ಕೊರೊನಾ ವೈರಸ್ ಮತ್ತು ಕಿಡ್ನಿ (ಮೂತ್ರಪಿಂಡ)

ಸಾರ್ಸ ಮತ್ತು ಎಮ್ಇಆರ್ಎಸ್ ಕಂಡು ಬಂದಾಗ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಮರಣಕ್ಕೀಡಾಗಬಹುದು ಎಂದು ಮುನ್ಸೂಚನೆ ಸಿಕ್ಕಿತ್ತು. ಆದ್ದರಿಂದ ಈಗ ಕೋವಿಡ್ -19 ಸಂದರ್ಭದಲ್ಲಿಯೂ ಮೂತ್ರಪಿಂಡದ ಕುರಿತು ವಿಶೇಷ ನಿಗಾ ವಹಿಸುವದು ಅತ್ಯಂತ ಮುಖ್ಯವಾಗಿದೆ. ಚೈನಾ ಮತ್ತು . ಕೋರಿಯಾದಲ್ಲಿ ಶೇ. 30 ರಿಂದ 60 ರಷ್ಟು ರೋಗಿಗಳ ಮೂತ್ರದಲ್ಲಿ ಪ್ರೊಟೀನ್ (ಪೋಷಕಾಂಶ) ಸೋರಿಕೆ, ಶೇ. 15 ರಿಂದ 20 ರಷ್ಟು ರೋಗಿಗಳಲ್ಲಿ ತತಕ್ಷಣ ಕಿಡ್ನಿ ಹಾಳಾಗುವಿಕೆ ಕಂಡುಬಂದಿತ್ತು.ಇದರಲ್ಲಿ ಬೇಧಿ, ನಂಜು ಉಂಟಾಗಿತ್ತು.

ನೋವು ನಿವಾರಕ ಮತ್ತು ಜ್ವರನಾಶಕಗಳನ್ನು ಅತಿಯಾಗಿ ಉಪಯೋಗಿಸಿದಾಗ ತತಕ್ಷಣ ಕಿಡ್ನಿ ಗಾಯ ಕಂಡು ಬಂದಿತ್ತು. ಬಹುವಿಧ ಅಂಗಗಳ ಹಾಳಾಗುವದು ಮುಂಚಿತವಾಗಿ ಕಂಡುಬರುತ್ತದೆ. ಸಂದರ್ಭದಲ್ಲಿ ಹಾಳಾದ ಕಿಡ್ನಿಯು ಸಹಜ ಸ್ಥಿತಿಗೆ ಮರಳಲು ಡಯಾಲಿಸಿಸ್ ( ರಕ್ತಶುದ್ದೀಕರಣ) ಮಾಡಬೇಕಾಗುತ್ತದೆ. ಇದರಿಂದ ರೋಗಿಯು ಗುಣಮುಖವಾಗಲು ಸಹಕಾರಿಯಾಗಲಿದೆ. ಆದರೆ ದೀರ್ಘಕಾಲಿನ ಕಿಡ್ನಿ ಹಾಳಾದಲ್ಲಿ ಎಷ್ಟು ಪ್ರಮಾಣದಲ್ಲಿ ಸರಿಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಕಿಡ್ನಿ ರೋಗಿಗಳು ಮತ್ತು ಕೊರೊನಾ ವೈರಸ್ ಸೋಂಕಿನ ತೊಂದರೆಗಳು:

ಮೂತ್ರಪಿಂಡ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ವಿಶ್ವದಾಧ್ಯಂತ ಸುಮಾರು 850 ಮಿಲಿಯನ್ ಜನರು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದಾರೆ. ದೀರ್ಘವಾದ ಕಿಡ್ನಿ ರೋಗದಿಂದ ಬಳಲುತ್ತಿರುವವರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ತೀವ್ರ ತೊಂದರೆ ಅನುಭವಿಸಬೆಕಾಗುತ್ತದೆ. ಏಕೆಂದರೆ ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಇದು ಕಸಿ ಮಾಡಿಸಿಕೊಂಡವರಲ್ಲೂ ಅಧಿಕ. ಆದ್ದರಿಂದ ಕಿಡ್ನಿ ರೋಗಿಗಳಿಗೆ ಸಾಂಕ್ರಾಮಿಕ ಜ್ವರವು ತೀವ್ರತರವಾಗಿ ಬಾಧಿಸುತ್ತದೆ.

ಕೋವಿಡ್ ಸೊಂಕಿನಿಂದ ರಕ್ಷಿಸಿಕೊಳ್ಳಲು ಕಿಡ್ನಿ ರೋಗಿಗಳು ಕೆಳಗಿನ ಸೂಚನೆಗಳನ್ನು ಪಾಲಿಸಬೇಕು.

1. ಆಲ್ಕೋಹಾಲ (ಮದ್ಯಸಾರ)ವುಳ್ಳ ಸ್ಯಾನಿಟೈಸರ ಬಳಸಿ ಕೈತೊಳೆದುಕೊಳ್ಳಬೇಕು.

2. ಮದ್ಯಪಾನ, ಧೂಮ್ರಪಾನವನ್ನು ತ್ಯಜಿಸಿ.

3. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.

4. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅವಶ್ಯವಿದ್ದರೆ ಮಾತ್ರ ಜನರನ್ನು ಭೇಟಿಯಾಗಿ.

5. ದೈಹಿಕ ಕಾರ್ಯಚಟುವಟಿಕೆಗಳಿಂದ ಸಕ್ರೀಯವಾಗಿರಿ. ದೀರ್ಘ ಉಸಿರಾಟದ ವ್ಯಾಯಾಮ ಮಾಡಿ. ಶ್ವಾಸಕೋಶದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

6. ವೈದ್ಯರು ಹಾಗೂ ನುಟ್ರಿಶಿಯನಿಸ್ಟ ಅವರ ಸಲಹೆಯಂತೆ ಆರೋಗ್ಯಯುತ ಗುಣಮಟ್ಟದ ಆಹಾರ ಸೇವಿಸಿ. ಬಿಸಿನೀರು ಕುಡಿಯಿರಿ.

8. ನ್ಯುಮೊಕೊಕ್ಕಲ (ನ್ಯುಮಿನಿಯಾ ನಿರೋಧಕ) ಚುಚ್ಚುಮದ್ದು(ವ್ಯಾಕ್ಸಿನ್) ಹಾಕಿಸಿಕೊಂಡಿದ್ದರೆ ಒಳ್ಳೆಯದು.

9. ಕೊರೊನಾ ವೈರಸ್ ತೊಂದರೆಯಲ್ಲಿ ಡಯಾಲಿಸಿಸ್ (ರಕ್ತಶುದ್ದೀಕರಣ) ಮಾಡಿಸುವದನ್ನು ತಪ್ಪಿಸಬೇಡಿ. ಕಣ್ಣು ರಕ್ಷಣೆಗೆ ಗ್ವಾಗಲ್ ಸಮೇತ ಮಾಸ್ಕ ಧರಿಸಿ. ಅನಗತ್ಯವಾಗಿ ಆಸ್ಪತ್ರೆಗೆ ಭೇಟಿ ನೀಡುವದನ್ನು ತಪ್ಪಿಸಿ. ದೂರವಾಣಿ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಬಹುದು.

10. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಔಷಧಿಗಳ ಸಾಕಷ್ಟು ಸಂಗ್ರವನ್ನಿಟ್ಟುಕೊಳ್ಳಿ. ಔಷಧೋಪಚಾರವನ್ನು ತಪ್ಪಿಸಬೇಡಿ.

ರೋಗಿ ಮತ್ತು ರೋಗಿಯ ಕುಟುಂಬ ಸದಸ್ಯರು ಯಾವ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

ಕೈಗಳನ್ನು ಮೆಲಿಂದ ಮೇಲೆ ಸೋಪ್ (ಮಾರ್ಜಕ) ಬಳಸಿ ತೊಳೆದುಕೊಳ್ಳಬೇಕು. ಹ್ಯಾಂಡ ಸ್ಯಾನಿಟೈಸರ ಉಪಯೋಗಿಸಿ.

ನಿಮ್ಮ ಕಣ್ಣು, ಮೂಗು ಮತ್ತು ಮುಟ್ಟಿಕೊಳ್ಳುವದನ್ನು ತ್ಯಜಿಸಿ (ತಪ್ಪಿಸಿ)

ಯಾವುದೇ ವಸ್ತುಗಳನ್ನು ಮುಟ್ಟಿದರೆ ಕೈಗಳನ್ನು ತೊಳೆದುಕೊಳ್ಳುವದನ್ನು ರೂಡಿಸಿಕೊಳ್ಳಿ.

ಶ್ವಾಸಕೋಶದ ತೊಂದರೆಗಳು ಬಂದೆರಗದಂತೆ ವಸ್ತುಗಳನ್ನು ಮೇಲಿಂದ ಮೆಲೆ ಸ್ವಚ್ಚಗೊಳಿಸುತ್ತಿರಬೇಕು.

ಸಾಧ್ಯವಾದಷ್ಟು ಜನಸಂದಣಿ ತಪ್ಪಿಸಿ.

ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವದು ಒಳ್ಳೆಯದು.

ಔಷಧೋಪಚಾರವನ್ನು ನಿಲ್ಲಿಸಬೇಡಿ.

ದೂರವಾಣಿ ಮೂಲಕ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆದುಕೊಂಡು ಪಾಲಿಸಿ.

ರೋಗಿಗಳ ಆರೈಕೆ ಮಾಡುವವರು ಅನುಸರಿಸಬೇಕಾದ ಕ್ರಮಗಳು

ಡಯಾಲಿಸಿಸ್ ರೋಗಿಯೊಂದಿಗೆ ಇರುವ ಕುಟುಂಬದ ಎಲ್ಲ ಸದಸ್ಯರು ಕೆಲವು ಮುನ್ನೆಚ್ಚರಿಕೆ ಕ್ರಮ ಮತ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದೇಹದ ಉಷ್ಣಾಂಶ ತಪಾಸಣೆ, ವಯಕ್ತಿಕ ಆರೋಗ್ಯ, ಕೈತೊಳೆದುಕೊಳ್ಳವದು ಮತ್ತು ಅನಾರೋಗ್ಯಕ್ಕೀಡಾದ ವ್ಯಕ್ತಿಯ ಕುರಿತು ಮಾಹಿತಿ ನೀಡುವದು.

ಸಾರಾಂಶ:

ಕಿಡ್ನಿ ರೋಗಿಗಳಿಗೆ ಸೊಂಕು ಹರಡುವಿಕೆ ಕಂಡುಬರುತ್ತಿದೆ. ಅಲ್ಲದೇ ಸಾವನ್ನೂ ಕೂಡ ತಂದೊಡ್ಡಬಹುದು. ಆದರೆ ದೀರ್ಘಕಾಲಿನ ಕಿಡ್ನಿ ರೋಗದಿಂದ ಬಳಲುವವರಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ನಿಮ್ಮ ಕಿಡ್ನಿ ಸೊಂಕಿಗೆ ಒಳಗಾಗುವದನ್ನು ತಡೆಯುವದೊಂದೇ ಅತ್ಯುತ್ತಮ ಮಾರ್ಗ.

ಆರೋಗ್ಯಯುತ ಶ್ವಾಸೊಚ್ಚಾರ ಕ್ರಮ ಅನುಸರಿಸಿ.

ನಿಮ್ಮ ಮನೆಯನ್ನು ಸ್ವಚ್ಚ ಮತ್ತು ಸೊಂಕು ರಹಿತವನ್ನಾಗಿಡಿ.

dr khanpet
Dr Mallikarjun Karishetti (Khanpet) 
Senior Nephrologist KLES Dr. Prabhakar Kore Hospital & MRC

Belagavi

LEAVE A REPLY

Please enter your comment!
Please enter your name here