ಆಯುಷ್ಮಾನ ಭಾರತ – ಆರೋಗ್ಯ ಕರ್ನಾಟಕ ಸಾರ್ವಜನಿಕರ ಗಮನಕ್ಕೆ

ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯು ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು ಈ ಯೋಜನೆಯಡಿ ಎಲ್ಲ ಬಿಪಿಎಲ್ ಕಾರ್ಡ ಹೊಂದಿರುವ ಬಡವರಿಗೆ ಉಚಿತವಾಗಿ ಹಾಗೂ ಎಪಿಎಲ್ ಕಾರ್ಡ ಹೊಂದಿದವರಿಗೆ ಶೇಕಡಾ 30% ರಷ್ಟು ಚಿಕಿತ್ಸಾ ವೆಚ್ಚವನ್ನು ಭರಿಸಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ ವತಿಯಿಂದ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಈ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲು ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ (AB-Ark) ಕಾರ್ಡ ಕಡ್ಡಾಯವಿರುವದಿಲ್ಲ. ರೋಗಿಯು ತಮ್ಮ ಪಡಿತರ ಚೀಟಿ ಮತ್ತು ಆಧಾರ ಕಾರ್ಡ ಸಲ್ಲಿಸಿ ಸೇವೆ ಪಡೆಯಬಹುದು, ಆದಾಗ್ಯೂ ಕೂಡಾ ಯೋಜನೆಯ ಸೇವೆಗಳು ಸುಲಲಿತವಾಗಿ ಹಾಗೂ ಸರಳಿಕೃತವಾಗಿ ಪಡೆಯಲು AB-Ark ಕಾರ್ಡಗಳನ್ನು ವಿತರಿಸಲಾಗುತ್ತದೆ, ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆ, 9 ತಾಲೂಕಾ ಆಸ್ಪತ್ರೆಗಳು ಹಾಗೂ 16 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೂ.10 ಶುಲ್ಕದೊಂದಿಗೆ ಬಿಳಿ (o4) ಹಾಳೆಯ ಮೇಲೆ ಮಾಹಿತಿಯನ್ನು ಮುದ್ರಿಸಿ ನೀಡಲಾಗುತ್ತಿದೆ, ಸಾರ್ವಜನಿಕರ ಅನೂಕಲಕ್ಕಾಗಿ ಸರ್ಕಾರಿ ಸ್ವಾಮ್ಯದ ಬೆಳಗಾವಿ ಕೆ.ಒನ್-4 ಹಾಗೂ 95 ಸೇವಾಸಿಂದೂ ಕೇಂದ್ರಗಳ ಮುಖಾಂತರ ರೂ.10 ಶುಲ್ಕದೊಂದಿಗೆ ಬಿಳಿ (o4) ಹಾಳೆಯ ಮೇಲೆ ಅಥವಾ ರೂ.35 ಶುಲ್ಕದೊಂದಿಗೆ  AB-Ark ಕಾರ್ಡಗಳನ್ನು ಪಡೆಯಬಹುದು.

ayushman-cover

ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಎಜೆಂಟರು ನಿಯಮ ಬಾಹಿರವಾಗಿ ಫಲಾನುಭವಿಗಳಿಂದ ಹೆಚ್ಚಿನ ಹಣ ಪಡೆದು AB-Ark ಕಾರ್ಡಗಳನ್ನು ವಿತರಿಸುತ್ತಿದ್ದಾರೆಂದು ತಿಳಿದು ಬರುತ್ತಿದೆ.

ಆದ್ದರಿಂದ ಸಾರ್ವಜನಿಕರು ಯಾವದೇ ಕಾರಣಕ್ಕೂ ಏಜೆಂಟರಗಳಿಂದ AB-Ark ಕಾರ್ಡಗಳನ್ನು ಪಡೆಯದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ ಇವರು ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ.

ಯಾವದೇ ಅಧೀಕೃತ ಕೇಂದ್ರಗಳಲ್ಲಿ ನಿಗದಿತ ಶುಲ್ಕಕಿಂತ ಹೆಚ್ಚು ಹಣ ಪಡೆದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳನ್ನು ಸಂಪರ್ಕಿಸುವುದು. ಅಥವಾ ಉಚಿತ ಆರೋಗ್ಯ ಸಹಾಯವಾಣಿ 104 ಕರೆ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಇಮೇಲ್ ವಿಳಾಸ dhobelagavi-hfws@karnataka.gov.in, dlobelagavi-hfws@karnataka.gov.in ದೂರವಾಣಿ sಸಂಖ್ಯೆ:-0831-2407241 ಹಾಗೂ 0831-2484890 ಗೆ ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Appeal to citizens not to approach any agents for Ayushman Bharat scheme

Popular Doctors

Related Articles