*ಪಿತ್ತಜನಕಾಂಗದ ಯಶಸ್ವಸಿ ಕಸಿ ಶಸಚಿಕಿತ್ಸೆ ನಡೆಸಿದ ಆಪೋಲೊ ಆಸ್ಪತ್ರೆ ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು*
ಹುಬ್ಬಳ್ಳಿ: ಕ್ಲಿಷ್ಟಕರವಾದ ಪಿತ್ತಜನಕಾಂಗದ ಜೀವಂತ ಕಸಿ ಶಸ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೋಗಿಯೊಬ್ಬರಿಗೆ ಮರು ಜನ್ಮ ನೀಡುವ ಮೂಲಕ ಬೆಂಗಳೂರಿನ ಬನ್ನೇರ್‌ಘಟ್ಟ ಆಪೋಲೊ ಆಸ್ಪತ್ರೆಯ ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.
ಶಸ ಚಿಕಿತ್ಸೆ ಬಗ್ಗೆ ವಿವರ ನೀಡಿದ ಕ್ಲಿನಿಕಲ್ ಸಲಹೆಗಾರ, ಪಿತ್ತಜನಕಾಂಗದ ಶಸ ಚಿಕಿತ್ಸಕ ಡಾ. ಸಂಜಯ್ ಗೋವಿಲ್ ಮಾತನಾಡಿ, ರೈಲ್ವೆ ವಲಯದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಾದ ಅಶೋಕ್ ಕುಮಾರ್ ವೆಂಕಟೇಶ್ವರನ್ (53) ಎಂಬುವರಿಗೆ 2015ರಲ್ಲಿ ಕಾಮಾಲೆ ರೋಗಕ್ಕೆ ತುತ್ತಾಗಿದ್ದರು. ಈ ವೇಳೆ ಪರೀಕ್ಷೆಗೊಳಪಡಿಸಿದಾಗ ಅವರಿಗೆ ಅನಾರೋಗ್ಯದ ಯಕೃತ್ತು ಇರುವುದು ಪತ್ತೆಯಾಗಿತ್ತು. ಹೀಗಾಗಿ, 2016ರಲ್ಲೇ ಯಶಸ್ವಿಯಾಗಿ ಯಕೃತಿನ ಕಸಿ ಶಸ ಚಿಕಿತ್ಸೆ ಮಾಡಲಾಯಿತು. ಇದೀಗ ನಿಧಾನವಾಗಿ ರೋಗಿಯು ಗುಣಮುಖರಾಗಿದ್ದಾರೆ. ಅಲ್ಲದೆ, ಅವರ ಪತ್ನಿಯು ಕೂಡ ಆರೋಗ್ಯವಾಗಿದ್ದು, ಅವರ ಲೀವರ್ ಸಹಜ ಸ್ಥಿತಿಗೆ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದರು.
ಕಳೆದ 4 ವರ್ಷಗಳಿಂದ ಅಶೋಕ್ ತನ್ನ ಹೊಸ ಅಂಗದೊಂದಿಗೆ ಅಸ್ವಸ್ಥತೆ ಹಾಗೂ ಅಸಹಜತೆಯ ಮತ್ತಿತರರ ಚಿಹ್ನೆಗಳಿಲ್ಲದೆ ಆರೋಗ್ಯಕರವಾದ ಜೀವನವನ್ನು ನಡೆಸುತ್ತಿದ್ದಾರೆ. ಅವರು ಯಾವುದೇ ಆಹಾರ ಮತ್ತು ನಿರ್ಬಂಧಗಳಿಲ್ಲದೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಪಿತ್ತಜನಕಾಂಗದ ಕಸಿ ಇಲ್ಲದ ಸಾಮಾನ್ಯ ವ್ಯಕ್ತಿಯಂತೆಯೂ ತುಂಬಾ ಆನಂದದಿಂದ ಜೀವನವನ್ನು ನಡೆಸುತ್ತಿದ್ದಾರೆ ಎಂದರು.
ಅಶೋಕ್ ಮಾತನಾಡಿ, ಪಿತ್ತಜನಕಾಂಗದ ಕಸಿ ಶಸಚಿಕಿತ್ಸೆ ನಂತರ ನಾನು ಕೇವಲ ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದೆ. ಈ ಸಂದರ್ಭದಲ್ಲಿ ಸರಳ ವ್ಯಾಯಾಮ ಮಾಡುತ್ತಿದ್ದೆ. ಅಲ್ಲದೆ, ನಿಯಮಿತ ಆರೋಗ್ಯಕರ ಆಹಾರ ಕ್ರಮದಲ್ಲಿ ಇರಿಸಲಾಗಿತು. ಆ ಸಂದರ್ಭದಲ್ಲಿ ನಾನು ಸಸ್ಯಾಹಾರವನ್ನು ಸೇವಿಸುತ್ತಿದ್ದೆ. ಆಮೇಲೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮೂರು ತಿಂಗಳದವರೆಗೆ ಪ್ರತಿ 15 ದಿನಕ್ಕೊಮೆ ವೈದ್ಯರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದೆ. ಕಸಿ ನಂತರ ಮೊದಲ ವರ್ಷ ಎರಡು ಔಷಧಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುತ್ತಿದ್ದೆ. ಅಲ್ಲದೆ, ಪ್ರಸ್ತುತ ನಾನು ಒಂದು ಔಷಧವನ್ನು ತೆಗೆದುಕೊಳ್ಳುತ್ತಿದ್ದೇನೆ. ಸಾಮಾನ್ಯ ಜೀವನಕ್ಕೆ ನಾನು ಮರಳಿದ್ದು, ಸಂಪೂರ್ಣವಾಗಿ ದೇಹ ರಚನೆ ಹೊಂದಿದ್ದೇನೆ. ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದು, ಪ್ರತಿ ನಿತ್ಯ ವಾಕಿಂಗ್ ಮಾಡುತ್ತಿದ್ದೇನೆ. ಎಲ್ಲರಂತೆ ನಾನು ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದೇನೆ. ನನಗೆ ಪುನರ್ಜನ್ಮ ನೀಡಿದ್ದು ವೈದ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳುವಾಗ ಭಾವುಕರಾದರು.
ಯಕೃತ್ತಿನ ಕಸಿ ಶಸ ಚಿಕಿತ್ಸೆ ನಡೆಸುವ ವೇಳೆ ತುಂಬಾ ಎಚ್ಚರವಹಿಸಬೇಕು. ಪಿತ್ತಜನಕಾಂಗದ ಕಸಿ ನಂತರ ಆರೋಗ್ಯಕರ ಜೀವನ ನಡೆಸುವುದು ಅಸಾಧ್ಯ ಹಾಗೂ ಹೊಸ ಅಂಗವು ದೀರ್ಘಕಾಲದವರೆಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ಕೆಲವರು ತಪ್ಪು ತಿಳಿದುಕೊಳ್ಳುತ್ತಾರೆ. ಒಬ್ಬ ರೋಗಿಯು ಸಾಮಾನ್ಯ ಹಾಗೂ ಆರೋಗ್ಯಕರ ಜೀವನ ನಡೆಸಲು ಮುಜಾಗ್ರತವಾಗಿ ಯಕೃತಿನ ಕ್ಲಿಷ್ಟ ಪರಿಸ್ಥಿತಿಯಲ್ಲಿ ಚಿಕಿತ್ಸೆ ನೀಡುವ ಪಿತ್ತಜನಕಾಂಗ ತಜ್ಞರನ್ನು ಸಂಪರ್ಕಿಸಬೇಕು. ಅಲ್ಲದೆ, ಕಾಯಿಲೆಯನ್ನು ಮೊದಲೇ ಪತ್ತೆ ಹಚ್ಚಿ ವಿಳಂಬ ಮಾಡದೆ ಸೂಕ್ತ ಚಿಕಿತ್ಸೆ ನೀಡಿದರೆ ರೋಗಿಯು ಸಾಮಾನ್ಯ ಜನರಂತೆ ಆರೋಗ್ಯವಾಗಿ ಬದುಕುತ್ತಾನೆ. ಇಲ್ಲದಿದ್ದರೆ ಮರಣ ಹೊಂದುತ್ತಾರೆ ಎಂದು ಡಾ. ಸಂಜಯ್ ಗೋವಿಲ್ ತಿಳಿಸಿದರು.
30 ವರ್ಷಗಳ ಸಾಮಾನ್ಯ ಜೀವನ:
ಪಿತ್ತಜನಕಾಂಗದ ಕಸಿ ನಂತರ ಒಬ್ಬ ರೋಗಿಯು ಆಂದಾಜು 30 ವರ್ಷಗಳ ಕಾಲ ಸಾಮಾನ್ಯ ಜೀವನ ನಡೆಸಬಹುದು. ನ್ಯಾಷನಲ್ ಇನ್ಸಿಟಿಟ್ಯೂಟ್ ಆ್ ಡಯಾಬಿಟಿಸ್ ಆಂಡ್ ಡೈಜೆಸ್ಟಿವ್ ಅಂಡ್ ಕಿಡ್ನಿ ಡಿಸೀಸ್(ಎನ್‌ಐಡಿಕೆ)ಯ ಆಂದಾಜಿನ ಪ್ರಕಾರ ಪಿತ್ತಜನಕಾಂಗದ ಕಸಿ ಮಾಡುವ ರೋಗಿಗಳ ಸರಾಸರಿ ಬದುಕುಳಿಯುವಿಕೆಯ ಪ್ರಮಾಣ ಗಮನಾರ್ಹವಾಗಿ ಏರಿಕೆಯಾಗಿದೆ. ಆಂದಾಜು ಶೇ.86 ರೋಗಿಗಳು ಕಸಿ ನಂತರ ಒಂದು ವರ್ಷದವರೆಗೆ ಆರೋಗ್ಯವಾದರೆ, ಶೇ.78 ರೋಗಿಗಳು ಮೂರು ವರ್ಷಗಳ ಕಾಲ ಆರೋಗ್ಯ ಜೀವನವನ್ನು ನಡೆಸುತ್ತಾರೆ. ಕಸಿ ಶಸಚಿಕಿತ್ಸೆ ನಂತರ 20 ವರ್ಷಗಳ ಕಾಲ ಗುಣಮಟ್ಟ ಜೀವನ ನಡೆಸುತ್ತಾರೆ. ಶೇ.5 ಆರೋಗ್ಯಕರ ಮತ್ತು ಸಾಮಾನ್ಯ ಜೀವನವನ್ನು ನಡೆಸಬಹುದು ಎಂದು ಡಾ. ಸಂಜಯ್ ಗೋವಿಲ್ ಮಾಹಿತಿ ನೀಡಿದರು.
ಪಿತ್ತಜನಕಾಂಗದ ಕಸಿಯನ್ನು ಆರೋಗ್ಯಕರ ಜೀವನದ ಅಂತ್ಯವೆಂದು ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಏಕೆಂದರೆ, ಇದು ನಿರ್ಣಾಯಕ ಮತ್ತು ದೀರ್ಘಕಾಲದ ಯಕೃತ್ತಿನ ಪರಿಸ್ಥಿತಿಗಳಿಂದ ಬಳಲುತ್ತಿರುವವರಿಗೆ ಗುಣಮಟ್ಟ ಜೀವನವನ್ನು ನೀಡುತ್ತದೆ. ವಯಸ್ಸು, ಬಾಡಿ ಮಾಸ್ ಇಂಡೆಕ್ಸ್(ಬಿಎಂಐ), ದೇಹದ ತೂಕದಲ್ಲಿನ ಪ್ರಮುಖ ಏರಿಳಿತಗಳು, ಕಸಿ ಮಾಡುವ ಮುನ್ನ ವ್ಯಕ್ತಿಯ ಆರೋಗ್ಯ, ಯಕೃತ್ತಿನ ವೈಲ್ಯದ ತೀವ್ರತೆ ಹಾಗೂ ಬದುಕುಳಿಯುವಿಕೆಯ ಪ್ರಮಾಣವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇತರ ಅಂಗಗಳು, ವಿಶೇಷವಾಗಿ ಮೂತ್ರಪಿಂಡಗಳು ಪರಿಣಾಮ ಬಿರುತ್ತದೆ ಎಂದು ಹೇಳಿದರು.
ಶಸಚಿಕಿತ್ಸೆ ನಂತರ ರೋಗಿಯ ಜೀವನ ವಿವರ:
ಪಿತ್ತಜನಕಾಂಗದ ಕಸಿ ನಂತರ ರೋಗಿಯ ಸಾಮಾನ್ಯ ಜೀವನ ಬಗ್ಗೆ ವಿವರಿಸಿದ ಡಾ. ಸಂಜಯ್ ಗೋವಿಲ್, ಕಸಿ ಮಾಡಿದ ಮೊದಲ ಮೂರು ತಿಂಗಳು ರೋಗಿಯು ತುಂಬಾ ಜಾಗರೂಕರಾಗಿರುವುದು ಬಹಳ ಮುಖ್ಯ. ದೇಹವು ಹೊಸ ಯಕೃತ್ತಿಗೆ ಹೊಂದಿಕೊಳ್ಳಲು ಪ್ರಾರಂಭಿಸುವ ಸಮಯ ಹಾಗೂ ಹೊಸ ಅಂಗದ ಆರೋಗ್ಯವನ್ನು ಕಾಪಾಡಿಕೊಳ್ಳಲು ಔಷಧಗಳನ್ನು ತೆಗೆದುಕೊಳ್ಳವುದು ಮುಖ್ಯ. ರೋಗಿಯನ್ನು ಡಿಸ್ಟಾರ್ಜ್ ಮಾಡುವ ಸಂದರ್ಭದಲ್ಲಿ ಹೇಗೆ ಔಷಧಗಳನ್ನು ತೆಗೆದುಕೊಳ್ಳುವ ಬಗ್ಗೆ ತಿಳಿಸಲಾಗುತ್ತದೆ. ಕಡ್ಡಾಯವಾಗಿ ದಿನನಿತ್ಯ ತಪ್ಪಿಸದೆ ಔಷಧಗಳನ್ನು ರೋಗಿಯು ತೆಗೆದುಕೊಳ್ಳಬೇಕು. ಅಲ್ಲದೆ, ಆಪೋಲೊ ಆಸ್ಪತ್ರೆಯಲ್ಲಿ ನಮ್ಮ ಕಸಿ ತಂಡವು ಪ್ರತಿ ರೋಗಿಗೆ ಪ್ರಮುಖ ಸಲಹೆಗಳನ್ನು ನೀಡಿ ಅವರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ ಎಂದರು.
ಸ್ವಲ್ಪ ದಿನಗಳ ಬಳಿಕ ರೋಗಿಯ ಆರೋಗ್ಯ ಸುಧಾರಿಸುತ್ತಿರುವ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಕೆಲಸವನ್ನು ಮಾಡಲು ಅನುಮತಿ ನೀಡಲಾಗುತ್ತದೆ. ಕಸಿ ನಂತರದ ಕೇವಲ ಮೂರರಿಂದ ಆರು ತಿಂಗಳೊಳಗೆ ಕೆಲಸಕ್ಕೆ ಮರಳಬಹುದು. ಕ್ರೀಡೆ ಸೇರಿ ಆರೋಗ್ಯಕರ ವ್ಯಾಯಾಮಗಳನ್ನು ಮಾಡಬಹುದು. ಅಲ್ಲದೆ, ಸ್ವಲ್ಪ ವಾಸಿಯಾದ ಬಳಿಕ ರೋಗಿಯು ಔಷಧ ಅಥವಾ ವ್ಯಾಯಾಮ ಮಾಡಲು ಹೋಗುವುದಿಲ್ಲ. ಇದು ತಪ್ಪು, ಸಂಪೂರ್ಣವಾಗಿ ಗುಣಮುಖರಾಗುವರೆಗೂ ದಿನನಿತ್ಯದ ಚಟುವಟಿಕೆಗಳನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಪಿತ್ತಜನಕಾಂಗದ ಕಸಿ ಗರ್ಭಧಾರಣೆಯಲ್ಲಿ ತೊಡಕುಗಳಿಗೆ ಕಾರಣವಾಗಬಹುದು ಎಂಬ ಜನರಲ್ಲಿ ಸಾಮಾನ್ಯ ನಂಬಿಕೆ ಇದೆ. ಇದು ತಪ್ಪು. ಕಸಿ ನಂತರ ದಂಪತಿಗಳು ಮಕ್ಕಳನ್ನು ಹೊಂದಲು ಸಮರ್ಥರಾಗಿದ್ದಾರೆ ಎಂಬುದನ್ನು ಗಮನಿಸಬೇಕು. ಮಗುವಿಗೆ ಯೋಜನೆ ಹಾಕುವ ಮೊದಲು ಕಸಿ ಮಾಡಿದ ನಂತರ ಒಂದು ವರ್ಷ ಕಾಯುವಂತೆ ಮಹಿಳೆಯರಿಗೆ ಸೂಚಿಸಲಾಗುತ್ತದೆ. ಇದನ್ನು ಪಿತ್ತಜನಕಾಂಗದ ಕಸಿ ತಂಡ ಮಾರ್ಗದರ್ಶನ ಮಾಡಬೇಕು. ಅಲ್ಲದೆ, ಯಾವುದೇ ದುಶ್ಚಟಗಳನ್ನು ಮಾಡಬಾರದು. ಒಂದು ವೇಳೆ ಔಷಧ ತೆಗೆದುಕೊಳ್ಳುವ ಸಂದರ್ಭದಲ್ಲಿ ಮದ್ಯಪಾನ ಸೇವಿಸಿದರೆ ಯಕೃತ್ತಿಗೆ ವಿಷಕಾರಿ ಅಂಶಗಳು ಸೇರುತ್ತದೆ. ಆದ್ದರಿಂದ, ಮದ್ಯಪಾನ ಸೇರಿ ದುಶ್ಚಟಗಳನ್ನು ಮಾಡಬಾರದು. ಪಿತ್ತಜನಕಾಂಗದ ಕಸಿಯಲ್ಲಿ ಪರಿಣಿತ ವೈದ್ಯರಿಂದ ಮಾರ್ಗದರ್ಶನದಲ್ಲಿ ಸಲಹೆಗಳನ್ನು ಪಡೆದು ಪಾಲಿಸಬೇಕು ಎಂದು ಡಾ. ಸಂಜಯ್ ಗೋವಿಲ್ ಸಲಹೆ ನೀಡಿದರು.