COVID-19 ತಡೆಗಟ್ಟಲು ಮಾಸ್ಕ್ ಧರಿಸುವ ಸರಿಯಾದ ವಿಧಾನ: ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸಿಡಿಸಿ ಅಮೇರಿಕಾ ಅಧರಿಸಿದ ಸಲಹೆಗಳು

 

  • ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸುವುದು ಕಡ್ಡಾಯವಾಗಿದೆ
  • ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಅಥವಾ ಸೋಪ್ ಮತ್ತು ನೀರಿನೊಂದಿಗೆ ಆಗಾಗ್ಗೆ ಕೈ ಸ್ವಚ್ಛಗೊಳಿಸುವಿಕೆಯೊಂದಿಗೆ ಬಳಸಿದಾಗ ಮಾತ್ರ ಮಾಸ್ಕ ಪರಿಣಾಮಕಾರಿಯಾಗಿರುತ್ತವೆ.
  • ನೀವು ಮಾಸ್ಕ ಧರಿಸಿದರೆ, ಅದನ್ನು ಹೇಗೆ ಬಳಸುವುದು ಮತ್ತು ಅದನ್ನು ಸರಿಯಾಗಿ ವಿಲೇವಾರಿ ಮಾಡುವುದು ನಿಮಗೆ ತಿಳಿದಿರಬೇಕು.
  • ಮಾಸ್ಕನ್ನು ನಿಮ್ಮ ಕುತ್ತಿಗೆಗೆ ಅಥವಾ ನಿಮ್ಮ ಹಣೆಯ ಮೇಲೆ ಇಡಬೇಡಿ.
  • ಮಾತನಾಡುವ ಸಂದರ್ಭದಲ್ಲಿ ಮಾಸ್ಕನ್ನು ಸಡಿಲಗೊಳಿಸಬೇಡಿ ಮತ್ತು ಕೆಳಗೆ ಎಳೆಯಬೇಡಿ.
  • ಮಾಸ್ಕ ಹಾಕುವ ಮೊದಲು, ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಅಥವಾ ಸೋಪ್ ಮತ್ತು ನೀರಿನಿಂದ ಕೈಗಳನ್ನು ಸ್ವಚ್ಛ ಗೊಳಿಸಿ.

ಮಾಸ್ಕದಿಂದ, ಬಾಯಿ ಮತ್ತು ಮೂಗನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಿರಿ.

  • ನಿಮ್ಮ ಮುಖ ಮತ್ತು ಮಾಸ್ಕದ ಅಂಚಿನ ನಡುವೆ ಯಾವುದೇ ಅಂತರಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ.

 

  • ಮಾಸ್ಕ ಬಳಸುವಾಗ ಅದನ್ನು ಪದೆ ಪದೆ ಮುಟ್ಟಬೇಡಿ; ಮುಟ್ಟಿದರೆ, ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಅಥವಾ ಸೋಪ್ ಮತ್ತು ನೀರಿನಿಂದ ನಿಮ್ಮ ಕೈಗಳನ್ನು ಸ್ವಚ್ಛ ಗೊಳಿಸಿ.

mask

  • ಮಾಸ್ಕ ಒದ್ದೆಯಾದ ತಕ್ಷಣ ಬದಲಾಯಿಸಿ ಮತ್ತು ಏಕಬಳಕೆಯ ಮಾಸ್ಕಗಳನ್ನು ಮತ್ತೆ ಬಳಸಬೇಡಿ.

 

  • ಮಾಸ್ಕ ತೆಗೆದುಹಾಕಲು, ಅದನ್ನು ಹಿಂದಿನಿಂದ ತೆಗೆದುಹಾಕಿ (ಮಾಸ್ಕ ಮುಂಭಾಗವನ್ನು ಮುಟ್ಟಬೇಡಿ); ಮುಚ್ಚಿದ ತೊಟ್ಟಿಯಲ್ಲಿ ತಕ್ಷಣ ತ್ಯಜಿಸಿ; ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಅಥವಾ ಸೋಪ್ ಮತ್ತು ನೀರಿನಿಂದ ಕೈಗಳನ್ನು ಸ್ವಚ್ಛ ಗೊಳಿಸಿ.

 

ಮಾಸ್ಕನ್ನು ಯಾರು ಬಳಸಬಾರದು:

  • 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು,

 

  • ಉಸಿರಾಡಲು ತೊಂದರೆ ಇರುವರು
  • ಪ್ರಜ್ಞಾಹೀನರಾಗಿದ್ದವರು,
  • ಬೇರೆಯವರ ಸಹಾಯವಿಲ್ಲದೆ ಮಾಸ್ಕ ತೆಗೆದುಹಾಕಲು ಅಸಮರ್ಥರಾಗಿದ್ದವರು.

 

Dr Jayaprakash Appajigol
Dr Jayaprakash Appajigol, MD

Physician, KLES Dr Prabhakar Kore Hospital & MRC Belagavi  M.9844595659

 

Popular Doctors

Related Articles