ವೈದ್ಯ ವೃತ್ತಿಯು ಒಂದು ¥ವಿತ್ರ ವೃತ್ತಿಯಾಗಿದ್ದು, ಅದರಲ್ಲೂ ಮಕ್ಕಳ ವೈದ್ಯರು ಅತಿಯಾದ ಚಟುವಟಿಕೆಯಲ್ಲಿರಬೇಕಾಗುತ್ತದೆ. ಇಂದಿನ ವೈದ್ಯ ವಿಜ್ಞಾನವು ನಿರಂತರ ಸಂಶೋಧನೆಗಳಿಂದ ಉತ್ತುಂಗzಲ್ಲಿದೆ. ಅದನ್ನು ಇಂದಿನ ಯುವ ವೈದ್ಯರುಗಳು ಅರಿಯಬೇಕಾದದ್ದು ಅತ್ಯಗತ್ಯವಾಗಿದೆ ಎಂದು ಇಂದಿರಾ ಗಾಂಧೀ ಇನ್ಸ್ಟಿಟ್ಯುಟ ಆಫ ಚೈಲ್ಡ ಹೆಲ್ಥನ ಮಾಜೀ ನಿರ್ದೇಶಕ ಡಾ. ಶಿವಾನಂದ ಅವರಿಂದಿಲ್ಲಿ ಹೇಳಿದರು.
ನಗರದ ಕೆಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗವು ಏರ್ಪಡಿಸಿದ್ದ ರಾಜ್ಯಮಟ್ಟದ ವಾರ್ಷಿಕ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ತಮ್ಮ ವೃತ್ತಿಜೀವನದಲ್ಲಿ ಬರುವ ತೊಡಕುಗಳನ್ನು ಮೆಟ್ಟಿನಿಂತು, ರೋಗ ನಿಧಾನತೆಯಲ್ಲಿ ಪಾರಂಗತೆಗಳಿಸಿರಿ ಹಾಗೂ ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿರಿ ಎಂದು ಕರೆ ನೀಡಿದರು.
ಕೆಎಲ್ ಇ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಡಾ.ವಿ ಡಿ ಪಾಟೀಲ ಮಾತನಾಡುತ್ತ ಪುಸ್ತಕಗಳಿಂದ ಅರಿಯಲಾಗದ ವಿಷಯಗಳನ್ನು ವಿಚಾರಗಳನ್ನು ವಿಧಾನಗಳನ್ನು ಜಗತ್ತಿಗೆ ತೋರಲು ಹಾಗೂ ತಮ್ಮ ವೈದ್ಯಕೀಯ ಜ್ಞಾನದ ಅನುಭವವನ್ನು ಹಂಚಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ. ಅದರಲ್ಲು ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ವಿಶಿಷ್ಟ ಕೌಶಲ್ಯಗಳನ್ನು ಹೊಂದಿರುತ್ತಾನೆ. ಅದನ್ನು ಬೆಳಕಿಗೆ ತರಲು ಹಾಗೂ ಅದರ ವೈಶಿಷ್ಠ್ಯತೆಯನ್ನು ಜಗತ್ತಿಗೆ ಸಾರಲು ಇಂತಹ ವೇದಿಕೆಗಳು ನಿರಂತರವಾಗಿ ಸಾಗುತ್ತಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯು ಎಸ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತ ಅರಿತ ಜ್ಞಾನವನ್ನು ಒರೆಗೆ ಹಚ್ಚಿದಾಗಲೇ ಅದರ ನಿಖರತೆಯ ಅರಿವು ತಿಳಿಯಲು ಸಾಧ್ಯ. ಇಂತಹ ಸನ್ನಿವೇಶಗಳಲ್ಲಿ ಪ್ರಶ್ನೆಗಳು ಸಾಮಾನ್ಯವಾಗಿದ್ದು ಅವುUಳ ಉತ್ತರಹುಡುಕುವಾಗ ಅನೇಕ ವಿಷಯಗಳು ತಿಳಿದು ಬರುತ್ತವೆ ಅದೇ ರೀತಿ ಉತ್ತರವೂ ಸಿಗುತ್ತದೆ. ಆದ್ದರಿಂದ ಇಂತಹ ವಿಚಾರಸಂಕೀರ್ಣಗಳು, ಕಾರ್ಯಾಗಾರಗಳು ಹೆಚ್ಚಾಗಿ ಆಯೋಜನೆಗೊಳ್ಳಬೇಕು. ಇದರಿಂದ £ಮ್ಮ ಅನುಭವ ಭವಿಷ್ಯದ ವೈದ್ಯರಿಗೆ ದಾರಿದೀ¥ವಾಗುತ್ತದೆ ಎಂದು ತಿಳುವಳಿಕೆ ನೀಡಿದರು.
ಹೆಸರಾಂತ ಮಕ್ಕಳ ತಜ್ಞ ಡಾ. ವಾರಿ “ವಾಟ್ ಇನ ನ್ಯೂ ಇನ 2019 ಐಎಪಿ ವಾಕ್ಸಿನ್ ರಿಕಂಮಂಡೆಷನ್ಸ?” ಎಂಬ ವಿಷಯದ ಮೇಲೆ ಮಾತನಾಡಿದರು, ಖ್ಯಾತ ಮಕ್ಕಳ ಶಸ್ತ್ರಚಿಕಿತ್ಸಜ್ಞ ಡಾ. ಸಂತೋಷಕುರಬೆಟ್ “ ಸರ್ಜಿಕಲ್ಲಿ ಕರೆಕ್ಟೇಬಲ್ ಬರ್ಥ ಡೆಪೆಕ್ಟ್ಸ, ಇವೊಲ್ವಿಂಗ ಮಾನೇಜಮೆಂಟ್” ಎಂಬ ವಿಷಯದ ಮೇಲೆ ಮಾತನಾಡಿದರು. ಕೊಲ್ಹಾಪೂರ ನ ಖ್ಯಾತ ಮಕ್ಕಳ ತಜ್ಞ ಡಾ. ವಿಲಾಸ ಜಾಧವ “ಸೀಜರ್ಸ ಇನ ಆಫಿಸ್ ಪ್ರಾಕ್ಟಿಸ್ ಆಂಡ್ ರೀಸಂಟ ಗೈಡಲೈನ್ಸ ಇನ ಮಾನೇಜಮೆಂಟ” ಎಂಬ ವಿಷಯದ ಮೇಲೆ ಮಾತನಾಡಿದರು. ಖ್ಯಾತ ಮಕ್ಕಳ ತಜ್ಞೆ ಡಾ. ಜಾನಕಿ ವಿಶ್ವನಾಥ “ರೀಸಂಟ್ ಅಡ್ವಾನ್ಸಸ ಇನ ಕೇರ್ ಆಫ ಹೈ ರಿಸ್ಕ ನಿವ ಬಾರ್ನ ಎಂ ವಿಷಯದ ಮೇಲೆ ಮಾತನಾಡಿದರು. ಹೆಸರಾಂತ ಮಕ್ಕಳ ತಜ್ಞ ಡಾ… ವಿಜಯ ಕುಲಕರ್ಣಿ “ ರಿಎಮರ್ಜಿಂಗ ಡಿಪ್ಥೆರಿಯಾ” ಎಂಬ ವಿಷಯದಮೇಲೆ ಮಾತನಾಡಿದರು. ಇಂದಿರಾ ಗಾಂಧೀ ಇನ್ಸ್ಟಿಟ್ಯುಟ ಆಫ ಚೈಲ್ಡ ಹೆಲ್ಥನ ಮಾಜೀ ನಿರ್ದೇಶಕ ಡಾ. ಶಿವಾನಂದ “ಆಂಟಿಬಯಾಟಿಕ್ಸ ಸ್ಟೆವಾರ್ಡ್ಶಿಪ್” ಎಂಬ ವಿಷಯದ ಮೇಲೆ ಮಾತನಾಡಿದರು ಹಾಗೂ ಖ್ಯಾತ ಮಕ್ಕಳ ತಜ್ಞೆ ಡಾ. ಅರುಂಧತಿ ಪಾಟೀಲ “ ಅರ್ಲಿ ರೆಕಾಗ್ನಿಷನ್ ಆಫ ಲರ್ನಿಂಗ ಡಿಸೊರ್ಡರ್ಸ” ಎಂಬ ವಿµಯದ ಮೇಲೆ ಬೆಳಕು ಚೆಲ್ಲಿದರು.
ಕಾರ್ಯಕ್ರಮದಲ್ಲಿ ಡಾ. ನೇಸರಗಿ, ಡಾ. ಪಲ್ಲೇದ, ಕರ್ನಾಟಕ ಮೆಡಿಕಲ್ ಕೌನ್ಸಿಲ್ ವೀಕ್ಷಕ ಡಾ. ಮುನವಳ್ಳಿ, ಇಂಡಿಯನ ಅಸೋಶಿಯೇಶನ್ ಆಫ ಪಿಡಿಯಾಟ್ರಿಕ್ಸ ನ ಖಜಾಂಚಿ ಡಾ. ಶೈಲೇಶ ಪಾಟೀಲ, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಡಾ. ಸೌಮ್ಯಾ ವೇರ್ಣೇಕರ, ಡಾ ಅನಿತಾ ಮೋದಗೆ ನಿರೂಪಿಸಿದರು. ಡಾ. ಪವನ ಪೂಜಾರ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 200 ಕ್ಕೂ ಅಧಿಕ ವೈದ್ಯಕೀಯ ಹಾಗೂ ವೈದ್ಯಕೀಯೇತರರು ಭಾಗವಹಿಸಿದ್ದರು.