, ನಿದ್ದೆ ಮಾಡದಿರುವದು, ಅತಿಯಾದ ಮದ್ಯಸೇವನೆ ಮಾಡುವದು ಒಳಿತಲ್ಲ.

ಊಟದಲ್ಲಿ ಪಥ್ಯ ಇರುವುದಿಲ್ಲ. ವಾಹನಗಳನ್ನು ಚಲಾಯಿಸಬಾರದು. ಅಪಾಯದ ಕೆಲಸಗಳನ್ನು ತೊರೆಯಬೇಕು.

Dr Saroja A O

ಡಾ. ಸರೋಜಾ ಅರಳಿಕಟ್ಟೆ
ನರರೋಗ ತಜ್ಞವೈದ್ಯರು

ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ &

ವೈದ್ಯಕೀಯ ಸಂಶೋಧನಾ ಕೇಂದ್ರ, ಬೆಳಗಾವಿ

Popular Doctors

Related Articles