ನವದೆಹಲಿ: ಆರೋಗ್ಯ ಕ್ಷೇತ್ರಕ್ಕೆ ಹಿಂದಿನ ಎರಡು ವರ್ಷಗಳಿಗಿಂತ ಹೆಚ್ಚಿನ ಆದ್ಯತೆ ದೊರೆತಿದ್ದು, 2019–20ನೇ ಹಣಕಾಸು ವರ್ಷದಲ್ಲಿ ₹ 62,659.12 ಕೋಟಿ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ ಆಯುಷ್ಮಾನ್ ಭಾರತ್ –ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗೆ ಈ ಸಾಲಿನಲ್ಲಿ ಗರಿಷ್ಠ ಅಂದರೆ ₹ 6,400 ಕೋಟಿ ನಿಗದಿಪಡಿಸಲಾಗಿದೆ.
ಫಲಾನುಭವಿ ಕುಟುಂಬಗಳಿಗೆ ವಾರ್ಷಿಕ ₹ 5 ಲಕ್ಷದವರೆಗೂ ಆರೋಗ್ಯ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶ. ಸುಮಾರು 50 ಕೋಟಿ ಜನರಿಗೆ ಯೋಜನೆಯಿಂದ ಲಾಭವಾಗಲಿದೆ ಎಂಬುದು ಕೇಂದ್ರ ಸರ್ಕಾರದ ಅಂದಾಜು.ರಾಷ್ಟ್ರೀಯ ನಗರ ಆರೋಗ್ಯ ಮಿಷನ್ ಅನ್ವಯ ಆಯುಷ್ಮಾನ್ ಭಾರತ್ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ₹ 249.96 ಕೋಟಿ ಕಾದಿರಿಸಲಾಗಿದೆ.
ಆಯುಷ್ಯಗೆ 1939.76 ಕೋ. ರೂಗಳ ಅನುದಾನ: ಸಾಂಪ್ರಾದಯಿಕ ವೈದ್ಯಪದ್ದತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಂಡಿರುವ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಅನುದಾನ ಹೆಚ್ಚಿಸಿದ್ದು, 1939.76 ಕೂ. ರೂಗಳ ಅನುದಾನವನ್ನು ಆಯುಷ್ಯ ಸಚಿವಾಲಯಕ್ಕೆ ಮೀಸಲಿಡಲಾಗಿದೆ. ಹಿಂದಿನ ಬಜೆಟಗೆ ಹೋಲಿಸಿದರೆ ಈ ಬಾರಿ ಶೇ. 15ರಷ್ಟು ಹೆಚ್ಚಿಸಲಾಗಿದ್ದು, ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ 40 ಕೋ. ರೂ. ಹಾಗೂ ಕೋಲ್ಕತ್ತದ ರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆಗೆ 50 ಕೋ. ರೂ,