ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಬಾಲರಕ್ಷಾ ಕಿಟ್

ದೆಹಲಿ (ಪಿಟಿಐ): ಕೋವಿಡ್ ಮೂರನೇ ಅಲೆ ಬಂದೆರಗುವ ಭೀತಿಯ ಹಿನ್ನಲೆಯಲ್ಲಿ  16 ವರ್ಷದೊಳಗಿನ ಮಕ್ಕಳಿಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುವಂತೆ ಅಖಿಲ ಭಾರತ ಆಯುರ್ವೇದ ಸಂಸ್ಥೆಯು (ಎಐಐಎ) ಬಾಲ ರಕ್ಷಾ ಕಿಟ್‌’ನ್ನು ಅಭಿವೃದ್ಧಿಪಡಿಸಿದೆ.ಸಚಿವಾಲಯದ ಅಧಿಕಾರಿಗಳ ಪ್ರಕಾರ ಉಲ್ಲೇಖಿತ ಕಿಟ್ ಮಕ್ಕಳಲ್ಲಿ ಕೋವಿಡ್ ಸೋಂಕು ನಿರೋಧಕ ಶಕ್ತಿಯನ್ನು ಹೆಚ್ಚಿಸಿದ್ದು, ಆರೋಗ್ಯಕರವಾಗಿ ಇರಲೂ ಸಹಾಯಕವಾಗಲಿದೆ.

ಆಯುಷ್ ಸಚಿವಾಲಯದಡಿ   ಎಐಐಎ (ಅಖಿಲ ಭಾರತ ಆಯುರ್ವೇದ ಸಂಸ್ಥೆ)ಯು ಕಾರ್ಯನಿರ್ವಹಿಸಲಿದೆ.ತುಳಸಿ, ಒಣದ್ರಾಕ್ಷಿ, ಅಮೃತಬಳ್ಳಿ, ದಾಲ್ಟಿನ್ನಿ, ಬೇರಿನ ರಸ ಬಳಸಿ ತಯಾರಿಸಲಾದ ಸಿರಪ್, ಚ್ಯವನಪ್ರಾಶ, ತೈಲವನ್ನೂ ಒಳಗೊಂಡಿದೆ.

ಇದರ ನಿಯಮಿತ ಸೇವನೆಯಿಂದ ಮಕ್ಕಳಲ್ಲಿ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಚಿವಾಲಯದ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಕಿಟ್ ರೂಪಿಸಲಾಗಿದೆ. ಸರ್ಕಾರದ ಅಂಗ ಸಂಸ್ಥೆ ಭಾರತೀಯ ವೈದ್ಯಕೀಯ ಔಷದ ಕಂಪನಿ (ಐಎಂಪಿಸಿಎಲ್), ಉತ್ತರಾಖಂಡ್‌ನಲ್ಲಿ ಇರುವ ತನ್ನ ಘಟಕದಲ್ಲಿ ತಯಾರಿಸಿದೆ ಎಂದು ತಿಳಿಸಿದ್ದಾರೆ.

group of people taking photo
Photo by Rebecca Zaal on Pexels.com

ರಾಷ್ಟ್ರೀಯ ಆಯುರ್ವೇದ ದಿನವಾದ ನ. 2ರಂದು ಸುಮಾರು 10 ಸಾವಿರ ಕಿಟ್‌ಗಳನ್ನು ಉಚಿತವಾಗಿ ಎಐಐಎ ವಿತರಸಲಿದೆ. ಮಕ್ಕಳಿಗಾಗಿ ಸದ್ಯ ಕೋಟೆಡ್ ಲಸಿಕೆ ಲಭ್ಯವಿಲ್ಲದೇ ಇರುವುದರಿಂದ ಬಾಲ ಸುರಕ್ಷಾ ಕಿಟ್ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಅಭಿವೃದ್ಧಿಯಾಗಿದೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.ಎಐಐವಿ ನಿರ್ದೇಶಕಿ ಡಾ. ತನುಜಾ ನೇಸು ಅವರು, ‘ಮಕ್ಕಳಿಗೆ ಸಾಮಾನ್ಯವಾಗಿ ಕಷಾಯ ಅಥವಾ ಮಾತ್ರ ಸೇವಿಸುವುದು ಕಷ್ಟವಾಗಲಿದೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ನೆಗಡಿ ಹಾಗೂ ಕೆಮ್ಮು ತಡೆಯುವಂತೆ ಇತರೆ ಕೆಲವು ಔಷಧಗಳನ್ನು ಮಿಶ್ರಣ ಮಾಡಿ ಈಗ ಸಿರಪ್ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.ಕಿಟ್ ಜೊತೆಗೆ ಸುವರ್ಣ ಪ್ರಶನ್ ಅನ್ನು 50 ಮಕ್ಕಳಿಗೆ ರಾಷ್ಟ್ರೀಯ ಆಯುರ್ವೇದ ದಿನದಂದು ವಿತರಿಸಲಾಗುತ್ತದೆ. ಸುವರ್ಣ ಪ್ರಶಸ್ತಿ ಮಕ್ಕಳಲ್ಲಿ ಒಟ್ಟಾರೆಯಾಗಿ ಆರೋಗ್ಯವನ್ನು ವೃದ್ಧಿಸಲಿದೆ ಎಂದರು.

LEAVE A REPLY

Please enter your comment!
Please enter your name here