ಸ್ತನ ಕ್ಯಾನ್ಸರ್ ಇರಲಿ ಎಚ್ಚರ

– ಡಾ. ಕುಮಾರ ವಿಂಚುರಕರ
ಭಾರತದ ಪ್ರತಿ ಇಪ್ಪತ್ತೆರಡು ಮಹಿಳೆಯರ ಪೈಕಿ ಓರ್ವ ಗ್ರಾಮೀಣ ಹಾಗೂ ಪ್ರತಿ ಎಂಟು ಮಹಿಳೆಯರಲ್ಲಿ ಓರ್ವ ನಗರ ಮಹಿಳೆಯು ಸ್ತನ ಕ್ಯಾನ್ಸರನಿಂದ ಬಳಲುತ್ತಿರುತ್ತಾಳೆ. ಸ್ತನಗಳು ಮಹಿಳೆಯ ಹೆಮ್ಮೆಯ ಹೆಗ್ಗುರುತು, ಲೈಂಗಿಕ ಆಕರ್ಷಣೆಗೆ ಆಧಾರ, ತಾಯ್ತನದ ಮುಖ್ಯ ಸಾಧನ ಎಂದು ಗುರುತಿಸಲ್ಪಡುತ್ತವೆ. ವೈದ್ಯಶಾಸ್ತ್ರದ ಪ್ರಕಾರ ಸ್ತನ ಎನ್ನುವುದು ಸಂಕೀರ್ಣ ರಚನೆಯುಳ್ಳ ಒಂದು ದೈಹಿಕ ಅಂಗ. ಬೇರೆ ಅಂಗಗಳಂತೆ ಇದಕ್ಕೂ ನಿರ್ದಿಷ್ಟ ಕರ್ತವ್ಯಗಳಿವೆ. ಹಾಗೆಯೇ ಅದರದೇ ಆದ ಸಮಸ್ಯೆಗಳಿವೆ.

ಸ್ತನ ಕ್ಯಾನ್ಸರ್: ಸ್ತನದೊಳಗಿನ ಜೀವಕೋಶಗಳಲ್ಲಿ ಬೆಳೆಯುವ ಮಾರಕ ಗಡ್ಡೆಯ ಮಾರಣಾಂತಿಕ ಸಮಸ್ಯೆ. ಸ್ತನದೊಳಗೆ ಹಾಲು ಉತ್ಪಾದಿಸುವ ಗ್ರಂಥಿಗಳ ಕಿರುಹಾಲೆಗಳ ಜೀವಕೋಶಗಳಲ್ಲಿ ಸ್ತನ ಕ್ಯಾನ್ಸರ್ ಆರಂಭವಾಗಬಹುದು ಅಥವಾ ಕಿರುಹಾಲೆಗಳಿಂದ ಮೊಲೆತೊಟ್ಟುಗಳಿಗೆ ಹಾಲು ಹಾಯಿಸುವ ನಾಳಗಳಲ್ಲಿ ಈ ಸಮಸ್ಯೆ ಮೊದಲು ಕಾಣಿಸಬಹುದು. ಕೆಲವೊಮ್ಮೆ ಸ್ತನದ ಅಂಗಾಂಶಗಳಲ್ಲಿ ಶುರುವಾಗಬಹುದು.

ಸ್ತನ ಕ್ಯಾನ್ಸರ್‌ ಕೂಡ ಆನುವಂಶಿಕತೆಗೆ ಸಂಬಂಧವಿದೆ. ಶೇ 5 ರಿಂದ 10 ರಷ್ಟು ಕ್ಯಾನ್ಸರ್ ರೋಗಗಳು ಮಾತ್ರ ನಮ್ಮ ತಂದೆ ತಾಯಿ ಅಥವಾ ಅನುವಂಶಿಕತೆಯಿಂದ ಬಳುವಳಿಯಾಗಿರುತ್ತವೆ. ಆದರೆ ಶೇ 90 ರಷ್ಟು ಸ್ತನ ಕ್ಯಾನ್ಸರ್ ವಯೋಸಹಜ, ಇನ್ನೀತರ ಕಾರಣಗಳು ಮತ್ತು ಜೀವನಶೈಲಿಯಿಂದ ಬರುತ್ತವೆ. ಇದು ವಯಸ್ಸಾದಂತೆ ಹೆಚ್ಚುತ್ತಾ ಹೋಗುತ್ತದೆ.

ಹನ್ನೆರಡು ವರ್ಷ ತುಂಬುವ ಮೊದಲೇ ಋತುಮತಿಯಾದರೆ, 55 ವರ್ಷಗಳ ನಂತರ ಋತುಬಂಧ ಆಗಿರುವ ಮಹಿಳೆಯರು, ಮೂವತ್ತು ವರ್ಷದ ನಂತರ ಮಗುವಿಗೆ ಜನ್ಮ ನೀಡಿದವರು, ಮಕ್ಕಳಿಗೆ ಮೊಲೆಹಾಲು ಕುಡಿಸದವರು ಮತ್ತು ಮಕ್ಕಳಿಲ್ಲದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಂದೆರಗುವ ಅಪಾಯ ಅಧಿಕ. ಬೀಡಿ, ಸಿಗರೇಟ್, ತಂಬಾಕು ಚಟ ಇರುವ, ಎಗ್ಗಿಲ್ಲದೆ ಮದ್ಯಸೇವನೆ ಮಾಡುವ ಮತ್ತು ಹಾರ್ಮೋನ್ ಚಿಕಿತ್ಸೆ ಪಡೆವ ಮಹಿಳೆಯರು ಇದಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ರೋಗಪತ್ತೆ: ಸ್ತನದಲ್ಲಿ ಏನೋ ಗಂಟು, ಗಟ್ಟಿಭಾಗ, ಮೃದುವಾದ, ಅಥವಾ ಸ್ತನದ ಆಕಾರದಲ್ಲಿ ವ್ಯತ್ಯಾಸ ಕಂಡುಬರುವದು. ಸ್ತನ ತಪಾಸಣೆ ನಡೆಸುವ ಮ್ಯಾಮೋಗ್ರಫಿ, ಬಯಾಪ್ಸಿ ಸೇರಿದಂತೆ ಮುಂತಾದ ಪರೀಕ್ಷೆಗಳು ಮಾತ್ರ ಇದನ್ನು ಧೃಡಪಡಿಸುತ್ತವೆ. ಸ್ತನ ಕ್ಯಾನ್ಸರ್ ಧೃಡಪಟ್ಟರೆ, ಅದು ಎಷ್ಟು ಹರಡಿದೆ ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ಚಿಕಿತ್ಸೆ ಮತ್ತು ಅನುಸರಿಸಬೇಕಾದ ಕ್ರಮಗಳನ್ನು ನಿರ್ಧರಿಸಲಾಗುತ್ತದೆ. ಕ್ಯಾನ್ಸರ್ ಕೆಲವು ಹಾರ್ಮೋನ್‌ಗಳಿಗೆ ತುಂಬ ಸೂಕ್ಷ್ಮವಾಗಿದೆಯೇ, ಒಂದು ನಿರ್ದಿಷ್ಟ ಜೀನ್ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸುತ್ತದೆಯೇ ಎಂಬುದನ್ನು ಕಂಡುಹಿಡಿಯಲಾಗುತ್ತದೆ

ಚಿಕಿತ್ಸೆ:. ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಹಲವು ಸಂಗತಿಗಳ ಆಧಾರದ ಮೇಲೆ ರೂಪಿಸಲಾಗುತ್ತದೆ. ಸ್ತನದಲ್ಲಿರುವ ಗಂಟು ತೆಗೆದುಹಾಕಲು ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಂಡು ಸ್ತನದ ಭಾಗ ಅಥವಾ ಪೂರ್ತಿ ಸ್ತನವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗುತ್ತದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೆಮೊಥೆರಪಿ ಔಷಧಗಳು, (ರೆಡಿಯೋಥೆರಪಿ) ವಿಕಿರಣ ಚಿಕಿತ್ಸೆ ಸ್ತನ ಕ್ಯಾನ್ಸರ್ ಅನ್ನು ನಾಲ್ಕು ಹಂತಗಳಲ್ಲಿ ಗುರುತಿಸಲಾಗುತ್ತದೆ. ಹೆಚ್ಚಿನ ಸಂಖ್ಯೆ  ಉಲ್ಬಣವನ್ನು ಸೂಚಿಸುತ್ತದೆ. ಕ್ಯಾನ್ಸರ್ ಯಾವ ವಿಧ, ಯಾವ ಹಂತದಲ್ಲಿದೆ ಎನ್ನುವುದು ಮುಖ್ಯ.

ಟಾರ್ಗೆಟೆಡ್ ಥೆರಪಿ ಕೂಡ ಈಗ ಚಾಲ್ತಿಯಲ್ಲಿದೆ. ಚಿಕಿತ್ಸೆ ನೀಡುವಾಗ, ಸ್ತನ ಕ್ಯಾನ್ಸರ್‌ನ ಮೂರು ಹಂತಗಳಲ್ಲಿ ಕ್ಯಾನ್ಸರ್ ಗುಣಪಡಿಸುವತ್ತ ಮತ್ತು ಅದು ಮರುಕಳಿಸದಂತೆ ಚಿಕಿತ್ಸೆ ನೀಡಲಾಗುತ್ತದೆ. ನಾಲ್ಕನೇ ಹಂತದಲ್ಲಿ ರೋಗಿಯನ್ನು ಉಳಿಸುವುದು ಮುಖ್ಯ. ಆದರೆ ಈ ಹಂತದಲ್ಲಿ ಗುಣಪಡಿಸುವುದು ಕಷ್ಟ. ಚಿಕಿತ್ಸೆ ಪಡೆದ ಮೇಲೂ ಕೆಲವರಿಗೆ ಔಷಧ ಸೇವನೆ ಕೆಲಕಾಲ ಇರುತ್ತದೆ. ಶಸ್ತ್ರ ಚಿಕಿತ್ಸೆಯಲ್ಲಿ ಸ್ತನ ತೆಗೆದುಹಾಕಿದರೆ ಅದನ್ನು ಮರುರೂಪಿಸುವ ಶಸ್ತ್ರಚಿಕಿತ್ಸೆಯೂ ಆಗಲೇ ನಂತರ ನೆರವೇರಿಸಬಹುದು.

ಪ್ರತಿಯೊಬ್ಬರೂ ಸಮತೋಲಿತ ಆಹಾರ ಸೇವಿಸುವುದು, ಚಟಗಳಿಂದ ದೂರವಿರುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು. ಸ್ತನ ಕ್ಯಾನ್ಸರ್‌ಗೆ ಕೂಡ `ಮೊದಲ ಔಷಧ ಎಂದರೆ ಅದರ ಕುರಿತ ಅರಿವು ಮತ್ತು ಮುನ್ನೆಚ್ಚರಿಕೆ ವಹಿಸುವದು. ಜೀವನ ಶೈಲಿ ಬದಲಾವಣೆ, ಆರೋಗ್ಯವರ್ಧಕ ಆಹಾರ, ನಿಯಮಿತ ವ್ಯಾಯಾಮ ರೂಡಿಸಿಕೊಳ್ಳುವದು. ಧೂಮಪಾನ- ಮದ್ಯಸೇವನೆ ಚಟಗಳನ್ನು ತ್ಯಜಿಸುವದು.

Kumar Vinchurkar

ಡಾ. ಕುಮಾರ ವಿಂಚುರಕರ

Popular Doctors

Related Articles