ಮಧುಮೇಹ ಹಾಗೂ ಸೀಬೆ ಅಥವಾ ಪೇರಲ ಹಣ್ಣು

belagavi

ಮಧುಮೇಹಿಗಳ ಆಹಾರದ ಪಟ್ಟಿಯನ್ನು ಸಿದ್ಧಪಡಿಸುವಾಗ ಹಣ್ಣುಗಳನ್ನು ಸೇರಿಸುವುದಾದರೆ, ಮೊಟ್ಟಮೊದಲನೆಯದಾಗಿ ಪೇರಲ ಹಣ್ಣನ್ನು ನಿಸ್ಸಂಶಯವಾಗಿಯೂ ಸೇರಿಸುತ್ತಾರೆ. ಇದಕ್ಕೆ ಹಲವಾರು ಕಾರಣಗಳು ಉಂಟು.

1. ಕ್ಯಾಲೋರಿ ಪ್ರಮಾಣ:

ಮೇಲ್ಕಾಣಿಸಿದ ಪೋಷಕಾಂಶಗಳ ವಿವರಗಳನ್ನು ವೀಕ್ಷಿಸಿದಾಗ 100 ಗ್ರಾಂ ಹಣ್ಣಿನಲ್ಲಿ ಕೇವಲ 68 ಕ್ಯಾಲರಿಗಳು . ಹಾಗೂ ಜೊತೆಗೆ 5.44 ಗ್ರಾಂನಷ್ಟು ನಾರಿನಾಂಶ ಇರುವದರಿಂದ ರಕ್ತದಲ್ಲಿಯ ಸಕ್ಕರೆಯ ಪ್ರಮಾಣವು ತಕ್ಷಣವೇ ಹೆಚ್ಚಳವಾಗದಂತೆ ತಡೆಯುತ್ತದೆ.

2. ಕೆಳಮಟ್ಟದ ಗ್ಲಾಯ್ಸಿಮಿಕ್ ( G l ) ಸೂಚ್ಯಂಕ :

ಈ ಹಣ್ಣಿನ G I ಸೂಚ್ಯoಕ್ 12 – 32 ದಷ್ಟುಇರುತ್ತದೆ. G I ನಲ್ಲಿಯ ವ್ಯತ್ಯಾಸಕ್ಕೆ ಹಣ್ಣಿನ ವಿವಿಧ ತಳಿಗಳು ಹಾಗೂ ಪಕ್ವತೆಯು ಕಾರಣ. ಕೆಲವು ಹಣ್ಣಿನ ತಳಿಗಳು ಅಲಹಾಬಾದ್

( ಪ್ರಯಾಗ್ ರಾಜ್ ) ಹೆಚ್ಚು ಸಿಹಿಯಾಗಿರುತ್ತವೆ ಹಾಗೂ ಪಕ್ವತೆ ಹೆಚ್ಚಾದಂತೆ ಅದರಲ್ಲಿಯ ಸಕ್ಕರೆಯ ಪ್ರಮಾಣ ಕೂಡ ಹೆಚ್ಚಾಗುತ್ತದೆ.

ಕೆಳಮಟ್ಟದ G I ಇರುವ ಹಣ್ಣುಗಳಲ್ಲಿ ಇದು ಮೊದಲನೆಯ ಶ್ರೇಣಿಯಲ್ಲಿ. ಬಾಳೆಹಣ್ಣಿನ ಜೊತೆಗೆ ಹೋಲಿಸಿದಾಗ ಇದು ಅದಕ್ಕಿಂತ ತುಂಬಾ ಜಿ ಆಯ್ ಕಡಿಮೆ ಇರುವ ಹಣ್ಣು. ಬಾಳೆಹಣ್ಣಿನ ಜಿ ಆಯ್ ಪ್ರಮಾಣ 42 ರಿಂದ 62 ದಷ್ಟು ಇರುತ್ತದೆ.

3. ಹಣ್ಣಿನ ತಿರುಳು:

ಇತ್ತೀಚೆಗೆ ಆಲ್-ಇಂಡಿಯಾ ಇನ್ಸ್ಟಿಟ್ಯೂಟ್ ಭುವನೇಶ್ವರ ನ ವೈದ್ಯ ವಿದ್ಯಾರ್ಥಿಗಳ ಮೇಲೆ ಮಾಡಿದ ಸಂಶೋಧನೆಯ ವಿವರಗಳ ಪ್ರಕಾರ ಹಣ್ಣಿನ ಮೇಲ್ಮೈ ಸಹಿತ ಅಂದರೆ, ಪಕ್ವವಾದ ಇಡೀ ಹಣ್ಣು ಸೇವಿಸಿದಾಗ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಕೇವಲ ಹಣ್ಣಿನ ತಿರುಳನ್ನು ಮಾತ್ರ ಸೇವಿಸಿದಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಕೊಲೆಸ್ಟ್ರಾಲ್ ಪ್ರಮಾಣ ಕೂಡ ಕಡಿಮೆ ಆಗುವುದು ಕಂಡುಬಂದಿದೆ.

ಅಲ್ಲದೇ ರಕ್ತದೊತ್ತಡದ ನಿಯಂತ್ರಣ ಹಾಗೂ L D L ಕೊಲೆಸ್ಟ್ರಾಲ್( ಹಾನಿಕಾರಕ ಕೊಲೆಸ್ಟ್ರಾಲ್) ಪ್ರಮಾಣ ಕಡಿಮೆ ಹಾಗೂ H D L ಕೊಲೆಸ್ಟ್ರಾಲ್( ಒಳ್ಳೆಯ ಕೊಲೆಸ್ಟ್ರಾಲ್) ಪ್ರಮಾಣ ಹೆಚ್ಚು ಆಗಿರುವುದು ಪ್ರಯೋಗಗಳಿಂದ ತಿಳಿದುಬಂದಿದೆ. ಆದ್ದರಿಂದ ಮಧುಮೇಹಿಗಳು ಇಡೀ ಹಣ್ಣನ್ನು ಸೇವಿಸದೆ ಕೇವಲ ಹಣ್ಣಿನ ತಿರುಳನ್ನು ಸೇವಿಸುವುದು ಒಳ್ಳೆಯದು.

ಸಿಹಿಮೂತ್ರ ರೋಗಿಗಳಲ್ಲಿ ಪ್ರತಿಶತ 60 ರಷ್ಟು ಜನರಲ್ಲಿ ರಕ್ತದೊತ್ತಡ ಹೆಚ್ಚಾಗಿರುತ್ತದೆ. ಈ ಹಣ್ಣಿನಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಿದ್ದು ಪೊಟಾಷಿಯಂ ಹೆಚ್ಚಿರುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಉತ್ಕರ್ಷಣ ನಿರೋಧಕ( Anti Oxidants ) ಘಟಕಗಳು, ಹಾಗೂ ಲೈಕೊಪಿನ್ ( Lycopene) ಎಂಬಕೆಂಪು ವರ್ಣದ ರಾಸಾಯನಿಕ ಘಟಕ ಹಾಗೂ ಸಮೃದ್ಧವಾಗಿರುವ “ಸಿ “ಜೀವನ ಸತ್ವ, ಇವೆಲ್ಲವುಗಳು, ರಕ್ತದೊತ್ತಡ ನಿಯಂತ್ರಣ,ಹೃದಯದ ಆರೋಗ್ಯ ಹಾಗೂ ಕೊಬ್ಬಿನ ಓರೆನೋಟ (Lipid Profile)ದಲ್ಲಿಯ ಬದಲಾವಣೆಯನ್ನು ಮಾಡಲು ಸಹಾಯಕಾರಿ ಯಾಗಿರುತ್ತವೆ

ಹಣ್ಣಿನಲ್ಲಿರುವ ಈ ಎಲ್ಲಾ ಘಟಕಗಳು ಹೃದಯದ ಶಕ್ತಿವರ್ಧಕ ಮಾತ್ರೆಯಂತೆ ಕೆಲಸ ಮಾಡುತ್ತವೆ.

ಮಧುಮೇಹಿಗಳು ಪೇರಲ ಹಣ್ಣು ತಿನ್ನುವಾಗಗಮನದಲ್ಲಿಡಬೇಕಾದ ಸಂಗತಿಗಳು :

1. ಹೆಚ್ಚು ಪಕ್ವವಾದ ಹಣ್ಣುಗಳನ್ನು ತಿನ್ನಕೂಡದು.

2. ಮೇಲ್ಪದರ ನ್ನು ತೆಗೆದುಹಾಕಿ ಕೇವಲ ತಿರುಳನ್ನು ತಿನ್ನುವುದು ಒಳ್ಳೆಯದು.ರಕ್ತದಲ್ಲಿಯ ಸಕ್ಕರೆ ನಿಯಂತ್ರಣ ಇಲ್ಲದೇ ಇರುವವರು ಹಾಗೂ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವವರಿಗೆ ಈ ವಿಷಯ ಹೆಚ್ಚು ಅನ್ವಯಿಸುತ್ತದೆ.

3. ಒಂದು ದಿನಕ್ಕೆ, ಮಧ್ಯಮ ಗಾತ್ರದ ಎರಡು ಹಣ್ಣುಗಳಿಗಿಂತ ಹೆಚ್ಚು ಸೇವನೆ ಮಾಡಕೂಡದು. ಹಣ್ಣುಗಳ ಸೇವನೆಯ ಮಧ್ಯೆ ಸಾಕಷ್ಟು ಅಂತರವಿರಬೇಕು.

4. ಸಕ್ಕರೆ ನಿಯಂತ್ರಣದಲ್ಲಿ ಇರದೇ ಇರುವವರು ಹಾಗೂ ಇನ್ಸುಲಿನ್ ತೆಗೆದುಕೊಳ್ಳುವವರು ಹಾಗೂ ಕಟ್ಟುನಿಟ್ಟಾಗಿ ಕ್ಯಾಲೋರಿ ಎಣಿಕೆಮಾಡಿ ಆಹಾರವನ್ನು ಸೇವಿಸುವರು, ಸೇವಿಸಿದ ಹಣ್ಣಿನಲ್ಲಿಯ ಕ್ಯಾಲೋರಿಯ ಪ್ರಮಾಣವನ್ನು, ನಂತರ ಸೇವಿಸುವ ಆಹಾರದಲ್ಲಿ ಕಡಿತ ಮಾಡುವುದು ಒಳ್ಳೆಯದು. ಈ ವಿಷಯದಲ್ಲಿ ಸಿಹಿಮೂತ್ರ ತಜ್ಞರ ಸಲಹೆ

dr aa Pangi Athani

ಪಡೆಯುವುದು ಒಳ್ಳೆಯದು.

5. ಈ ಹಣ್ಣಿನ ಜೊತೆಗೆ ಪ್ರೊಟೀನ್ಯುಕ್ತ ಅಥವಾ

ಕೊಬ್ಬಿನೊ ಳಗೊಂಡ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ತಕ್ಷಣ ಹೆಚ್ಚಾಗುವದನ್ನು ತಡೆಗಟ್ಟಬಹುದು.

6. ಈ ಸಸಿಯ ಎಲೆಗಳು ಕೂಡ ಮಧುಮೇಹ ನಿಯಂತ್ರಣದಲ್ಲಿ ಸಹಾಯಕವಾಗುವುದು ಕಂಡುಬಂದಿದೆ ತಾಜಾ ಎಲೆಗಳನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯ ಅಥವಾ ಚಹಾ ಜೊತೆಗೆ ಸೇವಿಸಬಹುದು. ಊಟದ ನಂತರ ಸೇವಿಸಿದಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ.

ಸಿಹಿಮೂತ್ರ ರೋಗಿಗಳ ಆಹಾರ ಸಂಯೋಜನೆಯಲ್ಲಿ ಈ ಹಣ್ಣನ್ನು ಸೇರಿಸುವುದರಿಂದ, ಆಹಾರದಲ್ಲಿ ವಿವಿಧತೆಯನ್ನು ತಂದು ಆಹಾರದ ಬಗ್ಗೆ ಬೇಸರವನ್ನು ದೂರೀಕರಿಸಬಹುದು.ಪೇರಲ ಹಣ್ಣು ಮತ್ತು ಈ ಸಸ್ಯದ ಎಲೆಗಳನ್ನು ಇನ್ನೂ ಹಲವಾರು ವೈದ್ಯಕೀಯ ಹಾಗೂ ಆರೋಗ್ಯ ಕಾರಣಗಳಿಗಾಗಿ ಬಳಸಲಾಗುತ್ತದೆ.

ಲೇಖಕರು

ಡಾ. ಎ. ಎ. ಪಾಂಗಿ, ಮುಖ್ಯ ವೈದ್ಯರು ಅನ್ನಪೂರ್ಣ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಅಥಣಿ

1 COMMENT

LEAVE A REPLY

Please enter your comment!
Please enter your name here