ವೈದ್ಯಕೀಯ ಸೇವೆ ಅತ್ಯಂತ ಶ್ರೇಷ್ಠವಾದದ್ದು.

ವೈದ್ಯಕೀಯ ಸೇವೆ ಅತ್ಯಂತ ಶ್ರೇಷ್ಠವಾದದ್ದು.

ಡಾ. ಬಿ ಎಚ್ ಕೆರೂಡಿ, ಎಂಎಸ್, ಎಫ್ಐಸಿಎಸ್, ಎಫ್ಎಐಎಸ್,ಎಫ್ಐಎಮ್ಎಸ್ಎ

(ಡಾಕ್ಟರ್ ಡೇ ಸ್ಪೆಷಲ್)

ಜನಸೇವೆಯೇ ಜನಾರ್ಧನ ಸೇವೆ ಎನ್ನುತ್ತ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸೇವೆಯಲ್ಲಿ ತೊಡಗಿಕೊಂಢು ಸರಕಾರಿ ಆಸ್ಪತ್ರೆಯಲ್ಲಿ ನಿವೃತ್ತಿಯವರೆಗೂ ಸೇವೆ ಸಲ್ಲಿಸಿ ಬಡವರಲ್ಲಿಯೇ ದೇವರನ್ನು ಕಂಡವರು. ಚಾಲುಕ್ಯರ ಆಡಳಿತಕ್ಕೆ ಒಳ್ಪಟ್ಟು ಐತಿಹಾಸಿಕವಾಗಿ ಗುರುತಿಸಿಕೊಂಡಿದ್ದ ಬಾಗಲಕೋಟದಲ್ಲಿ ವೈದ್ಯಕೀಯ ಸೇವೆ ಅಷ್ಟಕ್ಕಷ್ಟೇ. 25 ವರ್ಷಗಳ ಹಿಂದೆ ಕನಿಷ್ಠ ಯಾವುದೇ ವೈದ್ಯಕೀಯ ಸೇವೆಗೂ ಪಕ್ಕದ ಮಹಾರಾಷ್ಟ್ರದ ಮಿರಜ ಹಾಗೂ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಅಲೆದಾಡಬೇಕಾಗಿತ್ತು. ಆರೋಗ್ಯ ವ್ಯವಸ್ಥೆ ಅತ್ಯಂತ ಶೋಚನೀಯವಾಗಿತ್ತು. ತುರ್ತು ಚಿಕಿತ್ಸೆ ಸಂದರ್ಭದಲ್ಲಿ ತೀವ್ರ ತೊಂದರೆಯನ್ನು ಅನುಭವಿಸುವ ಕಾಲಘಟ್ಟದಲ್ಲಿಯೇ ಈ ಭಾಗಕ್ಕೆ ಆಶಾಕಿರಣದಂತೆ ಗೋಚರಿಸಿದ್ದು ಡಾ. ಬಿ ಹೆಚ್ ಕೆರೂಡಿ.

DR. B H KERUDI

ಮುಂಬೈ ಹಾಗೂ ಕಲ್ಯಾಣ ಕರ್ಣಾಟಕದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಕಲ್ಪಿಸುವಲ್ಲಿ ಡಾ. ಬಿ.ಎಚ್. ​​ಕೆರುಡಿಯವರ ನಿರಂತರ ಮತ್ತು ಪ್ರಯತ್ನಗಳಿಗೆ ಹೃದಯಪೂರ್ವಕ ಧನ್ಯವಾದಗಳು, ಕೆರುಡಿ ಆರೋಗ್ಯ ಸಂಸ್ಥೆಗಳ ಸಮೂಹವು ಇಂದು ಕೇವಲ ಬಾಗಲಕೋಟ ಜಿಲ್ಲೆಗೆ ಮಾತ್ರ ಸೀಮಿತವಾಗಿದೇ ಕಲ್ಯಾಣ ಕರ್ನಾಟಕದ ಅರ್ಧಭಾಗದ 20 ಲಕ್ಷಕ್ಕೂ ಅಧಿಕ ಜನರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸುತ್ತದೆ. ಕೆರೂಡಿ ವೈದ್ಯಕೀಯ ಸೇವೆ ಮತ್ತು ಆಸ್ಪತ್ರೆಯ ಸಮೂಹವು ಈ ಭಾಗದ ಪ್ರಮುಖ ವೈದ್ಯಕೀಯ ಸೇವಾ ಕೇಂದ್ರವಾಗಿ ಮಾರ್ಪಟ್ಟಿದೆ. ಕೀ ಹೋಲ್ ಸರ್ಜರಿ ( ಚಿಕ್ಕ ರಂದ್ರದ ಮೂಲಕ ಶಸ್ತ್ರಚಿಕಿತ್ಸೆ) ಪರಿಣಾಮಕಾರಿ ಚಿಕಿತ್ಸಾ ವಿಧಾನ, ಅತ್ಯಾಧುನಿಕ ರೇಡಿಯೊ ಡಯಾಗ್ನೋಸ್ಟಿಕ್ಸ್ (ಸಿಟಿ, ಎಂಆರ್ಐ), ಹೃದ್ರೋಗ, ಕಿಡ್ನಿ ಕ್ಯಾನ್ಸರ ಸೇರಿದಂತೆ ವಿವಿಧ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತಿದೆ.

ನಗರಕ್ಕೆ ಹೊಂದಿಕೊಂಡಿರುವ ಈ ಕೇಂದ್ರವು ಅಗತ್ಯವಿರುವ ರೋಗಿಗಳಿಗೆ ಕನಿಷ್ಠ ವೆಚ್ಚದಲ್ಲಿ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ನೀಡುವಲ್ಲಿ ಸದಾ ಒಂದು ಹೆಜ್ಜೆ ಮುಂದಿದ್ದು, ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ಹೊಂದಿದೆ. ಕೆರೂಡಿ ಸಮೂಹ ಸಂಸ್ಥೆಯ ಆಸ್ಪತ್ರೆಯಲ್ಲಿ ಶೇ. 80% ಕ್ಕೂ ಅಧಿಕ ಫಲಾನುಭವಿಗಳು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಬಿಪಿಎಲ್ ವರ್ಗದ ಅಡಿಯಲ್ಲಿ ಹಣವಿಲ್ಲದೇ ಚಿಕಿತ್ಸೆಯನ್ನು ಪಡೆಯುತ್ತಾರೆ. ಡಾ. ಬಿ ಹೆಚ್ ಕೆರುಡಿಯವರ ದೂರದೃಷ್ಟಿ ಮತ್ತು ಸಮಾಜದ ಕೆಳಮಟ್ಟದ ಸ್ತರಗಳಿಗೆ ಸೇವೆ ಸಲ್ಲಿಸುವ ಬದ್ಧತೆ ಅಗತ್ಯವಿರುವವರಿಗೆ ಸೇವೆ ಸಲ್ಲಿಸುವ ಮೂಲಕ ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ನಿರತರಾಗಿದ್ದಾರೆ.

ಡಾ. ಬಿ ಹೆಚ್ ಕೆರೂಡಿ ಅವರು ಈ ಭಾಗದ ಮೊದಲ ಮತ್ತು ಅತ್ಯುತ್ತಮ ಲ್ಯಾಪರೊಸ್ಕೋಪಿಕ್ ಸರ್ಜನ್. ಸರಳ, ಮೃದು ಸ್ವಭಾವದ ಹಾಗೂ ಕಠಿಣ ಪರಿಶ್ರಮಿಗಳು, ಸಾಕಷ್ಟು ಧೈರ್ಯ, ಹೋರಾಟ, ಸಂಕಲ್ಪದ, ನಿಶ್ಚಯದಿಂದ ಈ ಆಕಾಶದೆತ್ತರಕ್ಕೆ ಏರಿ ಇಂದು ಬಾಗಲಕೋಟದಲ್ಲಿ ಅತ್ಯಾಧುನಿಕ ಬಹುವಿಧ ವ್ಯವಸ್ಥೆಯುಳ್ಳ ಆಸ್ಪತ್ರೆಯನ್ನು ನಿರ್ಮಿಸಿ ಈ ಭಾಗದ ಜನರ ಬಾಳಿನಲ್ಲಿ ನಕ್ಷತ್ರವಾಗಿ ಮಿಂಚುತ್ತಿದ್ದಾರೆ. ಸರಕಾರಿ ಸೇವೆಯಿಂದ ನಿವೃತ್ತರಾಗುವ ಬಹಳಷ್ಟು ವೈದ್ಯರು ಸಾಮಾನ್ಯವಾಗಿ ಪಾಲಿಕ್ಲಿನಿಕ್‌ಗೆ ಸೇರುತ್ತಾರೆ ಅಥವಾ ಅರೆಕಾಲಿಕ ಒಪಿಡಿ ಸೇವೆಯನ್ನು ಮುಂದುವರೆಸುವದು ಕಂಡು ಬರುತ್ತದೆ. ಆದರೆ, ವೈದ್ಯಕೀಯ ವೃತ್ತಿಯ ಮೇಲಿನ ಪ್ರೀತಿ, ಉತ್ಸಾಹ ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸುವ ಬಯಕೆ ಮತ್ತು ಅಗತ್ಯವಿರುವವರಿಗೆ ತಮ್ಮದೇ ಆದ ಆರೈಕೆಯನ್ನು ತಮ್ಮದೇ ಆದ ಸ್ಥಳದಲ್ಲಿ ಒದಗಿಸುವ ಸಂಕಲ್ಪದೊಂದಿಗೆ ಅವರು ಕೆರೂಡಿ ಆಸ್ಪತ್ರೆಯನ್ನು ಸ್ಥಾಪಿಸಲು 1992 ರಲ್ಲಿ ಮುಂದಾದರು.

DR. B H KERUDI

ಡಾ. ಕೆರುಡಿ ಸಹಾನುಭೂತಿಯ ಪ್ರತಿಫಲವಾಗಿ 150 ಹಾಸಿಗೆಗಳ ಆಸ್ಪತ್ರೆಯು ತಲೆ ಎತ್ತಿ ನಿಂತಿತು. ಅತ್ಯಂತ ಮೃದು ಸ್ವಾಭಾವದ ವೈದ್ಯರ ಆರೈಕೆ, ಗುಣಪಡಿಸುವ ಸ್ಪರ್ಶಕ್ಕೆ ಸಮಾನ. ವೃತ್ತಿಪರ ಮತ್ತು ಶಸ್ತ್ರಚಿಕಿತ್ಸಾ ಕೌಶಲ್ಯಗಳು ಅವರನ್ನು ಶೀಘ್ರದಲ್ಲೇ ರೋಗಿಗಳ ಪ್ರೀತಿಪಾತ್ರ ವೈದ್ಯರನ್ನಾಗಿಸಿತು.ಅತ್ಯಂತ ತೀಕ್ಷ್ಣ ದೃಷ್ಟಿ, ಕ್ಲಿನಿಕಲ್ ಕುಶಾಗ್ರಮತಿ, ಶಸ್ತ್ರಚಿಕಿತ್ಸಾ ಕೌಶಲ್ಯಗಳು ಮತ್ತು ಸುರಕ್ಷಿತ ಶಸ್ತ್ರಚಿಕಿತ್ಸಾ ಕೈಚಳಕಗಳು ಸಾಕಷ್ಟು ಜನರಿಗೆ ಸಹಾಯ ಮತ್ತು ಚಿಕಿತ್ಸೆ ನೀಡಿವೆ. ಕಳೆದ ಮೂರು ದಶಕಗಳಿಂದ ಜನರ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಡಾ. ಕೆರೂಡಿ ಅವರಂತೆ ಜನರಿಗೆ ಅತ್ಯಂತ ಪ್ರೀತಿಪಾತ್ರರಾದ ವೈದ್ಯರು ಬಾಗಲಕೋಟದಲ್ಲಿ ಮತ್ತೊಬ್ಬರು ಯುವ ತಲೆಮಾರಿನಲ್ಲಿ ಇಲ್ಲ ಎನ್ನಬಹುದು. ಅಲ್ಪ ಸಮಯದಲ್ಲಿಯೇ ಹೆಸರು ಗಳಿಸಿದ ಕೆರೂಡಿ ಆಸ್ಪತ್ರೆಯಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಯುವವೈದ್ಯರಿಗೆ ಮಾರ್ಗದರ್ಶಕರಾಗಿ, ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಮುಡಾಪಾಗಿಟ್ಟಿದ್ದಾರೆ.

ಅವಿಭಜಿತ ಧಾರವಾಡ ಜಿಲ್ಲೆಯ( ಈಗ ಹಾವೇರಿ ಜಿಲ್ಲೆ) ಹಂಸಭಾವಿ ಎಂಬ ಹಳ್ಳಿಯ ಕೃಷಿ ಕುಟುಂಬದಲ್ಲಿ 11 ಫೆಬ್ರುವರಿ 1943ರಲ್ಲಿ ಜನಿಸಿದ ಡಾ. ಬಿ ಹೆಚ್ ಕೆರೂಡಿ ಅವರು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಎಂಬಿಬಿಎಸ್ ಪದವಿ ಹಾಗೂ ಎಮ್ ಎಸ್ ಸ್ನಾತ್ತಕೋತ್ತರ ಪದವಿ ಪಡೆದು ಕರ್ನಾಟಕ ಸರಕಾರದ ಕುಟುಂಬ ಕಲ್ಯಾಣ ಇಲಾಖೆಗೆ ಸೇರಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವಿಭಜಿತ ವಿಜಯಪೂರ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಸೇರುವ ಮೊದಲು ಅನೆಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನಸೇವೆಗೈದಿದ್ದಾರೆ. ನಂತರ 1979 ರಿಂದ 1993ರವರೆಗೆ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದ್ದಾರೆ.

ಉತ್ತರ ಕರ್ನಾಟಕ ಪ್ರಥಮ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಕರಾದ ಡಾ. ಬಿ ಹೆಚ್ ಕೆರೂಡಿ ಅವರು 1986ರಲ್ಲಿ ಮುಂಬೈನ ಶ್ರೀಖಂಡೆ ಕ್ಲಿನಿಕ್ನಲ್ಲಿ ಎಂಡೋಸ್ಕೋಪಿ, ಹೈದರಾಬಾದನ ಡಾ. ರವೀಂದ್ರನಾಥ ಅವರಿಂದ ಹಾಗೂ ಕೊಯಿಂಬತ್ತೂರನ ಜಿಇಎಂ ಆಸ್ಪತ್ರೆಯ ಡಾ. ಪಲೇನಿವೇಲು ಅವರಿಂದ ಸುಧಾರಿತ ಲ್ಯಾಪ್ರೋಸ್ಕೋಪಿಯಲ್ಲಿ ತರಬೇತಿ ಪಡೆದರು. 2015ರಲ್ಲಿ 120 ಹಾಸಿಗೆಗಳ ಹಾಲಮಮ್ಮ ಕೆರೂಡಿ ಕ್ಯಾನ್ಸರ ಹಾಗೂ ಹೃದ್ರೋಗ ಆಸ್ಪತ್ರೆಯನ್ನು ಜನಸೇವೆಗೆ ಅರ್ಪಿಸಿದರು.

DR. B H KERUDI hospital

ಬಿ ವಿ ವಿ ಸಂಘದೊಂದಿಗೆ ಆತ್ಮೀಯ ಸಂಬಂಧ:

ಬಿವಿವಿ ಸಂಘದ ಅಧ್ಯಕ್ಷರು ಹಾಗೂ ಶಾಸಕರಾಧ ವೀರಣ್ಣ ಚರಂತಿಮಠ ಅವರೊಂದಿಗೆ ನಡೆದ ಕೆಲವು ಘಟನೆಗಳನ್ನು ಮೆಲಕು ಹಾಕಿ,. ಬಿವಿವಿ ಸಂಘ ತನ್ನ ಉದ್ದೇಶಿತ ವೈದ್ಯಕೀಯ ಕಾಲೇಜಿನ ಮಾನ್ಯತೆಗಾಗಿ ಎಂಸಿಐ ತಪಾಸಣೆಗೆ ಆಗಮಿಸುವದಿತ್ತು. ಅದಕ್ಕಾಗಿ ಸುಸಜ್ಜಿತ ಆಸ್ಪತ್ರೆಯನ್ನು ಹುಡುಕಲಾಗುತ್ತಿತ್ತು. ಆಗ ಡಾ. ಕೆರೂಡಿ ಅವರು ಮುಂದೆ ಬಂದು ಹೃದಯದಿಂದ ತಮ್ಮ ಆಸ್ಪತ್ರೆಯನ್ನು ತಪಾಸಣೆಗಾಗಿ ಬಿಟ್ಟುಕೊಟ್ಟು ಬಾಗಲಕೋಟ ನಗರದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೇ ಸಲಹಾ ಸಮಿತಿಯಲ್ಲಿದ್ದುಕೊಂಡು ಮಹಾವಿದ್ಯಾಲಯ ಅಭಿವೃದ್ದಿಯಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ರೋಗಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳದಂತೆ ಕೈಗೆಟಕುವ ಬೆಲೆಯಲ್ಲಿ ಆರೋಗ್ಯ ಸೇವೆ ಸುಲಭವಾಗಿ ಲಭ್ಯವಾಗಬೇಕು,ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೆಚ್ಚ ಸಾಕಷ್ಟು ಏರಿಕೆ ಪ್ರಮಾಣದಲ್ಲಿ ಸಾಗುತ್ತಿದೆ. ಅದಕ್ಕೆ ಕಡಿವಾಣ ಹಾಕಬೇಕು ಎಂದು ಪ್ರತಿಪಾದಿಸಿದರು. ತಮ್ಮ ಸಹವರ್ತಿ ವೈದ್ಯರು, ಶೂಶ್ರುಕಿಯರು ಪ್ಯಾರಾ ಮೆಡಿಕಲ್ ಹಾಗೂ ಸಿಬ್ಬಂದಿಗಳ ಕುರಿತು ಗೌರವವನ್ನು ಹೊಂದಿದ್ದಾರೆ.

mr-mrs-kerudi

ಪ್ರಶಸ್ತಿ ಮತ್ತು ಗೌರವಗಳು:

ವೈದ್ಯಕೀಯ ವೃತ್ತಿಯಲ್ಲಿ ಸಾಧನೆಗೈದ ಇವರನ್ನು ಅನೇಕ ಪ್ರಶಸ್ತಿಗಳು ಹಾಗೂ ಗೌರವಾಧಾರಗಳು ಹುಡುಕಿಕೊಂಡು ಬಂದಿವೆ. ಅದರಂತೆ 2005 ಕರ್ನಾಟಕ ಪ್ರೈವೆಟಮೆಡಿಕಲ್ ಎಸ್ಟಾಬ್ಲಿಷಮೆಂಟ ಪ್ರಶಸ್ತಿ, 2010 ರಲ್ಲಿ ರಾಜ್ಯೋತ್ಸವ ಹಾಗೂ ಕೆಎಂಸಿ ಗೋಲ್ಡನ್ ಜ್ಯುಬಿಲಿ ಸೆಲೆಬ್ರೇಶನ್ ಅವಾರ್ಡ, 2016ರಲ್ಲಿ ಬಳ್ಳಾರಿಯಲ್ಲಿ ನಡೆದ ಸರ್ಜಿ ಕ್ವೆಸ್ಟ & ಆರ್ ಹೆಚ್ ಎನ್ ಶೆನಯ ಮೆಮೊರಿಯಲ್ ಇಂಟರನ್ಯಾಶನಲ್ ವರ್ಕಶಾಪ ಅವಾರ್ಡ

kerudi family

ವೈದ್ಯರ ಕುಟುಂಬ: ಪ್ರತಿ ಯಶಸ್ವಇ ವ್ಯಕ್ತಿಯ ಹಿಂದೆ ಓರ್ವ ಮಹಿಳೆ ಬೆನ್ನೆಲುಬಾಗಿ ಇರುತ್ತಾರೆ. ಅದರಂತೆ ಅವರ ಪತ್ನಿ ಡಾ. ಅನುಸೂಯಾ ಕೆರೂಡಿ ಅವರ ಬೆಂಬಲ ಬಹಳಷ್ಟಿದೆ. ಅಲ್ಲದೇ ಅವರೂ ಕೂಡ ಸ್ತ್ರಿರೋಗ ಮತ್ತು ಹೆರಿಗೆ ತಜ್ಞವೈದ್ಯರಾಗಿದ್ದು, ಅವರ ಪ್ರತಿಯೊಂದು ಯಶಸ್ವಿ ಹೆಜ್ಜೆಯ ಹಿಂದೆ ಡಾ. ಅನುಸೂಯಾ ಅವರ ಛಾಪು ಅಚ್ಚೊತ್ತಿದೆ. ಇವರ ಮಕ್ಕಳಾದ ಡಾ. ಸೋಮಶೇಖರ ಅವರು ಮೂತ್ರಪಿಂಡ ತಜ್ಞವೈದ್ಯರಾದರೆ ಸೊಸೆ ಡಾ. ಸುನಿತಾ ಸ್ತ್ರೀರೋಗ ಮತ್ತು ಹೆರಿಗೆ, ಡಾ. ಚಂದ್ರಶೇಖರ ಶಸ್ತ್ರಚಿಕಿತ್ಸಕರು, ಸೊಸೆ ಡಾ. ಕ್ಷಮತಾ ಹೃದ್ರೋಗ ತಜ್ಞವೈದ್ಯರು.

Popular Doctors

Related Articles